IPL 2024: ಐಪಿಎಲ್​ನ ದ್ವಿತೀಯಾರ್ಧದ ವೇಳಾಪಟ್ಟಿ ಇಂದೇ ಪ್ರಕಟ; ಎಷ್ಟು ಗಂಟೆಗೆ? - Vistara News

ಕ್ರೀಡೆ

IPL 2024: ಐಪಿಎಲ್​ನ ದ್ವಿತೀಯಾರ್ಧದ ವೇಳಾಪಟ್ಟಿ ಇಂದೇ ಪ್ರಕಟ; ಎಷ್ಟು ಗಂಟೆಗೆ?

ಐಪಿಎಲ್​ನ ದ್ವಿತೀಯಾರ್ಧದ(ipl 2nd half schedule 2024) ಪಂದ್ಯದ ವೇಳಾಪಟ್ಟಿ ಇಂದು ಪ್ರಕಟಗೊಳ್ಳಲಿದೆ ಎಂದು ಸ್ಟಾರ್​ ಸ್ಪೋರ್ಟ್ಸ್(Star Sports)​ ವರದಿ ಮಾಡಿದೆ.

VISTARANEWS.COM


on

ipl 2nd half schedule 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಕ್ರಿಕೆಟ್​ ಅಭಿಮಾನಿಗಳು ಬಹಳ ನಿರೀಕ್ಷೆಯಿಂದ ಕಾಯುತ್ತಿರುವ ಐಪಿಎಲ್​ನ ದ್ವಿತೀಯಾರ್ಧದ(ipl 2nd half schedule 2024) ಪಂದ್ಯದ ವೇಳಾಪಟ್ಟಿ ಇಂದೇ ಪ್ರಕಟಗೊಳ್ಳಲಿದೆ ಎಂದು ವರದಿಯಾಗಿದೆ. ಲೋಕಸಭಾ ಸಾರ್ವತ್ರಿಕ ಚುನಾವಣೆಯ(2024 General Elections) ಕಾರಣದಿಂದ ಬಿಸಿಸಿಐ(BCCI ) ಮೊದಲಾರ್ಧದ ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಘೋಷಿಸಿತ್ತು. ಇದೀಗ ಸ್ಟಾರ್​ ಸ್ಪೋರ್ಟ್ಸ್(Star Sports)​ ವರದಿ ಪ್ರಕಾರ ಇಂದು ಸಂಜೆ 5.30ರ ಬಳಿಕ ದ್ವಿತೀಯ ಹಂತದ ವೇಳಾಪಟ್ಟಿ ಪ್ರಕಟಗೊಳ್ಳಲಿದೆ ಎನ್ನಲಾಗಿದೆ.

ಇತ್ತೀಚೆಗೆ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್(Arun Dhumal) ಕ್ರಿಕೆಟ್ ನೆಕ್ಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ,ಲೋಕಸಭಾ ಸಾರ್ವತ್ರಿಕ ಚುನಾವಣೆ ದೇಶಾದ್ಯಂತ ಏಪ್ರಿಲ್ 19ರಿಂದ ಜೂನ್ 1ರವರೆಗೆ 7 ಹಂತಗಳಲ್ಲಿ ನಡೆಯಲಿದೆ. ನಿಖರವಾದ ದಿನಾಂಕಗಳನ್ನು ತಿಳಿದ ಕಾರಣದಿಂದ ಉಳಿದ ಪಂದ್ಯಗಳ ವೇಳಾಪಟ್ಟಿ ಕುರಿತು ಕೆಲಸ ನಡೆಯುತ್ತಿದೆ. ಮತದಾನದ ದಿನಾಂಕದ ಘರ್ಷಣೆಯನ್ನು ತಪ್ಪಿಸಲು ನಾವು ಮೊದಲ ಡ್ರಾಫ್ಟ್‌ನಿಂದ ಕೆಲವು ಫಿಕ್ಚರ್‌ಗಳನ್ನು ಮರುಸೃಷ್ಟಿಸುತ್ತಿದ್ದೇವೆ ಎಂದು ತಿಳಿಸಿದ್ದರು. ಇದೀಗ ಸ್ಟಾರ್​ ಸ್ಪೋರ್ಟ್ಸ್​ ವರದಿ ಪ್ರಕಾರ ಇಂದೇ(ಸೋಮವಾರ) ಉಳಿದಿರುವ ಪಂದ್ಯಗಳ ವೇಳಾಪಟ್ಟಿ ಕೂಡ ಪ್ರಕಟಗೊಳ್ಳಲಿದೆ ಎಂದು ತಿಳಿಸಿದೆ. ಸದ್ಯ ವೇಳಾಪಟ್ಟಿ ಪ್ರಕಟಗೊಳ್ಳುತ್ತದೆ ಎಂಬ ವಿಚಾರ ಮಾತ್ರ ತಿಳಿಸಿದ್ದು ಟೂರ್ನಿ ಎಲ್ಲಿ ನಡೆಯಲಿದೆ ಎನ್ನುವ ಕುರಿತು ಯಾವುದೇ ಮಾಹಿತಿಯನ್ನು ಸ್ಟಾರ್​ ಸ್ಪೋರ್ಟ್ಸ್​ ನೀಡಿಲ್ಲ.

