R Ashwin : ಅಶ್ವಿನ್​​ಗೆ ಖಾಸಗಿ ವಿಮಾನ ವ್ಯವಸ್ಥೆ ಮಾಡಿದ್ದು ಜಯ್​ ಶಾ; ರವಿ ಶಾಸ್ತ್ರಿ - Vistara News

ಕ್ರೀಡೆ

R Ashwin : ಅಶ್ವಿನ್​​ಗೆ ಖಾಸಗಿ ವಿಮಾನ ವ್ಯವಸ್ಥೆ ಮಾಡಿದ್ದು ಜಯ್​ ಶಾ; ರವಿ ಶಾಸ್ತ್ರಿ

R Ashwin : ತಾಯಿಯ ತುರ್ತು ಅನಾರೋಗ್ಯದ ಹಿನ್ನೆಲೆಯಲ್ಲಿ ಆರ್​. ಅಶ್ವಿನ್ ಅವರು ಎರಡನೇ ದಿನದ ಆಟ ಮಗಿದ ಬಳಿಕ ತವರಿಗೆ ಮರಳಿದ್ದರು.

VISTARANEWS.COM


on

Jay Sha
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಜ್​ಕೋಟ್​ : ಆರ್. ಅಶ್ವಿನ್ (R Ashwin) ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜ್​ಕೋಟ್​ ಟೆಸ್ಟ್​ನ 2ನೇ ದಿನದ ಕೊನೆಯಲ್ಲಿ ತವರಿಗೆ ಮರಳಿದ್ದರು. ಅಲ್ಲದೆ ನಾಲ್ಕನೇ ದಿನ ಮರಳಿದ್ದರು. ಈ ಬಗ್ಗೆ ಮಾತನಾಡಿದ ಭಾರತದ ಮಾಜಿ ಕ್ರಿಕೆಟಿಗ. ತಂಡದ ನಿರ್ದೇಶಕ ಮತ್ತು ಮುಖ್ಯ ಕೋಚ್ ರವಿ ಶಾಸ್ತ್ರಿ, ಬಿಸಿಸಿಐನ ಕಾರ್ಯದರ್ಶಿ ಜಯ್ ಶಾ ಅವರು ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಚಾರ್ಟರ್ಡ್ ವಿಮಾನವನ್ನು ವ್ಯವಸ್ಥೆ ಮಾಡಿದ್ದರು ಎಂದು ಹೇಳಿದ್ದಾರೆ.

3ನೇ ಟೆಸ್ಟ್ ಪಂದ್ಯದಿಂದ ರವಿಚಂದ್ರನ್ ಅಶ್ವಿನ್ ತಕ್ಷಣವೇ ರಜೆ ಕೇಳಿದ್ದಾರೆ ಎಂದು ಬಿಸಿಸಿಐ 3ನೇ ದಿನದಾಟದ ಮುನ್ನಾದಿನದಂದು ದೃಢಪಡಿಸಿತ್ತು. ಅಶ್ವಿನ್ ಅವರ ತಾಯಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಮತ್ತು ಅನುಭವಿ ಆಫ್-ಸ್ಪಿನ್ನರ್​ಗೆ ಆದಷ್ಟು ಬೇಗ ಬರಲು ಕೇಳಲಾಗಿದೆ ಎಂದು ರಾಜೀವ್ ಶುಕ್ಲಾ ನಂತರ ಬಹಿರಂಗಪಡಿಸಿದ್ದರು.

“ಕುಟುಂಬದ ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ರವಿಚಂದ್ರನ್ ಅಶ್ವಿನ್ ಟೆಸ್ಟ್ ತಂಡದಿಂದ ಹಿಂದೆ ಸರಿದಿದ್ದಾರೆ. ಈ ಸವಾಲಿನ ಸಮಯದಲ್ಲಿ, ಬಿಸಿಸಿಐ ಮತ್ತು ತಂಡವು ಅಶ್ವಿನ್ ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಚಾಂಪಿಯನ್ ಕ್ರಿಕೆಟಿಗ ಮತ್ತು ಅವರ ಕುಟುಂಬಕ್ಕೆ ಬಿಸಿಸಿಐ ಬೆಂಬಲವನ್ನು ನೀಡುತ್ತದೆ” ಎಂದು ಬಿಸಿಸಿಐ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು.

