Site icon Vistara News

IPL 2023: ಗುರು ಶಿಷ್ಯರ ಕಾದಾಟ; ಯಾರಿಗೆ ಒಲಿಯಲಿದೆ ಗೆಲುವಿನ ಶುಭಾರಂಭ

Mumbai team captain Rohit absent for photo shoot; What happened to them?

ಅಹಮದಾಬಾದ್​: ವಿಶ್ವದ ಕ್ಯಾಶ್​ ರಿಚ್​ ಕ್ರಿಕೆಟ್​ ಟೂರ್ನಿ ಐಪಿಎಲ್(IPL 2023)​ ಶುಕ್ರವಾರದಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಸಾರಥ್ಯದ ಗುಜರಾತ್​ ಟೈಟಾನ್ಸ್​ ಮತ್ತು ಧೋನಿ ನಾಯಕತ್ವದ ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯವನ್ನು ಗುರು ಶಿಷ್ಯರ ನಡುವಿನ ಹೋರಾಟ ಎಂದೇ ಪರಿಗಣಿಸಲಾಗಿದೆ.

ಹಾರ್ದಿಕ್​ ಪಾಂಡ್ಯ ಅವರು ಮಹೆಂದ್ರ ಸಿಂಗ್​ ಧೋನಿ ಅವರ ಗರಡಿಯಲ್ಲಿ ಬೆಳೆದ ಕಾರಣ, ಧೋನಿ ಅವರ ಎಲ್ಲ ತಂತ್ರಗಳನ್ನು ಪಾಂಡ್ಯ ಕೂಡ ಅರಿತ್ತಿದ್ದಾರೆ. ಇನ್ನೊಂದೆಡೆ ಪಾಂಡ್ಯ ಅವರ ವೀಕ್​ ನೆಸ್​ ಧೋನಿಗೂ ಚೆನ್ನಾಗಿ ತಿಳಿದಿದೆ. ಹೀಗಾಗಿ ಈ ಪಂದ್ಯ ರೋಚಕವಾಗಿ ಸಾಗುವ ಸಾಧ್ಯತೆ ಇದೆ. ಈ ಹಿಂದಿನ ಪಂದ್ಯಗಳ ಫಲಿತಾಂಶವನ್ನು ಗಮನಿಸಿದೆ, ಚೆನ್ನೈ ವಿರುದ್ಧ ಗುಜರಾತ್​ ಮೇಲುಗೈ ಸಾಧಿಸಿದೆ. ಕಳೆದ ಬಾರಿ ನಡೆದ ಟೂರ್ನಿಯಲ್ಲಿ ಪಾಂಡ್ಯ ಪಡೆ ಚೆನ್ನೈ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿತ್ತು. ಮೊದಲ ಪಂದ್ಯ 3 ವಿಕೆಟ್​ನಿಂದ ಗೆದ್ದರೆ, ದ್ವಿತೀಯ ಪಂದ್ಯ 7 ವಿಕೆಟ್​ಗಳಿಂದ ಗೆದ್ದಿತ್ತು. ಇದೀಗ ಧೋನಿ ಅವರು ಕಳೆದ ಬಾರಿಯ ಸೋಲಿಗೆ ಈ ಬಾರಿ ಸೇಡು ತೀರಿಸಿಕೊಂಡರೇ ಎಂದು ಕಾದು ನೋಡಬೇಕಿದೆ.

ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ ಟೀಮ್​ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರು ಈ ಬಾರಿಯ ಐಪಿಎಲ್​ ಬಳಿಕ ವಿದಾಯ ಹೇಳಲಿದ್ದಾರೆ ಎಂದು ವರದಿಯಾಗಿದೆ. ಮೆ.14 ರಂದು ಕೆಕೆಆರ್​ ವಿರುದ್ಧದ ಪಂದ್ಯವು ಸಿಎಸ್​ಕೆ ಪರ ಧೋನಿಯ ಕೊನೆಯ ಪಂದ್ಯವಾಗಿರಲಿದೆ ಎಂದು ಫ್ರಾಂಚೈಸಿ ತಿಳಿಸಿರುವುದಾಗಿ ಇನ್​ಸೈಡ್ ಸ್ಪೋರ್ಟ್ಸ್​ ತಿಳಿಸಿದೆ. ಈಗಾಗಲೇ ಧೋನಿ ಅವರ ವಿದಾಯಕ್ಕೆ ಚೆನ್ನೈ ತಂಡ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿದ್ದು ಅದರಂತೆ ಮೇ.14ಕ್ಕೆ ಧೋನಿ ವಿದಾಯ ಪಂದ್ಯ ಆಡಲಿದ್ದಾರೆ ಎಂದು ತಂಡದ ಮೂಲವೊಂದು ತಿಳಿಸಿದೆ. ಹೀಗಾಗಿ ಧೋನಿಗೆ ಈ ಬಾರಿ ಗೆಲುವಿನ ವಿದಾಯ ನೀಡಬೇಕೆಂದು ತಂಡದ ಆಟಗಾರರೂ ಕೂಡ ಪಣ ತೊಟ್ಟಿದ್ದಾರೆ.

