ಮುಂಬಯಿ: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮೇ 21ರಂದು ನಡೆಯಲಿರುವ ಐಪಿಎಲ್ 16ನೇ ಆವೃತ್ತಿಯ 69 ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ಐದು ಬಾರಿಯ ಚಾಂಪಿಯನ್ ಮುಂಬಯಿ ಇಂಡಿಯನ್ಸ್ ತಂಡಗಳು ಪರಸ್ಪರ ಎದುರಾಗಲಿದೆ. ಈ ಪಂದ್ಯವು ಹಾಲಿ ಆವೃತ್ತಿಯ ಐಪಿಎಲ್ನಲ್ಲಿ ಪ್ಲೇಆಫ್ ಹಂತಕ್ಕೇರಲು ಮುಂಬಯಿ ಇಂಡಿಯನ್ಸ್ಗೆ ಕೊನೇ ಅವಕಾಶ. ಇಲ್ಲಿ ಗೆದ್ದರೆ ಮಾತ್ರ ಆರ್ಸಿಬಿ ಹಾಗೂ ಗುಜರಾತ್ ನಡುವಿನ ಪಂದ್ಯದ ತನಕ ಪ್ಲೇಆಫ್ ರೇಸ್ನಲ್ಲಿ ಉಳಿಯಬಹುದು. ಇಲ್ಲವಾದರೆ ಟೂರ್ನಿಯಲ್ಲಿ ಅಭಿಯಾನ ಮುಗಿಸಲಿದೆ. ಅತ್ತ ಎಸ್ಆರ್ಎಚ್ ತಂಡ ಕೊನೇ ಪಂದ್ಯದಲ್ಲಾದಗೂ ಗೆದ್ದು ಮರ್ಯಾದೆ ಉಳಿಸಿಕೊಳ್ಳುವ ಯತ್ನ ನಡೆಸಲಿದೆ.
ಹಿಂದಿನ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ 5 ರನ್ಗಳ ವಿರೋಚಿತ ಸೋಲು ಕಂಡಿರುವ ಮುಂಬಯಿ ಇದೀಗ ವಿಶ್ವಾಸದೊಂದಿಗೆ ಕಣಕ್ಕೆ ಇಳಿಯಲಿದೆ. 13 ಪಂದ್ಯಗಳಲ್ಲಿ 14 ಅಂಕಗಳನ್ನು ಗಳಿಸಿರುವ ಮುಂಬಯಿ ಮೈನಸ್ ನಕಾರಾತ್ಮಕ ನೆಟ್ ರನ್ರೇಟ್ ಕಾರಣಕ್ಕೆ ಪಾಯಿಂಟ್ಸ್ ಟೇಬಲ್ನಲ್ಲಿ ಆರನೇ ಸ್ಥಾನ ಪಡೆದುಕೊಂಡಿದೆ. ಹೀಗಾಗಿ ಈ ಪಂದ್ಯದ ಗೆಲುವು ಮಾತ್ರ ಪ್ಲೇಆಫ್ಗೇರಲು ಸಾಧ್ಯವಾಗುವುದಿಲ್ಲ. ಗುಜರಾತ್ ಹಾಗೂ ಆರ್ಸಿಬಿ ತಂಡದ ಫಲಿತಾಂಶವೂ ನಿರ್ಣಾಯಕ. ಆರ್ಸಿಬಿ ಗೆದ್ದರೆ ಮುಂಬಯಿಗೆ ಅವಕಾಶ ನಷ್ಟವಾಗಲಿದೆ.
ಮುಂಬಯಿ ಪರ ಸೂರ್ಯಕುಮಾರ್ ಯಾದವ್ 13 ಪಂದ್ಯಗಳಲ್ಲಿ 40.50 ಸರಾಸರಿಯಲ್ಲಿ 486 ರನ್ ಗಳಿಸಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ 13 ಪಂದ್ಯಗಳಲ್ಲಿ 32.69 ಸರಾಸರಿಯಲ್ಲಿ 425 ರನ್ ಗಳಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಪಿಯೂಷ್ ಚಾವ್ಲಾ 13 ಪಂದ್ಯಗಳಲ್ಲಿ 20 ವಿಕೆಟ್ ಪಡೆದರೆ, ಜೇಸನ್ ಬೆಹ್ರೆನ್ಡಾರ್ಫ್ 9 ಪಂದ್ಯಗಳಲ್ಲಿ 14 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಐಪಿಎಲ್ 2023 ರ ಲೀಗ್ ಹಂತವನ್ನು ದೊಡ್ಡ ಗೆಲುವಿನೊಂದಿಗೆ ಕೊನೆಗೊಳಿಸಲು ಮುಂಬೈ ಇಂಡಿಯನ್ಸ್ ಎದುರು ನೋಡುತ್ತಿದೆ.
