Site icon Vistara News

IPL 2023: ಮುಂಬೈ-ಗುಜರಾತ್​ ಪಂದ್ಯದ ಪಿಚ್​ ರಿಪೋರ್ಟ್​, ಸಂಭಾವ್ಯ ತಂಡಗಳ ಮಾಹಿತಿ

Gujarat Titans vs Mumbai Indians

#image_title

ಅಹಮದಾಬಾದ್​: ಹಾಲಿ ಚಾಂಪಿಯನ್​ ಗುಜರಾತ್​ ಮತ್ತು 5 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡಗಳು ಶುಕ್ರವಾರ ದ್ವಿತೀಯ ಕ್ವಾಲಿಫೈಯರ್​ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದ ಪಿಚ್​ ರಿಪೋರ್ಟ್​, ಉಭಯ ತಂಡಗಳ ಸಾಧನೆ, ಸಂಭಾವ್ಯ ತಂಡಗಳ ಸಂಪೂರ್ಣ ಮಾಹಿತಿ ಇಂತಿದೆ.

ಪಿಚ್​ ರಿಪೋರ್ಟ್

ಅಹಮದಾಬಾದ್‌​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನ ಪಿಚ್​ ಬ್ಯಾಟಿಂಗ್​ ಮತ್ತು ಬೌಲಿಂಗ್​ಗೆ ಸಮಾನವಾಗಿ ಸಹಕಾರಿಸಲಿದೆ. ಆರಂಭದಲ್ಲಿ ಬೌಲಿಂಗ್​ಗೆ ನೆರವಾದರೆ ಆ ಬಳಿಕ ನಿಧಾನವಾಗಿ ಬ್ಯಾಟಿಂಗ್​ ಸ್ನೇಹಿಯಾಗಲಿದೆ. ಹೀಗಾಗಿ ಟಾಸ್ ಗೆದ್ದ ತಂಡ ಚೇಸಿಂಗ್​ ನಡೆಸುವ ಸಾಧ್ಯತೆ ಅಧಿಕವಾಗಿದೆ. ಉಭಯ ತಂಡಗಳು ಈ ವರೆಗೆ ಐಪಿಎಲ್​ನಲ್ಲಿ ಮೂರು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಮುಂಬೈ 2 ಪಂದ್ಯ ಗೆದ್ದು ಬೀಗಿದೆ.

ಅಂಕಿ ಅಂಶಗಳು

ಅಹಮದಾಬಾದ್​ನಲ್ಲಿ ಈ ವರೆಗೆ 25 ಐಪಿಎಲ್​ ಪಂದ್ಯಗಳು ನಡೆದಿವೆ. ಇದರಲ್ಲಿ 12 ಬಾರಿ ಮೊದಲು ಬ್ಯಾಟಿಂಗ್​ ನಡೆಸಿದ ತಂಡ ಗೆದ್ದಿದೆ. 13 ಬಾರಿ ಚೇಸಿಂಗ್​ ಮಾಡಿದ ತಂಡ ಮೇಲುಗೈ ಸಾಧಿಸಿದೆ. 227 ರನ್​ ಇಲ್ಲಿ ದಾಖಲಾದ ಅತ್ಯಧಿಕ ಮೊತ್ತವಾಗಿದೆ. ಇದೇ ಆವೃತ್ತಿಯಲ್ಲಿ ಗುಜರಾತ್​ ತಂಡ ಲಕ್ನೋ ವಿರುದ್ಧ ಈ ಮೊತ್ತ ದಾಖಲಿಸಿತ್ತು. ಗುಜರಾತ್​ ತಂಡ ಇಲ್ಲಿ 8 ಐಪಿಎಲ್​ ಪಂದ್ಯಗಳನ್ನು ಆಡಿದ್ದು ಇದರಲ್ಲಿ 5 ಪಂದ್ಯಗಳನ್ನು ಗೆದ್ದಿದೆ. ಮುಂಬೈ ತಂಡ 3 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಜಯಿಸಿದೆ. ಈ ಲೆಕ್ಕಾಚಾರದಲ್ಲಿ ಗುಜರಾತ್​ ಮುಂದಿದೆ.

ಇದನ್ನೂ ಓದಿ IPL 2023: ಗಾಂಧಿಯ ಮೂರು ಕೋತಿಗಳಂತೆ ಟ್ರೋಲ್​ ಆದ ನವೀನ್​ ಉಲ್​-ಹಕ್​

ಸಂಭಾವ್ಯ ತಂಡಗಳು

ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭಮನ್​ ಗಿಲ್, ಸಾಯಿ ಸುದರ್ಶನ್/ವಿಜಯ್​ ಶಂಕರ್​, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಜೋಶುವಾ ಲಿಟಲ್, ಯಶ್ ದಯಾಳ್/ ಮೋಹಿತ್​ ಶರ್ಮ.

ಮಂಬೈ ಇಂಡಿಯನ್ಸ್​: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್​ ಕೀಪರ್​), ಸೂರ್ಯಕುಮಾರ್ ಯಾದವ್, ಕ್ಯಾಮರೂನ್ ಗ್ರೀನ್, ತಿಲಕ್ ವರ್ಮಾ, ಟಿಮ್ ಡೇವಿಡ್, ನೆಹಾಲ್ ವಧೇರಾ, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಕ್ರಿಸ್​ ಜೋರ್ಡನ್​, ಆಕಾಶ್‌ ಮಧ್ವಾಲ್‌.

Exit mobile version