ಕೋಲ್ಕೊತಾ: 21ರ ಹರೆಯದ ಉತ್ತರ ಪ್ರದೇಶ ಮೂಲದ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್(Yashasvi Jaiswal) ಅವರು ಐಪಿಎಲ್ನಲ್ಲಿ ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಅತಿ ವೇಗವಾಗಿ ಅರ್ಧಶತಕ ಬಾರಿಸಿದ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಕನ್ನಡಿಗ ಕೆ.ಎಲ್ ರಾಗುಲ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಕೋಲ್ಕೊತ್ತಾದ ಈಡನ್ ಗಾರ್ಡನ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಜೈಸ್ವಾಲ್ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ನೂತನ ದಾಖಲೆ ಬರೆದರು. ಈ ಹಿಂದೆ ರಾಹುಲ್ ಅವರು 2018ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ದಾಖಲೆ ಬರೆದಿದ್ದರು. ಪ್ಯಾಟ್ ಕಮಿನ್ಸ್ ಕೂಡ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಆದರೆ ಇದೀಗ ಉಭಯ ಆಟಗಾರರ ದಾಖಲೆಯನ್ನು ಜೈಸ್ವಾಲ್ ಮುರಿದಿದ್ದಾರೆ.
ಕಳೆದ ಭಾನುವಾರವಷ್ಟೇ ಸನ್‍ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಜೈಸ್ವಾಲ್ 35 ರನ್ ಗಳಿಸಿಸುವ ಮೂಲಕ ಐಪಿಎಲ್ ಕಿಕೆಟ್ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಒಂದು ಸಾವಿರ ರನ್ ಪೂರ್ತಿಗೊಳಿದ ಮೈಲಿಗಲ್ಲು ನಿರ್ಮಿಸಿದ್ದರು. ಈ ಸಾಧನೆ ಮಾಡಿದ ಎರಡನೇ ಆಟಗಾರ ಎನಿಸಿಕೊಂಡಿದ್ದರು. ಐಪಿಎಲ್ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಸಾವಿರ ರನ್ ಪೂರೈಸಿದ ದಾಖಲೆ ರಿಷಭ್ ಪಂತ್ ಹೆಸರಿನಲ್ಲಿದೆ. ಪಂತ್ ಅವರು 20 ವರ್ಷ 218 ದಿನ ಆಗಿದ್ದಾಗ 1000 ರನ್ ಪೂರೈಸಿದ್ದರು. ಜೈಸ್ವಾಲ್ 21 ವರ್ಷ 130 ದಿನದಲ್ಲಿ ಈ ಸಾಧನೆ ಮಾಡಿದ್ದರು.
ಇದನ್ನೂ ಓದಿ IPL 2023: ಐಪಿಎಲ್ ಕ್ರಿಕೆಟ್ನಲ್ಲಿ ದಾಖಲೆ ಬರೆದ ಯಜುವೇಂದ್ರ ಚಹಲ್
ಸದ್ಯ ಆಡಿದ ಎಲ್ಲ ಪಂದ್ಯದಲ್ಲಿಯೂ ಉತ್ತಮ ಬ್ಯಾಟಿಂಗ್ ನಡೆಸುತ್ತಿರುವ ಜೈಸ್ವಾಲ್ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿದರು ಅಚ್ಚರಿಯಿಲ್ಲ. ಈಗಾಗಲೇ ಅವರು ಐಪಿಎಲ್ನಲ್ಲಿ ಒಂದು ಶತಕವನ್ನೂ ಬಾರಿಸಿ ಮಿಂಚಿದ್ದಾರೆ.