Site icon Vistara News

IPL 2023: ಎಬಿಡಿ, ಗೇಲ್ ಜೆರ್ಸಿ ಸಂಖ್ಯೆಗೆ ನಿವೃತ್ತಿ ಘೋಷಿಸಲಿದೆ ಆರ್‌ಸಿಬಿ

IPL 2023: RCB to announce retirement of ABD, Gayle jersey number

IPL 2023: RCB to announce retirement of ABD, Gayle jersey number

ಬೆಂಗಳೂರು: ಆರ್​ಸಿಬಿ ತಂಡದ ಮಾಜಿ ಆಟಗಾರರಾದ ಎಬಿ ಡಿ ವಿಲಿಯರ್ಸ್(AB de Villiers) ಮತ್ತು ಕ್ರಿಸ್ ಗೇಲ್(Chris Gayle) ಅವರನ್ನು ಮಾರ್ಚ್ 26ರಂದು ಇಂಡಿಯನ್ ಪ್ರೀಮಿಯರ್ ಲೀಗ್‌ನ(IPL 2023) ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಳಿಸಲು ನಿರ್ಧರಿಸಲಾಗಿದೆ.

ಉಭಯ ದಿಗ್ಗಜ ಆಟಗಾರರ ಹೆಸರನ್ನು ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಐಪಿಎಲ್​ನಲ್ಲಿ ಅವರು ಬಳಸಿದ್ದ ಜೆರ್ಸಿಯ ಸಂಖ್ಯೆಗಳಿಗೆ ನಿವೃತ್ತಿ ಘೋಷಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ನಿರ್ಧರಿಸಿದೆ.

“ಆರ್‌ಸಿಬಿಯ ಮಾಜಿ ಆಟಗಾರರಾದ ಎಬಿ ಡಿ ವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರನ್ನು ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಳಿಸಿದ ಬಳಿಕ ಅವರು ಬಳಸುತ್ತಿದ್ದ ಜೆರ್ಸಿ ಸಂಖ್ಯೆ 17 ಮತ್ತು 333ಕ್ಕೆ ನಿವೃತ್ತಿ ಘೋಷಿಸಲಾಗುತ್ತದೆ” ಎಂದು ಆರ್‌ಸಿಬಿ ಟ್ವೀಟ್ ಮಾಡುವ ಮೂಲಕ ಈ ವಿಚಾರವನ್ನು ಪ್ರಕಟಿಸಿದೆ.

ಇದನ್ನೂ ಓದಿ IPL 2023: ನೂತನ ಜೆರ್ಸಿ ಬಿಡುಗಡೆಗೊಳಿಸಿದ ಸನ್​ರೈಸರ್ಸ್​ ಹೈದರಾಬಾದ್​

16ನೇ ಆವೃತ್ತಿಯ ಐಪಿಎಲ್​ ಮಾರ್ಚ್​ 31ರಿಂದ ಆರಂಭಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಗುಜರಾತ್​ ಟೈಟಾನ್ಸ್​ ಮತ್ತು ಮಾಜಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

Exit mobile version