ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕಾಣಿಸಿಕೊಂಡ ಒಂದು ಪೋಸ್ಟರ್ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಹೌದು ಪಂದ್ಯದ ವೇಳೆ ಪುಟ್ಟ ಬಾಲಕನೊಬ್ಬ ಕೈಯಲ್ಲಿ ಪ್ಲಕಾರ್ಡ್ ಹಿಡಿದು ನಿಂತಿದ್ದ. ಆ ಪ್ಲಕಾರ್ಡ್ನಲ್ಲಿ ‘ವಿರಾಟ್ ಅಂಕಲ್, ನಾನು ವಮಿಕಾ ಅವರನ್ನು ಡೇಟ್‌ಗೆ ಕರೆದುಕೊಂಡು ಹೋಗಬಹುದೇ?’ ಎಂದು ಬರೆಯಲಾಗಿತ್ತು. ಇದೀಗ ಈ ಪುಟ್ಟ ಬಾಲಕ ಇಂತಹ ಬೇಡಿಕೆಯನ್ನಿಟ್ಟಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಜತೆಗೆ ವಿರೋಧವು ವ್ಯಕ್ತವಾಗಿದೆ.
ಸೋಮವಾರ(ಎಪ್ರಿಲ್ 17) ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಮಹೇಂದ್ರ ಸಿಂಗ್ ಧೋನಿ ಬಳಗ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 226 ರನ್ ಪೇರಿಸಿತ್ತು. ಪ್ರತಿಯಾಗಿ ಬ್ಯಾಟ್ ಮಾಡಿದ ಆರ್ಸಿಬಿ ತಂಡ ತನ್ನ ಪಾಲಿನ ಓವರ್ಗಳು ಮುಕ್ತಾಯಗೊಂಡಾಗ 8 ವಿಕೆಟ್ ನಷ್ಟಕ್ಕೆ 218 ರನ್ ಬಾರಿಸಿ ಸೋಲೊಪ್ಪಿಕೊಂಡಿತ್ತು.
ಇದೇ ಪಂದ್ಯದ ವೇಳೆ ಪುಟ್ಟ ಬಾಲಕನೊಬ್ಬ ತಾನು ವಮಿಕಾ ಜತೆ ಡೇಟ್ ಮಾಡಬೇಕು, ವಿರಾಟ್ ಅಂಕಲ್ ಅವಳನ್ನು ನನ್ನ ಜತೆ ಡೇಟ್ಸ್ಗೆ ಕಳುಹಿಸುವಿರಾ? ಎಂದು ಬರೆದಿರುವ ಪೋಸ್ಟರ್ ಒಂದು ಕಂಡುಬಂದಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಈ ಬಾಲಕ ಪೋಷಕರ ಬಗ್ಗೆ ಆಕ್ರೋಶದ ಮಾತುಗಳು ಕೇಳಿಬಂದಿದೆ.
ಇದನ್ನೂ ಓದಿ IPL 2023: ಟಾಸ್ ಗೆದ್ದ ರಾಜಸ್ಥಾನ್; ಬ್ಯಾಟಿಂಗ್ ಆಹ್ವಾನ ಪಡೆದ ಲಕ್ನೋ
“ಮಕ್ಕಳನ್ನು ಪೋಷಕರು ಯಾವ ರೀತಿ ಬೆಳೆಸಬೇಕೆಂದು ಮೊದಲು ತಿಳಿದುಕೊಳ್ಳಿ. ಪ್ರಚಾರ ಗಿಟ್ಟಿಸಿಕೊಳ್ಳಬೇಕೆನ್ನುವ ಉದ್ದೇಶದಿಂದ ಡೇಟ್ ಎಂದರೆ ಏನು ಅನ್ನೋ ಕಲ್ಪನೆಯೂ ಇರದ ಈ ಪುಟ್ಟ ಹುಡುಗ ಕೈಯಲ್ಲಿ ಇಂತಹ ಪೋಸ್ಟರ್ಗಳನ್ನು ತೋರ್ಪಡಿಸುವ ನಿಮ್ಮ ಈ ಕೀಳು ಮನಸ್ಥಿತಿಯಿಂದ ಬಹಳ ನೋವಾಗಿದೆ’ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಒಂದೊಂಮ್ಮೆ ನಿಮ್ಮ ಮಗನಿಗೆ ಯಾರೋ ಇದೇ ರೀತಿ ಡೇಡಿಂಗ್ ಮಾಡಲು ಕಳುಹಿಸಿ ಕೊಡಿ ಎಂದು ಪೋಸ್ಟರ್ ಹಿಡಿಯುತ್ತಿದ್ದರೆ, ತಂದೆ ತಾಯಿಯಾಗಿ ನಿಮಗೆ ಎಷ್ಟು ಬೇಸರವಾಗುತ್ತಿತ್ತು” ಎಂದು ಮತ್ತೊಬ್ಬ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಸದ್ಯ ಈ ವಿಚಾರದ ಬಗ್ಗೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.