ಇದನ್ನೂ ಓದಿ IPL 2024: ಪಾಂಡ್ಯ, ರೋಹಿತ್​ ಬೆಂಬಲಿಗರ ಜಟಾಪಟಿ; ಕೈ ಮಿಲಾಯಿಸಿ ಘರ್ಷಣೆ

ಚುನಾವಣ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಪಂದ್ಯಾವಳಿ ನಡೆಸುವು ಮತ್ತು ಭದ್ರತೆ ನೀಡುವುದು ಕಷ್ಟವಾಗಬಹುದು ಎಂಬ ಕಾರಣದಿಂದ, ದ್ವಿತೀಯಾರ್ಧದ ಪಂದ್ಯಗಳನ್ನು ಬಿಸಿಸಿಐ ದುಬೈಗೆ ಸ್ಥಳಾಂತರಿಸಲು ಮುಂದಾಗಿದೆ ಎಂದು ಕಳೆದ ವಾರ ಬಿಸಿಸಿಐ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ʼಟೈಮ್ಸ್‌ ಆಫ್‌ ಇಂಡಿಯಾʼ ವರದಿ ಮಾಡಿತ್ತು. ಆದರೆ, ಅರುಣ್​ ಧುಮಾಲ್ ಪಂದ್ಯ ವಿದೇಶದಲ್ಲಿ ನಡೆಸುವ ಮಾತೇ ಇಲ್ಲ, ಇಡೀ ಲೀಗ್ ಅನ್ನು ಭಾರತದಲ್ಲಿ ಮಾತ್ರ ಆಡಲಾಗುವುದು. ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಎಲ್ಲಾ ಅಗತ್ಯ ಪ್ರೋಟೋಕಾಲ್‌ಗಳು ಮತ್ತು ಸಲಹೆಗಳನ್ನು ಅನುಸರಿಸಿ ಬಿಸಿಸಿಐ ಭದ್ರತಾ ಏಜೆನ್ಸಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ ಎಂದು ಬಲವಾದ ಹೇಳಿಕೆ ನೀಡಿದ್ದರು.

ಚೆನ್ನೈಯಲ್ಲಿ ಫೈನಲ್​?


ಈ ಬಾರಿಯ ಐಪಿಎಲ್(IPL 2024)​ ಫೈನಲ್(IPL 2024 final)​ ಪಂದ್ಯ ವಿಶ್ವದ ಅತಿ ದೊಡ್ಡ ಕ್ರಿಕೆಟ್​ ಸ್ಟೇಡಿಯಂ ಆಗಿರುವ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವುದಿಲ್ಲ ಎಂದು ವರದಿಯಾಗಿದೆ. ಬಿಸಿಸಿಐ(BCCI) ಮೂಲಗಳ ಪ್ರಕಾರ ಇಲ್ಲಿ ಒಂದು ಕ್ವಾಲಿಫೈಯರ್ ಮತ್ತು ಒಂದು ಎಲಿಮಿನೇಟರ್ ಪಂದ್ಯ ಮಾತ್ರ ನಡೆಯಲಿದೆ ಎನ್ನಲಾಗಿದೆ. ಫೈನಲ್​ ಚೆನ್ನೈಯ ಚೆಪಾಕ್​ ಸ್ಟೇಡಿಯಂನಲ್ಲಿ(Chepauk will also host the IPL 2024 final) ನಡೆಯಲಿದೆ ಎಂದು ವರದಿಯಾಗಿದೆ. ಮೇ 26ರಂದು ಐಪಿಎಲ್ ಫೈನಲ್ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024 Points Table: ಚೆನ್ನೈ ಗೆಲುವಿನಿಂದ ಅಂಕಪಟ್ಟಿಯಲ್ಲಿ 3 ತಂಡಗಳಿಗೆ ಭಾರೀ ಹೊಡೆತ

IPL 2024 Points Table: ಆರ್​ಸಿಬಿ(Royal Challengers Bengaluru) ಗೆದ್ದರೂ ಈ ತಂಡಕ್ಕೆ ಯಾವುದೇ ಲಾಭವಾಗಲಿಲ್ಲ. ಅಂಕಪಟ್ಟಿಯಲ್ಲಿ(IPL 2024 Points Table) ಕೊನೆಯ ಸ್ಥಾನದಲ್ಲೇ ಮುಂದುವರಿಯಿತು. ಆದರೆ, ಚೆನ್ನೈ ತಂಡದ ಗೆಲುವಿನಿಂದ ಲಕ್ನೋ, ಹೈದರಾಬಾದ್​ ಮತ್ತು ಡೆಲ್ಲಿ ತಂಡಗಳು ತಲಾ ಒಂದು ಸ್ಥಾನ ಕುಸಿತ ಕಂಡಿತು.

VISTARANEWS.COM


on

IPL 2024 Points Table
Koo

ಬೆಂಗಳೂರು: ಭಾನುವಾರ ನಡೆದ ಐಪಿಎಲ್​ನ ಡಬಲ್​ ಹೆಡರ್​ ಪಂದ್ಯದಲ್ಲಿ ಆರ್​ಸಿಬಿ ತಂಡ ಗುಜರಾತ್(Gujarat Titans)​ ವಿರುದ್ಧ ಗೆಲುವು ಸಾಧಿಸಿದರೆ, ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ಬಲಿಷ್ಠ ಸನ್​ರೈಸರ್ಸ್(Sunrisers Hyderabad)​ ವಿರುದ್ಧ ಅಮೋಘ ಗೆಲುವು ಸಾಧಿಸಿತು. ಆರ್​ಸಿಬಿ(Royal Challengers Bengaluru) ಗೆದ್ದರೂ ಈ ತಂಡಕ್ಕೆ ಯಾವುದೇ ಲಾಭವಾಗಲಿಲ್ಲ. ಅಂಕಪಟ್ಟಿಯಲ್ಲಿ(IPL 2024 Points Table) ಕೊನೆಯ ಸ್ಥಾನದಲ್ಲೇ ಮುಂದುವರಿಯಿತು. ಆದರೆ, ಚೆನ್ನೈ ತಂಡದ ಗೆಲುವಿನಿಂದ ಲಕ್ನೋ, ಹೈದರಾಬಾದ್​ ಮತ್ತು ಡೆಲ್ಲಿ ತಂಡಗಳು ತಲಾ ಒಂದು ಸ್ಥಾನ ಕುಸಿತ ಕಂಡಿತು.