ಇದನ್ನೂ ಓದಿ IPL 2023: ಗುಜರಾತ್​ vs ಚೆನ್ನೈ ಪಂದ್ಯದ ಪಿಚ್​ ರಿಪೋರ್ಟ್​, ಸಂಭಾವ್ಯ ತಂಡ​

ಇಂಗ್ಲೆಂಡ್​ ತಂಡ ಏಕದಿನ ಮತ್ತು ಟಿ20 ವಿಶ್ವ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಅತ್ಯಂತ ಯಶಸ್ವಿ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಅವರು ಈ ಬಾರಿ ಚೆನ್ನೈ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಸದ್ಯಕ್ಕೆ ಅವರು ಸಂಪೂರ್ಣ ಫಿಟ್​ ಇಲ್ಲದಿರುವುದು ತಂಡಕ್ಕೆ ಕೊಂಚ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಈಗಾಗಲೇ ತಂಡದ ಬ್ಯಾಟಿಂಗ್​ ಕೋಚ್​ ಮೈಕಲ್ ಹಸ್ಸಿ ಅವರು ಸ್ಟೋಕ್ಸ್​ ಬ್ಯಾಟಿಂಗ್​ ಮಾತ್ರ ನಡೆಸಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಸದ್ಯದ ಮಟ್ಟಿಗೆ ಚೆನ್ನೈ ಅನುಭವಿ ತಂಡಗಳನ್ನೇ ನೆಚ್ಚಿಕೊಂಡಿದೆ. ಇದರ ಜತೆಗೆ ಧೋನಿಯ ಮಾಸ್ಟರ್​ ಪ್ಲ್ಯಾನ್​ ಕೂಡ ತಂಡಕ್ಕೆ ನೆರವಾಗಲಿದೆ.

ಇದನ್ನೂ ಓದಿ IPL 2023: ಆರ್​ಸಿಬಿಗೆ ಆಘಾತ; ಮೊದಲ ಪಂದ್ಯಕ್ಕೆ ಸ್ಟಾರ್​ ಆಟಗಾರರು ಅಲಭ್ಯ

​ಯುವ ಪಡೆಯೇ ಗುಜರಾತ್​ ಬಲ

ಹಾರ್ದಿಕ್​ ಪಾಂಡ್ಯ ನಾಯಕತ್ವದ ಗುಜರಾತ್​ ತಂಡದಲ್ಲಿ ಹೆಚ್ಚಾಗಿ ಯುವ ಪಡೆಯೇ ಕಂಡು ಬಂದಿದೆ. ಶುಭಮನ್​ ಗಿಲ್​, ರಾಹುಲ್​ ತೆವಾಟಿಯ, ರಶೀದ್​ ಖಾನ್​, ಶಿವಂ ಮಾವಿ ಅವರನ್ನೊಳಗೊಂಡ ತಂಡ ಬಲಿಷ್ಠವಾಗಿ ಗೋಚರಿಸಿದೆ. ಇವರ ಜತೆಗೆ ಅನುಭವಿ ಆಟಗಾರರಾದ ಕೇನ್​ ವಿಲಿಯಮ್ಸನ್​ ಮತ್ತು ಮೊಹಮ್ಮದ್​ ಶಮಿ ಕೂಡ ಯುವ ಪಡೆಗೆ ಉತ್ತಮ ಸಾಥ್​ ನೀಡುವುದು ಖಚಿತ.

ಸಂಭಾವ್ಯ ತಂಡ

ಗುಜರಾತ್​ ಟೈಟಾನ್ಸ್: ಹಾರ್ದಿಕ್​ ಪಾಂಡ್ಯ(ನಾಯಕ), ಶುಭಮನ್​ ಗಿಲ್​, ವೃದ್ಧಿಮಾನ್​ ಸಾಹಾ, ಕೇನ್​ ವಿಲಿಯಮ್ಸನ್​, ಡೇವಿಡ್ ಮಿಲ್ಲರ್​, ರಾಹುಲ್​ ತೆವಾಟಿಯ, ಆರ್​. ಸಾಯಿ ಕಿಶೋರ್​, ರಶೀದ್​ ಖಾನ್​, ಅಲ್ಜಾರಿ ಜೋಸೆಫ್, ಶಿವಂ ಮಾವಿ, ಮೊಹಮ್ಮದ್​ ಶಮಿ.

ಚೆನ್ನೈ ಸೂಪರ್​ ಕಿಂಗ್ಸ್​: ಋತುರಾಜ್​ ಗಾಯಕ್ವಾಡ್​, ಮೊಯಿನ್​ ಅಲಿ, ಬೆನ್​ ಸ್ಟೋಕ್ಸ್​, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಶಿವಂ ದುಬೆ, ಮಹೇಂದ್ರ ಸಿಂಗ್​ ಧೋನಿ(ನಾಯಕ), ದೀಪಕ್​ ಚಹರ್​, ಸಿಸಾಂಡ ಮಗಾಲ, ಸಿಮ್ರನ್​ಜಿತ್​ ಸಿಂಗ್​, ಮಹೀಶ್‌ ತೀಕ್ಷಣ.

Exit mobile version