Site icon Vistara News

IPL 2022 | ಇಂದು CSK V/S MI: ಪ್ಲೇ ಆಫ್ ತಲುಪಲು ಚೆನ್ನೈಗೆ ಕೊನೆಯ ಅವಕಾಶ

IPL2022: ಚೆನ್ನೈ ಮತ್ತು ಮುಂಬೈ ಎರಡೂ ತಂಡಗಳೂ ಅಂಕಪಟ್ಟಿಯ ಕೊನೆಯಲ್ಲಿ ಇರುವಂತಹ ತಂಡಗಳು. ಐಪಿಎಲ್‌ನ 59ನೇ ಪಂದ್ಯದಲ್ಲಿ ಈ ಎರಡೂ ತಂಡಗಳು ಮುಖಾಮುಖಿಯಾಗಲಿವೆ. ಇಂದು ನಡೆಯಲಿರುವ ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲಬಹುದು? ಚೆನ್ನೈ ತಂಡ ಗೆದ್ದರೆ ಪ್ಲೇ ಆಫ್ ತಲುಪಬಹುದೇ? ಎಂಬ ಕುತೂಹಲ ಇದೆ.

10 ತಂಡಗಳ ಐಪಿಎಲ್‌ ಟೂರ್ನಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಮುಂಬೈ ಪ್ಲೇ ಆಫ್‌ ತಲುಪುವುದಿಲ್ಲ ಎನ್ನುವುದು ಖಚಿತಗೊಂಡಿದೆ. ಇಲ್ಲಿವರೆಗಿನ ಆಟ, ಇತಿಹಾಸ ಹಾಗೂ ವಾಸ್ತವಿಕತೆ ನೋಡಿದರೆ 9 ನೇ ಸ್ಥಾನದಲ್ಲಿರುವ ಚೆನ್ನೈ ಸಹ ಪ್ಲೇ ಆಫ್‌ ತಲುಪುವುದು ಬಹುತೇಕ ಅಸಾಧ್ಯ. ಆದರೆ, ತಾಂತ್ರಿಕವಾಗಿ ಚೆನ್ನೈಗೆ ಇನ್ನೂ ಅವಕಾಶ ಇದೆ. ಒಂದಷ್ಟು ಅಂಶಗೂ ಕೂಡಿ ಬಂದರೆ ಚೆನ್ನೈ ತಂಡಕ್ಕೆ ಇನ್ನೂ ಪ್ಲೇ ಆಫ್ ತಲುಪುವ ಆವಕಾಶವಿದೆ. ಚೆನ್ನೈ ತಂಡ ಇನ್ನು ಮುಂದೆ ಆಡಲಿರುವ ಎಲ್ಲ 3 ಮ್ಯಾಚ್‌ಗಳನ್ನು ಗೆಲ್ಲಬೇಕು. ಅದರಲ್ಲೂ ಎಲ್ಲ ಪಂದ್ಯಗಳನ್ನೂ ಒಳ್ಳೆಯ ಮಾರ್ಜಿನ್ ಇಂದ ಗೆದ್ದರೆ ಮಾತ್ರ ಪ್ಲೇ ಆಫ್ ತಲುಪಬಹುದು. ಇದು ನೆಟ್ ರನ್ ರೇಟ್ ಆಧಾರದ ಮೇಲೆ ಮಾತ್ರ ಸಾಧ್ಯ.

ರವೀಂದ್ರ ಜಡೆಜಾ ನಾಯಕತ್ವ ಸ್ಥಾನದಿಂದ ಕೆಳಗಿಳಿದು ಮಹೇಂದ್ರ ಸಿಂಗ್‌ ಧೋನಿ ನೇತೃತ್ವ ವಹಿಸಿದ ನಂತರ ತಂಡವು ಹೊಸ ಹುರುಪಿನಿಂದ ಆಡುತ್ತಿರುವುದು ಕಂಡಿದೆ. ಈ ಹಿಂದಿನ ಪಂದ್ಯದಲ್ಲಿ ಡಿ.ಸಿ ತಂಡದ ವಿರುದ್ಧ 91 ರನ್‌ಗಳ ಭಾರಿ ಗೆಲುವು ಸಾಧಿಸಿ ಉತ್ಸಾಹದಲ್ಲಿದೆ. ಈ ರೀತಿ ಭಾರಿ ಅಂತರದಲ್ಲಿ ಮ್ಯಾಚ್ ಗೆದ್ದರೆ ಮಾತ್ರ ಚೆನ್ನೈ ತಂಡಕ್ಕೆ  ಪ್ಲೇ ಆಫ್ ಅನುಕೂಲವಾಗಬಹುದು.

