ಅಹಮದಾಬಾದ್: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಐಪಿಎಲ್ 2023ರ ಫೈನಲ್ ಪಂಧ್ಯದ ಆರಂಭ ಭಾರಿ ಮಳೆಯಿಂದಾಗಿ ವಿಳಂಬವಾಗಿದೆ. ಶುಕ್ರವಾರ ನಡೆದ ಋತುವಿನ ಎರಡನೇ ಕ್ವಾಲಿಫೈಯರ್ ಪಂದ್ಯವೂ ಮಳೆಯಿಂದಾಗಿ ಅಡ್ಡಿಯಾಗಿತ್ತು. ಆದರೆ, ನಂತರದಲ್ಲಿ ಮಳೆ ನಿಂತು ಪಂದ್ಯ ಆರಂಭಗೊಂಡಿತ್ತು. ಪಂದ್ಯದಲ್ಲಿ ಗೆದ್ದ ಗುಜರಾತ್ ಫೈನಲ್ಗೆ ಪ್ರವೇಶ ಪಡೆದಿತ್ತು. ಫೈನಲ್ ಪಂದ್ಯವನ್ನು ವೀಕ್ಷಿಸಲು ಭಾನುವಾರ ಕ್ರಿಕೆಟ್ ಅಭಿಮಾನಿಗಳು ಸ್ಟೇಡಿಯಮ್ಗೆ ದೌಡಾಯಿಸಿದ್ದರು. ಆದರೆ, ಮಳೆ ಅವರ ಉತ್ಸಾಹವನ್ನು ಕುಗ್ಗಿಸಿತು. ಏತನ್ಮಧ್ಯೆ, ಸಿಎಸ್ಕೆ ಮತ್ತು ಗುಜರಾತ್ ನಡುವಿನ ಫೈನಲ್ ಪಂದ್ಯ ರದ್ದಾದರೆ ಏನಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸಿದೆ.
The rain has stopped at Narendra Modi Stadium. pic.twitter.com/PLCnU9DFu3
— Mufaddal Vohra (@mufaddal_vohra) May 28, 2023
ಹಿಂದಿನ ಐಪಿಎಲ್ ಋತುವಿನ ಆಟದ ಪರಿಸ್ಥಿತಿಗಳ ಆಧಾರದ ಮೇಲೆ ಪೂರ್ಣ ಪಂದ್ಯದ ಕಟ್ ಆಫ್ ಸಮಯ ರಾತ್ರಿ 9:35. ರಾತ್ರಿ 11:56ರ ಒಳಗೆ ಐದು ಓವರ್ಗಳ ಪಂದ್ಯ ನಡೆಸಲು ಅವಕಾಶವಿದೆ. ಪಂದ್ಯವು ಇನ್ನೂ ಪ್ರಾರಂಭವಾಗದಿದ್ದರೆ ಮೀಸಲು ದಿನಕ್ಕೆ ಹೋಗುತ್ತದೆ.
ಮೀಸಲು ದಿನವೂ ಮಳೆ ಬಂದರೆ ಸೂಪರ್ ಓವರ್ ನಡೆಸಲಾಗುತ್ತದೆ. ಸೂಪರ್ ಓವರ್ ನಡೆಸಲು ಔಟ್ಫೀಲ್ಡ್ ಹಾಘೂ ಪಿಚ್ ಭಾರತೀಯ ಕಾಲಮಾನ ರಾತ್ರಿ 1.20ರೊಳಗೆ ಸಿದ್ಧವಾಗಿರಬೇಕು. ಮೀಸಲು ದಿನವೂ ಮುಗಿದರೆ, 70 ಲೀಗ್ ಪಂದ್ಯಗಳ ನಂತರ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ಸ್ಥಾನ ಪಡೆದ ತಂಡವು ಟ್ರೋಫಿ ಗೆಲ್ಲಲಿದೆ. ಈ ಪಂದ್ಯದಲ್ಲಿ ಲೀಗ್ ಹಂತದಲ್ಲಿ ಗುಜರಾತ್ ಅಗ್ರ ಸ್ಥಾಣ ಪಡೆದುಕೊಂಡಿತ್ತು. ಹೀಗಾಗಿ ಈ ತಂಡ ಸಹಜವಾಗಿ ಚಾಂಪಿಯನ್ ಪಟ್ಟ ಅಲಂಕರಿಸಲಿದೆ.