IPL2022: ಐಪಿಎಲ್‌ನ 34ನೇ ಪಂದ್ಯದಲ್ಲಿ Rajasthan Royals ಹಾಗೂ Delhi Capitals ಮುಖಾಮುಖಿಯಾಗಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಬೌಲಿಂಗ್ ಮಾಡುತ್ತಿದ್ದ ವೇಳೆಗೆ ಕೊನೇ ಓವರ್‌ನಲ್ಲಿ ʼನೋಬಾಲ್ʼ ಅಗಿದ್ದರೂ ʼನೋಬಾಲ್ʼ ಅಲ್ಲ ಎಂದು ಅಂಪೈರ್ ನಿರ್ಧಾರ ನೀಡಿದ್ದರು. ಇದರಿಂದ ದಿಲ್ಲಿ ತಂಡದ ಕ್ಯಾಪ್ಟನ್ ರಿಷಭ್ ಪಂತ್ ಅಸಮಾಧಾನಗೊಂಡು ಕೂಡಲೇ ಆಟಗಾರರನ್ನು ಪೆವಿಲಿಯನ್‌ಗೆ ಬರುವಂತೆ ಸನ್ನೆ ಮಾಡಿದ್ದರು.
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ತಂಡ 2 ವಿಕೆಟ್ ನಷ್ಟಕ್ಕೆ 222 ಸ್ಕೋರ್ ಮಾಡಿತ್ತು. ಜೊಸ್ ಬಟ್ಲರ್ 116 ರನ್‌ಗಳಿಸುವ ಮೂಲಕ ಮಿಂಚಿನ ಆಟವಾಡಿದರು. ಆದರೆ 223 ಟಾರ್ಗೆಟ್ ಬೆನ್ನಟ್ಟಿದ ದಿಲ್ಲಿ ಕ್ಯಾಪಿಟಲ್ಸ್ ಕೂಡ ಉತ್ತಮ ಆಟವಾಡುತ್ತಿತ್ತು. ಡಿ.ಸಿ. ತಂಡಕ್ಕೆ ಪಂದ್ಯವನ್ನು ಗೆಲ್ಲಲು ಕೊನೇಯ ಓವರ್‌ನಲ್ಲಿ 36 ರನ್ ಅವಶ್ಯಕತೆ ಇತ್ತು. ಆರ್.ಆರ್. ತಂಡದಿಂದ ಕೊನೇ ಓವರ್ ಬೌಲ್ ಮಾಡಲು ಒಬೆಡ್ ಮೆಕೊಯ್ ಮುಂದಾದರು. ಹಾಗೂ ರೋವ್ಮನ್ ಪೊವೆಲ್ ಸ್ಟ್ರೈಕ್‌ನಲ್ಲಿದ್ದರು. ಮೆಕೊಯ್ ಮಾಡಿದ ಮೊದಲೆರಡು ಬಾಲ್‌ಗಳಿಗೆ ಸಿಕ್ಸ್ ಬಾರಿಸಿದ್ದರು. ಮೂರನೇ ಬಾಲ್ ಕೂಡ ಬೌಂಡರಿಯಿಂದ ಹೊರಕಳಿಸುವಲ್ಲಿ ಯಶಸ್ವಿಯಾದರು. ಮೂರನೇ ಬಾಲ್ ಬ್ಯಾಟ್ಸ್‌ಮನ್ ಸೊಂಟದಿಂದ ಮೇಲಿದ್ದ ಕಾರಣಕ್ಕೆ ನೋಬಾಲ್ ಆಗಿತ್ತು. ಅಂಪೈರ್ ನೋಬಾಲ್ ಎಂದು ಪರಿಗಣಸಲಿಲ್ಲ. ನೋಬಾಲ್ ನೀಡಿದ್ದರೆ ದಿಲ್ಲಿ ತಂಡಕ್ಕೆ ಫ್ರೀ-ಹಿಟ್, ಒಂದು ಎಕ್ಸ್‌ಟ್ರಾ ರನ್ ಹಾಗೂ ಒಂದು ಬಾಲ್ ಎಕ್ಸ್‌ಟ್ರಾ ಸಿಗುತ್ತಿತ್ತು.
