ಕ್ರಿಕೆಟ್
IPL 203 : ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ
ಐಪಿಎಲ್ ಪಂದ್ಯಗಳು ಎಲ್ಲಿ ನಡೆಯುಲಿವೆ, ಎಷ್ಟುಹೊತ್ತಿಗೆ ಆರಂಭವಾಗುತ್ತದೆ ಎಂಬೆಲ್ಲ ಮಾಹಿತಿಯನ್ನು ಈ ವೇಳಾಪಟ್ಟಿ ನೋಡಿ ತಿಳಿದುಕೊಳ್ಳಿ.
ಮುಂಬಯಿ: ಮಾರ್ಚ್ 31ರಿಂದ ಐಪಿಎಲ್ 16ನೇ ಆವೃತ್ತಿ ಆರಂಭಗೊಳ್ಳಲಿದೆ. ಸುಮಾರು ಎರಡು ತಿಂಗಳ ಕಾಲ 74 ಪಂದ್ಯಗಳು ನಡೆಲಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಇದು ಹಬ್ಬದ ಋತು. ಈ ಟೂರ್ನಿಯ ಲೀಗ್ ಹಂತದ 70 ಪಂದ್ಯಗಳ ವಿವರ ವೇಳಾಪಟ್ಟಿ ಇಲ್ಲಿದೆ.
ಪಂದ್ಯ ಸಂಖ್ಯೆ | ದಿನಾಂಕ | ಪಂದ್ಯಗಳು | ಸಮಯ | ಸ್ಥಳ |
1 | ಮಾರ್ಚ್ 31 | ಗುಜರಾತ್ vs ಚೆನ್ನೈ | ರಾತ್ರಿ 7.30 | ಅಹಮದಾಬಾದ್ |
2 | ಏಪ್ರಿಲ್ 1 | ಪಂಜಾಬ್ vs ಕೋಲ್ಕೊತಾ | ಮಧ್ಯಾಹ್ನ 3.30 | ಮೊಹಾಲಿ |
3 | ಏಪ್ರಿಲ್ 1 | ಲಕ್ನೊvs ಡೆಲ್ಲಿ | ರಾತ್ರಿ 7.30 | ಲಖನೌ |
4 | ಏಪ್ರಿಲ್ 2 | ಹೈದರಾಬಾದ್ vs ರಾಜಸ್ಥಾನ್ | ಮಧ್ಯಾಹ್ನ 3.30 | ಹೈದರಾಬಾದ್ |
5 | ಏಪ್ರಿಲ್ 2 | ಬೆಂಗಳೂರು vs ಮುಂಬೈ | ರಾತ್ರಿ 7.30 | ಬೆಂಗಳೂರು |
6 | ಏಪ್ರಿಲ್ 3 | ಚೆನ್ನೈ vs ಲಕ್ನೊ | ರಾತ್ರಿ 7.30 | ಚೆನ್ನೈ |
7 | ಏಪ್ರಿಲ್ 4 | ಡೆಲ್ಲಿ vs ಗುಜರಾತ್ | ರಾತ್ರಿ 7.30 | ಡೆಲ್ಲಿ |
8 | ಏಪ್ರಿಲ್ 5 | ರಾಜಸ್ಥಾನ್ vs ಪಂಜಾಬ್ | ರಾತ್ರಿ 7.30 | ಗುವಾಹಟಿ |
9 | ಏಪ್ರಿಲ್ 6 | ಕೋಲ್ಕೊತಾ vs ಬೆಂಗಳೂರು | ರಾತ್ರಿ 7.30 | ಕೋಲ್ಕೊತಾ |
10 | ಏಪ್ರಿಲ್ 7 | ಲಕ್ನೊ vs ಹೈದರಾಬಾದ್ | ರಾತ್ರಿ 7.30 | ಲಖನೌ |
11 | ಏಪ್ರಿಲ್ 8 | ರಾಜಸ್ಥಾನ್ vs ಡೆಲ್ಲಿ | ಮಧ್ಯಾಹ್ನ 3.30 | ಗುವಾಹಟಿ |
12 | ಏಪ್ರಿಲ್ 8 | ಮುಂಬೈ vs ಚೆನ್ನೈ | ರಾತ್ರಿ 7.30 | ಮುಂಬಯಿ |
13 | ಏಪ್ರಿಲ್ 9 | ಗುಜರಾತ್ vs ಕೊಲ್ಕೊತಾ | 3.30 | ಅಹಮದಾಬಾದ್ |
14 | ಏಪ್ರಿಲ್ 9 | ಪಂಜಾಬ್ vs ಹೈದರಾಬಾದ್ | ರಾತ್ರಿ 7.30 | ಹೈದರಾಬಾದ್ |
15 | ಏಪ್ರಿಲ್ 10 | ಬೆಂಗಳೂರು vs ಲಖನೌ | ರಾತ್ರಿ 7.30 | ಬೆಂಗಳೂರು |
16 | ಏಪ್ರಿಲ್ 11 | ಡೆಲ್ಲಿ vs ಮುಂಬೈ | ರಾತ್ರಿ 7.30 | ಡೆಲ್ಲಿ |
17 | ಏಪ್ರಿಲ್ 12 | ಚೆನ್ನೈ vs ರಾಜಸ್ಥಾನ್ | ರಾತ್ರಿ 7.30 | ಚೆನ್ನೈ |
18 | ಏಪ್ರಿಲ್ 13 | ಪಂಜಾಬ್ vs ಗುಜರಾತ್ | ರಾತ್ರಿ 7.30 | ಮೊಹಾಲಿ |