“ಆಟಗಾರರು ಮತ್ತು ಅವರ ಪ್ರೀತಿಪಾತ್ರರ ಆರೋಗ್ಯ ಮತ್ತು ಯೋಗಕ್ಷೇಮವು ಅತ್ಯಂತ ಮಹತ್ವದ್ದಾಗಿದೆ. ಈ ಸವಾಲಿನ ಸಮಯದಲ್ಲಿ ಅಶ್ವಿನ್ ಮತ್ತು ಅವರ ಕುಟುಂಬದ ಗೌಪ್ಯತೆಗೆ ಗೌರವ ನೀಡುವಂತೆ ಮಂಡಳಿಯು ವಿನಂತಿಸುತ್ತದೆ. ಮಂಡಳಿ ಮತ್ತು ತಂಡವು ಅಶ್ವಿನ್ಗೆ ಯಾವುದೇ ಅಗತ್ಯ ಸಹಾಯವನ್ನು ನೀಡುವುದನ್ನು ಮುಂದುವರಿಸುತ್ತದೆ ಮತ್ತು ಅಗತ್ಯಕ್ಕೆ ತಕ್ಕಂತೆ ಬೆಂಬಲವನ್ನು ನೀಡಲು ಸಂವಹನ ಮಾರ್ಗಗಳನ್ನು ಮುಕ್ತವಾಗಿರಿಸುತ್ತದೆ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : IND vs ENG: ಜೈಸ್ವಾಲ್​ ದ್ವಿಶತಕ, ಜಡೇಜಾ ಸ್ಪಿನ್​ ಜಾದು; ಭಾರತಕ್ಕೆ 434 ರನ್ ಭರ್ಜರಿ ಜಯ​

, ಟೆಸ್ಟ್ ಪಂದ್ಯದ 2 ನೇ ಇನ್ನಿಂಗ್ಸ್ನಲ್ಲಿ ಜಾಕ್ ಕ್ರಾವ್ಲಿ ಅವರ ವಿಕೆಟ್ ಪಡೆಯುವ ಮೂಲಕ ಅಶ್ವಿನ್ ಭಾರತಕ್ಕಾಗಿ ತಮ್ಮ 500ನೇ ಟೆಸ್ಟ್ ವಿಕೆಟ್ ಪಡೆದಿದ್ದರು. ಬಳಿಕ ಅವರು ಮನೆಗೆ ಹೋಗಬೇಕಾಯಿತು. ಜಯ್ ಶಾ ಅಶ್ವಿನ್​​ ಅನುಕೂಲಕ್ಕಾಗಿ ಚಾರ್ಟರ್ ವಿಮಾನದಲ್ಲಿ ಕಳುಹಿಸಿದ್ದರು. ವೀಕ್ಷಕವಿವರಣೆಯ ಸಮಯದಲ್ಲಿ ರವಿಶಾಸ್ತ್ರಿ ಹೇಳುವವರೆಗೂ ಈ ಮಾಹಿತಿ ತಿಳಿದಿರಲಿಲ್ಲ.

ಪಂದ್ಯದ ನಡುವೆ ಪತಿ ಎದುರಿಸಿದ ಕಷ್ಟಗಳನ್ನು ವಿವರಿಸಿದ ಆರ್​. ಅಶ್ವಿನ್ ಪತ್ನಿ

ರಾಜ್​ಕೋಟ್​​ : ಇಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ನೇ ಟೆಸ್ಟ್ ನಡುವೆ ಪತಿ ಆರ್​. ಅಶ್ವಿನ್ ಎದುರಿಸಿದ ಸಮಸ್ಯೆಗಳನ್ನು ಪೋಸ್ಟ್ ಅನ್ನು ರವಿಚಂದ್ರನ್ ಅಶ್ವಿನ್ ಅವರ ಪತ್ನಿ ಪ್ರೀತಿ ನಾರಾಯಣನ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. 500 ಮತ್ತು 501 ರ ನಡುವಿನ ವಿಕೆಟ್ ತಮ್ಮ ಜೀವನದ ಸುದೀರ್ಘ 48 ಗಂಟೆಗಳು ಎಂದು ನಾರಾಯಣನ್ ಹೇಳಿಕೊಂಡಿದ್ದಾರೆ. ಅಶ್ವಿನ್ ತಾಯಿ ಆಸ್ಪತ್ರೆಗೆ ದಾಖಲಾಗಬೇಕಾದ ಸಂದರ್ಭದಲ್ಲಿ

ಟೆಸ್ಟ್​ ಪಂದ್ಯದ 2 ನೇ ದಿನದ ನಂತರ ಅಶ್ವಿನ್ ತಮ್ಮ ಊರಿಗೆ ಮರಳಿದ್ದರು. ಆರಂಭದಲ್ಲಿ ವೈದ್ಯಕೀಯ ತುರ್ತುಸ್ಥಿತಿ ಎಂದು ಕಾರಣಗಳನ್ನು ಉಲ್ಲೇಖಿಸಲಾಯಿತು. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ತಡರಾತ್ರಿ ತಮ್ಮ ಅಧಿಕೃತ ಹ್ಯಾಂಡಲ್​​ನಲ್ಲಿ ಹೇಳಿಕೆ ನೀಡಿ ಹಿರಿಯ ಕ್ರಿಕೆಟಿಗ ತಮ್ಮ ತಾಯಿ ಆಸ್ಪತ್ರೆಗೆ ದಾಖಲಾಗಿರುವುದರಿಂದ ತಂಡವನ್ನು ತೊರೆಯಬೇಕಾಯಿತು ಎಂದು ಹೇಳಿದ್ದಾರೆ. ಆದಾಗ್ಯೂ 37 ವರ್ಷದ ಆಟಗಾರ 4ನೇ ದಿನದಂದು ಮತ್ತೆ ತಂಡವನ್ನು ಸೇರಿಕೊಂಡರು. ಇದು ಭಾರತಕ್ಕೆ ಭಾರಿ ಗೆಲುವಿಗೆ ಸಹಾಯ ಮಾಡಿತು.