ಡಿ.ಸಿ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡದ ಆರಂಭಿಕ ಬ್ಯಾಟರ್‌ಗಳಾದ ರಿತುರಾಜ್ ಗಾಯಕ್ವಾಡ್ ಹಾಗೂ ದಿವೊನ್ ಕೊನ್ವೆ ಇಬ್ಬರೂ 100 ರನ್‌ಗಳ ಜತೆಯಾಟ ನಡೆಸಿದ್ದರು. ಹಾಗಾಗಿ ಇಬ್ಬರೂ ಒಳ್ಳೆಯ ಫಾರ್ಮ್‌ನಲ್ಲಿದ್ದಾರೆ. ಹಾಗೂ ಜಡೆಜಾ, ಶಿವಮ್ ದೂಬೆ ಕೂಡ ಉತ್ತಮ ಆಟ ಪ್ರದರ್ಶಿ ಭರವಸೆ ಮೂಡಿಸಿದ್ದವರು. ಈ ಪಂದ್ಯದಲ್ಲೂ ಅವರಿಂದ ಬಿರುಸಿನ ಆಟದ ನಿರೀಕ್ಷೆಯಿದೆ.

ಚೆನ್ನೈ ತಂಡದ ಸ್ಪಿನ್ನರ್ಸ್ ಹೆಚ್ಚಿನ ವಿಕೆಟ್ ಪಡಯುವಲ್ಲಿ ಹಾಗೂ ಬ್ಯಾಟರ್‌ಗಳಿಗೆ ರನ್ ನೀಡದೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ರೀತಿ ವೇಗಿ ಬೌಲರ್ ಮನೋಜ್ ಚೌಧರಿ ಹಾಗೂ ಸಿಮರ್‌ಜೀತ್ ಸಿಂಗ್ ಕೂಡ ಈ ಮಾದರಿಯ ಬೌಲಿಂಗ್ ಮಾಡುವಲ್ಲಿ ಸಫಲರಾಗುತ್ತಿದ್ದಾರೆ.

ಮುಂಬೈ ತಂಡಕ್ಕಿರುವ ಸಾಧ್ಯತೆಗಳು:

ಈ ಆವೃತ್ತಿಯ ಐಪಿಎಲ್ ಮ್ಯಾಚ್‌ಗಳಲ್ಲಿ ಸರಣಿ ಸೋಲುಗಳನ್ನು ಅನುಭವಿಸಿದ ಮುಂಬೈ ತಂಡದಲ್ಲಿ ಗೆಲುವಿನ ಆತ್ಮವಿಶ್ವಾಸದ ಕೊರತೆ ಕಾಣಬಹುದು. ಕೊಲ್ಕತ್ತಾ ತಂಡದ ವಿರುದ್ದದ ಪಂದ್ಯದಲ್ಲಿ ಅತ್ಯತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರೂ ಮ್ಯಾಚ್ ಗೆಲ್ಲಲಿಲ್ಲ. ಇದು ತಂಡದ ಆತ್ಮವಿಶ್ವಾಸ ಕುಗ್ಗಿಸುತ್ತದೆ.

ಕೊಲ್ಕತ್ತಾ ತಂಡದ ವಿರುದ್ಧ ಜಸ್ಪ್ರೀತ್ ಬುಮ್ರಾ 5 ವಿಕೆಟ್ ಪಡೆದು ಮಿಂಚಿದ್ದರು. ಕೊಲ್ಕತ್ತಾ ತಂಡವನ್ನು 165 ರನ್‌ಗೆ ಕಡಿವಾಣ ಹಾಕುವಲ್ಲಿ ಮುಂಬೈ ತಂಡ ಯಶಸ್ವಿಯಾಗಿತ್ತು. ಈ ಟಾರ್ಗೆಟ್ ಚೇಸ್ ಮಾಡಲು ಮುಂದಾದ ಮುಂಬೈ ತಂಡವು ಕೇವಲ 113 ರನ್‌ಗೆ ಆಲ್ ಔಟ್ ಅಗಿದ್ದು ತಂಡಕ್ಕೆ ಅಸಮಾಧಾನಕರ ಸಂಗತಿ. ಈ ಪಂದ್ಯದಲ್ಲಿ 52 ರನ್‌ಗಳ ಭಾರಿ ಸೋಲನ್ನು ಮುಂಬೈ ತಂಡ ಅನುಭವಿಸಿತು.

