Site icon Vistara News

R Ashwin : ಅಶ್ವಿನ್​​ಗೆ ಖಾಸಗಿ ವಿಮಾನ ವ್ಯವಸ್ಥೆ ಮಾಡಿದ್ದು ಜಯ್​ ಶಾ; ರವಿ ಶಾಸ್ತ್ರಿ

Jay Sha

ರಾಜ್​ಕೋಟ್​ : ಆರ್. ಅಶ್ವಿನ್ (R Ashwin) ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜ್​ಕೋಟ್​ ಟೆಸ್ಟ್​ನ 2ನೇ ದಿನದ ಕೊನೆಯಲ್ಲಿ ತವರಿಗೆ ಮರಳಿದ್ದರು. ಅಲ್ಲದೆ ನಾಲ್ಕನೇ ದಿನ ಮರಳಿದ್ದರು. ಈ ಬಗ್ಗೆ ಮಾತನಾಡಿದ ಭಾರತದ ಮಾಜಿ ಕ್ರಿಕೆಟಿಗ. ತಂಡದ ನಿರ್ದೇಶಕ ಮತ್ತು ಮುಖ್ಯ ಕೋಚ್ ರವಿ ಶಾಸ್ತ್ರಿ, ಬಿಸಿಸಿಐನ ಕಾರ್ಯದರ್ಶಿ ಜಯ್ ಶಾ ಅವರು ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಚಾರ್ಟರ್ಡ್ ವಿಮಾನವನ್ನು ವ್ಯವಸ್ಥೆ ಮಾಡಿದ್ದರು ಎಂದು ಹೇಳಿದ್ದಾರೆ.

3ನೇ ಟೆಸ್ಟ್ ಪಂದ್ಯದಿಂದ ರವಿಚಂದ್ರನ್ ಅಶ್ವಿನ್ ತಕ್ಷಣವೇ ರಜೆ ಕೇಳಿದ್ದಾರೆ ಎಂದು ಬಿಸಿಸಿಐ 3ನೇ ದಿನದಾಟದ ಮುನ್ನಾದಿನದಂದು ದೃಢಪಡಿಸಿತ್ತು. ಅಶ್ವಿನ್ ಅವರ ತಾಯಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಮತ್ತು ಅನುಭವಿ ಆಫ್-ಸ್ಪಿನ್ನರ್​ಗೆ ಆದಷ್ಟು ಬೇಗ ಬರಲು ಕೇಳಲಾಗಿದೆ ಎಂದು ರಾಜೀವ್ ಶುಕ್ಲಾ ನಂತರ ಬಹಿರಂಗಪಡಿಸಿದ್ದರು.

“ಕುಟುಂಬದ ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ರವಿಚಂದ್ರನ್ ಅಶ್ವಿನ್ ಟೆಸ್ಟ್ ತಂಡದಿಂದ ಹಿಂದೆ ಸರಿದಿದ್ದಾರೆ. ಈ ಸವಾಲಿನ ಸಮಯದಲ್ಲಿ, ಬಿಸಿಸಿಐ ಮತ್ತು ತಂಡವು ಅಶ್ವಿನ್ ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಚಾಂಪಿಯನ್ ಕ್ರಿಕೆಟಿಗ ಮತ್ತು ಅವರ ಕುಟುಂಬಕ್ಕೆ ಬಿಸಿಸಿಐ ಬೆಂಬಲವನ್ನು ನೀಡುತ್ತದೆ” ಎಂದು ಬಿಸಿಸಿಐ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು.

“ಆಟಗಾರರು ಮತ್ತು ಅವರ ಪ್ರೀತಿಪಾತ್ರರ ಆರೋಗ್ಯ ಮತ್ತು ಯೋಗಕ್ಷೇಮವು ಅತ್ಯಂತ ಮಹತ್ವದ್ದಾಗಿದೆ. ಈ ಸವಾಲಿನ ಸಮಯದಲ್ಲಿ ಅಶ್ವಿನ್ ಮತ್ತು ಅವರ ಕುಟುಂಬದ ಗೌಪ್ಯತೆಗೆ ಗೌರವ ನೀಡುವಂತೆ ಮಂಡಳಿಯು ವಿನಂತಿಸುತ್ತದೆ. ಮಂಡಳಿ ಮತ್ತು ತಂಡವು ಅಶ್ವಿನ್ಗೆ ಯಾವುದೇ ಅಗತ್ಯ ಸಹಾಯವನ್ನು ನೀಡುವುದನ್ನು ಮುಂದುವರಿಸುತ್ತದೆ ಮತ್ತು ಅಗತ್ಯಕ್ಕೆ ತಕ್ಕಂತೆ ಬೆಂಬಲವನ್ನು ನೀಡಲು ಸಂವಹನ ಮಾರ್ಗಗಳನ್ನು ಮುಕ್ತವಾಗಿರಿಸುತ್ತದೆ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : IND vs ENG: ಜೈಸ್ವಾಲ್​ ದ್ವಿಶತಕ, ಜಡೇಜಾ ಸ್ಪಿನ್​ ಜಾದು; ಭಾರತಕ್ಕೆ 434 ರನ್ ಭರ್ಜರಿ ಜಯ​