ನಾವು 500 ವಿಕೆಟ್​ಗಾಗಿ ಹೈದಾರಾಬಾದ್​ಗೆ ಹೋದೆವು. ಅಲ್ಲಿ ಆಗಲಿಲ್ಲ. ವೈಜಾಗ್ ನಲ್ಲೂ ಸಾಧನೆ ಮಾಡಲಿಲ್ಲ. ಆದ್ದರಿಂದ ನಾನು ಒಂದು ಟನ್ ಸಿಹಿತಿಂಡಿಗಳನ್ನು ಖರೀದಿಸಿ ಮನೆಯಲ್ಲಿ ಎಲ್ಲರಿಗೂ 499 ವಿಕೆಟ್​ ಆದಾಗಲೇ ನೀಡಿದ್ದೇನೆ. 500 ವಿಕೆಟ್​ ಬಂತು. ಆದರೆ ಸಂಭ್ರಮ ಸದ್ದಿಲ್ಲದೆ ಹೋಯಿತು. 500 ಮತ್ತು 501 ರ ನಡುವೆ ಬಹಳಷ್ಟು ಸಂಭವಿಸಿತು. ನಮ್ಮ ಜೀವನದ ಅತಿ ದೀರ್ಘ 48 ಗಂಟೆಗಳು ಎಂದು ಬರೆದುಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Team India’s T20 WC Jersey: ನೂತನ ಜೆರ್ಸಿಯಲ್ಲಿ ಕಂಗೊಳಿಸಿದ ರಿಷಭ್​ ಪಂತ್​; ಅಭಿಮಾನಿಗಳಿಂದಲೂ ಬೆಂಬಲ

Team India’s T20 WC Jersey: ಟೀಮ್​ ಇಂಡಿಯಾದ ಆಟಗಾರರು ನೂತನ ಜೆರ್ಸಿಯಲ್ಲಿ(Team India’s T20 WC Jersey) ಫೋಟೊ ಶೂಟ್​ ಮಾಡಿಸಿದ್ದಾರೆ. ಇದಕ್ಕೂ ಮುನ್ನ ಬಿಸಿಸಿಐ(BCCI) ಬಿಡುಗಡೆಗೊಳಿಸಿದ ವಿಶೇಷ ಪ್ರೋಮೋದಲ್ಲಿ ರಿಷಭ್​ ಪಂತ್(rishabh pant)​ ಕಣ್ಮನ ಸೆಳೆದಿದ್ದಾರೆ. ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಕೂಡ ನೂತನ ಜೆರ್ಸಿ ತೊಟ್ಟು ತಂಡ ಕಪ್​ ಗೆಲ್ಲಲಿ ಎಂದು ಹಾರೈಸಿದ್ದಾರೆ.

VISTARANEWS.COM


on

Team India's T20 WC Jersey
Koo

ನ್ಯೂಯಾರ್ಕ್​: ಬಹುನಿರೀಕ್ಷಿತ ಐಸಿಸಿ ಪುರುಷರ ಟಿ20 ವಿಶ್ವಕಪ್​ ಟೂರ್ನಿ(T20 World Cup 2024) ಆರಂಭಕ್ಕೆ ಇನ್ನು ಕೇವಲ 3 ದಿನ ಮಾತ್ರ ಬಾಕಿ ಉಳಿದಿವೆ. ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ 20 ತಂಡಗಳ ಆಟಗಾರರು ಕಪ್​ ಗೆಲ್ಲಲು ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಟೀಮ್​ ಇಂಡಿಯಾದ ಆಟಗಾರರು ನೂತನ ಜೆರ್ಸಿಯಲ್ಲಿ(Team India’s T20 WC Jersey) ಫೋಟೊ ಶೂಟ್​ ಮಾಡಿಸಿದ್ದಾರೆ. ಇದಕ್ಕೂ ಮುನ್ನ ಬಿಸಿಸಿಐ(BCCI) ಬಿಡುಗಡೆಗೊಳಿಸಿದ ವಿಶೇಷ ಪ್ರೋಮೋದಲ್ಲಿ ರಿಷಭ್​ ಪಂತ್(rishabh pant)​ ಕಣ್ಮನ ಸೆಳೆದಿದ್ದಾರೆ. ಈ ವಿಡಿಯೊಗೆ ಬಿಸಿಸಿಐ ‘ಸಿದ್ಧವಾಗಿದೆ. ಸಮರ್ಥ. ನಿರ್ಧರಿಸಲಾಗುತ್ತದೆ’ ಎಂದು ಬರೆದುಕೊಂಡಿದೆ.

