Site icon Vistara News

IPL 2023 : ರಾಜಸ್ಥಾನ್​ ವಿರುದ್ಧ ಸನ್​ ರೈಸರ್ಸ್​ ಹೈದರಾಬಾದ್ ತಂಡಕ್ಕೆ ರೋಚಕ 4 ವಿಕೆಟ್​ ಜಯ

#image_title

ಜೈಪುರ: ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಸಂಘಟಿತ ಪ್ರದರ್ಶನ ನೀಡಿದ ಸನ್​ರೈಸರ್ಸ್​ ಹೈದರಾಬಾದ್ ತಂಡ ಐಪಿಎಲ್​ 16ನೇ ಆವೃತ್ತಿಯ 52ನೇ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್​ ವಿರುದ್ಧ ರೋಚಕ ನಾಲ್ಕು ವಿಕೆಟ್​ ವಿಜಯ ಸಾಧಿಸಿತು. ಇದು ಕೂಡ ಹಾಲಿ ಆವೃತ್ತಿಯ ಐಪಿಎಲ್​ನ ಮತ್ತೊಂದು ಲಾಸ್ಟ್​ ಬಾಲ್​ ಥ್ರಿಲ್ ಪಂದ್ಯ. ಈ ಸೋಲಿನೊಂದಿಗೆ ಜೋಸ್ ಬಟ್ಲರ್​ ಬಾರಿಸಿದ ಅಮೋಘ 92 ರನ್ ಹಾಗೂ ನಾಯಕ ಸಂಜು ಸ್ಯಾಮ್ಸನ್ (ಅಜೇಯ 66) ಅರ್ಧ ಶತಕದ ಶ್ರಮ ವ್ಯರ್ಥಗೊಂಡಿತು.

ರಾಜಸ್ಥಾನ ತಂಡಕ್ಕೂ ಇದು ದುರದೃಷ್ಟದ ಸೋಲು. ಕೊನೇ ಓವರ್​ನಲ್ಲಿ ಹೈದರಾಬಾದ್ ತಂಡದ ಗೆಲುವಿಗೆ 17 ರನ್​ ಬೇಕಾಗಿತ್ತು. ಸಂದೀಪ್​ ಶರ್ಮಾ ಕೊನೇ ಎಸೆತವನ್ನು ನೋ ಬಾಲ್​ ಮಾಡುವ ಮೂಲಕ ಎಸ್​ಆರ್​ಎಚ್​ ಗೆಲುವಿಗೆ ಅವಕಾಶ ಮಾಡಿಕೊಟ್ಟರು. ನೋ ಬಾಲ್​ ಅಲ್ಲದಿದ್ದರೆ ರಾಜಸ್ಥಾನ್ ತಂಡಕ್ಕೆ ನಾಲ್ಕು ರನ್​ಗಳ ಗೆಲುವು ಲಭಿಸುತ್ತಿತ್ತು. ಗೆಲುವು ಸಿಕ್ಕಿತು ಎಂದು ಆರ್​ಆರ್​ ತಂಡದ ಆಟಗಾರರು ಸಂಭ್ರಮಿಸುತ್ತಿದ್ದ ನಡುವೆಯೇ ಅಂಪೈರ್​ ನೋ ಬಾಲ್​ ಘೋಷಿಸಿದರು. ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಎಸ್​ಆರ್​ಎಚ್​ ಬ್ಯಾಟರ್​ ಅಬ್ದುಲ್​ ಸಮದ್ ಕೊನೇ ಎಸೆತವನ್ನು ಸಿಕ್ಸರ್​ಗೆ ಅಟ್ಟಿ ಗೆಲುವು ತಂದುಕೊಟ್ಟರು. ಅದಕ್ಕಿಂತ ಮೊದಲ ಓವರ್​ನಲ್ಲಿ ಕುಲ್ದೀಪ್ ಯಾದವ್​ ಒಂದೇ ಓವರ್​ನಲ್ಲಿ 24 ರನ್​ ಬಿಟ್ಟುಕೊಟ್ಟಿದ್ದರು. ಆ ಓವರ್​ನಲ್ಲಿ ಗ್ಲೆನ್​ ಫಿಲಿಪ್ಸ್​ 3 ಸಿಕ್ಸರ್​ ಹಾಗೂ ಒಂದು ಫೋರ್​ ಬಾರಿಸಿದ್ದರು. ಈ ಮೂಲಕ ಕೊನೇ 12 ಎಸೆತಕ್ಕೆ ಬೇಕಾಗಿದ್ದ 42 ರನ್​ಗಳನ್ನು ಎಸ್​ಆರ್​ಎಚ್​ ತಂಡ ಬಾರಿಸಿ ಗೆಲುವು ಸಾಧಿಸಿತು. ಹೀಗಾಗಿ ಎಸ್​ಆರ್​ಎಚ್ ತಂಡಕ್ಕೆ ಇದು ಅನಿರೀಕ್ಷಿತ ಗೆಲುವು.