ಚೆನ್ನೈ ತಂಡ ಈ ಪಂದ್ಯಕ್ಕೂ ಮುನ್ನ 6ನೇ ಸ್ಥಾನಿಯಾಗಿತ್ತು. ಗೆಲುವಿನೊಂದಿಗೆ ಮೂರು ಸ್ಥಾನಗಳ ಜಿಗಿತ ಕಂಡು ಮೂರನೇ ಸ್ಥಾನಕ್ಕೇರಿದೆ. ಮೂರನೇ ಸ್ಥಾನದಲ್ಲಿದ್ದ ಹೈದರಾಬಾದ್​ 4ನೇ ಸ್ಥಾನಕ್ಕೆ, 4ನೇ ಸ್ಥಾನದಲ್ಲಿದ್ದ ಲಕ್ನೋ 5ಕ್ಕೆ, 5ನೇ ಸ್ಥಾನದಲ್ಲಿದ್ದ ಡೆಲ್ಲಿ 6ನೇ ಸ್ಥಾನಕ್ಕೆ ಕುಸಿಯಿತು. ಆರ್​ಸಿಬಿ ವಿರುದ್ಧ ಸೋತರೂ ಕೂಡ ಗುಜರಾತ್​ 7ನೇ ಸ್ಥಾನದಲ್ಲೇ ಮುಂದುವರಿದಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​98116 (+0.694)
ಕೆಕೆಆರ್​​85310 (+0.972)
ಚೆನ್ನೈ​​95410 (+0.810)
ಹೈದರಾಬಾದ್​95410 (+0.075)
ಲಕ್ನೋ95410 (+0.059)
ಡೆಲ್ಲಿ105510 (-0.276)
ಗುಜರಾತ್​10468 (-1.113)
ಪಂಜಾಬ್9368 (-0.187)
ಮುಂಬೈ9366 (-0.261)
ಆರ್​ಸಿಬಿ10376 (-0.415)

ಚೆನ್ನೈಗೆ ಅಮೋಘ ಗೆಲುವು


ಚೆನ್ನೈಯ ಚೆಪಾಕ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಐಪಿಎಲ್​(IPL 2024) ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಚೆನ್ನೈ(Chennai Super Kings) ತಂಡ ನಾಯಕ ಋತುರಾಜ್​ ಗಾಯಕ್ವಾಡ್​, ಡೇರಿಯಲ್​ ಮಿಚೆಲ್​ ಮತ್ತು ಶಿವಂ ದುಬೆ ಅವರ ಆಕ್ರಮಣಕಾರಿ ಬ್ಯಾಟಿಂಗ್​ ಸಾಹಸದಿಂದ ನಿಗದಿತ 20 ಓವರ್​ಗಳಲ್ಲಿ ಕೇವಲ 3 ವಿಕೆಟ್​ ನಷ್ಟಕ್ಕೆ 212 ರನ್​ ಬಾರಿಸಿತು. ಈ ಹಿಂದಿನ ಪಂದ್ಯಗಳಲ್ಲಿ ಸಲೀಸಾಗಿ ಮೂರು ಬಾರಿ 250ರ ಗಡಿ ದಾಟಿದ್ದ ಸನ್​ರೈಸರ್ಸ್​ ತಂಡಕ್ಕೆ ಈ ಮೊತ್ತ ಎಲ್ಲಿಂದಲೂ ಸಾಲದು ಎಂದು ನಿರೀಕ್ಷೆ ಮಾಡಿದ್ದವರಿಗೆ ಚೆನ್ನೈ ತಂಡದ ಮಧ್ಯಮ ವೇಗಿ ತುಷಾರ್​ ದೇಶ್​ಪಾಂಡೆ ಘಾತಕ ಸ್ಫೆಲ್ ಮೂಲಕ ಕಟ್ಟಿಹಾಕಿದರು. ಅಂತಿಮವಾಗಿ ಹೈದರಾಬಾದ್​ 18.5 ಓವರ್​ಗಳಲ್ಲಿ 134 ರನ್​ಗೆ ಸರ್ವಪತನ ಕಂಡು ಹೀನಾಯವಾಗಿ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ IPL 2024: ಗೆಲುವಿನಲ್ಲೂ ನೂತನ ದಾಖಲೆ ಬರೆದ ಆರ್​ಸಿಬಿ

ಆರ್​ಸಿಬಿಗೆ 9 ವಿಕೆಟ್​ ಗೆಲುವು

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಗುಜರಾತ್​ ಟೈಟಾನ್ಸ್​ ಸಾಯಿ ಸುದರ್ಶನ್​(84*) ಮತ್ತು ಶಾರೂಖ್​ ಖಾನ್​(58) ಅರ್ಧಶತಕದ ಉಪಯುಕ್ತ ಬ್ಯಾಟಿಂಗ್​ ನೆರವಿನಿಂದ 20 ಓವರ್​ಗೆ 3 ವಿಕೆಟ್​ ಕಳೆದುಕೊಂಡು ಭರ್ತಿ 200 ರನ್​ ಪೇರಿಸಿತು. ಜವಾಬಿತ್ತ ಆರ್​ಸಿಬಿ ಫುಲ್​ ಬ್ಯಾಟಿಂಗ್​ ಜೋಶ್​ನೊಂದಿಗೆ ಕೇವಲ 16 ಓವರ್​ಗಳಲ್ಲಿ 1 ವಿಕೆಟ್​ನಷ್ಟಕ್ಕೆ 206 ರನ್​ ಬಾರಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.

Continue Reading

ಪ್ರಮುಖ ಸುದ್ದಿ

Virat kohli : ಕಾಮೆಂಟ್ರಿ ಬಾಕ್ಸ್​​ನಲ್ಲಿ ಕುಳಿತು ವಿಮರ್ಶೆ ಮಾಡುವುದು ಸುಲಭ; ಕೊಹ್ಲಿ ತಿರುಗೇಟು ಕೊಟ್ಟಿದ್ದು ಯಾರಿಗೆ?

