Site icon Vistara News

IPL 2024 Points Table: 3ನೇ ಸ್ಥಾನಕ್ಕೇರಿದ ಲಕ್ನೋ; ಕುಸಿತ ಕಂಡ ಹಾಲಿ ಚಾಂಪಿಯನ್​ ಚೆನ್ನೈ

IPL 2024 Points Table

ಲಕ್ನೋ: ಮಂಗಳವಾರ ರಾತ್ರಿ ನಡೆದ ಐಪಿಎಲ್​ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ ತಂಡ ಮುಂಬೈ ಇಂಡಿಯನ್ಸ್(Mumbai Indians)​ ವಿರುದ್ಧ 4 ವಿಕೆಟ್​ಗಳ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ(IPL 2024 Points Table) ಮೂರನೇ ಸ್ಥಾನಕ್ಕೇರಿದೆ. ಲಕ್ನೋ ಗೆಲುವಿನಿಂದ ಮೂರನೇ ಸ್ಥಾನದಲ್ಲಿದ್ದ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ಒಂದು ಸ್ಥಾನಗಳ ಕುಸಿತ ಕಂಡು ನಾಲ್ಕನೇ ಸ್ಥಾನ ಪಡೆದಿದೆ. ಇಂದು ನಡೆಯುವ ಪಂದ್ಯದಲ್ಲಿ ಚೆನ್ನೈ ಮತ್ತು ಪಂಜಾಬ್​ ಕಿಂಗ್ಸ್​ ಮುಖಾಮುಖಿಯಾಗಲಿವೆ. ಚೆನ್ನೈ ಗೆದ್ದರೆ ಮತ್ತೆ 2ನೇ ಮೂರನೇ ಸ್ಥಾನ ಪಡೆಯಬಹುದು.

8ನೇ ಸ್ಥಾನದಲ್ಲಿರುವ ಪಂಜಾಬ್​ ಇದುವರೆಗೆ 9 ಪಂದ್ಯ ಆಡಿ ಕೇವಲ ಮೂರು ಗೆಲುವಿನೊಂದಿಗೆ 6 ಅಂಕ ಗಳಿಸಿದೆ. ಪ್ಲೇ ಆಫ್​ ಆಸೆ ಜೀವಂತವಿರಿಸಬೇಕಿದ್ದರೆ ಇಂದು ನಡೆಯುವ ಚೆನ್ನೈ ವಿರುದ್ಧದ ಪಂದ್ಯ ಸೇರಿ ಉಳಿದ ಎಲ್ಲ ಪಂದ್ಯಗಳಲ್ಲಿಯೂ ಗೆಲುವು ಕಾಣಬೇಕಿದೆ. ಜತೆಗೆ ರನ್​ರೇಟ್​ ಕೂಡ ಉತ್ತಮ ಪಡಿಸಿಕೊಳ್ಳಬೇಕಿದೆ. ಒಂದೊಮ್ಮೆ ಇಂದು ಸೋತರೆ ಪ್ಲೇ ಆಫ್​ ಅವಕಾಶ ಕ್ಷೀಣಗೊಳ್ಳಲಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​98116 (+0.694)
ಕೆಕೆಆರ್​​96312 (+1.096)
ಲಕ್ನೋ​​106412 (+0.094)
ಚೆನ್ನೈ​95410 (+0.810)
ಹೈದರಾಬಾದ್​95410 (+0.075)
ಡೆಲ್ಲಿ115610 (-0.442)
ಗುಜರಾತ್​10468 (-1.113)
ಪಂಜಾಬ್9368 (-0.187)
ಮುಂಬೈ10376 (-0.272)
ಆರ್​ಸಿಬಿ10376 (-0.415)

ಶ್ರೀ ಅಟಲ್​ ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಮುಂಬೈ ಬ್ಯಾಟರ್​ಗಳು ಲಕ್ನೋ ಬೌಲರ್​ಗಳ ಬಿಗು ದಾಳಿಗೆ ಕುಸಿದು 7 ವಿಕೆಟ್ ನಷ್ಟಕ್ಕೆ 144 ರನ್ ಬಾರಿಸಿತು. ಜವಾಬಿತ್ತ ಲಕ್ನೊ ತಂಡ 19.2 ಓವರ್​ಗಳು 6 ವಿಕೆಟ್​ಗೆ 145 ರನ್ ಬಾರಿಸಿ ಗೆಲುವು ಸಾಧಿಸಿತು.

ಇದನ್ನೂ ಓದಿ IPL 2024 : ‘ಆಲ್​ರೌಂಡರ್​’ ಪಾಂಡ್ಯ ನೇತೃತ್ವದ ಮುಂಬೈ ತಂಡವನ್ನು ಸೋಲಿಸಿದ ರಾಹುಲ್ ನಾಯಕತ್ವದ ಲಕ್ನೊ

ಗುರಿ ಬೆನ್ನಟ್ಟಲು ಆರಂಭಿಸಿದ ಲಕ್ನೊ ತಂಡವೂ ಆರಂಭಿಕ ಆಘಾತ ಎದುರಿಸಿತು. ಪದಾರ್ಪಣೆ ಬ್ಯಾಟರ್ ಅರ್ಶಿನ್ ಕುಲಕರ್ಣಿ ಶೂನ್ಯಕ್ಕೆ ಔಟಾದರು. ಆದರೆ ರಾಹುಲ್​ 28 ರನ್ ಬಾರಿಸಿ ತಂಡಕ್ಕೆ ಚೈತನ್ಯ ತಂದರು. ಬಳಿಕ ಆಡಲು ಇಳಿದ ಸ್ಟೊಯ್ನಿಸ್​ ಅಗತ್ಯ ಅರ್ಧ ಶತಕ ಗಳಿಸಿದರು. ದೀಪಕ್​ ಹೂಡ 18 ರನ್ ಬಾರಿಸಿದರೆ ನಿಕೋಲಸ್ ಪೂರನ್​ 14 ರನ್ ಕೊಡುಗೆ ಕೊಟ್ಟರು.

Exit mobile version