19 | ಏಪ್ರಿಲ್ 14 | ಕೋಲ್ಕೊತಾ vs ಹೈದರಾಬಾದ್ | ರಾತ್ರಿ 7.30 | ಕೋಲ್ಕೊತಾ |
20 | ಏಪ್ರಿಲ್ 15 | ಬೆಂಗಳೂರು vs ಡೆಲ್ಲಿ | ಮಧ್ಯಾಹ್ನ 3.30 | ಬೆಂಗಳೂರು |
21 | ಏಪ್ರಿಲ್ 15 | ಲಕ್ನೊ vs ಪಂಜಾಬ್ | ರಾತ್ರಿ 7.30 | ಲಖನೌ |
22 | ಏಪ್ರಿಲ್ 16 | ಮುಂಬಯಿ vs ಕೋಲ್ಕೊತಾ | ಮಧ್ಯಾಹ್ನ 3.30 | ಮುಂಬಯಿ |
23 | ಏಪ್ರಿಲ್ 16 | ಗುಜರಾತ್ vs ರಾಜಸ್ಥಾನ್ | ರಾತ್ರಿ 7.30 | ಅಹಮದಾಬಾದ್ |
24 | ಏಪ್ರಿಲ್ 17 | ಬೆಂಗಳೂರು vs ಚೆನ್ನೈ | ರಾತ್ರಿ 7.30 | ಬೆಂಗಳೂರು |
25 | ಏಪ್ರಿಲ್ 18 | ಹೈದರಾಬಾದ್ vs ಮುಂಬಯಿ | ರಾತ್ರಿ 7.30 | ಹೈದರಾಬಾದ್ |
26 | ಏಪ್ರಿಲ್ 19 | ರಾಜಸ್ಥಾನ್ vs ಲಕ್ನೊ | ರಾತ್ರಿ 7.30 | ಜೈಪುರ |
27 | ಏಪ್ರಿಲ್ 20 | ಪಂಜಾಬ್ vs ಬೆಂಗಳೂರು | ಮಧ್ಯಾಹ್ನ 3.30 | ಮೊಹಾಲಿ |
28 | ಏಪ್ರಿಲ್ 20 | ಡೆಲ್ಲಿ vs ಕೊಲ್ಕೊತಾ | ರಾತ್ರಿ 7.30 | ಡೆಲ್ಲಿ |
29 | ಏಪ್ರಿಲ್ 21 | ಚೆನ್ನೈ vs ಹೈದರಾಬಾದ್ | ರಾತ್ರಿ 7.30 | ಚೆನ್ನೈ |
30 | ಏಪ್ರಿಲ್ 22 | ಲಖನೌ vs ಗುಜರಾತ್ | ಮಧ್ಯಾಹ್ನ 3.30 | ಲಖನೌ |
31 | ಏಪ್ರಿಲ್ 22 | ಮುಂಬೈ vs ಪಂಜಾಬ್ | ರಾತ್ರಿ 7.30 | ಮುಂಬಯಿ |
32 | ಏಪ್ರಿಲ್ 23 | ಬೆಂಗಳೂರು vs ರಾಜಸ್ಥಾನ್ | ಮಧ್ಯಾಹ್ನ3.30 | ಬೆಂಗಳೂರು |
33 | ಏಪ್ರಿಲ್ 23 | ಕೋಲ್ಕೊತಾ vs ಚೆನ್ನೈ | ರಾತ್ರಿ 7.30 | ಕೋಲ್ಕೊತಾ |
34 | ಏಪ್ರಿಲ್ 24 | ಹೈದರಾಬಾದ್ vs ಡೆಲ್ಲಿ | ರಾತ್ರಿ 7.30 | ಹೈದರಾಬಾದ್ |
35 | ಏಪ್ರಿಲ್ 25 | ಗುಜರಾತ್ vs ಮುಂಬಯಿ | ರಾತ್ರಿ 7.30 | ಅಹಮದಾಬಾದ್ |
36 | ಏಪ್ರಿಲ್ 26 | ಬೆಂಗಳೂರು vs ಕೊಲ್ಕೊತಾ | ರಾತ್ರಿ 7.30 | ಬೆಂಗಳೂರು |
37 | ಏಪ್ರಿಲ್ 27 | ರಾಜಸ್ಥಾನ್ vs ಚೆನ್ನೈ | ರಾತ್ರಿ 7.30 | ಜೈಪುರ |
38 | ಏಪ್ರಿಲ್ 28 | ಪಂಜಾಬ್ vs ಲಕ್ನೊ | ರಾತ್ರಿ 7.30 | ಮೊಹಾಲಿ |
39 | ಏಪ್ರಿಲ್ 29 | ಗುಜರಾತ್ vs ಕೊಲ್ಕೊತಾ | ಮಧ್ಯಾಹ್ನ 3.30 | ಕೊಲ್ಕೊತಾ |
40 | ಏಪ್ರಿಲ್ 29 | ಡೆಲ್ಲಿ vs ಹೈದರಾಬಾದ್ | ರಾತ್ರಿ 7.30 | ಡೆಲ್ಲಿ |
41 | ಏಪ್ರಿಲ್ 30 | ಚೆನ್ನೈ vs ಪಂಜಾಬ್ | ಮಧ್ಯಾಹ್ನ 3.30 | ಚೆನ್ನೈ |
42 | ಏಪ್ರಿಲ್ 30 | ಮುಂಬೈ vs ರಾಜಸ್ಥಾನ್ | ರಾತ್ರಿ 7.30 | ಮುಂಬಯಿ |
43 | ಮೇ 1 | ಲಕ್ನೊ vs ಬೆಂಗಳೂರು | ರಾತ್ರಿ 7.30 | ಲಖನೌ |