Virat kohli: ಮಾತನಾಡುವವರು ಕೂಡ ತಂಡಕ್ಕಾಗಿ ಆಡಿದವರೇ ಆಗಿದ್ದಾರೆ. ಅವರು ಪಂದ್ಯಗಳನ್ನು ಗೆದ್ದಿದ್ದಾರೆ. ನೀವು ಸ್ವತಃ ಆ ಪರಿಸ್ಥಿತಿಯಲ್ಲಿಲ್ಲದಿದ್ದರೆ ಏನು ಮಾಡುತ್ತಿರಿ. ಕಾಮೆಂಟ್​ ಬಾಕ್ಸ್​ನಲ್ಲಿ ಕುಳಿತು ಆಟದ ಬಗ್ಗೆ ಮಾತನಾಡುವುದು ಸುಲಭವಲ್ಲ ಎಂದು ಹೇಳಿದರು.

VISTARANEWS.COM


on

Virat kohli
Koo

ಅಹ್ಮದಾಬಾದ್: ಗುಜರಾತ್ ವಿರುದ್ಧದ ಪಂದ್ಯದಲ್ಲಿ 44 ಎಸೆತಗಳಲ್ಲಿ 70 ರನ್ ಬಾರಿಸಿದ ವಿರಾಟ್ ಕೊಹ್ಲಿ (Virat kohli) ಆರ್​ಸಿಬಿಗೆ 9 ವಿಕೆಟ್​​ಗಳ ಭರ್ಜರಿ ಜಯಕ್ಕೆ ಕಾರಣರಾಗಿದ್ದಾರೆ. ವಿಲ್​ ಜಾಕ್ಸ್​​ ಜತೆಗಿನ 166 ರನ್​​ಗಳ ಜೊತೆಯಾಟದಲ್ಲಿ ಕೊಹ್ಲಿ 3 ಸಿಕ್ಸರ್ ಮತ್ತು 6 ಬೌಂಡರಿಗಳನ್ನು ಬಾರಿಸಿದರು, ವಿಲ್ ಜಾಕ್ಸ್ 41 ಎಸೆತಗಳಲ್ಲಿ ಅಜೇಯ 100 ರನ್ ಗಳಿಸಿದ್ದಾರೆ. ಆರ್​​ಸಿಬಿ ಕೇವಲ 16 ಓವರ್​ಗಳಲ್ಲಿ 201 ರನ್​ಗಳ ಗುರಿ ಬೆನ್ನಟ್ಟಿತು.

“ಇದು ಆಶ್ಚರ್ಯಕರ ವಿಚಾರ. ಸ್ಟ್ರೈಕ್ ರೇಟ್ ಕಡಿಮೆ ಮತ್ತು ನಾನು ಸ್ಪಿನ್ ಬೌಲಿಂಗ್​ಗೆ ಚೆನ್ನಾಗಿ ಆಡದಿರುವ ಬಗ್ಗೆ ಎಲ್ಲರೂ ಮಾತನಾಡಲು ಇಷ್ಟಪಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಆದರೆ ನನಗೆ ತಂಡಕ್ಕಾಗಿ ಪಂದ್ಯ ಗೆಲ್ಲುವುದು ಪ್ರಮುಖ. ನಾನು 15 ವರ್ಷಗಳಿಂದ ಇದನ್ನು ಮಾಡಲು ಒಂದು ಕಾರಣವಿದೆ” ಎಂದು ವಿರಾಟ್ ಕೊಹ್ಲಿ ಗುಜರಾತ್ ವಿರುದ್ಧದ ಪಂದ್ಯದ ಗೆಲುವಿನ ನಂತರ ಹೇಳಿದರು.

ಮಾತನಾಡುವವರು ಕೂಡ ತಂಡಕ್ಕಾಗಿ ಆಡಿದವರೇ ಆಗಿದ್ದಾರೆ. ಅವರು ಪಂದ್ಯಗಳನ್ನು ಗೆದ್ದಿದ್ದಾರೆ. ನೀವು ಸ್ವತಃ ಆ ಪರಿಸ್ಥಿತಿಯಲ್ಲಿಲ್ಲದಿದ್ದರೆ ಏನು ಮಾಡುತ್ತಿರಿ. ಕಾಮೆಂಟ್​ ಬಾಕ್ಸ್​ನಲ್ಲಿ ಕುಳಿತು ಆಟದ ಬಗ್ಗೆ ಮಾತನಾಡುವುದು ಸುಲಭವಲ್ಲ ಎಂದು ಹೇಳಿದರು.

ಇದು ಒಂದೇ ವಿಷಯ ಎಂದು ನಾನು ಭಾವಿಸುವುದಿಲ್ಲ. ಇದು ತಂಡಕ್ಕಾಗಿ ಆಡುವ ಬಗ್ಗೆ. ಜನರು ಕುಳಿತು ತಮ್ಮದೇ ಆದ ಆಲೋಚನೆಗಳು ಮತ್ತು ಊಹೆಗಳ ಬಗ್ಗೆ ಮಾತನಾಡಬಹುದು. ಆದರೆ ಹಗಲು ರಾತ್ರಿ ತಂಡಕ್ಕೆ ಕೆಲಸ ಮಾಡಿದವರಿಗೆ ಎಲ್ಲವೂ ತಿಳಿದಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: MS Dhoni : ಐಪಿಎಲ್​ನಲ್ಲಿ 150 ಪಂದ್ಯಗಳನ್ನು ಗೆದ್ದ ಹೆಗ್ಗಳಿಕೆಗೆ ಪಾತ್ರರಾದ ಧೋನಿ; ಅವರ ಬಳಿಕ ಯಾರಿದ್ದಾರೆ?