‘ಪ್ರತಿಕೂಲತೆಯಿಂದ ವಿಜಯದವರೆಗೆ, ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ರಿಷಭ್​ ಪಂತ್ ಅವರ ಪ್ರಯಾಣವು ಸ್ಥಿತಿಸ್ಥಾಪಕತ್ವ ಮತ್ತು ದೃಢತೆಗೆ ಸಾಕ್ಷಿಯಾಗಿದೆ. ಪಂದ್ಯದ ದಿನಗಳಲ್ಲಿ ರಾತ್ರಿ 7.52 ಕ್ಕೆ ರಾಷ್ಟ್ರದ ಚೈತನ್ಯವನ್ನು ಬೆಳಗಿಸುವಾಗ ಅವರೊಂದಿಗೆ ನಾವೆಲ್ಲರೂ ಕೈ ಜೋಡಿಸೋಣ” ಎಂದು ಬಿಸಿಸಿಐ ಬರೆದುಕೊಂಡಿದೆ.

ರಿಷಭ್​ ಪಂತ್​ ಅವರು ವಿಶೇಷ ಪ್ರೋಮೋದಲ್ಲಿ ಕಾಣಿಸಲು ಕೂಡ ಒಂದು ಕಾರಣವಿದೆ. 2022ರ ಡಿಸೆಂಬರ್​ 30ರಂದು(rishabh pant accident date) ರಿಷಭ್​ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ(rishabh pant accident) ಹೊಡೆದಿತ್ತು. ಈ ಭೀಕರ ಅಪಘಾತದಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಆದರೆ, ಪಂತ್​ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು.

ರಿಷಭ್​ ಪಂತ್​ ಅವರ ಗಂಭೀರ ಗಾಯವನ್ನು ಕಂಡ ಅನೇಕರು ಪಂತ್​ ಕ್ರಿಕೆಟ್​ ಬಾಳ್ವೆ ಇನ್ನು ಮಂದೆ ಕಷ್ಟ, ಒಂದೊಮ್ಮೆ ಅವರು ಕ್ರಿಕೆಟ್​ಗೆ ಮರಳಬೇಕಾದರೂ ಹಲವು ವರ್ಷ ಬೇಕಾದಿತು ಹೀಗೆ ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಆದರೆ ಪಂತ್​ ತಮ್ಮ ನಂಬಿಕೆ ಮತ್ತು ಕ್ರಿಕೆಟ್​ಗೆ ಮರಳುವ ದೃಢ ಸಂಕಲ್ಪದಿಂದ ಕಠಿಣ ವ್ಯಾಯಾಮ ನಡೆಸಿ ಕೇವಲ 14 ತಿಂಗಳಲ್ಲಿ ಸಂಪೂರ್ಣ ಫಿಟ್​ ಆಗಿ ಕ್ರಿಕೆಟ್​ಗೆ ಮರಳಿದ್ದರು. ಇದೇ ಛಲ ವಿಶ್ವಕಪ್​ ಗೆಲ್ಲುವಲ್ಲಿಯೂ ತಂಡಕ್ಕೆ ಇರಬೇಕು ಎನ್ನುವ ಅರ್ಥದಲ್ಲಿ ಪಂತ್​ ಅವರನ್ನು ಬಿಸಿಸಿಐ ಈ ವಿಡೊಯೊದಲ್ಲಿ ತೋರಿಸಿದೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಟಾಪ್​ 5 ಬೌಲರ್​ಗಳು ಯಾರು?

ಭಾರತ ತನ್ನ ಮೊದಲ ಲೀಗ್​ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಭಾರತೀಯ ಕ್ರಿಕೆಟ್​ ಅಭಿಮಾನಿಗಳು ನೂತನ ಜೆರ್ಸಿ ತೊಟ್ಟು ತಂಡ ಕಪ್​ ಗೆಲ್ಲಲಿ ಎಂದು ಹಾರೈಸಿದ್ದಾರೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

Continue Reading

ಕ್ರೀಡೆ

Virat Kohli: ನ್ಯೂಯಾರ್ಕ್‌ನಲ್ಲಿ ಭಾರತ ತಂಡದ ಕಠಿಣ ಅಭ್ಯಾಸ; ಮುಂಬೈನಲ್ಲಿ ಪಾರ್ಟಿ ಮಾಡುತ್ತಾ ಎಂಜಾಯ್​ ಮಾಡುತ್ತಿರುವ ಕೊಹ್ಲಿ

Virat Kohli: ಕೊಹ್ಲಿ ಬಾಂಗ್ಲಾದೇಶ ವಿರುದ್ಧದ ಏಕೈಕ ಅಭ್ಯಾಸ ಪಂದ್ಯಕ್ಕೂ ಅಲಭ್ಯರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೊಹ್ಲಿ ಮೇ 30ಕ್ಕೆ ಚಾರ್ಟರ್​ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ ಎನ್ನಲಾಗಿದೆ. ನ್ಯೂಯಾರ್ಕ್(eam India in New York)​ ತಲುಪಿರುವ ಟೀಮ್​ ಇಂಡಿಯಾದ(Team India ) ಮೊದಲ ಬ್ಯಾಚ್​ ಅಭ್ಯಾಸ ಆರಂಭಿಸಿದೆ.

