Site icon Vistara News

IPL22| ಎಲ್ಲಿ ಹೋಯ್ತು ʼವಿರಾಟ್‌ʼರೂಪ: 100 ಬಾರಿಸಿ 100 ಆಟವಾಯಿತು

Virat kohli

IPL2022: ವಿರಾಟ್‌ ಕೋಹ್ಲಿ ಓರ್ವ ಅಗ್ರೆಸ್ಸಿವ್‌ ಆಟಗಾರ. ವಿರಾಟ್‌ ನಿರಂತರವಾಗಿ ಉತ್ತಮ ಆಟವನ್ನು ಪ್ರದರ್ಶಿಸುವಲ್ಲಿ ಹೆಸರಾದವರು. ಆದರೆ ಇತ್ತಿಚೆಗೆ ಯಾಕೋ ವಿರಾಟ್‌ ಆಡುವ ರೀತಿ ಪಪ್ರೇಕ್ಷಕರ ಭರವಸೆಯನ್ನು ಸುಳ್ಳು ಮಾಡುವಂತಿದೆ. ಫಾರ್ಮ್‌ ಕಳೆದುಕೊಂಡಿರುವ ವಿರಾಟ್‌ ಮರಳಿ ಫಾರ್ಮ್‌ಗೆ ಬರಲು ಹರಸಾಹಸಪಡುತ್ತಿದ್ದಾರೆ. ಕಳೆದ ನೂರು ಪಂದ್ಯಗಳಲ್ಲಿ ಕೊಹ್ಲಿ ಈವರೆಗೆ ಸೆಂಚುರಿ ಬಾರಿಸಲು ವಿಫಲರಾಗಿರುವುದು ಅಚ್ಚರಿ ಮೂಡಿಸಿದೆ.

ಏಪ್ರಿಲ್‌ 19ರಂದು ಲಖನೌ ವಿರುದ್ಧದ ಪಂದ್ಯದಲ್ಲಿ ವಿರಾಟ್‌ ಮೊದಲ ಬಾಲ್‌ಗೆ ವಿಕೆಟ್‌ ಅರ್ಪಿಸಿದರು.‌ ಸುಲಭವಾದ ಕ್ಯಾಚ್‌ ನೀಡಿ ಪೆವಿಲಿಯನ್‌ ತೆರಳಿದ್ದು ನೋಡುಗರಿಗೆ ವಿರಾಟ್‌ ಯಾಕೆ ಈ ರೀತಿಯ ಆಟವಾಡುತ್ತಿದ್ದಾರೆ? ಎಂಬ ಪ್ರಶ್ನೆ ಹುಟ್ಟಿಸಿದೆ. ಈ ಹಿಂದೆಯೂ ವಿರಾಟ್‌ ಔಟಾದ ರೀತಿಯನ್ನು ಗಮನಿಸಿ ಅಭಿಮಾನಿಗಳು ಮನನೊಂದಿದ್ದಾರೆ. ಈವರೆಗೆ ಬ್ಯಾಟಿಂಗ್‌ನಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ ವಿರಾಟ್‌ ಸಾಕಷ್ಟು ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದ್ದಾರೆ. ಆದರೆ, ವಿಷಾದದ ವಿಷಯವೆಂದರೆ ಕಳೆದ ನೂರು ಪಂದ್ಯಗಳಲ್ಲಿ ಒಂದೂ ಸೆಂಚುರಿ ಬಾರಿಸದೆ ಹೊಸ ದಾಖಲೆ ಬರೆದಿದ್ದಾರೆ.

ಮತ್ತೆ ಕಾಣದ ರಭಸದ ಆಟ

ಈವರೆಗೆ 17 ಟೆಸ್ಟ್‌, 21 ಏಕದಿನ ಪಂದ್ಯ, 25 ಟಿ20 ಹಾಗೂ 37 ಐಪಿಎಲ್‌ ಆಡಿದ ವಿರಾಟ್‌ ಒಂದೇ ಒಂದು ಪಂದ್ಯದಲ್ಲೂ ನೂರು ರನ್‌ ಮುಟ್ಟಲು ಆಗಿಲ್ಲ. ವಿರಾಟ್‌ ಈ ಹಿಂದೆ ಆಡಿದ ರಭಸದ ಆಟದ ಪ್ರಬಾವ, ಮಾಡಿದ ದಾಖಲೆ ಇನ್ನೂ ಯಾರೂ ಮುರಿದಲ್ಲ. ಆದರೆ, ವಿರಾಟ್‌ ಹೊಸ ದಾಖಲೆ ಬರೆಯಲು ಸಾಧ್ಯವಾಗುತ್ತಿಲ್ಲ.