ಕಳೆದ ವಾರ ಎಸ್​​ಆರ್​ಎಚ್​​ ​​ವಿರುದ್ಧ ಆರ್​ಸಿಬಿ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಅವರ ಸ್ಟ್ರೈಕ್ ರೇಟ್​​ಗಾಗಿ ಪ್ರಶ್ನಿಸಲಾಗಿತ್ತು. ಮಯಾಂಕ್ ಮಾರ್ಕಂಡೆ ಮತ್ತು ಶಹಬಾಜ್ ಅಹ್ಮದ್ ಅವರಂತಹ ಸ್ಪಿನ್​ ಬೌಲರ್​ ವಿರುದ್ಧ ಹೋರಾಡಿದ ಕೊಹ್ಲಿ 43 ಎಸೆತಗಳಲ್ಲಿ ಕೇವಲ 51 ರನ್ ಗಳಿಸಿದ್ದರು.

ಟೀಕಾಕಾರರು ತಪ್ಪು ಎಂದ ಕೊಹ್ಲಿ

ಭಾನುವಾರ, ವಿರಾಟ್ ಕೊಹ್ಲಿ ಪವರ್​ಪ್ಲೇನ್​ನಲ್ಲಿ ಸ್ಪಿನ್ನರ್​​ಗಳನ್ನು ಎದುರಿಸಲು ಪ್ರಯತ್ನ ಮಾಡಿದರು. ಅವರು ಗುಜರಾತ್ ಬೌಲಿಂಗ್ ದಾಳಿಯನ್ನು ಕೈಗೆತ್ತಿಕೊಂಡರು. ಆರ್ ಸಾಯಿ ಕಿಶೋರ್ ಅವರಿಗೆ ಎರಡು ಸಿಕ್ಸರ್​ ಬಾರಿಸಿದರು. ಪವರ್​ ಪ್ಲೇ ಓವರ್​ಗಳ ನಂತರ ಸ್ಪಿನ್ ವಿರುದ್ಧ ನಿಧಾನವಾಗಿ ಆಡಿದರು. ಈ ರೀತಿಯ ನಿಧಾನಗತಿಯ ಆಟಕ್ಕಾಗಿ ಅವರು ಕೊಹ್ಲಿ ಆಗಾಗ್ಗೆ ಟೀಕೆಗಳನ್ನು ಎದುರಿಸಿದ್ದಾರೆ. ಆದರೆ ಅವರು ಅಫ್ಘಾನ್ ಸ್ಪಿನ್ ಜೋಡಿ ರಶೀದ್ ಖಾನ್ ಮತ್ತು ನೂರ್ ಅಹ್ಮದ್ ಅವರನ್ನು ಸೋಲಿಸುವ ಮೂಲಕ ತಮ್ಮ ಟೀಕಾಕಾರರು ತಪ್ಪು ಎಂದು ಸಾಬೀತುಪಡಿಸಿದರು.

ಕೇವಲ 32 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ನಂತರ ಕೊಹ್ಲಿ ಉತ್ಸಾಹದಿಂದ ಆಡಿದರು. ವಿಲ್ ಜಾಕ್ಸ್ ಸಿಕ್ಸರ್ ಬಾರಿಸಲು ಆರಂಭಿಸಿದಾಗ ವಿರಾಟ್​ ಕೊಹ್ಲಿ ನಿಧಾನವಾಗಿ ಆಡಿದರು. ಐಪಿಎಲ್ 2024 ರಲ್ಲಿ ಕೊಹ್ಲಿ 10 ಇನ್ನಿಂಗ್ಸ್​ಗಳಲ್ಲಿ 500 ರನ್ ಗಳಿಸಿದ್ದಾರೆ. ಆರೆಂಜ್ ಕ್ಯಾಪ್ ಪಡೆದಿರುವ ಅವರು ಈ ಋತುವಿನಲ್ಲಿ 147 ಸ್ಟ್ರೈಕ್ ರೇಟ್ ಹೊಂದಿದ್ದಾರೆ

Continue Reading

Latest

MS Dhoni : ಐಪಿಎಲ್​ನಲ್ಲಿ 150 ಪಂದ್ಯಗಳನ್ನು ಗೆದ್ದ ಹೆಗ್ಗಳಿಕೆಗೆ ಪಾತ್ರರಾದ ಧೋನಿ; ಅವರ ಬಳಿಕ ಯಾರಿದ್ದಾರೆ?

MS Dhoni: ಎಂಎಸ್ ಧೋನಿ ಐಪಿಎಲ್​​ನಲ್ಲಿ 259 ಪಂದ್ಯಗಳನ್ನು ಆಡಿದ್ದಾರೆ, 2008 ರಲ್ಲಿ ಉದ್ಘಾಟನಾ ಆವೃತ್ತಿಯಿಂದ ಟಿ 20 ಲೀಗ್​​ನ ಭಾಗವಾಗಿದ್ದಾರೆ. ಐಪಿಎಲ್​​ನಲ್ಲಿ 5 ಪ್ರಶಸ್ತಿಗಳನ್ನು ಗೆದ್ದಿರುವ ಜಂಟಿ ಅತ್ಯಂತ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸಕ್ತ ಋತುವಿಗೆ ಮುಂಚಿತವಾಗಿ ಧೋನಿ ಸೂಪರ್ ಕಿಂಗ್ಸ್​​ನ ನಾಯಕತ್ವವನ್ನು ಋತುರಾಜ್ ಗಾಯಕ್ವಾಡ್ಗೆ ಹಸ್ತಾಂತರಿಸಿದ್ದರು.

VISTARANEWS.COM


on

MS Dhoni
Koo

ನವದೆಹಲಿ: ಐಪಿಎಲ್ನ 17 ವರ್ಷಗಳ ಇತಿಹಾಸದಲ್ಲಿ 150 ಪಂದ್ಯಗಳಲ್ಲಿ ಗೆಲುವು ಕಂಡ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಮಹೇಂದ್ರ ಸಿಂಗ್​ ಧೋನಿ (MS Dhoni) ಪಾತ್ರರಾಗಿದ್ದಾರೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸೂಪರ್ ಕಿಂಗ್ಸ್ ತಂಡವು ಸನ್ ರೈಸರ್ಸ್ ತಂಡವನ್ನು 78 ರನ್ ಗಳಿಂದ ಸೋಲಿಸಿ ಕೇವಲ 134 ರನ್ ಗಳಿಗೆ ಆಲೌಟ್ ಆದ ನಂತರ ಧೋನಿ ಈ ಸಾಧನೆ ಮಾಡಿದ್ದಾರೆ. ಚೆನ್ನೈನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಸಿಎಸ್​​ಕೆ 78 ರನ್​​ಗಳಿಂದ ಎಸ್ಆರ್​ಎಚ್​​ ತಂಡವನ್ನು ಮಣಿಸಿತ್ತು.