44 | ಮೇ 2 | ಗುಜರಾತ್ vs ಡೆಲ್ಲಿ | ರಾತ್ರಿ 7.30 | ಅಹಮದಾಬಾದ್ |
45 | ಮೇ 3 | ಪಂಜಾಬ್ vs ಮುಂಬಯಿ | ರಾತ್ರಿ 7.30 | ಮೊಹಾಲಿ |
46 | ಮೇ 4 | ಲಕ್ನೊ vs ಚೆನ್ನೈ | ಮಧ್ಯಾಹ್ನ 3.30 | ಲಖನೌ |
47 | ಮೇ 4 | ಹೈದರಾಬಾದ್ ಕೋಲ್ಕೊತಾ | ರಾತ್ರಿ 7.30 | ಹೈದರಾಬಾದ್ |
48 | ಮೇ 5 | ರಾಜಸ್ಥಾನ್ ಗುಜರಾತ್ | ರಾತ್ರಿ 7.30 | ಜೈಪುರ |
49 | ಮೇ 6 | ಚೆನ್ನೈvs ಮುಂಬೈ | ಮಧ್ಯಾಹ್ನ 3.30 | ಚೆನ್ನೈ |
50 | ಮೇ 6 | ಡೆಲ್ಲಿ vs ಬೆಂಗಳೂರು | ರಾತ್ರಿ 7.30 | ಡೆಲ್ಲಿ |
51 | ಮೇ 7 | ಗುಜರಾತ್ vs ಲಖನೌ | ಮಧ್ಯಾಹ್ನ3.30 | ಅಹಮದಾಬಾದ್ |
52 | ಮೇ 7 | ರಾಜಸ್ಥಾನ್ vs ಹೈದರಾಬಾದ್ | ರಾತ್ರಿ 7.30 | ಜೈಪುರ |
53 | ಮೇ 8 | ಕೋಲ್ಕೊತಾ vs ಪಂಜಾನ್ | ರಾತ್ರಿ 7.30 | ಕೋಲ್ಕೊತಾ |
54 | ಮೇ 9 | ಮುಂಬಯಿ vs ಬೆಂಗಳೂರು | ರಾತ್ರಿ 7.30 | ಮುಂಬಯಿ |
55 | ಮೇ 10 | ಚೆನ್ನೈ vs ಡೆಲ್ಲಿ | ರಾತ್ರಿ 7.30 | ಚೆನ್ನೈ |
56 | ಮೇ 11 | ಕೋಲ್ಕೊತಾ vs ರಾಜಸ್ಥಾನ್ | ರಾತ್ರಿ 7.30 | ಕೋಲ್ಕೊತಾ |
57 | ಮೇ12 | ಮುಂಬಯಿ vs ಗುಜರಾತ್ | ರಾತ್ರಿ 7.30 | ಮುಂಬಯಿ |
58 | ಮೇ 13 | ಹೈದರಾಬಾದ್ vs ಲಖನೌ | ಮಧ್ಯಾಹ್ನ3.30 | ಹೈದರಾಬಾದ್ |
59 | ಮೇ 13 | ಡೆಲ್ಲಿ vs ಪಂಜಾಬ್ | ರಾತ್ರಿ 7.30 | ಡೆಲ್ಲಿ |
60 | ಮೇ 14 | ರಾಜಸ್ಥಾನ್ vs ಬೆಂಗಳೂರು | ಮಧ್ಯಾಹ್ನ3.30 | ಜೈಪುರ |
61 | ಮೇ 14 | ಚೆನ್ನೈvs ಕೋಲ್ಕೊತಾ | ರಾತ್ರಿ 7.30 | ಚೆನ್ನೈ |
62 | ಮೇ 15 | ಗುಜರಾತ್ vs ಹೈದರಾಬಾದ್ | ರಾತ್ರಿ 7.30 | ಅಹಮದಾಬಾದ್ |
63 | ಮೇ 16 | ಲಕ್ನೊ vs ಮುಂಬಯಿ | ರಾತ್ರಿ 7.30 | ಲಖನೌ |
64 | ಮೇ 17 | ಪಂಜಾಬ್ vs ಡೆಲ್ಲಿ | ರಾತ್ರಿ 7.30 | ಧರ್ಮಶಾಲಾ |
65 | ಮೇ 18 | ಹೈದರಾಬಾದ್ vs ಬೆಂಗಳೂರು | ರಾತ್ರಿ 7.30 | ಹೈದರಾಬಾದ್ |
66 | ಮೇ 19 | ಪಂಜಾಬ್ vs ರಾಜಸ್ಥಾನ್ | ರಾತ್ರಿ 7.30 | ಧರ್ಮಶಾಲಾ |
67 | ಮೇ 20 | ಡೆಲ್ಲಿ vs ಚೆನ್ನೈ | ಮಧ್ಯಾಹ್ನ3.30 | ಡೆಲ್ಲಿ |
68 | ಮೇ 20 | ಕೋಲ್ಕೊತಾvs ಲಕ್ನೊ | ರಾತ್ರಿ 7.30 | ಕೋಲ್ಕೊತಾ |
69 | ಮೇ 21 | ಮುಂಬಯಿ vs ಹೈದರಾಬಾದ್ | ಮಧ್ಯಾಹ್ನ 3.30 | ಮುಂಬಯಿ |
70 | ಮೇ 21 | ಬೆಂಗಳೂರು vs ಗುಜರಾತ್ | ರಾತ್ರಿ 7.30 | ಬೆಂಗಳೂರು |
ಕ್ರಿಕೆಟ್
IPL 2023: ಕೊಹ್ಲಿ ದಾಖಲೆ ಮುರಿಯುವರೇ ಶುಭಮನ್ ಗಿಲ್?