ಎಸ್ಆರ್ಎಚ್ ಕಳಪೆ ಪ್ರದರ್ಶನ
ಸನ್ರೈಸರ್ಸ್ ಹೈದರಾಬಾದ್ ತನ್ನ ಹಿಂದಿನ ಪಂದ್ಯದಲ್ಲಿ ವಿರುದ್ಧ ಅವಮಾನಕರ ಸೋಲು ಅನುಭವಿಸಿದ್ದು, ಇದೀಗ ಲೀಗ್ ಹಂತದ ಕೊನೇ ಪಂದ್ಯದಲ್ಲಿ ಆಡುತ್ತಿದೆ. ವಿರಾಟ್ ಕೊಹ್ಲಿ ಅವರ ಮಾಸ್ಟರ್ ಕ್ಲಾಸ್ ಆಟದಿಂದಾಗಿ ಎಸ್ಆರ್ಎಚ್ ಸೋಲು ಕಂಡಿತ್ತು. ಹೀಗಾಗಿ ಆಡಿರುವ 13 ಪಂದ್ಯಗಳಲ್ಲಿ 8 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಹೀಗಾಗಿ ಈ ಪಂದ್ಯದಲ್ಲಿ ಎಸ್ಆರ್ಎಚ್ ತಂಡಕ್ಕೆ ಕಳೆದುಕೊಳ್ಳಲು ಏನೂ ಇಲ್ಲ. ಹೀಗಾಗಿ ಅಬ್ಬರದ ಆಟ ಪ್ರದರ್ಶನ ಮಾಡುವ ಸಾಧ್ಯತೆಗಳಿವೆ.
ಇದನ್ನೂ ಓದಿ : IPL 2023: ಅಂತಿಮ ಹಂತದಲ್ಲಿ ಐಪಿಎಲ್ಗೆ ಮಳೆ ಕಾಟ; ಪ್ಲೇ ಆಫ್ ರೇಸ್ನಲ್ಲಿರುವ ಆರ್ಸಿಬಿ,ಲಕ್ನೋಗೆ ಹಿನ್ನಡೆ ಸಾಧ್ಯತೆ
ಸನ್ರೈಸರ್ಸ್ ಹೈದರಾಬಾದ್ ಪರ, ಹೆನ್ರಿಚ್ ಕ್ಲಾಸೆನ್ 10 ಇನ್ನಿಂಗ್ಸ್ಗಳಲ್ಲಿ 53.75 ಸರಾಸರಿಯಲ್ಲಿ 430 ರನ್ ಗಳಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ 13 ಪಂದ್ಯಗಳಲ್ಲಿ 15 ವಿಕೆಟ್ ಪಡೆದರೆ, ಮಯಾಂಕ್ ಮಾರ್ಕಂಡೆ 12 ವಿಕೆಟ್ ಪಡೆದಿದ್ದಾರೆ. ಮುಂಬಯಿವಿರುದ್ಧ ಸೋತರೆ ಲೀಗ್ ಹಂತ ಒಂದಂಕಿ ಪಾಯಿಂಟ್ನೊಂದಿಗೆ ಮುಕ್ತಾಯಗೊಳ್ಳಿದೆ.