VISTARANEWS.COM


on

Virat Kohli
Koo

ಮುಂಬಯಿ: ಒಂದೆಡೆ ಟೀಮ್​ ಇಂಡಿಯಾದ ಆಟಗಾರರೆಲ್ಲ ಟಿ20 ವಿಶ್ವಕಪ್​ ಗೆಲ್ಲುವ ಪಣತೊಟ್ಟು ನ್ಯೂಯಾರ್ಕ್​ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಇತ್ತ ವಿರಾಟ್​ ಕೊಹ್ಲಿ(Virat Kohli) ಅವರು ಮುಂಬೈನಲ್ಲಿ ಸಖತ್​ ಪಾರ್ಟಿ ಮಾಡಿಕೊಂಡು ಎಂಜಾಯ್​ ಮಾಡುತ್ತಿದ್ದಾರೆ. ಕೊಹ್ಲಿಯ ಈ ನಡೆಯನ್ನು ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಖಂಡಿಸಿದ್ದಾರೆ.

ಕಳೆದ ಶನಿವಾರ ಭಾರತ ತಂಡದ ನಾಯಕ ರೋಹಿತ್​ ಶರ್ಮ, ಕೋಚ್​ ರಾಹುಲ್​ ದ್ರಾವಿಡ್​, ರಿಷಭ್​ ಪಂತ್​, ಕುಲ್​ದೀಪ್​ ಯಾದವ್​, ಜಸ್​ಪ್ರೀತ್​ ಬುಮ್ರಾ ಸೇರಿ ಬಹುತೇಕ ಆಟಗಾರರು ನ್ಯೂಯಾರ್ಕ್​ಗೆ ತೆರಳಿದ್ದರು. ಈ ವೇಳೆ ವಿರಾಟ್​ ಕೊಹ್ಲಿ ವೈಯಕ್ತಿಕ ಕಾರಣ ನೀಡಿ ಪ್ರಯಾಣಿಸಿರಲಿಲ್ಲ. ಇದೀಗ ಮುಂಬೈಯ ರೆಸ್ಟೋರೆಂಟ್​ನಲ್ಲಿ ಪತ್ನಿ ಅನುಷ್ಕಾ ಶರ್ಮಾ(Anushka Sharma) ಜತೆಗೆ ಮುಂಬೈನಲ್ಲಿ ಡಿನ್ನರ್ ಪಾರ್ಟಿ(Anushka Sharma And Virat Kohli’s Dinner) ನಡೆಸಿದ್ದಾರೆ.

ಈ ಪಾರ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಬೌಲರ್ ಜಹೀರ್ ಖಾನ್(Zaheer Khan) ಮತ್ತು ಅವರ ಪತ್ನಿ ಸಾಗರಿಕಾ ಘಾಟ್ಗೆ(Sagarika Ghatge), ಜನಪ್ರಿಯ ದೂರದರ್ಶನ ಕಾಮೆಂಟೇಟರ್ ಗೌರವ್ ಕಪೂರ್(Gaurav Kapur) ಕೂಡ ಭಾಗಿಯಾಗಿದ್ದರು. ಈ ವಿಡಿಯೊ ಕಂಡ ನೆಟ್ಟಿಗರು ಕೊಹ್ಲಿಗೆ ಈಗ ತಂಡಕ್ಕಿಂತ ಕೇವಲ ಪಾರ್ಟಿ ಮಾಡಿ ಕಾಲ ಕಳೆಯುವುದು ಖಷಿ ನೀಡುತ್ತಿದೆ. ಈತ ಕೇವಲ ತನ್ನ ವೈಯಕ್ತಿಕ ದಾಖಲೆಗಾಗಿ ಮಾತ್ರ ಆಡುತ್ತಾನೆ ಎಂದು ಕಮೆಂಟ್​ ಮಾಡಿದ್ದಾರೆ.

ಕೊಹ್ಲಿ ಬಾಂಗ್ಲಾದೇಶ ವಿರುದ್ಧದ ಏಕೈಕ ಅಭ್ಯಾಸ ಪಂದ್ಯಕ್ಕೂ ಅಲಭ್ಯರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೊಹ್ಲಿ ಮೇ 30ಕ್ಕೆ ಚಾರ್ಟರ್​ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ ಎನ್ನಲಾಗಿದೆ. ನ್ಯೂಯಾರ್ಕ್(eam India in New York)​ ತಲುಪಿರುವ ಟೀಮ್​ ಇಂಡಿಯಾದ(Team India ) ಮೊದಲ ಬ್ಯಾಚ್​ ಅಭ್ಯಾಸ ಆರಂಭಿಸಿದೆ. ಎಲ್ಲ ಆಟಗಾರರು ಇಂದು ರನ್ನಿಂಗ್​ ಮತ್ತು ಫುಟ್ಬಾಲ್​ ಆಡುವ ಮೂಲಕ ವ್ಯಾಯಾಮ ನಡೆಸಿದ್ದಾರೆ. ಗುರುವಾರದಿಂದ ಬ್ಯಾಟಿಂಗ್​ ಮತ್ತು ಬೌಲಿಂಗ್​ ಅಭ್ಯಾಸ ಆರಂಭಿಸಲಿದ್ದಾರೆ. ಟೀಮ್​ ಇಂಡಿಯಾದ ದ್ವಿತೀಯ ಬ್ಯಾಚ್​ ಇಂದು ನ್ಯೂಯಾರ್ಕ್​ಗೆ ತಲುಪಲಿದೆ.