ಈಗಾಗಲೇ ಆರೆಂಜ್ ಕ್ಯಾಪ್ ಪಡೆದಿರುವ ಶುಭಮನ್ ಗಿಲ್ ಅವರು ವಿರಾಟ್ ಕೊಹ್ಲಿಯ ದಾಖಲೆಯೊಂದನ್ನು ಮುರಿಯಲು ಸಜ್ಜಾಗಿದ್ದಾರೆ.
ಅಹಮದಾಬಾದ್: ನ್ಯೂ ಬ್ಯಾಟಿಂಗ್ ಸೆನ್ಸೇಷನಲ್ ಶುಭಮನ್ ಗಿಲ್ ಅವರು ಇದೀಗ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿಯ ದಾಖಲೆಯೊಂದರ ಮೇಲೆ ಕಣ್ಣಿಟ್ಟಿದ್ದಾರೆ. ಸದ್ಯ 851 ರನ್ ಗಳಿಸಿರುವ ಗಿಲ್ ಅವರು ಚೆನ್ನೈ ವಿರುದ್ಧದ ಪಂದ್ಯದಲ್ಲಿ 122ರನ್ ಗಳಿಸಿದರೆ ವಿರಾಟ್ ಅವರ ಹೆಸರಿನಲ್ಲಿದ್ದ ದಾಖಲೆ ಪತನಗೊಳ್ಳಲಿದೆ.
ಮುಂಬೈ ಇಂಡಿಯನ್ಸ್ ವಿರುದ್ಧದ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ಮಿಂಚಿದ್ದ ಗಿಲ್ ಅವರು ಈ ಬಾರಿಯ ಐಪಿಎಲ್ನ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದರು. 730 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದ ಡು ಪ್ಲೆಸಿಸ್ ಇದೀಗ ದ್ವಿತೀಯ ಸ್ಥಾನಕ್ಕೆ ಕುಸಿದಿದ್ದಾರೆ. ಸದ್ಯ ಗಿಲ್ ಅವರು 851 ರನ್ ಬಾರಿಸಿದ್ದಾರೆ. ಆರ್ಸಿಬಿ ತಂಡ ಸೋತು ಹೊರ ಬಿದ್ದ ಕಾರಣ ಡು ಪ್ಲೆಸಿಸ್ಗೆ ಇನ್ನು ಗಿಲ್ ದಾಖಲೆ ಮುರಿಯುವ ಅವಕಾಶವಿಲ್ಲ.
ಕಳೆದ ನಾಲ್ಕು ಇನ್ನಿಂಗ್ಸ್ಗಳಲ್ಲಿ ಮೂರು ಶತಕ ಬಾರಿಸಿರುವ ಗಿಲ್ ಇದೀಗ ಹೊಸ ಮೈಲಿಗಲ್ಲು ಸ್ಥಾಪಿಸುವ ಸನಿಹದಲ್ಲಿದ್ದಾರೆ. 2016ರಲ್ಲಿ ವಿರಾಟ್ ಕೊಹ್ಲಿ ಅವರು ಗಳಿಸಿದ್ದ 973ರನ್ ಗಳ ದಾಖಲೆಯನ್ನು ಮುರಿಯಲು ಮುಂದಾಗಿದ್ದಾರೆ. ಇದಕ್ಕೆ ಗಿಲ್ ಅವರಿಗೆ ಬೇಕಿರುವುದು 122ರನ್ಗಳ ಗುರಿ. ಫೈನಲ್ ಪಂದ್ಯದಲ್ಲಿ ಶತಕದೊಂದಿ ಈ ಮೊತ್ತ ಪೇರಿಸಿದಲ್ಲಿ ಗಿಲ್ ಅವರು ಐಪಿಎಲ್ನ ಇತಿಹಾಸದ ಪುಟ ಸೇರಲಿದ್ದಾರೆ.
ಫೈನಲ್ ಪಂದ್ಯಕ್ಕೆ ಉಭಯ ತಂಡಗಳು
ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ, ರಶೀದ್ ಖಾನ್, ರಾಹುಲ್ ತೇವಾಟಿಯಾ, ವಿಜಯ್ ಶಂಕರ್/ ಸಾಯಿ ಸುದರ್ಶನ್, ಮೊಹಮ್ಮದ್ ಶಮಿ, ಯಶ್ ದಯಾಳ್, ನೂರ್ ಅಹ್ಮದ್/ ಜೋಶುವಾ ಲಿಟಲ್, ಮೋಹಿತ್ ಶರ್ಮಾ.
ಇದನ್ನೂ ಓದಿ IPL 2023 : ತಮ್ಮ ದೇಹದಲ್ಲಿರುವ ಟ್ಯಾಟೂಗಳ ಅರ್ಥ ವಿವರಿಸಿದ ಸೂರ್ಯಕುಮಾರ್!
ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ಧೋನಿ(ನಾಯಕ), ರವೀಂದ್ರ ಜಡೇಜಾ, ಡೆವೊನ್ ಕಾನ್ವೆ, ಋತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು/ಅಜಿಂಕ್ಯ ರಹಾನೆ, ಮೊಯೀನ್ ಅಲಿ, ಶಿವಂ ದುಬೆ, ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮಥೀಶಾ ಪತಿರಾಣಾ, ಮಹೀಶ್ ತೀಕ್ಷಣ.
ಕ್ರಿಕೆಟ್
IPL 2023: ಫೈನಲ್ ಪಂದ್ಯಕ್ಕೆ ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಫೈನಲ್ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ಉಭಯ ತಂಡಗಳ ಈ ಹೋರಾಟ ಇಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಅಹಮದಾಬಾದ್: ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಫೈನಲ್ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ಉಭಯ ತಂಡಗಳ ಈ ಪ್ರಶಸ್ತಿ ಸಮರಕ್ಕೆ ನರೇಂದ್ರ ಮೋದಿ ಸ್ಟೇಡಿಯಂ ಸರ್ವ ವಿಧದಲ್ಲೂ ಸಜ್ಜಾಗಿ ನಿಂತಿದೆ. ಈ ಪಂದ್ಯಕ್ಕೆ ಇತ್ತಂಡಗಳ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬ ಮಾಹಿತಿ ಇಂತಿದೆ.