ಎಂಎಸ್ ಧೋನಿ ಐಪಿಎಲ್​​ನಲ್ಲಿ 259 ಪಂದ್ಯಗಳನ್ನು ಆಡಿದ್ದಾರೆ, 2008 ರಲ್ಲಿ ಉದ್ಘಾಟನಾ ಆವೃತ್ತಿಯಿಂದ ಟಿ 20 ಲೀಗ್​​ನ ಭಾಗವಾಗಿದ್ದಾರೆ. ಐಪಿಎಲ್​​ನಲ್ಲಿ 5 ಪ್ರಶಸ್ತಿಗಳನ್ನು ಗೆದ್ದಿರುವ ಜಂಟಿ ಅತ್ಯಂತ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸಕ್ತ ಋತುವಿಗೆ ಮುಂಚಿತವಾಗಿ ಧೋನಿ ಸೂಪರ್ ಕಿಂಗ್ಸ್​​ನ ನಾಯಕತ್ವವನ್ನು ಋತುರಾಜ್ ಗಾಯಕ್ವಾಡ್ಗೆ ಹಸ್ತಾಂತರಿಸಿದ್ದರು.

ಐಪಿಎಲ್​ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದವರು

  1. ಎಂಎಸ್ ಧೋನಿ – 150
  2. ರವೀಂದ್ರ ಜಡೇಜಾ – 133
  3. ರೋಹಿತ್ ಶರ್ಮಾ – 133
  4. ದಿನೇಶ್ ಕಾರ್ತಿಕ್ – 125
  5. ಸುರೇಶ್ ರೈನಾ – 122

ಎಂಎಸ್ ಧೋನಿ ಈಗಾಗಲೇ ಐಪಿಎಲ್​​ನಲ್ಲಿ 133 ಗೆಲುವುಗಳೊಂದಿಗೆ ಅತ್ಯಂತ ಯಶಸ್ವಿ ನಾಯಕ ಎಂಬ ದಾಖಲೆಯನ್ನು ಹೊಂದಿದ್ದಾರೆ. ರೋಹಿತ್ ಶರ್ಮಾ 87 ಗೆಲುವುಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: Kavya Maran : ಎಸ್​ಆರ್​ಎಚ್​​​ ತಂಡದ ಫೀಲ್ಡಿಂಗ್ ನೋಡಿ ಮಗುವಿನಂತೆ ಕಣ್ಣೀರು ಹಾಕಿದ ಮಾಲಕಿ ಕಾವ್ಯಾ ಮಾರನ್​

ಭಾನುವಾರ ಸಿಎಸ್​ಕೆ ಇನ್ನಿಂಗ್ಸ್​ನ ಅಂತಿಮ ಓವರ್​ನಲ್ಲಿ ಋತುರಾಜ್ ಗಾಯಕ್ವಾಡ್ 98 ರನ್​ಗಳಿಗೆ ಔಟಾದ ನಂತರ ಎಂಎಸ್ ಧೋನಿ ಚೆಪಾಕ್ ಪ್ರೇಕ್ಷಕರಿಗೆ ಮತ್ತೊಂದು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಧೋನಿ ಅವರು ಎದುರಿಸಿದ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರು ಮತ್ತು ಮುಂದಿನ ಎಸೆತದಲ್ಲಿ ಸಿಂಗಲ್​ ಪಡೆದರು ಮತ್ತು 2 ಎಸೆತಗಳಲ್ಲಿ 5 ರನ್ ಗಳಿಸಿ ಅಜೇಯರಾಗಿ ಉಳಿದರು, ಸಿಎಸ್​ಕೆ 212 ರನ್​​ಗಳ ಬೃಹತ್ ಮೊತ್ತವನ್ನು ಗಳಿಸಿತು.

ಎಲ್ಲಾ ಮೂರು ವಿಭಾಗಗಳಲ್ಲಿ ಪ್ರಾಬಲ್ಯ ಸಾಧಿಸಿದ ಸೂಪರ್ ಕಿಂಗ್ಸ್ ಸನ್​ರೈಸರ್ಸ್​ ಪರ ಧೋನಿ ಕ್ಯಾಚೊಂದನ್ನು ಪಡೆದರು. ಡ್ಯಾರಿಲ್ ಮಿಚೆಲ್ ತ್ವರಿತ 5 ಔಟ್​ಫೀಲ್ಡ್​​ ಕ್ಯಾಚ್​ಗಳನ್ನು ಪಡೆದು ಐಪಿಎಲ್ ದಾಖಲೆಯನ್ನು ಸರಿಗಟ್ಟಿದರು.

ಧೋನಿ ತಮ್ಮ ಅತಿಥಿ ಪಾತ್ರಗಳಲ್ಲಿ ಬ್ಯಾಟ್ ನಿಂದ ಮಿಂಚುತ್ತಿದ್ದಾರೆ. ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಕೇವಲ 37 ಎಸೆತಗಳಲ್ಲಿ 257 ಸ್ಟ್ರೈಕ್ ರೇಟ್​​ನಲ್ಲಿ 96 ರನ್ ಗಳಿಸಿದ್ದಾರೆ. ಧೋನಿಯ ಕೊನೆಯ ಓವರ್​​​ ವಿಶೇಷಗಳು ಒಂದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ಪ್ರಖರವಾಗಿವೆ. ವಾಂಖೆಡೆ ಕ್ರೀಡಾಂಗಣದಲ್ಲಿ ಹಾರ್ದಿಕ್ ಪಾಂಡ್ಯ ಬಳಗದ ವಿರುದ್ಧ ಅವರ ಬ್ಯಾಟಿಂಗ್​​ ವಿಶೇಷವಾಗಿತ್ತು. ಏಕೆಂದರೆ ಮಾಜಿ ನಾಯಕ ಸತತ 3 ಸಿಕ್ಸರ್​ಗಳನ್ನು ಬಾರಿಸಿದ್ದರು. 4 ಎಸೆತಗಳಲ್ಲಿ 20 ರನ್ ಗಳಿಸಿದ್ದರು.