ಇದರಿಂದ ದಿಲ್ಲಿ ತಂಡದ ಆಟಗಾರರು ಕೋಪಗೊಂಡು ಡಗೌಟ್‌ನಲ್ಲಿ ರೊಚ್ಚಿಗೆದ್ದರು. ದಿಲ್ಲಿ ತಂಡದ ನಾಯಕ ರಿಷಭ್ ಪಂತ್ ಅಂಪೈರ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ರಿಷಭ್ ಪಂತ್ ಹಾಗೂ ಶಾರ್ದುಲ್ ಠಾಕುರ್ ಬ್ಯಾಟ್ಸ್‌ಮನ್‌ಗಳನ್ನು ಕೂಡಲೇ ಸ್ಟೇಡಿಯಂನಿಂದ ಹೊರಬರಲು ಸೂಚನೆ ನೀಡಿದರು. ರಾಜಸ್ಥಾನ್ ತಂಡದ ಜೊಸ್ ಬಟ್ಲರ್ ಹಾಗೂ ರಿಷಭ್ ಪಂತ್ ನಡುವೆ ಮಾತಿನ ಚಕಾಮಕಿ ಕೂಡ ಕಂಡುಬಂದಿತು. ಬ್ಯಾಟಿಂಗ್ ಮಾಡುತ್ತಿದ್ದ ಪೊವೆಲ್ ಹಾಗೂ ಕುಲ್ದೀಪ್ ಯಾದವ್ ಇಬ್ಬರೂ ಸ್ಟೇಡಿಯಂ ಬಿಟ್ಟು ಹೊರಟಿದ್ದರು. ಅಂಪೈರ್ಸ್ ಇಬ್ಬರೂ ಬ್ಯಾಟ್ಸ್‌ಮನ್‌ಗಳನ್ನು ಸ್ಟೇಡಿಯಂ ಬಿಟ್ಟು ಹೋಗದಂತೆ ತಡೆದರು. ರಾಜಸ್ಥಾನ್ ರಾಯಲ್ಸ್‌ನ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಕೂಡ ಕುಲ್ದೀಪ್ ಯಾದವ್ ಹೊರಹೋಗದಂತೆ ತಡೆದರು. ನಂತರ ತಂಡದ ಹಿರಿಯ ಆಟಗಾರ ಶೇನ್ ವ್ಯಾಟ್ಸನ್ ರಿಷಭ್ ಅವರನ್ನು ಸಮಾಧಾನಗೊಳಿಸಿದರು.
ಪದ್ಯಂದ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ರಿಷಭ್ ಅಂಪೈರ್ ನೀಡಿದ ನಿರ್ಧಾರದ ಕುರಿತು ಬೇಸರ ವ್ಯಕ್ತ ಪಡಿಸಿದರು.
ರಿಷಭ್ ಪಂತ್ ಹಾಗೂ ಶಾರ್ದುಲ್ ಠಾಕುರ್ ಅವರ ವರ್ತನೆಗೆ ಅವರಿಗೆ ದಂಡ ವಿಧಿಸಲಾಗಿದೆ ಹಾಗೂ ದಿಲ್ಲಿ ಕ್ಯಾಪಿಟಲ್ಸ್‌ನ ಸಹಾಯಕ ಕೋಚ್ ಪ್ರವೀಣ್ ಆಮ್ರೆಯವರನ್ನು ಒಂದು ಮ್ಯಾಚ್ ಮಟ್ಟಿಗೆ ಬ್ಯಾನ್ ಮಾಡಲಾಗಿದೆ.
ಈ ಘಟನೆಯ ಬಗ್ಗೆ ಹಿರಿಯ ಅಟಗಾರರಾದ ಗ್ರೇಮ್ ಸ್ವಾನ್, ಇರ್ಫಾನ್ ಪಠಾಣ್, ಹರ್ಷಾ ಭೋಗ್ಲೆ, ಗ್ಲೆನ್ ಮ್ಯಾಕ್ಸ್‌ವೆಲ್ ಅಂಪೈರ್ ನೀಡಿದ ನಿರ್ಧಾರ ತಪ್ಪು, ಅದು ನೋಬಾಲ್ ಎಂದು ಟ್ವೀಟ್ ಮಾಡಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡ ದಿಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 15 ರನ್‌ಗಳ ಗೆಲುವು ಸಾಧಿಸಿದೆ.
ಇದನ್ನೂ ಓದಿ: IPL 2022 | ದುಬಾರಿ ದುಡ್ಡಿಗೆ ಮಾರಾಟವಾದವರು ಹೇಗೆ ಆಡಿದರು ನೋಡಿ !