Site icon Vistara News

IPL 2023: ಈ ಬಾರಿ ಆರೆಂಜ್​,ಪರ್ಪಲ್​ ಕ್ಯಾಪ್​ ಯಾರಿಗೆ ಸಿಗಲಿದೆ; ರೇಸ್​ನಲ್ಲಿರುವ ಪ್ರಮುಖ ಆಟಗಾರರು ಯಾರು? ಇಲ್ಲಿದೆ ಮಾಹಿತಿ

shubman gill

ಅಹಮದಾಬಾದ್​: 16ನೇ ಆವೃತ್ತಿಯ ಐಪಿಎಲ್​ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಭಾನುವಾರ ನಡೆಯುವ ಫೈನಲ್​ ಪಂದ್ಯದ ಮೂಲಕ ಈ ಆವೃತ್ತಿಗೆ ಅದ್ಧೂರಿ ತರೆ ಬೀಳಲಿದೆ. ಸದ್ಯ ಟೂರ್ನಿಯಲ್ಲಿ ಪರ್ಪಲ್​ ಕ್ಯಾಪ್​ ಮತ್ತು ಆರೆಂಜ್​ ಕ್ಯಾಪ್​ ರೇಸ್​ನಲ್ಲಿರುವ ಆಟಗಾರರು ಯಾರು ಅವರ ಸಾಧನೆ ಏನು ಎಂಬ ಮಾಹಿತಿ ಇಂತಿದೆ.

ಪರ್ಪಲ್​ ಕ್ಯಾಪ್​ಗೆ ತೀವ್ರ ಮಧ್ಯೆ ಪೈಪೋಟಿ

ಈ ಬಾರಿಯ ಐಪಿಎಲ್​ನಲ್ಲಿ ಪರ್ಪಲ್​ ಕ್ಯಾಪ್​ಗಾಗಿ ಗುಜರಾತ್​ ಟೈಟನ್ಸ್​ ತಂಡದ ಮೊಹಮ್ಮದ್​ ಶಮಿ, ರಶೀದ್​ ಖಾನ್​ ಮತ್ತು ಮೋಹಿತ್​ ಶರ್ಮ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ರಶೀದ್​ ಖಾನ್​ ಮತ್ತು ಶಮಿ 16 ಪಂದ್ಯಗಳನ್ನಾಡಿ ಕ್ರಮವಾಗಿ 28 ಮತ್ತು 27 ವಿಕೆಟ್​ ಕಬಳಿಸಿದ್ದಾರೆ. ಸದ್ಯದ ಮಟ್ಟಿಗೆ ಪರ್ಪಲ್ ಕ್ಯಾಪ್​ ಶಮಿ ಬಳಿ ಇದೆ. ಇದೇ ತಂಡದ ಮೋಹಿತ್​ ಶರ್ಮ ಕೂಡ ಈ ರೇಸ್​ನಲ್ಲಿದ್ದಾರೆ ಅವರು 13 ಪಮದ್ಯಗಳನ್ನು ಆಡಿ 24 ವಿಕೆಟ್​ ಕಬಳಿಸಿದ್ದಾರೆ. ಅದರಲ್ಲೂ ಕಳೆದ ಮುಂಬೈ ವಿರುದ್ಧದ ಕ್ವಾಲಿಫೈಯರ್​ ಪಂದ್ಯದಲ್ಲಿ 5 ವಿಕೆಟ್​ ಕಿತ್ತು ಮಿಂಚಿದ್ದರು. ಫೈನಲ್​ ಪಂದ್ಯದಲ್ಲಿಯೂ ಅವರು ಇದೇ ರೀತಿಯ ಸಾಧನೆ ತೋರಿದರೆ ಶಮಿ ಮತ್ತು ರಶೀದ್​ ಖಾನ್​ ಹಿಂದಿಕ್ಕಿ ಪರ್ಪಲ್ ಕ್ಯಾಪ್ ಪಡೆಯುವ ಅವಕಾಶವಿದೆ. ಮೂವರು ಆಟಗಾರರಿಗೆ ಪ್ರತಿಸ್ಪರ್ಧಿಯಾಗಿದ್ದ ಪಿಯೂಷ್​ ಚಾವ್ಲಾ ಕಳೆದ ಪಂದ್ಯದಲ್ಲಿ ಅವರ ತಂಡ ಮುಂಬೈ ಇಂಡಿಯನ್ಸ್​ ಸೋತು ಟೂರ್ನಿಯಿಂದ ಹೊರಬಿದ್ದ ಕಾರಣ ಅವರೂ ಕೂಡ ಈ ರೇಸ್​ನಿಂದ ಹೊರಬಿದ್ದಿದ್ದಾರೆ.