ಇಲ್ಲಿನ ಸವಾಯ್​ ಮಾನ್​ಸಿಂಗ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಆಯೋಜನೆಗೊಂಡಿರುವ ಪಂದ್ಯದಲ್ಲಿ ರಾಜಸ್ಥಾನ್​ ತಂಡದ ನಾಯಕ ಸಂಜು ಸ್ಯಾಮ್ಸನ್​ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದಕ್ಕೆ ಪೂರಕವಾಗಿ ಬ್ಯಾಟ್​ ಮಾಡಿ ನಿಗದಿತ 20 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 214 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಎಸ್​ಆರ್​ಎಚ್​ ತಂಡ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 217 ರನ್​ ಬಾರಿಸಿ ಗೆಲುವು ಸಾಧಿಸಿತು.

ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ್ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಆದರೆ, ಯಶಸ್ವಿ ಜೈಸ್ವಾಲ್​ 18 ಎಸೆತಕ್ಕೆ 35 ರನ್​ ಬಾರಿಸಿ ಔಟಾದರು. ಎಂದಿನಂತೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಹೀಗಾಗಿ ಆರ್​ಆರ್​ ತಂಡ 54 ರನ್​ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಬಳಿಕ ಬಂದ ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದರೂ ಎಸ್​ಆರ್​ಎಚ್​ ಸ್ಪಿನ್ನರ್​ಗಳ ವಿರುದ್ಧ ಸ್ಫೋಟಿಸಿದರು. ಕೊನೇ ತನಕ ಅಜೇಯರಾಗಿ ಉಳಿದ ಅವರು 38 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 4 ಫೋರ್​ಗಳ ಸಮೇತ 66 ರನ್​ ಬಾರಿಸಿದರು. ಅವರು ಅರ್ಧ ಶತ ಬಾರಿಸಲು 33 ಎಸೆತಗಳನ್ನು ಬಳಸಿಕೊಂಡಿದ್ದರು.

ಬಟ್ಲರ್​ ಭರ್ಜರಿ ಬ್ಯಾಟಿಂಗ್​

ಮೊದಲಿಗೆ ಸ್ವಲ್ಪ ಮಟ್ಟಿಗೆ ರಕ್ಷಣಾತ್ಮಕವಾಗಿ ಆಡಲು ಮುಂದಾದ ಜೋಸ್​ ಬಟ್ಲರ್​ ಕ್ರಮೇಣ ತಮ್ಮ ಬ್ಯಾಟಿಂಗ್​ಗೆ ವೇಗ ಕೊಟ್ಟರು. ಸಂಜು ಸ್ಯಾಮ್ಸನ್​ ಜತೆ ಸೇರಿಕೊಂಡ ಅವರು ಎಸ್​ಆರ್​ಎಚ್​ ಬೌಲರ್​ಗಳನ್ನು ಸತತವಾಗಿ ದಂಡಿಸಿದರು. 32 ಎಸೆತಗಳಲ್ಲಿ 50 ರನ್ ಬಾರಿಸಿದ ಅವರು 59 ಎಸೆತಗಳಲ್ಲಿ 95 ರನ್​ ಮಾಡಿ ಮತ್ತೊಂದು ಶತಕದ ಸಾಧನೆ ಮಾಡುವ ಸೂಚನೆ ಕೊಟ್ಟರು. ಆದರೆ, ಭುವನೇಶ್ವರ್ ಕುಮಾರ್ ಎಸೆತ 19ನೇ ಓವರ್​ನಲ್ಲಿ ಎಲ್​ಬಿಡಬ್ಲ್ಯು ಆಗುವ ಮೂಲಕ ನಿರಾಸೆ ಎದುರಿಸಿದರು. ಕೊನೆಯಲ್ಲಿ ಶಿಮ್ರೋನ್​ ಹೆಟ್ಮಾಯರ್​ 5 ಎಸೆತಗಳಿಗೆ 7 ರನ್ ಬಾರಿಸಿದರು. ಭುವನೇಶ್ವರ್​ ಮತ್ತು ಮಾರ್ಕೊ ಜೆನ್ಸನ್​ ತಲಾ ಒಂದ ವಿಕೆಟ್​ ತಮ್ಮದಾಗಿಸಿಕೊಂಡರು.

Exit mobile version