ಎಸ್ಆರ್ಹೆಚ್ ವಿರುದ್ಧ 78 ರನ್​​ಗಳ ವಿಜಯ ಸಾಧಿಸಿದ ಸಿಎಸ್​ಕೆ ಮತ್ತೆ ಅಗ್ರ 4 ಸ್ಥಾನಕ್ಕೇರಿತು. ಆಡಿರುವ 9 ಪಂದ್ಯಗಳಲ್ಲಿ 10 ಅಂಕ ಗಳಿಸಿರುವ ಅವರು 3ನೇ ಸ್ಥಾನದಲ್ಲಿದ್ದಾರೆ.

Continue Reading

Latest

Kavya Maran : ಎಸ್​ಆರ್​ಎಚ್​​​ ತಂಡದ ಫೀಲ್ಡಿಂಗ್ ನೋಡಿ ಮಗುವಿನಂತೆ ಕಣ್ಣೀರು ಹಾಕಿದ ಮಾಲಕಿ ಕಾವ್ಯಾ ಮಾರನ್​

Kavya Maran : 19ನೇ ಓವರ್​ನ ನಾಲ್ಕನೇ ಎಸೆತದಲ್ಲಿ ಇದು ನಡೆದಿದೆ. ಗಾಯಕ್ವಾಡ್ ಕಟ್ ಶಾಟ್ ಆಡಿದರು, ಅಲ್ಲಿ ಪ್ಯಾಟ್ ಕಮಿನ್ಸ್ ಚೆಂಡನ್ನು ಫೀಲ್ಡ್ ಮಾಡಿ ಬೌಲರ್​ ಇರುವ ತುದಿಗೆ ಎಸೆದರು. ಆ ಥ್ರೋ ಸರಿಯಾಗಿ ವಿಕೆಟ್​ಗೆ ಬಡಿಯಲಿಲ್ಲ ಮತ್ತು ಗಾಯಕ್ವಾಡ್ ತನ್ನ ಸಿಂಗಲ್ ಅನ್ನು ಪೂರ್ಣಗೊಳಿಸಿದರು ಹಾಗೂ ಅವರ ವಿಕೆಟ್​ ಉಳಿಯಿತು.

VISTARANEWS.COM


on

Kavya Maran
Koo

ಹೈದರಾಬಾದ್​​: ಸನ್ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾದ ಕಾವ್ಯಾ ಮಾರನ್ (Kavya Maran) ಅವರು ಐಪಿಎಲ್​ 2024 (IPL 2024) ಪಂದ್ಯದ ವೇಳೆ ತಮ್ಮ ತಂಡದ ಆಟಗಾರರು ತಪ್ಪು ಮಾಡಿದಾಗ ಮಾಡುವ ವಿಭಿನ್ನ ಹಾವಭಾವಗಳು ಹೆಚ್ಚು ವೈರಲ್​ ಆಗುತ್ತವೆ. ಅವುಗಳಿಂದ ಭಿನ್ನವಾದ ಮೀಮ್ಸ್​ಗಳನ್ನು ರಚಿಸಿ ಸೋಶಿಯಲ್​ ಮೀಡಿಯಾಗಳಲ್ಲಿ ಹರಿಬಿಡುತ್ತಾರೆ. ಅಂತೆಯೇ 31 ವರ್ಷದ ಉದ್ಯಮಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ 2024 ರ 46 ನೇ ಪಂದ್ಯದಲ್ಲಿ ಮಗು ಅಳುವಂತೆ ಮುಖ ಮಾಡಿ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ. ಋತುರಾಜ್ ಗಾಯಕ್ವಾಡ್ ಅವರ ರನ್ ಔಟ್ ಚಾನ್ಸ್​ ಎಸ್ಆರ್​ಎಚ್​​​ ಕಳೆದುಕೊಂಡಾಗ ಕಾವ್ಯಾ ಮತ್ತೊಮ್ಮೆ ಗಮನ ಸೆಳೆದರು.

19ನೇ ಓವರ್​ನ ನಾಲ್ಕನೇ ಎಸೆತದಲ್ಲಿ ಇದು ನಡೆದಿದೆ. ಗಾಯಕ್ವಾಡ್ ಕಟ್ ಶಾಟ್ ಆಡಿದರು, ಅಲ್ಲಿ ಪ್ಯಾಟ್ ಕಮಿನ್ಸ್ ಚೆಂಡನ್ನು ಫೀಲ್ಡ್ ಮಾಡಿ ಬೌಲರ್​ ಇರುವ ತುದಿಗೆ ಎಸೆದರು. ಆ ಥ್ರೋ ಸರಿಯಾಗಿ ವಿಕೆಟ್​ಗೆ ಬಡಿಯಲಿಲ್ಲ ಮತ್ತು ಗಾಯಕ್ವಾಡ್ ತನ್ನ ಸಿಂಗಲ್ ಅನ್ನು ಪೂರ್ಣಗೊಳಿಸಿದರು ಹಾಗೂ ಅವರ ವಿಕೆಟ್​ ಉಳಿಯಿತು.