ಇದನ್ನೂ ಓದಿ IPL 2023: ಟೈಟನ್ಸ್​ ರನ್​ ಮಳೆಗೆ ಮುಳುಗಿದ ಮುಂಬೈ; ಫೈನಲ್​ಗೆ ಹಾರ್ದಿಕ್​ ಪಡೆ

ಗಿಲ್​ ಬಳಿ ಆರೆಂಜ್​ ಕ್ಯಾಪ್​

ಮುಂಬೈ ಇಂಡಿಯನ್ಸ್​ ವಿರುದ್ಧದ ದ್ವಿತೀಯ ಕ್ವಾಲಿಫೈಯರ್​ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ಮಿಂಚಿದ ಶುಭಮನ್​ ಗಿಲ್​ ಅವರು ಈ ಬಾರಿಯ ಐಪಿಎಲ್​ನ​ ಆರೆಂಜ್​ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ 730 ರನ್​ ಗಳಿಸಿ ಅಗ್ರಸ್ಥಾನದಲ್ಲಿದ್ದ ಡು ಪ್ಲೆಸಿಸ್ ಇದೀಗ ದ್ವಿತೀಯ ಸ್ಥಾನಕ್ಕೆ ಕುಸಿದಿದ್ದಾರೆ. ಸದ್ಯ ಗಿಲ್​ ಅವರು 851 ರನ್​ ಬಾರಿಸಿದ್ದಾರೆ. ಆರ್​ಸಿಬಿ ತಂಡ ಸೋತು ಹೊರ ಬಿದ್ದ ಕಾರಣ ಡು ಪ್ಲೆಸಿಸ್​ಗೆ ಇನ್ನು ಗಿಲ್​ ದಾಖಲೆ ಮುರಿಯುವ ಅವಕಾಶವಿಲ್ಲ. ಸದ್ಯ ಈ ರೇಸ್​ನಲ್ಲಿರುವ ಆಟಗಾರನೆಂದರೆ ಚೆನ್ನೈ ತಂಡದ ಡೆವೋನ್​ ಕಾನ್ವೆ. 15 ಪಂದ್ಯ ಆಡಿರುವ ಅವರು 625 ರನ್​ ಬಾರಿಸಿದ್ದಾರೆ. ಫೈನಲ್​ ಪಂದ್ಯ ಬಾಕಿ ಇದ್ದರೂ ಅವರಿಗೆ ಈ ಮೊತ್ತವನ್ನು ಗಳಿಸಲು ಅಸಾಧ್ಯ.

ಫೈನಲ್​ಗೆ ಲಗ್ಗೆ ಇಟ್ಟ ಗುಜರಾತ್​

ಶುಕ್ರವಾರ ರಾತ್ರಿ ನಡೆದ ದ್ವಿತೀಯ ಕ್ವಾಲಿಫೈಯರ್​ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಗುಜರಾತ್​ ಟೈಟನ್ಸ್​ ತಂಡ ಮುಂಬೈ ಇಂಡಿಯನ್ಸ್​ ವಿರುದ್ಧ 62 ರನ್​ಗಳ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಹಾರ್ದಿಕ್​ ಪಡೆ ಫೈನಲ್​ಗೆ ಲಗ್ಗೆಯಿಟ್ಟಿದೆ.​ ಮೇ 28 ರಂದು ನಡೆಯುವ ​ಪ್ರಶಸ್ತಿ ಸಮರದಲ್ಲಿ ಚೆನ್ನೈ ತಂಡದ ಸವಾಲು ಎದುರಿಸಲಿದೆ. ಸೋಲು ಕಂಡ ಮುಂಬೈ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಹಾಲಿ ಚಾಂಪಿಯನ್​ ಗುಜರಾತ್​ ಟೈಟನ್ಸ್​ ಶುಭಮನ್​ ಗಿಲ್​ ಅವರ ಅಮೋಘ ಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 233 ರನ್​ ಗಳಿಸಿತು. ಜವಾಬಿತ್ತ ಮುಂಬೈ ಇಂಡಿಯನ್ಸ್​ 18.2 ಓವರ್​ಗಳಲ್ಲಿ 171 ರನ್​ ಗಳಿಸಿ ಸರ್ವಪತನ ಕಂಡಿತು.

Exit mobile version