ಇದನ್ನೂ ಓದಿ Virat Kohli: ಐಪಿಎಲ್​ 2024ರ ಸಾಧನೆ ಕುರಿತು ಹೇಳಿಕೆ ನೀಡಿದ ವಿರಾಟ್ ಕೊಹ್ಲಿ

ಭಾರತ ಜೂನ್​ 1 ರಂದು ಬಾಂಗ್ಲಾದೇಶ ವಿರುದ್ಧ ಏಕೈಕ ಅಭ್ಯಾಸ ಪಂದ್ಯವನ್ನು ಆಡಲಿದೆ. ಇದಾದ ಬಳಿಕ ತನ್ನ ಮೊದಲ ಲೀಗ್​ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ಮತ್ತು ಭಾರತ ನಡುವಣ ಪಂದ್ಯ ಜೂನ್​ 9ರಂದು ನಡೆಯಲಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

Continue Reading

ಕ್ರೀಡೆ

Viral Run Out Video: 11 ಆಟಗಾರರಿಂದ ರನೌಟ್​ ಪ್ರಯತ್ನ; ಕೊನೆಗೂ ನಾಟೌಟ್​ ಆದ ಬ್ಯಾಟರ್​

Viral Run Out Video: ರನೌಟ್​ ಪ್ರಯತ್ನದ ವಿಡಿಯೊವನ್ನು ಅಂಪೈರ್​ ರಿಚರ್ಡ್‌ ಕೆಟಲ್‌ಬರೋ ತಮ್ಮ ಟ್ವಿಟರ್ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡು ‘ಕ್ರಿಕೆಟ್‌ನಲ್ಲಿ ಬಿಲಿಯನ್ ಕ್ಷಣವನ್ನು ನೋಡಿದ್ದೇನೆ. ಆದರೆ ಈ ರೀತಿಯ ರೋಚಕ ಕ್ಷಣವನ್ನು ನೋಡಿದ್ದು ಇದೇ ಮೊದಲು’ ಎಂದು ಬರೆದುಕೊಂಡಿದ್ದಾರೆ.

VISTARANEWS.COM


on

Viral Run Out Video
Koo

ಮುಂಬಯಿ: ಸಾಮಾಜಿಕ ಜಾಲತಾಣದಲ್ಲಿ ಹಲವು ವೈರಲ್​ ವಿಡಿಯೋಗಳು(Viral Video) ಹರಿದಾಡುತ್ತಿರುತ್ತವೆ. ಆದರೆ ಅವುಗಳಲ್ಲಿ ಕೆಲವೊಂದು ವಿಡಿಯೋಗಳು ವಿಶೇಷ ಕಾರಣದಿಂದಾಗಿ ಜನರ ಗಮನ ಸೆಳೆದುಬಿಡುತ್ತದೆ. ಇದೀಗ ಇತಂಹದ್ದೇ ವಿಡಿಯೊವೊಂದು ಕ್ರಿಕೆಟ್​ ಅಭಿಮಾನಿಗಳ ಮನಗೆದ್ದಿದೆ. ಮಕ್ಕಳ ಕ್ರಿಕೆಟ್​ ಟೂರ್ನಿಯಲ್ಲಿ ರನೌಟ್​ ಮಾಡು ಹರಸಾಹಸಪಟ್ಟ ವಿಡಿಯೊವೊಂದು ವೈರಲ್(Viral Run Out Video)​ ಆಗಿದೆ.

