ಮುಂಬಯಿ: ಕ್ರಿಕೆಟ್ ಅಭಿಮಾನಿಗಳು ಬಹಳ ನಿರೀಕ್ಷೆಯಿಂದ ಕಾಯುತ್ತಿರುವ ಐಪಿಎಲ್ನ ದ್ವಿತೀಯಾರ್ಧದ(ipl 2nd half schedule 2024) ಪಂದ್ಯದ ವೇಳಾಪಟ್ಟಿ ಇಂದೇ ಪ್ರಕಟಗೊಳ್ಳಲಿದೆ ಎಂದು ವರದಿಯಾಗಿದೆ. ಲೋಕಸಭಾ ಸಾರ್ವತ್ರಿಕ ಚುನಾವಣೆಯ(2024 General Elections) ಕಾರಣದಿಂದ ಬಿಸಿಸಿಐ(BCCI ) ಮೊದಲಾರ್ಧದ ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಘೋಷಿಸಿತ್ತು. ಇದೀಗ ಸ್ಟಾರ್ ಸ್ಪೋರ್ಟ್ಸ್(Star Sports) ವರದಿ ಪ್ರಕಾರ ಇಂದು ಸಂಜೆ 5.30ರ ಬಳಿಕ ದ್ವಿತೀಯ ಹಂತದ ವೇಳಾಪಟ್ಟಿ ಪ್ರಕಟಗೊಳ್ಳಲಿದೆ ಎನ್ನಲಾಗಿದೆ.
IPL 2024 remaining schedule will be revealed today on Star Sports. pic.twitter.com/MG0kiWBNBB
— Mufaddal Vohra (@mufaddal_vohra) March 25, 2024
ಇತ್ತೀಚೆಗೆ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್(Arun Dhumal) ಕ್ರಿಕೆಟ್ ನೆಕ್ಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ,ಲೋಕಸಭಾ ಸಾರ್ವತ್ರಿಕ ಚುನಾವಣೆ ದೇಶಾದ್ಯಂತ ಏಪ್ರಿಲ್ 19ರಿಂದ ಜೂನ್ 1ರವರೆಗೆ 7 ಹಂತಗಳಲ್ಲಿ ನಡೆಯಲಿದೆ. ನಿಖರವಾದ ದಿನಾಂಕಗಳನ್ನು ತಿಳಿದ ಕಾರಣದಿಂದ ಉಳಿದ ಪಂದ್ಯಗಳ ವೇಳಾಪಟ್ಟಿ ಕುರಿತು ಕೆಲಸ ನಡೆಯುತ್ತಿದೆ. ಮತದಾನದ ದಿನಾಂಕದ ಘರ್ಷಣೆಯನ್ನು ತಪ್ಪಿಸಲು ನಾವು ಮೊದಲ ಡ್ರಾಫ್ಟ್‌ನಿಂದ ಕೆಲವು ಫಿಕ್ಚರ್‌ಗಳನ್ನು ಮರುಸೃಷ್ಟಿಸುತ್ತಿದ್ದೇವೆ ಎಂದು ತಿಳಿಸಿದ್ದರು. ಇದೀಗ ಸ್ಟಾರ್ ಸ್ಪೋರ್ಟ್ಸ್ ವರದಿ ಪ್ರಕಾರ ಇಂದೇ(ಸೋಮವಾರ) ಉಳಿದಿರುವ ಪಂದ್ಯಗಳ ವೇಳಾಪಟ್ಟಿ ಕೂಡ ಪ್ರಕಟಗೊಳ್ಳಲಿದೆ ಎಂದು ತಿಳಿಸಿದೆ. ಸದ್ಯ ವೇಳಾಪಟ್ಟಿ ಪ್ರಕಟಗೊಳ್ಳುತ್ತದೆ ಎಂಬ ವಿಚಾರ ಮಾತ್ರ ತಿಳಿಸಿದ್ದು ಟೂರ್ನಿ ಎಲ್ಲಿ ನಡೆಯಲಿದೆ ಎನ್ನುವ ಕುರಿತು ಯಾವುದೇ ಮಾಹಿತಿಯನ್ನು ಸ್ಟಾರ್ ಸ್ಪೋರ್ಟ್ಸ್ ನೀಡಿಲ್ಲ.