ಸಮಬಲದ ತಂಡಗಳು
ಎರಡೂ ತಂಡಗಳು ಸಮಬಲದಿಂದ ಕೂಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ದಾಳಿ ಸಂಘಟಿಸುವಲ್ಲಿ ಎರಡೂ ತಂಡಗಳು ಬಲಿಷ್ಠವಾಗಿದೆ. ಗುಜರಾತ್ ಪರ ಶುಭಮನ್ ಗಿಲ್, ಸಾಯಿ ಸುದರ್ಶನ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯ ಅತ್ಯಂತ ಅಪಾಯಕಾರಿಗಳು. ಚೆನ್ನೈ ಪರ ಋತುರಾಜ್ ಗಾಯಕ್ವಾಡ್, ಡೆವೋನ್ ಕಾನ್ವೆ, ರಹಾನೆ ಮತ್ತು ಶಿವಂ ದುಬೆ ಕೂಡ ಸಿಡಿಯಬಲ್ಲರು. ಆದರೆ ಮೊಯಿನ್ ಅಲಿ ಈ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ಅವರು ಮಹತ್ವದ ಪಂದ್ಯದಲ್ಲಿ ಆಡಬೇಕಾದ ಅನಿವಾರ್ಯತೆ ಇದೆ.
ಮುಖಾಮುಖಿ
ಚೆನ್ನೈ ಮತ್ತು ಗುಜರಾತ್ ತಂಡಗಳು ಇದುವರೆಗೆ ಐಪಿಎಲ್ನಲ್ಲಿ 4 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಗುಜರಾತ್ ಮೂರು ಬಾರಿ ಗೆದ್ದಿದೆ. ಚೆನ್ನೈ ತಂಡ ಒಂದು ಪಂದ್ಯ ಗೆದ್ದಿದೆ. ಈ ಗೆಲುವು ಇದೇ ಆವೃತ್ತಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ದಾಖಲಾಗಿತ್ತು. ಅಹಮದಾಬಾದ್ನಲ್ಲೇ ನಡೆದ ಉದ್ಘಾಟನ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗುಜರಾತ್ ಗೆದ್ದು ತನ್ನ ಅಭಿಯಾನವನ್ನು ಆರಂಭಿಸಿತ್ತು. ಇದೀಗ ಅಂತಿಮ ಪಂದ್ಯದಲ್ಲಿಯೂ ಇತ್ತಂಡಗಳು ಮುಖಾಮುಖಿಯಾಗಿವೆ. ಇಲ್ಲಿ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದು ಈ ಪಂದ್ಯದ ಕೌತುಕ.
ಸಂಭಾವ್ಯ ತಂಡಗಳು
ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ, ರಶೀದ್ ಖಾನ್, ರಾಹುಲ್ ತೇವಾಟಿಯಾ, ವಿಜಯ್ ಶಂಕರ್/ ಸಾಯಿ ಸುದರ್ಶನ್, ಮೊಹಮ್ಮದ್ ಶಮಿ, ಯಶ್ ದಯಾಳ್, ನೂರ್ ಅಹ್ಮದ್/ ಜೋಶುವಾ ಲಿಟಲ್, ಮೋಹಿತ್ ಶರ್ಮಾ.
ಇದನ್ನೂ ಓದಿ IPL 2023 : ತಮ್ಮ ದೇಹದಲ್ಲಿರುವ ಟ್ಯಾಟೂಗಳ ಅರ್ಥ ವಿವರಿಸಿದ ಸೂರ್ಯಕುಮಾರ್!
ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ಧೋನಿ(ನಾಯಕ), ರವೀಂದ್ರ ಜಡೇಜಾ, ಡೆವೊನ್ ಕಾನ್ವೆ, ಋತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು/ಅಜಿಂಕ್ಯ ರಹಾನೆ, ಮೊಯೀನ್ ಅಲಿ, ಶಿವಂ ದುಬೆ, ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮಥೀಶಾ ಪತಿರಾಣಾ, ಮಹೀಶ್ ತೀಕ್ಷಣ.
ಕ್ರಿಕೆಟ್
World Cup 2023 : ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ವೇಳೆ ವಿಶ್ವಕಪ್ ವೇಳಾಪಟ್ಟಿ ಪ್ರಕಟ
ಬಹುತೇಕ ಎಲ್ಲ ಮೆಟ್ರೋ ಸಿಟಿಗಳಲ್ಲಿ ಪಂದ್ಯಗಳನ್ನು ಆಯೋಜಿಸಲು ಯೋಜನೆ ರೂಪಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.
ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಮುಕ್ತಾಯದ ಬಳಿಕ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಆಡಲು ಇಂಗ್ಲೆಂಡ್ಗೆ ತೆರಳಲಿದೆ. ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಟೂರ್ನಿಯ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಇದಾದ ಬಳಿಕ ನಡೆಯಲಿರುವ ಐಸಿಸಿ ಟೂರ್ನಿಯೆಂದರೆ ಏಕ ದಿನ ವಿಶ್ವ ಕಪ್. ಇದು ಭಾರತದ ಆತಿಥ್ಯದಲ್ಲಿ ಆಯೋಜನೆಗೊಂಡಿದೆ. ಅದಕ್ಕಾಗಿ ಬಿಸಿಸಿಐ ಸಜ್ಜಾಗುತ್ತಿದೆ. ವರ್ಷದ ಕೊನೆಯಲ್ಲಿ ನಡೆಯಲಿರುವ ಈ ಟೂರ್ನಿಯ ವೇಳಾಪಟ್ಟಿ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಉಂಟಾಗಿದೆ. ಜತೆಗೆ ಪಂದ್ಯದ ತಾಣಗಳು ಎಲ್ಲೆಲ್ಲಿ ಎಂದು ತಿಳಿಯುವ ಕುತೂಹಲವೂ ಸೃಷ್ಟಿಯಾಗಿದೆ. ಮಾಹಿತಿಯೊಂದರ ಪ್ರಕಾರ ಟೂರ್ನಿಯ ವೇಳಾಪಟ್ಟಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ ಪಂದ್ಯದ ಬಳಿಕ ನಡೆಯಲಿದೆ.
