Site icon Vistara News

IPL 2023: ಆರ್​ಸಿಬಿ-ಮುಂಬೈ ವಿರುದ್ಧದ ಪಂದ್ಯದ ಪಿಚ್​ ರಿಪೋರ್ಟ್​ ಹೇಗಿದೆ?

IPL 2023: How is the pitch report of the match against RCB-Mumbai?

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ಹಾಗೂ ಮುಂಬೈ ಇಂಡಿಯನ್ಸ್(Mumbai Indians) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದ ಪಿಚ್​ ರಿಪೋರ್ಟ್​ ಮತ್ತು ಬಲಾಬಲದ ಸಂಪೂರ್ಣ ಮಾಹಿತಿ ಇಂತಿದೆ.

ಪಿಚ್​ ರಿಪೋರ್ಟ್​

ಚಿನ್ನಸ್ವಾಮಿ ಸ್ಟೇಡಿಯಂನ ಪಿಚ್​ ಬ್ಯಾಟಿಂಗ್​ಗೆ ಹೇಳಿ ಮಾಡಿಸಿದಂತೆ. ಇದು​ ಸಂಪೂರ್ಣ ಬ್ಯಾಟಿಂಗ್​​ ಸ್ನೇಹಿ ಪಿಚ್​ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಇಲ್ಲಿ ಬೌಂಡರಿ ಗೆರೆ ಕೂಡ ಅಂತ್ಯಂತ ಸಮೀಪವಿರುವ ಕಾರಣ ಬ್ಯಾಟರ್​ಗಳು ಯಾವುದೇ ಒತ್ತಡವಿಲ್ಲದೆ ಬ್ಯಾಟ್​ ಬೀಸಬಹುದಾಗಿದೆ. ಆದರೆ ಬೌಲರ್​ಗಳು ಮಾತ್ರ ಶಕ್ತಿ ಮೀರಿ ಪ್ರಯತ್ನ ತೋರಬೇಕಿದೆ. ಎಷ್ಟೇ ದೊಡ್ಡ ಮೊತ್ತವನ್ನು ಬಾರಿಸಿದರೂ ಇಲ್ಲಿ ಚೇಸ್​ ಮಾಡಿ ಗೆಲುವು ಸಾಧಿಸಿಬಹುದು. ಹೀಗಾಗಿ ಟಾಸ್​ ಗೆದ್ದ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು.

ಮುಂಬೈ ಮುತ್ತು ಆರ್​ಸಿಬಿ ತಂಡಗಳು ಇದುವರೆಗಿನ ಐಪಿಎಲ್​ ಪಂದ್ಯಗಳಲ್ಲಿ 30 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ 17 ಪಂದ್ಯಗಳಲ್ಲಿ ಮುಂಬೈ ಮೇಲುಗೈ ಸಾಧಿಸಿದರೆ 13 ಪಂದ್ಯಗಳಲ್ಲಿ ಆರ್​ಸಿಬಿ ಗೆದ್ದಿದೆ. ಬಲಾಬಲದ ಲೆಕ್ಕಾಚಾರದಲ್ಲಿ ಮುಂಬೈ ಬಲಿಷ್ಠವಾಗಿದೆ.