ಮೈದಾನದಲ್ಲಿ ಶಾಲಾ ವಿದ್ಯಾರ್ಥಿಗಳು ಕ್ರಿಕೆಟ್ ಟೂರ್ನಿಯೊಂದ ಪಂದ್ಯವನ್ನು ಆಡುತ್ತಿದ್ದರು. ಈ ಸಂದರ್ಭದಲ್ಲಿ ಸ್ಟ್ರೈಕರ್​ನಲ್ಲಿದ್ದ ಬ್ಯಾಟರ್​ ಚೆಂಡನ್ನು ಹೊಡೆದು ರನ್​ ಗಳಿಸಲು ನಾನ್​ಸ್ಟ್ರೈಕ್​ಗೆ ಓಡಿದ್ದಾನೆ. ಚೆಂಡು ಫೀಲ್ಡರ್​ ಕೈ ಸೇರಿದ ಕಾರಣ ನಾನ್​ಸ್ಟ್ರೈಕ್​ಕರ್​ನಲ್ಲಿದ್ದ ಬ್ಯಾಟರ್​ ಓಡಲು ನಿರಾಕರಿಸಿ ನಾನ್​ಸ್ಟ್ರೈಕ್​ನಲ್ಲಿಯೇ ನಿಲ್ಲುತ್ತಾನೆ. ಸುಲಭವಾಗಿ ರನೌಟ್​ ಅವಕಾಶ ಸಿಕ್ಕರೂ ಕೂಡ ಫೀಲ್ಡರ್​ ಗಡಿಬಿಡಿಯಲ್ಲಿ ಚೆಂಡನ್ನು ಕೀಪರ್​ ಕೈಗೆ ಎಸೆಯದೆ ನಾನ್​ಸ್ಟ್ರೈಕ್​ನತ್ತ ಬಿಸಾಡುತ್ತಾನೆ. ಚೆಂಡು ವಿಕೆಟ್​ಕೆ ಬಡಿಯದೆ ಮತ್ತೊಂದು ಫೀಲ್ಡರ್​ ಕೈ ಸೇರಿತು. ಆತ ಕೀಪರ್​ ಕಡೆ ಚೆಂಡನ್ನು ಎಸೆದ ವೇಳೆ ಪಿಚ್​ ಬದಿಯಲ್ಲಿ ನಿಂತಿದ್ದ ಫೀಲ್ಡರ್​ ಒಬ್ಬ ಚೆಂಡು ಕ್ಯಾಚ್​ ಹಿಡಿದು ವಿಕೆಟ್​ಕೆ ಎಸೆತುತ್ತಾನೆ. ಇಲ್ಲಿಯೂ ಗುರಿ ತಪ್ಪುತ್ತದೆ. ನಾನ್​ಸ್ಟ್ರೈಕ್​ನಲ್ಲಿದ್ದ ಬ್ಯಾಟರ್​ಗಳು ತಮ್ಮ ಪಾಡಿಗೆ ತಾವು ಚರ್ಚೆಯಲ್ಲಿ ಮಗ್ನರಾಗಿರುತ್ತಾರೆ. ಕೀಪರ್​ ಕೂಡ ರನೌಟ್​ ಮಾಡಲು ಎಡವುತ್ತಾನೆ. ಎದುರಾಳಿಗಳ ಪರದಾಟ ಕಂಡ ಬ್ಯಾಟರ್​ ತಕ್ಷಣ ಸ್ಟ್ರೈಕ್​ಗೆ ಓಡಿ ರನೌಟ್​ ಅಪಾಯದಿಂದ ಪಾರಾಗಿದ್ದಾನೆ.

ಈ ಹಾಸ್ಯಮಯ ರನೌಟ್​ ಪ್ರಯತ್ನದ ವಿಡಿಯೊವನ್ನು ಅಂಪೈರ್​ ರಿಚರ್ಡ್‌ ಕೆಟಲ್‌ಬರೋ ತಮ್ಮ ಟ್ವಿಟರ್ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡು ‘ಕ್ರಿಕೆಟ್‌ನಲ್ಲಿ ಬಿಲಿಯನ್ ಕ್ಷಣವನ್ನು ನೋಡಿದ್ದೇನೆ. ಆದರೆ ಈ ರೀತಿಯ ರೋಚಕ ಕ್ಷಣವನ್ನು ನೋಡಿದ್ದು ಇದೇ ಮೊದಲು’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ T20 World Cup : ಭಾರತ- ಪಾಕ್ ಪಂದ್ಯ ಐಸಿಸ್​ ಉಗ್ರರಿಂದ ಬಾಂಬ್ ಬೆದರಿಕೆ

ಐಸಿಸಿ ಕೂಟಗಳಲ್ಲಿ ಅಂಪೈರ್​ ರಿಚರ್ಡ್‌ ಕೆಟಲ್‌ಬರೋ ಟೀಮ್ ಇಂಡಿಯಾ ಪಾಲಿಗೆ ಐರನ್ ಲೆಗ್ ಎನಿಸಿಕೊಂಡಿದ್ದಾರೆ. ರಿಚರ್ಡ್‌ ಕೆಟಲ್‌ಬರೋ ಕಾರ್ಯನಿರ್ವಹಿಸಿದ ಎಲ್ಲ ಮಹತ್ವದ ಪಂದ್ಯದಲ್ಲಿಯೂ ಭಾರತ ತಂಡ ಸೋಲುಕಂಡಿದೆ.