ಡಬ್ಲ್ಯುಟಿಸಿ ಫೈನಲ್ ಸಮೀಪಿಸುತ್ತಿರುವುದರಿಂದ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ಸಮಯದಲ್ಲಿ ಬಿಸಿಸಿಐ ವಿಶ್ವಕಪ್ನ ಸ್ಥಳಗಳು ಮತ್ತು ವೇಳಾಪಟ್ಟಿಯನ್ನು ಅನಾವರಣ ಮಾಡಲಿದೆ ಎಂದು ಹಲವಾರು ವರದಿಗಳು ಹೇಳುತ್ತಿವೆ.
ಬಿಸಿಸಿಐನ ವಿಶೇಷ ಸಾಮಾನ್ಯ ಸಭೆ ಮೇ 27 ರಂದು ಅಹಮದಾಬಾದ್ನಲ್ಲಿ ನಡೆದಿದೆ. ಅಲ್ಲಿ ಕ್ರೀಡಾಂಗಣಗಳ ಗುಣಮಟ್ಟ ಹದಗೆಡುತ್ತಿರುವುದನ್ನು ಮಂಡಳಿಯು ಬೊಟ್ಟು ಮಾಡಿ ತೋರಿಸಿದೆ. ದೇಶಾದ್ಯಂತ ಅನೇಕ ಸ್ಟೇಡಿಯಮ್ಗಳೂ ಇರುವುದರಿಂದ ಸೌಲಭ್ಯಗಳ ಗುಣಮಟ್ಟವನ್ನು ಸುಧಾರಿಸುವ ಜವಾಬ್ದಾರಿಯನ್ನು ಆಯಾಯ ಕ್ರಿಕೆಟ್ ಸಂಸ್ಥೆಗಳು ವಹಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಹೇಳಲಾಗಿದೆ. ಮೂಲ ಸೌಕರ್ಯ ಹೆಚ್ಚಿಸಲು ಬೇಕಾದ ಅನುದಾನ ವಿತರಣೆಗೂ ವ್ಯವಸ್ಥೆ ಆಗಿದೆ ಎನ್ನಲಾಗಿದೆ.
ಇದನ್ನೂ ಓದಿ :IPL 2023: ಟಿ20 ವಿಶ್ವ ಕಪ್ಗೆ ಹಾರ್ದಿಕ್ ಪಾಂಡ್ಯ ಸೂಕ್ತ ನಾಯಕ; ರವಿಶಾಸ್ತ್ರಿ ವಿಶ್ವಾಸ
ಬಿಸಿಸಿಐ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಕ್ರೀಡಾಂಗಣಗಳ ಸಂಭಾವ್ಯ ನವೀಕರಣಗಳ ಬಗ್ಗೆ ಚರ್ಚಿಸಲಾಯಿತು. ಮೂಲಸೌಕರ್ಯ ಸುಧಾರಣೆಯು ಹೆಚ್ಚು ಚರ್ಚಿಸಲಾದ ವಿಷಯಗಳಲ್ಲಿ ಒಂದು. ಏಕದಿನ ವಿಶ್ವ ಕಪ್ ವೇಗವಾಗಿ ಸಮೀಪಿಸುತ್ತಿರುವುದರಿಂದ, ಯೋಜನೆಯನ್ನು ಆದಷ್ಟು ಬೇಗ ಪ್ರಾರಂಭಿಸು ನಿರ್ಧಾರ ಕೈಗೊಳ್ಳಲಾಯಿತು. ವಿಶ್ವ ಕಪ್ ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ನಡೆಯುವ ಕಾರಣ ಅದಕ್ಕಿಂತ ಮೊದಲು ಸಜ್ಜುಗೊಳಿಸುವಂತೆ ಸೂಚಿಸಲಾಯಿತು.
ವಿಶ್ವಕಪ್ನ ಸ್ಥಳಗಳ ಯೋಜನೆಯೊಂದಿಗೆ, ಪದಾಧಿಕಾರಿಗಳಿಗೆ ನಿರ್ದಿಷ್ಟ ಸ್ಥಳಗಳ ಉಸ್ತುವಾರಿ ನೀಡುವ ಯೋಜನೆ ರೂಪಿಸಲಾಯಿತು. ನಾವು ಎಲ್ಲಾ ಮಹಾನಗರಗಳನ್ನು ಪಂದ್ಯಗಳಿಗೆ ಆಯ್ಕೆ ಮಾಡಲು ನಿರ್ಧರಿಸಿದ್ದೇವೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಕ್ರಿಕೆಟ್
IPL 2023 : ತಮ್ಮ ದೇಹದಲ್ಲಿರುವ ಟ್ಯಾಟೂಗಳ ಅರ್ಥ ವಿವರಿಸಿದ ಸೂರ್ಯಕುಮಾರ್!