ವಾಂಖೆಡೆ ಸ್ಟೇಡಿಯಂ ಪಿಚ್ ವರದಿ
ವಾಂಖೆಡೆ ಸ್ಟೇಡಿಯಂನಲ್ಲಿ ಬ್ಯಾಟ್ಸ್ಮನ್ಗಳು ಪ್ರಾಬಲ್ಯ ಸಾಧಿಸುತ್ತಾರೆ. ಚೇಸಿಂಗ್ ಸುಲಭವಾಗಿರುವ ಕಾರಣ ಟಾಸ್ ಗೆದ್ದ ತಂಡವು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಳ್ಳುತ್ತದೆ. 190ಕ್ಕಿಂತ ಹೆಚ್ಚಿನ ಸ್ಕೋರ್ ಇಲ್ಲಿ ಉತ್ತಮ ಮೊತ್ತ ಎನಿಸಿಕೊಳ್ಳುತ್ತದೆ.
ಇತ್ತಂಡಗಳ ಮುಖಾಮುಖಿ
ಒಟ್ಟು ಪಂದ್ಯಗಳು- 20
ಮುಂಬಯಿ ಇಂಡಿಯನ್ಸ್ ಜಯ- 11
ಎಸ್ಆರ್ಎಚ್ ಜಯ- 09
ತಂಡಗಳು ಇಂತಿವೆ
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಸಂದೀಪ್ ವಾರಿಯರ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಡೀವಾಲ್ಡ್ ಬ್ರೆವಿಸ್, ತಿಲಕ್ ವರ್ಮಾ, ಟಿಮ್ ಡೇವಿಡ್, ಮೊಹಮ್ಮದ್ ಅರ್ಷದ್ ಖಾನ್, ರಮಣ್ದೀಪ್ ಸಿಂಗ್, ಹೃತಿಕ್ ಶೋಕೀನ್, ಅರ್ಜುನ್ ತೆಂಡೂಲ್ಕರ್, ಟ್ರಿಸ್ಟಾನ್ ಸ್ಟಬ್ಸ್, ಕುಮಾರ್ ಕಾರ್ತಿಕೇಯ, ಜೇಸನ್ ಬೆಹ್ರೆನ್ಡಾರ್ಫ್, ಆಕಾಶ್ ಮಧ್ವಾಲ್, ಕ್ಯಾಮರೂನ್ ಗ್ರೀನ್, ರಿಲೆ ಮೆರಿಡಿತ್, ಪಿಯೂಷ್ ಚಾವ್ಲಾ, ಡುವಾನ್ ಜಾನ್ಸೆನ್, ವಿಷ್ಣು ವಿನೋದ್, ಶಮ್ಸ್ ಮುಲಾನಿ, ನೇಹಲ್ ವಧೇರಾ, ರಾಘವ್ ಗೋಯಲ್.
ಸನ್ ರೈಸರ್ಸ್ ಹೈದರಾಬಾದ್: ಅಬ್ದುಲ್ ಸಮದ್, ಉಮ್ರಾನ್ ಮಲಿಕ್, ವಾಷಿಂಗ್ಟನ್ ಸುಂದರ್, ರಾಹುಲ್ ತ್ರಿಪಾಠಿ, ಅಭಿಷೇಕ್ ಶರ್ಮಾ, ಕಾರ್ತಿಕ್ ತ್ಯಾಗಿ, ಟಿ ನಟರಾಜನ್, ಭುವನೇಶ್ವರ್ ಕುಮಾರ್, ಐಡೆನ್ ಮಾರ್ಕ್ರಮ್, ಮಾರ್ಕೊ ಜಾನ್ಸೆನ್, ಗ್ಲೆನ್ ಫಿಲಿಪ್ಸ್, ಫಜಲ್ಹಾಕ್ ಫಾರೂಕಿ, ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ಹೆನ್ರಿಕ್ ಕ್ಲಾಸೆನ್, ಆದಿಲ್ ರಶೀದ್, ಮಯಾಂಕ್ ಮಾರ್ಕಂಡೆ, ವಿವ್ರಂತ್ ಶರ್ಮಾ, ಸಮರ್ಥ್ ವ್ಯಾಸ್, ಸನ್ವೀರ್ ಸಿಂಗ್, ಉಪೇಂದ್ರ ಸಿಂಗ್ ಯಾದವ್, ಮಯಾಂಕ್ ದಾಗರ್, ನಿತೀಶ್ ಕುಮಾರ್ ರೆಡ್ಡಿ.