ಇದನ್ನೂ ಓದಿ IPL 2024: ಪಾಂಡ್ಯ, ರೋಹಿತ್ ಬೆಂಬಲಿಗರ ಜಟಾಪಟಿ; ಕೈ ಮಿಲಾಯಿಸಿ ಘರ್ಷಣೆ
ಚುನಾವಣ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಪಂದ್ಯಾವಳಿ ನಡೆಸುವು ಮತ್ತು ಭದ್ರತೆ ನೀಡುವುದು ಕಷ್ಟವಾಗಬಹುದು ಎಂಬ ಕಾರಣದಿಂದ, ದ್ವಿತೀಯಾರ್ಧದ ಪಂದ್ಯಗಳನ್ನು ಬಿಸಿಸಿಐ ದುಬೈಗೆ ಸ್ಥಳಾಂತರಿಸಲು ಮುಂದಾಗಿದೆ ಎಂದು ಕಳೆದ ವಾರ ಬಿಸಿಸಿಐ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ʼಟೈಮ್ಸ್ ಆಫ್ ಇಂಡಿಯಾʼ ವರದಿ ಮಾಡಿತ್ತು. ಆದರೆ, ಅರುಣ್ ಧುಮಾಲ್ ಪಂದ್ಯ ವಿದೇಶದಲ್ಲಿ ನಡೆಸುವ ಮಾತೇ ಇಲ್ಲ, ಇಡೀ ಲೀಗ್ ಅನ್ನು ಭಾರತದಲ್ಲಿ ಮಾತ್ರ ಆಡಲಾಗುವುದು. ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಎಲ್ಲಾ ಅಗತ್ಯ ಪ್ರೋಟೋಕಾಲ್‌ಗಳು ಮತ್ತು ಸಲಹೆಗಳನ್ನು ಅನುಸರಿಸಿ ಬಿಸಿಸಿಐ ಭದ್ರತಾ ಏಜೆನ್ಸಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ ಎಂದು ಬಲವಾದ ಹೇಳಿಕೆ ನೀಡಿದ್ದರು.
IPL SCHEDULE 🚨
— MSDian™ (@ItzThanesh) March 25, 2024
Rest of the IPL 2024 Schedule will be announced today at 5.30 pm.#WhistlePodu #IPL #CSK @MSDhoni
ಚೆನ್ನೈಯಲ್ಲಿ ಫೈನಲ್?
ಈ ಬಾರಿಯ ಐಪಿಎಲ್(IPL 2024) ಫೈನಲ್(IPL 2024 final) ಪಂದ್ಯ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿರುವ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವುದಿಲ್ಲ ಎಂದು ವರದಿಯಾಗಿದೆ. ಬಿಸಿಸಿಐ(BCCI) ಮೂಲಗಳ ಪ್ರಕಾರ ಇಲ್ಲಿ ಒಂದು ಕ್ವಾಲಿಫೈಯರ್ ಮತ್ತು ಒಂದು ಎಲಿಮಿನೇಟರ್ ಪಂದ್ಯ ಮಾತ್ರ ನಡೆಯಲಿದೆ ಎನ್ನಲಾಗಿದೆ. ಫೈನಲ್ ಚೆನ್ನೈಯ ಚೆಪಾಕ್ ಸ್ಟೇಡಿಯಂನಲ್ಲಿ(Chepauk will also host the IPL 2024 final) ನಡೆಯಲಿದೆ ಎಂದು ವರದಿಯಾಗಿದೆ. ಮೇ 26ರಂದು ಐಪಿಎಲ್ ಫೈನಲ್ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.