ಅಪ್ಪ, ಅಮ್ಮನ ಹೆಸರು, ಪತ್ನಿಯ ಮಾತಿನಂತೆ ಬಿಡಿಸಿದ ಟ್ಯಾಟೂಗಳು ದೇಹದ ಮೇಲಿವೆ ಎಂದು ಸೂರ್ಯಕುಮಾರ್ ಯಾದವ್ ವಿವರಿಸಿದ್ದಾರೆ.
ಮುಂಬಯಿ: ಮುಂಬಯಿ ಇಂಡಿಯನ್ಸ್ ತಂಡ ಹಾಲಿ ಆವೃತ್ತಿಯ ಐಪಿಎಲ್ ಪ್ರಶಸ್ತಿ ರೇಸ್ನಿಂದ ಹೊರ ಬಿದ್ದಿದೆ. ಗುಜರಾತ್ ಜೈಂಟ್ಸ್ ವಿರುದ್ಧದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸೋಲುವ ಮೂಲಕ ಆರನೇ ಪ್ರಶಸ್ತಿ ಗಲ್ಲುವ ಅವಕಾಶದಿಂದ ವಂಚಿತವಾಗಿದೆ. ಏತನ್ಮಧ್ಯೆ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅರ್ಧ ಶತಕ ಬಾರಿಸುವ ಮೂಲಕ ಮಿಂಚಿದ್ದರು. ಆದರೆ, ತಂಡಕ್ಕೆ ಗೆಲುವು ತಂದುಕೊಡಲಾಗದ ಬೇಸರಕ್ಕೂ ಒಳಗಾದರು. ಇದೀಗ ಅವರು ಬೇಸರದಿಂದ ಮುಕ್ತರಾಗಿದ್ದು ತಮ್ಮ ಕುರಿತು ಹಲವಾರು ವಿವರಣೆಗಳನ್ನು ನೀಡಿದ್ದಾರೆ. ಈ ವೇಳೆ ಅವರು ತಮ್ಮ ದೇಹದ ಮೇಲಿರುವ ಟ್ಯಾಟೂಗಳ ಬಗ್ಗೆಯೂ ಮಾತನಾಡಿಕೊಂಡಿದ್ದಾರೆ.
ಸೂರ್ಯಕುಮಾರ್ ಯಾದವ್ ತಮ್ಮ ದೇಹದ ಮೇಲೆ ತಾಯಿ, ತಂದೆ, ಪತ್ನಿ ಮತ್ತು ರಾಷ್ಟ್ರೀಯ ಕ್ಯಾಪ್ ಸಂಖ್ಯೆಗಳು (ಟೆಸ್ಟ್, ಏಕದಿನ ಮತ್ತು ಟಿ 20 ಐ) ಸೇರಿದಂತೆ ತಮ್ಮ ದೇಹದ ಮೇಲೆ ಅನೇಕ ಹಚ್ಚೆಗಳನ್ನು ಹೊಂದಿರುವುದಾಗಿ ಹೇಳಿದ್ದಾರೆ. ನಕಾರಾತ್ಮಕ ಶಕ್ತಿಯನ್ನು ದೂರವಿರಿಸಲು ತಮ್ಮ ಕೈಯಲ್ಲಿ ಹೊಂದಿರುವ ಸಿಂಹದ ಮುಖದ ಹಚ್ಚೆಯನ್ನೂ ಹಾಕಿಸಿಕೊಂಡಿದ್ದೇನೆ ಎಂಬುದಾಗಿ ಅವರು ಹೇಳಿದ್ದಾರೆ.
“ನನ್ನ ತಾಯಿ ಮತ್ತು ತಂದೆಯ ಹೆಸರಿನ ಹಚ್ಚೆ ನನ್ನ ಬಳಿ ಇದೆ. ಇದು ನನ್ನ ಮೊದಲ ಹಚ್ಚೆ, ಆದ್ದರಿಂದ ನಾನು ಉಳಿದವುಗಳಿಗೆ ಅನುಮತಿ ಪಡೆದುಕೊಂಡೆ. ನನ್ನ ಹೆಂಡತಿ ಈ ದೃಷ್ಟಿ ತಾಗದಂತಿರುವ ಹಾಕಿಸಿಕೊಳ್ಳುವಂತೆ ನನಗೆ ಹೇಳಿದಳು ಎಂದು ಸೂರ್ಯಕುಮಾರ್ ಜಿಯೋ ಸಿನೆಮಾದೊಂದಿಗೆ ಮಾತನಾಡುತ್ತಾ ಹೇಳಿದರು.
“ನನ್ನ ಭುಜದ ಮೇಲೆ ನನ್ನ ತಾಯಿ ಮತ್ತು ತಂದೆಯ ಭಾವಚಿತ್ರವಿದೆ, ಅದು 4-5 ವರ್ಷಗಳಷ್ಟು ಹಳೆಯದು. ಇದು ನನ್ನ ಅಚ್ಚುಮೆಚ್ಚಿನದು. ಇದು ಶಾಂತ ಸಿಂಹ. ನಾನು ಶಾಂತ ಸಿಂಹ ಎಂದು ಸ್ಫೋಟಕ ಬ್ಯಾಟರ್ ಹೇಳಿದ್ದಾರೆ.
