Site icon Vistara News

IPL 2023: ಐಪಿಎಲ್​ ಕ್ರಿಕೆಟ್‌ ಹಬ್ಬಕ್ಕೆ ರಂಗು ತುಂಬಿದ ರಶ್ಮಿಕಾ ಮಂದಣ್ಣ; ಅದ್ಧೂರಿಯಾಗಿ ನಡೆದ ಉದ್ಘಾಟನಾ ಸಮಾರಂಭ

IPL 2023: Rashmika Mandanna adds color to the IPL cricket festival; A grand opening ceremony

IPL 2023: Rashmika Mandanna adds color to the IPL cricket festival; A grand opening ceremony

ಅಹಮದಾಬಾದ್​: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್​ ಲೀಗ್​ ಐಪಿಎಲ್(IPL 2023)​ 16ನೇ ಆವೃತ್ತಿಗೆ ಇಂದು(ಶುಕ್ರವಾರ ಮಾರ್ಚ್​ 31) ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಮುಂದಿನ 2 ತಿಂಗಳು ದೇಶದಲ್ಲಿ ಈ ಕ್ರಿಕೆಟ್‌ ಹಬ್ಬದ ವಾತಾವರಣ ಇರಲಿದೆ.

ಕೋವಿಡ್‌ ನಂತರ ಮೊದಲ ಬಾರಿಗೆ ಅತ್ಯಂತ ವೈಭವದಿಂದ ನಡೆದ ಉದ್ಘಾಟನ ಸಮಾರಂಭದಲ್ಲಿ ನ್ಯಾಷನಲ್ ಕ್ರಶ್ ಖ್ಯಾತಿಯ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ(Rashmika Mandanna) ಮತ್ತು ಮಿಲ್ಕಿ ಬ್ಯೂಟಿ ಖ್ಯಾತಿಯ ತಮನ್ನಾ ಭಾಟಿಯ(Tamannaah Bhatia) ನೃತ್ಯದ ಮೂಲಕ ಎಲ್ಲರನ್ನು ರಂಜಿಸಿದರೆ, ಅರಿಜಿತ್​ ಸಿಂಗ್(arijit singh)​ ಅವರ ಅದ್ಭುತ ಕಂಠಕ್ಕೆ ದಾಖಲೆಯ ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ತಲೆದೂಗಿದರು. ಇದೇ ವೇಳೆ ನಡೆಸಿದ ಲೇಸರ್​ ಶೋ ಅಭಿಮಾನಿಗಳನ್ನು ಮಂತ್ರಮುಗ್ದರನ್ನಾಗಿಸಿತು. ಆಸ್ಕರ್​ ಪ್ರಶಸ್ತಿ ಗೆದ್ದ ಆರ್​ಆರ್​ಆರ್​ ಸಿನೆಮಾದ ನಾಟು ನಾಟು ಹಾಡಿಗೆ ರಶ್ಮಿಕಾ ಕುಣಿದು ಕುಪ್ಪಳಿಸಿದರು.

ಅದ್ಧೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್, ಬಿಸಿಸಿಐ ಅಧ್ಯಕ್ಷ ರೋಜರ್​ ಬಿನ್ನಿ, ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, ಟೀಮ್​ ಇಂಡಿಯಾದ ಮಾಜಿ ಆಟಗಾರರಾದ ರವಿಶಾಸ್ತ್ರಿ, ಸುನೀಲ್​ ಗವಾಸ್ಕರ್​, ವಿದೇಶಿ ಮಾಜಿ ಆಟಗಾರರಾದ ಆರಾನ್​ ಫಿಂಚ್​, ಕೆವಿನ್​ ಪೀಟರ್ಸನ್​ ಸೇರಿ ಅನೇಕ ಕ್ರಿಕೆಟಿಗರು ಹಾಗೂ ಮತ್ತಿತರ ಬಿಸಿಸಿಐ ಅಧಿಕಾರಿಗಳು ಉಪಸ್ಥಿತರಿದ್ದರು.

ಉದ್ಘಾಟನಾ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ತಂಡವು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ. ಈ ಬಾರಿಯ ಟೂರ್ನಿಯಲ್ಲಿ ಕೆಲ ನೂತನ ನಿಯಮಗಳನ್ನು ಜಾರಿಗೆ ತರಲಾಗಿದೆ. ಈ ನಿಯಗಳ ಮಾಹಿತಿ ಇಂತಿದೆ.

ಪಂದ್ಯಗಳ ಮಾದರಿ

ಈ ಬಾರಿಯ ಟೂರ್ನಿಯಲ್ಲಿ ಹತ್ತು ತಂಡಗಳನ್ನು ತಲಾ 5 ತಂಡಗಳ ಎರಡು ಗುಂಪುಗಳಾಗಿ ಬಿಂಗಡಿಸಲಾಗಿದೆ. ಗುಂಪು ಹಂತದಲ್ಲಿ ತಂಡವೊಂದು ತನ್ನದೇ ಗುಂಪಿನ ಉಳಿದ 4 ತಂಡಗಳ ವಿರುದ್ಧ ತಲಾ 2 ಪಂದ್ಯಗಳನ್ನು ಆಡಬೇಕು. ಆಗ ತಂಡವೊಂದು 8 ಪಂದ್ಯಗಳನ್ನು ಆಡಿದಂತಾಗುತ್ತದೆ. ಬಳಿಕ ಎರಡೂ ಗುಂಪುಗಳ ತಂಡಗಳ ನಡುವೆ ಪಂದ್ಯಗಳು ಆರಂಭವಾಗುತ್ತವೆ. ಅಂದರೆ ಮೊದಲ ಗುಂಪಿನ ಒಂದು ತಂಡ, ಇನ್ನೊಂದು ಗುಂಪಿನ ತಂಡವೊಂದರ ವಿರುದ್ಧ ತಲಾ 2 ಪಂದ್ಯಗಳನ್ನು ಆಡುತ್ತದೆ. ಇತರ ನಾಲ್ಕು ತಂಡಗಳ ವಿರುದ್ಧ ತಲಾ 1 ಪಂದ್ಯ ಆಡಲಾಗುತ್ತದೆ. ಇದೇ ಮಾದರಿ ಇತರ ತಂಡಗಳಿಗೂ ಈ ಅನ್ವಯವಾಗುತ್ತದೆ. ಅಲ್ಲಿಗೆ ತಂಡವೊಂದು ಲೀಗ್‌ ಹಂತದಲ್ಲಿ 14 ಪಂದ್ಯಗಳನ್ನಾಡಿದಂತಾಗುತ್ತದೆ.