ಐಪಿಎಲ್‌ನ ಈ ಆವೃತ್ತಿಯಲ್ಲಿ ವಿರಾಟ್‌ ಈವರೆಗೆ 7 ಪಂದ್ಯಗಳನ್ನಾಡಿ ಕೇವಲ 119 ರನ್‌ಗಳಿಸಿದ್ದಾರೆ. 48 ಗರಿಷ್ಠ ರನ್‌ ಹಾಗೂ 19.83 ಸರಾಸರಿ ಹೊಂದಿದ್ದಾರೆ. ಆದರೆ ಐಪಿಎಲ್‌ ಇತಿಒಹಾಸದಲ್ಲಿ ಅತಿ ಹೆಚ್ಚು ರನ್‌ಗಲಿಸಿರುವ ದಾಖಲೆ ವಿರಾಟ್‌ ಹೆಸರಿನಲ್ಲಿದೆ. 214 ಪಂದ್ಯಗಳಲ್ಲಿ 5 ಶತಕ, 42 ಅರ್ಧಶತಕ ಸಿಡಿಸಿದ ವಿರಾಟ್‌ ಒಟ್ಟು 6,402 ರನ್‌ಗಳಿಸಿದ್ದಾರೆ. ಅಲ್ಲದೆ, ಅಂತಾರಾಷ್ಟ್ರೀಯ ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲಿ ವಿರಾಟ್‌ ಏಳನೇಯವರು. ವಿರಾಟ್ ಮೂರೂ ಶ್ರೇಣಿಯ ಪಂದ್ಯದಲ್ಲಿ ಒಟ್ಟು 23,650 ರನ್‌ಗಳಿಸಿದ್ದಾರೆ. ಸಚಿನ್‌ ತೆಂಡೂಲ್ಕರ್‌ 34,357 ರನ್‌ಗಳಿಸಿ ಅಗ್ರಸ್ಥಾನದಲ್ಲದ್ದಾರೆ.

ವಿರಾಟ್‌ ಬ್ಯಾಟಿಂಗ್‌ನಲ್ಲಿ ಒದ್ದಾಡುತ್ತಿರುವ ರೀತಿ ಗಮನಿಸಿದಾಗ ಮುಂಬರಿಲುರವ ಆಸ್ಟ್ರೇಲಿಯಾ ಟೂರ್‌ ಹಾಗೂ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವ ಬಗ್ಗೆ ಅನುಮಾನ ಹುಟ್ಟಿಸಿದೆ. ಅವರು ಫಾರ್ಮ್‌ ಕಳೆದುಕೊಳ್ಳಲು ಏನು ಕಾರನವಿರಬಹುದು? ಯಾಕೆ ಅವರು ಫಾರ್ಮ್ಗಗರ ಮರಳಲು ಕಷ್ಟಪಡುತ್ತಿದ್ದಾರೆ? ವಿರಾಟ್‌ ಆತ್ಮವಿಶ್ವಾಸ ಕುಗ್ಗಿದೆಯೇ? ಎಂಬ ಪ್ರಶ್ನೆಗಳು ನೋಡುಗರಲ್ಲಿ ಹುಟ್ಟುತ್ತಿವೆ.

ಈವರೆಗೆ ವಿಶಿಷ್ಟ ದಾಖಲೆಗಳನ್ನು ಬರೆದ ವಿರಾಟ್‌ ಫಾರ್ಮ್‌ಗೆ ಮರಳಬೇಕು ಎಂದು ಅಭಿಮಾನಿಗಳ ಆಶಯ. ವಿರಾಟ್‌ ಅಗ್ರೆಸ್ಸಿವ್‌ ಬ್ಯಾಟಿಂಗ್‌, ಸಿಗ್ನೇಚರ್‌ ಕವರ್‌ ಡ್ರೈವ್‌ ಹಾಗೂ ಸೆಂಚುರಿ ಬಾರಿಸುವುದನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

ಹೆಚ್ಚಿನ ಓದಿಗಾಗಿ: ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಸ್ಥಾನಕ್ಕೆ ಜೋ ರೂಟ್ ಗುಡ್ ಬೈ..

Exit mobile version