Site icon Vistara News

IPL 2023: ಟಾಸ್​ ಗೆದ್ದ ಗುಜರಾತ್​ ಟೈಟಾನ್ಸ್​; ಬ್ಯಾಟಿಂಗ್​ ಆಯ್ಕೆ

Gujarat Titans vs Kolkata Knight Riders

Gujarat Titans vs Kolkata Knight Riders

ಅಹಮದಾಬಾದ್: ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿ ಆಡಲಿಳಿದ ಗುಜರಾತ್​ ಟೈಟಾನ್ಸ್​(Gujarat Titans) ತಂಡ ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders)​ ವಿರುದ್ಧ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡುವ ನಿರ್ಧಾರ ಕೈಗೊಂಡಿದೆ. ಅಚ್ಚರಿ ಎಂಬಂತೆ ರಶೀದ್​ ಖಾನ್​ ಈ ಪಂದ್ಯದಲ್ಲಿ ಗುಜರಾತ್​ ತಂಡದ ನಾಯಕತ್ವ ವಹಿಸಿದರು. ಖಾಯಂ ನಾಯಕ ಹಾರ್ದಿಕ್​ ಪಾಂಡ್ಯ ಈ ಪಂದ್ಯದಿಂದ ಹೊರಗುಳಿದರು.

ಈಗಾಗಲೇ ಎರಡು ಪಂದ್ಯದಲ್ಲಿ ಮೇಲುಗೈ ಸಾಧಿಸಿರುವ ಗುಜರಾತ್​ ಈ ಪಂದ್ಯದಲ್ಲಿಯೂ ಗೆಲುವು ದಾಖಲಿಸುವ ಯೋಜನೆಯಲ್ಲಿದೆ. ಅತ್ತ ಆರ್​ಸಿಬಿ ವಿರುದ್ಧ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಕೆಕೆಆರ್​ ಎರಡನೇ ಗೆಲುವಿನ ನಿರೀಕ್ಷೆಯಲ್ಲಿದೆ. ಹೀಗಾಗಿ ಈ ಪಂದ್ಯ ರೋಚಕವಾಗಿ ಸಾಗುವ ಸಾಧ್ಯತೆ ಇದೆ.

ಪಿಚ್​ ರಿಪೋರ್ಟ್​

ಅಹಮದಾಬಾದ್‌​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನ ಪಿಚ್​ ಬ್ಯಾಟಿಂಗ್​ ಮತ್ತು ಬೌಲಿಂಗ್​ಗೆ ಸಮಾನವಾಗಿ ಸಹಕಾರಿಸಲಿದೆ. ಆರಂಭದಲ್ಲಿ ಬೌಲಿಂಗ್​ಗೆ ನೆರವಾದರೆ ಆ ಬಳಿಕ ನಿಧಾನವಾಗಿ ಬ್ಯಾಟಿಂಗ್​ ಸ್ನೇಹಿಯಾಗಲಿದೆ. ಹೀಗಾಗಿ ಟಾಸ್ ಗೆದ್ದ ತಂಡ ಚೇಸಿಂಗ್​ ನಡೆಸುವ ಸಾಧ್ಯತೆ ಅಧಿಕವಾಗಿದೆ. ಉಭಯ ತಂಡಗಳು ಐಪಿಎಲ್‌ನಲ್ಲಿ ಇದುವರೆಗೂ ಕೇವಲ ಒಂದು ಬಾರಿ ಮಾತ್ರ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಗೆಲುವು ಸಾಧಿಸಿದೆ.

ಇದೇ ಮೈದಾನದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್‌ ತಂಡ ಚೆನ್ನೈ ವಿರುದ್ಧ 5 ವಿಕೆಟ್‌ಗಳಿಂದ ಗೆಲುವು ದಾಖಲಿಸಿತ್ತು. ಬಳಿಕ ಡೆಲ್ಲಿ ವಿರುದ್ಧ 6 ವಿಕೆಟ್‌ ಜಯ ಸಾಧಿಸಿತ್ತು. ಎರಡೂ ಚೇಸಿಂಗ್‌ ಪಂದ್ಯಗಳಾಗಿದ್ದವು. ಇದೀಗ ಮೂರನೇ ಪಂದ್ಯದಲ್ಲಿಯೂ ರಶೀದ್​ ಖಾನ್​ ಪಡೆ ಗೆಲುವು ದಾಖಲಿಸುವ ಯೋಜನೆಯಲ್ಲಿದೆ. ಶುಭಮನ್​ ಗಿಲ್​ ಮತ್ತು ವೃದ್ಧಿಮಾನ್​ ಸಾಹಾ ಆರಂಭಿಕ ಮುನ್ನಡೆ ತಂದುಕೊಡುವಲ್ಲಿ ಸಮರ್ಥರಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ ಕೂಡ​ ಉತ್ತಮ ಲಯದಲ್ಲಿ ಕಂಡು ಬಂದಿದ್ದಾರೆ. ಡೇವಿಡ್​ ಮಿಲ್ಲರ್​ ಫಿನಿಶರ್​ ಸ್ಥಾನವನ್ನು ಅಚ್ಚು ಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಸದ್ಯ ಗುಜರಾತ್​ ತಂಡ ಸಮತೋಲನವಾಗಿ ಗೋಚರಿಸಿದೆ.

ಇದನ್ನೂ ಓದಿ IPL 2023: ಒಂದೇ ಪಂದ್ಯದಲ್ಲಿ ಹಲವು ದಾಖಲೆ ಬರೆದ ಅಜಿಂಕ್ಯ ರಹಾನೆ

ತಂಡಗಳು

ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭಮನ್​ ಗಿಲ್, ಸಾಯಿ ಸುದರ್ಶನ್,ವಿಜಯ್​ ಶಂಕರ್​, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಅಭಿನವ್​ ಮನೋಹರ್​, ರಶೀದ್ ಖಾನ್(ನಾಯಕ), ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಯಶ್ ದಯಾಳ್.

ಕೋಲ್ಕತ್ತಾ ನೈಟ್ ರೈಡರ್ಸ್: ಎನ್​.ಜಗದೀಶನ್​, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆ್ಯಂಡ್ರೆ ರಸೆಲ್, ಶಾರ್ದೂಲ್ ಠಾಕೂರ್, ಸುನಿಲ್ ನಾರಾಯಣ್​,ಸುಯಶ್ ಶರ್ಮಾ, ಲಾಕಿ ಫ‌ರ್ಗ್ಯುಸನ್‌, ಉಮೇಶ್ ಯಾದವ್, ವರುಣ್ ಚಕ್ರವರ್ತಿ.

Exit mobile version