ಇತ್ತಂಡಗಳಿಗೂ ಗಾಯದ ಚಿಂತೆ

ಉಭಯ ತಂಡಗಳಿಯೂ ಗಾಯದ ಸಮಸ್ಯೆ ಕಾಡಿದೆ. ಸ್ಟಾರ್​ ಆಲ್​ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್ ಅವರು ಮೊಣಕಾಲಿನ ಗಾಯದಿಂದ ಚೇತರಿಕೆ ಕಾಣುತ್ತಿರುವ ಕಾರಣ ಮೊದಲ ಪಂದ್ಯದಲ್ಲಿ ಅವರು ಆಡುವುದು ಅನುಮಾನ ಎಂದು ಈಗಾಗಲೇ ತಂಡದ ಮೂಲಗಳು ಮಾಹಿತಿ ನೀಡಿದೆ. ಇನ್ನೊಂದೆಡೆ ಜೋಶ್​ ಹ್ಯಾಜಲ್​ವುಡ್​ ಕೂಡ ಮೊದಲ 7 ಪಂದ್ಯಗಳಿಂದ ಹೊರಗುಳಿದಿದ್ದಾರೆ.​ ಇನ್ನು ರಜತ್​ ಪಾಟೀದರ್​ ಕೂಡ ಸಂಪೂರ್ಣ ಫಿಟ್​ ಆಗಿಲ್ಲ. ಮುಂಬೈ ತಂಡದಲ್ಲಿಯೂ ಗಾಯದ ಸಮಸ್ಯೆ ಎದ್ದು ಕಾಣುತ್ತಿದೆ. ತಂಡ ಈಗಾಗಲೇ ಪ್ರಧಾನ ವೇಗಿ ಜಸ್​ಪ್ರೀತ್​ ಬುಮ್ರಾ ಅವರ ಸೇವೆ ಕಳೆದುಕೊಂಡಿದೆ. ಬುಮ್ರಾ ಬದಲು ಕೇರಳದ ಸಂದೀಪ್​ ವಾರಿಯರ್​ ಬದಲಿ ಆಟಗಾರನಾಗಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಇನ್ನೊಂದೆಡೆ ಪದಾರ್ಪಣ ಪಂದ್ಯವನ್ನಾಡಲು ಕಾತರದಿಂದ ಕಾಯುತ್ತಿದ್ದ ಅರ್ಜುನ್​ ತೆಂಡೂಲ್ಕರ್​ ಅವರು ಗಾಯದಿಂದ ಬಳಲುತ್ತಿದ್ದಾರೆ. ಒಟ್ಟಾರೆ ಉಭಯ ತಂಡಕ್ಕೂ ಗಾಯದ್ದೇ ದೊಡ್ಡ ಚಿಂತೆಯಾಗಿ ಪರಿಣಮಿಸಿದೆ.

ರಾತ್ರಿ 1.30ರವರೆಗೂ ಮೆಟ್ರೋ ಸಂಚಾರ ಸಮಯ ವಿಸ್ತರಣೆ

ಬೆಂಗಳೂರಲ್ಲಿ ನಡೆಯುವ ಐಪಿಎಲ್‌ ಪಂದ್ಯಾವಳಿಯ (IPL 2023) ದಿನದಂದು ಮೆಟ್ರೋ ಸಂಚಾರದ (Metro Timings) ಸಮಯವನ್ನು ಬಿಎಂಆರ್‌ಸಿಎಲ್‌ ವಿಸ್ತರಿಸಿದೆ. ಈ ಮೂಲಕ ಆರ್​ಸಿಬಿ ಅಭಿಮಾನಿಗಳಿಗೆ ತಮ್ಮ ತಂಡವನ್ನು ಬೆಂಗಳಿಸುವ ಸಲುವಾಗಿ ಮೆಟ್ರೋ ಮಹತ್ವದ ನಿರ್ಧಾರ ಕೈಗೊಂಡಿದೆ.

ಬೆಂಗಳೂರಲ್ಲಿ ಏಪ್ರಿಲ್ 2, 10, 17, 23, 26 ಹಾಗೂ ಮೇ 21ರಂದು ಐಪಿಎಲ್‌ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ರಾತ್ರಿ ಕ್ರಿಕೆಟ್‌ ಪಂದ್ಯಾವಳಿ ನಡೆಯುವ ವೇಳೆ ಬೈಯಪ್ಪನಹಳ್ಳಿ – ಕೆಂಗೇರಿ ಮತ್ತು ನಾಗಸಂದ್ರ – ರೇಷ್ಮೆ ಟರ್ಮಿನಲ್‌ನಿಂದ ಕೊನೆಯ ರೈಲು ಸೇವೆಯು ಮಧ್ಯರಾತ್ರಿ 1 ಗಂಟೆ ಹೊರಡಲಿದ್ದು, ಕೆಂಪೇಗೌಡ ನಿಲ್ದಾಣದಿಂದ 1.30ಕ್ಕೆ ಕೊನೇ ರೈಲು ಓಡಾಡಲಿದೆ. ಇತ್ತ ಹೊಸ ರೈಲು ಮಾರ್ಗವಾದ ವೈಟ್‌ ಫೀಲ್ಡ್‌ ಹಾಗೂ ಕೆ.ಆರ್‌. ಪುರ ನಡುವಿನ ರೈಲು ಸೇವೆಯನ್ನು ವಿಸ್ತರಿಸಲಾಗಿಲ್ಲ.

Exit mobile version