ಚೆನ್ನೈ ಹಾಗೂ ಮುಂಬೈ ಮುಖಾಮುಖಿ:

ಪಂದ್ಯಗಳು:  33

ಗೆಲುವು:

ಮುಂಬೈ- 19

ಚೆನ್ನೈ- 14

ವಾಂಖೆಡೆ ಕ್ರೀಡಾಂಗಣದ ರಿಪೋರ್ಟ್:

ವಾಂಖೆಡೆ ಕ್ರೀಡಾಂಗಣದಲ್ಲಿ ಅತಿ ಹೆಚ್ಚು ರನ್ ಸ್ಕೋರ್ ಮಾಡುವ ಅವಕಾಶವಿದೆ. ಟಿ20 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಸರಾಸರಿ 192 ರನ್ ಗಳಿಸಿವೆ. ಹಾಗೂ ಚೇಸ್ ಮಾಡಿದ ತಂಡಗಳು 184 ರನ್ ಗಳಿಸಿರುವ ರೆಕಾರ್ಡ್‌ ಇದೆ.

ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್‌ ತಂಡದ ಪಂದ್ಯ ಇದೇ ಕ್ರೀಡಾಂಗಣದಲ್ಲಿ ನಡೆದಿತ್ತು. ಆಗ ಮೊದಲು ಬ್ಯಾಟಿಂಗ್ ಮಾಡಿದ ಆರ್.ಸಿ.ಬಿ 190ಕ್ಕೂ ಅಧಿಕ ರನ್ ಗಳಿಸಿತ್ತು. ಚೇಸ್ ಮಾಡಿದ ಹೈದ್ರಾಬಾದ್ ತಂಡ ಸೋತಿತ್ತು.

ಒಟ್ಟಾರೆಯಾಗಿ ಗಮನಿಸಿದಾಗ ಚೆನ್ನೈ ತಂಡದ ಆಟಗಾರರು ಫಾರ್ಮ್‌ನಲ್ಲಿದ್ದಾರೆ. ಧೋನಿ ಕ್ಯಾಪ್ಟನ್ಸಿಯಲ್ಲಿ ಆಟಗಾರರಿಗೆ ಹೊಸ ಉತ್ಸಾಹ ಮೂಡಿದೆ. ಮುಂಬೈ ತಂಡದಲ್ಲಿ ಇಶಾನ್ ಕಿಶನ್ ಮಾತ್ರ ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ತಂಡದ ಗೆಲುವಿಗೆ ಒದ್ದಾಡಿಂತೆ ಕಂಡಿದೆ. ಸೂರ್ಯಕುಮಾರ್ ಯಾದವ್ ಮುಂಬೈ ತಂಡದಿಂದ ಹೊರ ಉಳಿದಿದ್ದಾರೆ. ಈ ಎಲ್ಲಾ ಕಾರಣಗಳಿಂದ ಚೆನ್ನೈ ತಂಡಕ್ಕೆ ಗೆಲ್ಲುವ ಸಾಧ್ಯತೆ ಹೆಚ್ಚಿರುವುದು ಕಾಣುತ್ತದೆ. ಇನ್ನು ಪ್ಲೇ ಆಫ್ ತಲುಪುವ ಸಾಹಸಕ್ಕೆ ಮುನ್ನುಗ್ಗಬೇಕೆಂದರೆ ದೊಡ್ಡ ಮಾರ್ಜಿನ್‌ ಗೆಲುವು ಬೇಕಾಗುತ್ತದೆ. ಅಂತಹ ದೊಡ್ಡ ಗೆಲುವುಗಳ ಸರಣಿ ಈ ಪಂದ್ಯದಿಂದ ಆರಂಭವಾಗಲು ಚೆನ್ನೈ ತಂಡಕ್ಕೆ ಸ್ವ ಪ್ರಯತ್ನದ ಜತೆಗೆ ಅದೃಷ್ಟವೂ ಬೇಕಾಗುತ್ತದೆ. ಆ ರೀತಿ ಆದರೆ ಐಪಿಎಲ್‌ 2022 ಮತ್ತಷ್ಟು ರೋಚಕವಾಗುತ್ತದೆ.

ಇದನ್ನೂ ಓದಿ: IPL2022 | ಐಪಿಎಲ್‌ನಿಂದ ಸೂರ್ಯಕುಮಾರ್‌ ಹೊರಗೆ

Exit mobile version