ನಂತರ ಚೆಂಡು ಲೆಗ್ ಸೈಡ್ ಕಡೆಗೆ ಹೋಯಿತು ಮತ್ತು ಸ್ಟ್ಯಾಂಡ್ ನಿಂದ ಪಂದ್ಯ ವೀಕ್ಷಿಸುತ್ತಿದ್ದ ಕಾವ್ಯಾ ಮಾರನ್ ಈ ವೇಳೆ ಅಳುವಂತೆ ಮುಖ ಮಾಡಿದರು. ಈ ರನ್​ ಔಟ್​ ಮಿಸ್​ನಿಂದಾಗಿ ಚೆನ್ನೈ ಇನ್ನೊಂದು ರನ್​ ಹೆಚ್ಚುವರಿಯಾಗಿ ಓಡಿತು.

ಗಾಯಕ್ವಾಡ್ ಅಂತಿಮವಾಗಿ ಅಂತಿಮ ಓವರ್​​ನಲ್ಲಿ ಔಟಾಗಿ ಕೇವಲ ಎರಡು ರನ್​ಗಳ ಕೊರತೆಯಿಂದ ಶತಕ ಕಳೆದುಕೊಂಡರು. ಅವರ ರನ್​ಗಳಿಂದ ಸಿಎಸ್ಕೆ 212 ರನ್ಗಳ ದೊಡ್ಡ ಸ್ಕೋರ್ ಬಾರಿಸಿತು. ಗಾಯಕ್ವಾಡ್ ಅವರೊಂದಿಗೆ ಡ್ಯಾರಿಲ್ ಮಿಚೆಲ್ ಮತ್ತು ಶಿವಂ ದುಬೆ ಕೂಡ ಕ್ರಮವಾಗಿ 52 ಮತ್ತು 39 ರನ್ ಗಳಿಸಿದರು. ಆರ್​ಸಿಬಿ ವಿರುದ್ಧದ ಈ ಹಿಂದಿನ ಪಂದ್ಯದಲ್ಲಿ ಸೋತ ಎಸ್​ಎಚ್​​ಆರ್​ ಮತ್ತೊಂದು ಪರಾಜಯಕ್ಕೆ ಒಳಗಾಯಿತು.

Continue Reading
Advertisement
S M Krishna
ಕರ್ನಾಟಕ1 min ago

S M Krishna: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ವೈರಲ್ ನ್ಯೂಸ್6 mins ago

Viral Video: ಪಾಪಿ ಮಗನಿಂದ ತಂದೆ ಮೇಲೆ ಇದೆಂಥಾ ಕ್ರೌರ್ಯ! ವಿಡಿಯೋ ನೋಡಿ

facebook whatsapp instagram
ಪ್ರಮುಖ ಸುದ್ದಿ8 mins ago

WhatsApp Exit India: ವಾಟ್ಸ್ಯಾಪ್‌ ಜೊತೆಗೇ ಭಾರತ ತೊರೆಯಲಿವೆಯೇ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ?

Dubai Airport
EXPLAINER18 mins ago

Dubai Airport : ದುಬೈನಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಅತಿ ದೊಡ್ಡ ಏರ್​ಪೋರ್ಟ್​​; ಏನಿದರ ವಿಶೇಷತೆ? ಎಲ್ಲ ಮಾಹಿತಿ ಇಲ್ಲಿದೆ

IPL 2024 Points Table
ಕ್ರೀಡೆ29 mins ago

IPL 2024 Points Table: ಚೆನ್ನೈ ಗೆಲುವಿನಿಂದ ಅಂಕಪಟ್ಟಿಯಲ್ಲಿ 3 ತಂಡಗಳಿಗೆ ಭಾರೀ ಹೊಡೆತ

Minister Lakshmi hebbalkar Latest statement in Belagavi
ಬೆಳಗಾವಿ48 mins ago

Lakshmi Hebbalkar: ಪ್ರಜ್ವಲ್ ಹಗರಣದ ಬಗ್ಗೆ ಬಿಜೆಪಿ ನಾಯಕರ ಮೌನವೇಕೆ? ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನೆ

Sahil Khan Travelled 1,800 km In 4 Days To Avoid Arrest
ಬಾಲಿವುಡ್51 mins ago

Sahil Khan: ಪೊಲೀಸರಿಂದ ತಪ್ಪಿಸಿಕೊಳ್ಳಲು 1,800 ಕಿ.ಮೀ ಪ್ರಯಾಣಿಸಿದ್ದ ನಟ ಸಾಹಿಲ್ ಖಾನ್!

Hassan Pen Drive Case Deve Gowda refuses to expel Prajwal and What is the reason
ಕರ್ನಾಟಕ59 mins ago

Hassan Pen Drive Case: ಪ್ರಜ್ವಲ್‌ ಉಚ್ಚಾಟನೆಗೆ ದೇವೇಗೌಡರ ಹಿಂದೇಟು; ದೊಡ್ಡ ಗೌಡರ ಭಯಕ್ಕೆ ಏನು ಕಾರಣ?

Pro-Khalistan slogan
Latest1 hour ago

Pro-Khalistan slogan : ಕೆನಡಾ ಪ್ರಧಾನಿ ಟ್ರುಡೊ ಕಾರ್ಯಕ್ರಮದಲ್ಲಿ ಖಲಿಸ್ತಾನ ಪರ ಘೋಷಣೆ!

prachi nigam online troll
ವೈರಲ್ ನ್ಯೂಸ್1 hour ago

Prachi Nigam: “ನಾನು ಟಾಪ್‌ ಬರಲೇಬಾರದಿತ್ತು…” ಮೀಸೆಯಿಂದಾಗಿ ಟ್ರೋಲ್‌ಗೊಳಗಾದ ಬೋರ್ಡ್‌ ಎಕ್ಸಾಮ್‌ ಟಾಪರ್‌ ಹುಡುಗಿಯ ನೋವು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

PM Narendra modi in Bagalakote and Attack on Congress
Lok Sabha Election 20242 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ10 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Congress fears defeat over EVMs Congress will not win a single seat in Karnataka says PM Narendra Modi
Lok Sabha Election 202423 hours ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20241 day ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20241 day ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20241 day ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest1 day ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

ಟ್ರೆಂಡಿಂಗ್‌