, ಟೆಸ್ಟ್ ಪಂದ್ಯದ 2 ನೇ ಇನ್ನಿಂಗ್ಸ್ನಲ್ಲಿ ಜಾಕ್ ಕ್ರಾವ್ಲಿ ಅವರ ವಿಕೆಟ್ ಪಡೆಯುವ ಮೂಲಕ ಅಶ್ವಿನ್ ಭಾರತಕ್ಕಾಗಿ ತಮ್ಮ 500ನೇ ಟೆಸ್ಟ್ ವಿಕೆಟ್ ಪಡೆದಿದ್ದರು. ಬಳಿಕ ಅವರು ಮನೆಗೆ ಹೋಗಬೇಕಾಯಿತು. ಜಯ್ ಶಾ ಅಶ್ವಿನ್​​ ಅನುಕೂಲಕ್ಕಾಗಿ ಚಾರ್ಟರ್ ವಿಮಾನದಲ್ಲಿ ಕಳುಹಿಸಿದ್ದರು. ವೀಕ್ಷಕವಿವರಣೆಯ ಸಮಯದಲ್ಲಿ ರವಿಶಾಸ್ತ್ರಿ ಹೇಳುವವರೆಗೂ ಈ ಮಾಹಿತಿ ತಿಳಿದಿರಲಿಲ್ಲ.

ಪಂದ್ಯದ ನಡುವೆ ಪತಿ ಎದುರಿಸಿದ ಕಷ್ಟಗಳನ್ನು ವಿವರಿಸಿದ ಆರ್​. ಅಶ್ವಿನ್ ಪತ್ನಿ

ರಾಜ್​ಕೋಟ್​​ : ಇಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ನೇ ಟೆಸ್ಟ್ ನಡುವೆ ಪತಿ ಆರ್​. ಅಶ್ವಿನ್ ಎದುರಿಸಿದ ಸಮಸ್ಯೆಗಳನ್ನು ಪೋಸ್ಟ್ ಅನ್ನು ರವಿಚಂದ್ರನ್ ಅಶ್ವಿನ್ ಅವರ ಪತ್ನಿ ಪ್ರೀತಿ ನಾರಾಯಣನ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. 500 ಮತ್ತು 501 ರ ನಡುವಿನ ವಿಕೆಟ್ ತಮ್ಮ ಜೀವನದ ಸುದೀರ್ಘ 48 ಗಂಟೆಗಳು ಎಂದು ನಾರಾಯಣನ್ ಹೇಳಿಕೊಂಡಿದ್ದಾರೆ. ಅಶ್ವಿನ್ ತಾಯಿ ಆಸ್ಪತ್ರೆಗೆ ದಾಖಲಾಗಬೇಕಾದ ಸಂದರ್ಭದಲ್ಲಿ

ಟೆಸ್ಟ್​ ಪಂದ್ಯದ 2 ನೇ ದಿನದ ನಂತರ ಅಶ್ವಿನ್ ತಮ್ಮ ಊರಿಗೆ ಮರಳಿದ್ದರು. ಆರಂಭದಲ್ಲಿ ವೈದ್ಯಕೀಯ ತುರ್ತುಸ್ಥಿತಿ ಎಂದು ಕಾರಣಗಳನ್ನು ಉಲ್ಲೇಖಿಸಲಾಯಿತು. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ತಡರಾತ್ರಿ ತಮ್ಮ ಅಧಿಕೃತ ಹ್ಯಾಂಡಲ್​​ನಲ್ಲಿ ಹೇಳಿಕೆ ನೀಡಿ ಹಿರಿಯ ಕ್ರಿಕೆಟಿಗ ತಮ್ಮ ತಾಯಿ ಆಸ್ಪತ್ರೆಗೆ ದಾಖಲಾಗಿರುವುದರಿಂದ ತಂಡವನ್ನು ತೊರೆಯಬೇಕಾಯಿತು ಎಂದು ಹೇಳಿದ್ದಾರೆ. ಆದಾಗ್ಯೂ 37 ವರ್ಷದ ಆಟಗಾರ 4ನೇ ದಿನದಂದು ಮತ್ತೆ ತಂಡವನ್ನು ಸೇರಿಕೊಂಡರು. ಇದು ಭಾರತಕ್ಕೆ ಭಾರಿ ಗೆಲುವಿಗೆ ಸಹಾಯ ಮಾಡಿತು.

ನಾವು 500 ವಿಕೆಟ್​ಗಾಗಿ ಹೈದಾರಾಬಾದ್​ಗೆ ಹೋದೆವು. ಅಲ್ಲಿ ಆಗಲಿಲ್ಲ. ವೈಜಾಗ್ ನಲ್ಲೂ ಸಾಧನೆ ಮಾಡಲಿಲ್ಲ. ಆದ್ದರಿಂದ ನಾನು ಒಂದು ಟನ್ ಸಿಹಿತಿಂಡಿಗಳನ್ನು ಖರೀದಿಸಿ ಮನೆಯಲ್ಲಿ ಎಲ್ಲರಿಗೂ 499 ವಿಕೆಟ್​ ಆದಾಗಲೇ ನೀಡಿದ್ದೇನೆ. 500 ವಿಕೆಟ್​ ಬಂತು. ಆದರೆ ಸಂಭ್ರಮ ಸದ್ದಿಲ್ಲದೆ ಹೋಯಿತು. 500 ಮತ್ತು 501 ರ ನಡುವೆ ಬಹಳಷ್ಟು ಸಂಭವಿಸಿತು. ನಮ್ಮ ಜೀವನದ ಅತಿ ದೀರ್ಘ 48 ಗಂಟೆಗಳು ಎಂದು ಬರೆದುಕೊಂಡಿದ್ದಾರೆ.

Exit mobile version