ವಿಶ್ವದ ನಂಬರ್ ಒನ್ ಟಿ20 ಬ್ಯಾಟರ್ ತನ್ನ ಮೇಲಿನ ತೋಳಿನ ಮೇಲೆ ಬಾಣಗಳ ಹಚ್ಚೆಯನ್ನೂ ಹೊಂದಿದ್ದಾರೆ. ವ್ಯಕ್ತಿಯೊಬ್ಬ ಜೀವನದಲ್ಲಿ ಹಿಂದಕ್ಕೆ ಹೋದಷ್ಟು ಮುಂದಕ್ಕೆ ಹೋಗುತ್ತಾನೆ ಎಂಬುದನ್ನು ಸೂಚಿಸಲು ಈ ಹಚ್ಚೆ ಹಾಕಿಕೊಂಡಿದ್ದೇನೆ ಎಂದು ಅವರು ವಿವರಣೆ ನೀಡಿದರು. ನಾನು ಆಸ್ಟ್ರೇಲಿಯಾ ವಿರುದ್ಧ ಸತತವಾಗಿ ಮೂರು ಬಾರಿ ಶೂನ್ಯಕ್ಕೆ ಔಟಾಗಿ ಬಳಿಕ ಫಾರ್ಮ್ಗೆ ಮರಳಿರುವುದೇ ಇದಕ್ಕೆ ಸೂಕ್ತ ಉದಾಹರಣೆ ಎಂದು ಅವರು ವಿವರಿಸಿದ್ದಾರೆ.
ಇದನ್ನೂ ಓದಿ : ICC T20 Ranking: ನಂ.1 ಸ್ಥಾನ ಉಳಿಸಿಕೊಂಡ ಸೂರ್ಯಕುಮಾರ್ ಯಾದವ್
ವಿಶೇಷವೆಂದರೆ, ಮುಂಬೈ ಮೂಲದ ಕ್ರಿಕೆಟಿಗ ತನ್ನ ಮೇಲಿನ ತೋಳಿನ ಮೇಲೆ ವಿಶಿಷ್ಟ ಹಚ್ಚೆಯೊಂದನ್ನೂ ಹಾಕಿಸಿಕೊಂಡಿದ್ದಾರೆ. ಇದು ನ್ಯೂಜಿಲ್ಯಾಂಡ್ನ ಮಾವೊರಿ ಬುಡಕಟ್ಟು ಸಂಪ್ರದಾಯಕ್ಕೆ ಸಂಬಂಧಿಸಿದ್ದು. ಈ ವಿನ್ಯಾಸದ ಬಗ್ಗೆ ಮಾತನಾಡಿದ ಸೂರ್ಯ, ಇದು ಅದೃಷ್ಟವನ್ನು ತರುತ್ತದೆ ಮತ್ತು ನನ್ನನ್ನು ಸದಾ ಶಾಂತವಾಗಿರಿಸುತ್ತದೆ ಎಂದು ವಿವರಿಸಿದ್ದಾರೆ.
“ನಾನು ನ್ಯೂಜಿಲೆಂಡ್ ಪ್ರವಾಸದಲ್ಲಿದ್ದಾಗ, ಮಾವೊರಿ ಬುಡಕಟ್ಟಿನ ಈ ವಿನ್ಯಾಸದ ಬಗ್ಗೆ ತಿಳಿದುಕೊಂಡೆ, ಈ ವಿನ್ಯಾಸವು ಅದೃಷ್ಟ ಮತ್ತು ಪ್ರೀತಿಯನ್ನು ತರುತ್ತದೆ ಮತ್ತು ನಿಮ್ಮನ್ನು ಶಾಂತವಾಗಿರಿಸುತ್ತದೆ ಎಂದು ಅಲ್ಲಿನ ವ್ಯಕ್ತಿಯೊಬ್ಬರು ಹೇಳಿದರು. ಅದನ್ನು ನಾನು ದೇಹದಲ್ಲಿ ಟ್ಯಾಟೂ ಮಾಡಿಸಿಕೊಂಡೆ ಎಂಬುದಾಗಿ ಅವರು ಹೇಳಿದರು.
-
ಕರ್ನಾಟಕ22 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ22 hours ago
Karnataka Cabinet Expansion: ಪ್ರಮಾಣ ವಚನ ಸಮಾರಂಭ ಬಹಿಷ್ಕಾರ; ಊರಿಗೆ ಹೊರಟ ಒಂದೇ ಜಿಲ್ಲೆಯ 5 ಶಾಸಕರು!
-
ಕಿರುತೆರೆ21 hours ago
Deepak Gowda: ‘ಶ್ರೀರಸ್ತು ಶುಭಮಸ್ತು’ಧಾರಾವಾಹಿಯಿಂದ ಹೊರನಡೆದ ದೀಪಕ್ ಗೌಡ; ಪಾತ್ರಕ್ಕೆ ಬಂದವರು ಕಿರುತೆರೆಗೆ ಹೊಸಬರಲ್ಲ!
-
ಕರ್ನಾಟಕ16 hours ago
Karnataka Cabinet: ತಾತನನ್ನು ಮಿನಿಸ್ಟರ್ ಮಾಡಿ ಪ್ಲೀಸ್: ರಾಹುಲ್ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು
-
ಕ್ರಿಕೆಟ್12 hours ago
World Cup 2023 : ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ವೇಳೆ ವಿಶ್ವಕಪ್ ವೇಳಾಪಟ್ಟಿ ಪ್ರಕಟ
-
ದೇಶ5 hours ago
New Parliament Building: ಇಂದು ಹೊಸ ಸಂಸತ್ ಭವನ ಉದ್ಘಾಟನೆ; ಹೇಗೆ ನಡೆಯಲಿದೆ ಕಾರ್ಯಕ್ರಮ?
-
ಕರ್ನಾಟಕ13 hours ago
Tumkur News: ಹೆಜ್ಜೇನು ದಾಳಿ; ಮೂವರು ಮಕ್ಕಳು ಸೇರಿ 9 ಮಂದಿಗೆ ಗಾಯ
-
EXPLAINER3 hours ago
ವಿಸ್ತಾರ Explainer: ಹೊಸ ಸಂಸತ್ ಭವನದಲ್ಲಿ ಸ್ಥಾಪಿತಗೊಂಡ ತಮಿಳುನಾಡಿನ ಚಿನ್ನದ ಸೆಂಗೋಲ್; ಏನಿದರ ಮಹತ್ವ?