ಇದನ್ನೂ ಓದಿ IPL 203 : ಐಪಿಎಲ್​ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ

ಇಂಪ್ಯಾಕ್ಟ್ ಪ್ಲೇಯರ್‌

ಆಸ್ಟ್ರೇಲಿಯದ ಪ್ರತಿಷ್ಠಿತ ಬಿಗ್‌ಬಾಶ್‌ ಟಿ20 ಲೀಗ್‌ನಲ್ಲಿ ಚಾಲ್ತಿಯಲ್ಲಿರುವ ಇಂಪ್ಯಾಕ್ಟ್ ಪ್ಲೇಯರ್‌ ನಿಯಮವನ್ನು ಈ ಬಾರಿ ಐಪಿಎಲ್​ನಲ್ಲಿಯೂ ಪರಿಚಯಿಸಲಾಗಿದೆ. ಈ ನಿಯಮದ ಪ್ರಮಾರ ತಂಡವೊಂದು ಆಡುತ್ತಿರುವಾಗ ಪರಿಸ್ಥಿತಿಗೆ ಅನುಗುಣವಾಗಿ ಒಬ್ಬ ಬದಲಿ ಆಟಗಾರನನ್ನು ಕಣಕ್ಕಿಳಿಸಬಹುದು. ಪ್ಲೇಯಿಂಗ್​ ಇಲೆವನ್​ ಬಳಗದಿಂದ ಹೊರಗಿರುವ ಒಬ್ಬ ಆಟಗಾರನನ್ನು ತಂಡಕ್ಕೆ ಆಡುವ ಬಳಗಕ್ಕೆ ಸೇರಿಸಿಕೊಳ್ಳಬಹುದು. ಇನಿಂಗ್ಸ್‌ ಆರಂಭಕ್ಕೂ ಮುನ್ನ, ಒಂದು ಓವರ್‌ ಮುಗಿದ ಮೇಲೆ, ವಿಕೆಟ್‌ ಬಿದ್ದಾಗ, ಓವರ್‌ಗಳ ನಡುವಿನ ವಿರಾಮದಲ್ಲಿ ಈ ನಿಯಮವನ್ನು ಬಳಸಬಹುದು. ಈ ನಿಯಮದನ್ವಯ ಒಬ್ಬ ಬದಲಿ ಆಟಗಾರನನ್ನು ಮಾತ್ರ ಬದಲಿಸಲು ಅವಕಾಶವಿರಲಿದೆ.

ಇದನ್ನೂ ಓದಿ IPL 2023: ಅಹಮದಾಬಾದ್​ನಲ್ಲಿ ಭಾರಿ ಮಳೆ; ಚೆನ್ನೈ-ಗುಜರಾತ್​ ಪಂದ್ಯ ಅನುಮಾನ

ವೈಡ್‌, ನೋಬಾಲ್‌ಗ‌ಳೂ ಡಿಆರ್‌ಎಸ್‌

ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ಜಾರಿಗೆ ತರಲಾಗಿದ್ದ ವೈಡ್‌, ನೋಬಾಲ್‌ ಡಿಆರ್‌ಎಸ್‌ ನಿಯಮವನ್ನು ಈ ಬಾರಿಯ ಐಪಿಎಲ್​ನಲ್ಲಿಯೂ ಅಳವಡಿಸಲಾಗಿದೆ. ಅಂಪೈರ್​ಗಳು ನೀಡಿದ ವೈಡ್‌, ನೋಬಾಲ್‌ ಕರೆಗಳನ್ನು ಡಿಆರ್‌ಎಸ್‌ ಮೂಲಕ ಈಗ ಆಟಗಾರರಿಗೆ ಪ್ರಶ್ನಿಸಬಹುದಾಗಿದೆ.

ಈ ಹಿಂದೆ ಟಾಸ್​ಗೂ ಮುನ್ನ ಪ್ಲೇಯಿಂಗ್​ ಇಲೆವೆನ್​ ಪಟ್ಟಿ ಸಲ್ಲಿಸಬೇಕಿತ್ತು. ಆದರೆ ಇದೀಗ ತಂಡಗಳ ನಾಯಕರು ಟಾಸ್‌ ಹಾರಿಸುವಾಗ 11 ಆಟಗಾರರ ಅಂತಿಮಪಟ್ಟಿಯನ್ನು ನೀಡಬೇಕಾಗಿಲ್ಲ. ಟಾಸ್‌ ಫ‌ಲಿತಾಂಶ ನೋಡಿಕೊಂಡು ಬಳಿಕ 11ರ ಪಟ್ಟಿಯನ್ನು ಪ್ರಕಟಿಸಬಹುದು.

Exit mobile version