2014 ರಿಂದ ರಿಚರ್ಡ್‌ ಕೆಟಲ್‌ಬರೋ ಅಂಪೈರಿಂಗ್‌ ಮಾಡಿದ ಎಲ್ಲ ಪ್ರಮುಖ ಪಂದ್ಯಗಳಲ್ಲಿಯೂ ಟೀಮ್‌ ಇಂಡಿಯಾ ಸೋಲು ಕಂಡಿದೆ. 2014ರ ಟಿ20 ವಿಶ್ವ ಕಪ್ ಫೈನಲ್, 2015ರ ಏಕದಿನ ವಿಶ್ವ ಕಪ್ ಸೆಮಿಫೈನಲ್, 2016ರ ಟಿ20 ವಿಶ್ವ ಕಪ್ ಸೆಮಿಫೈನಲ್, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್, 2019ರ ಏಕದಿನ ವಿಶ್ವ ಕಪ್ ಸೆಮಿಫೈನಲ್, 2021ರ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್, 2023ರ ಏಕದಿನ ವಿಶ್ವಕಪ್ ಫೈನಲ್​​ ಪಂದ್ಯದಲ್ಲಿ ಭಾರತ ಸೋತಿತ್ತು. ಹೀಗಾಗಿ ಭಾರತ ತಂಡ ಆಡುವ ಪ್ರಮುಖ ಪಂದ್ಯಗಳಲ್ಲಿ ರಿಚರ್ಡ್‌ ಕೆಟಲ್‌ಬರೋ ಅಂಪೈರ್ ಆದರೆ ಭಾರತ ಸೋಲುವುದು ಖಚಿತ ಎಂಬ ಅಭಿಪ್ರಾಯ ಅಭಿಮಾನಿಗಳದ್ದಾಗಿದೆ.

Continue Reading

ಕ್ರೀಡೆ

Hardik Pandya: ಕೌಟುಂಬಿಕ ಸಮಸ್ಯೆ ಬದಿಗೊತ್ತಿ ಭಾರತ ತಂಡದ ಯಶಸ್ಸಿಗಾಗಿ ಕ್ರಿಕೆಟ್​ ಅಭ್ಯಾಸ ಆರಂಭಿಸಿದ ಹಾರ್ದಿಕ್​ ಪಾಂಡ್ಯ

Hardik Pandya: ಹಾರ್ದಿಕ್ ಪಾಂಡ್ಯ(Hardik Pandya) ಅವರು ಪತ್ನಿ, ಸರ್ಬಿಯಾದ ನಟಿ ನತಾಶಾ ಸ್ಟಾನ್‌ಕೋವಿಕ್‌(Natasa Stankovic) ಅವರಿಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಮಾತುಗಳು ಕೆಲದಿನಗಳಿಂದ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜತೆಗೆ ವಿಚ್ಛೇದನ(Hardik Pandya and Natasa Stankovic divorce) ಪ್ರಕ್ರಿಯೆಯ ಭಾಗವಾಗಿ, ಹಾರ್ದಿಕ್ ಪಾಂಡ್ಯ ಅವರು ತಮ್ಮ ಆಸ್ತಿಯಲ್ಲಿ ಶೇ. 70 ರಷ್ಟು ಭಾಗವನ್ನು ನತಾಶಾಗೆ ವರ್ಗಾಯಿಸಬೇಕಿದೆ ಎನ್ನಲಾಗಿದೆ.

VISTARANEWS.COM


on

Hardik Pandya
Koo

ನ್ಯೂಯಾರ್ಕ್​: ಟಿ20 ವಿಶ್ವಕಪ್(T20 world cup 2024)​ ಟೂರ್ನಿಗಾಗಿ ಈಗಾಗಲೇ ನ್ಯೂಯಾರ್ಕ್(eam India in New York)​ ತಲುಪಿರುವ ಟೀಮ್​ ಇಂಡಿಯಾದ(Team India ) ಮೊದಲ ಬ್ಯಾಚ್​ ಅಭ್ಯಾಸ ಆರಂಭಿಸಿದೆ. ಆಟಗಾರರು ಅಭ್ಯಾಸ ನಿರತ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ. ಕೌಟುಂಬಿಕ ಸಮಸ್ಯೆಯನ್ನು ಬದಿಗೊತ್ತಿ ಹಾರ್ದಿಕ್​ ಪಾಂಡ್ಯ(Hardik Pandya) ಕೂಡ ತಂಡದ ಯಶಸ್ಸಿಗಾಗಿ ಟಿ20 ಆಡಲು ಸಜ್ಜಾಗಿದ್ದಾರೆ. ಲಂಡನ್​ನಿಂದ ನೇರವಾಗಿ ನ್ಯೂಯಾರ್ಕ್​ಗೆ ಬಂದಿಳಿದ ಪಾಂಡ್ಯ ಟೀಮ್​ ಇಂಡಿಯಾ ಜತೆ ಅಭ್ಯಾಸ ನಡೆಸಿದ್ದಾರೆ.

ಟೀಮ್​ ಇಂಡಿಯಾದ ದ್ವಿತೀಯ ಬ್ಯಾಚ್​ ಇಂದು ನ್ಯೂಯಾರ್ಕ್​ಗೆ ತಲುಪಲಿದೆ. ಗುರುವಾರದಿಂದ ಈ ಆಟಗಾರರು ಕೂಡ ಅಭ್ಯಾಸ ಆರಂಭಿಸಲಿದ್ದಾರೆ. ವಿರಾಟ್​ ಕೊಹ್ಲಿ ಮತ್ತು ಸಂಜು ಸ್ಯಾಮ್ಸನ್​ ತಮ್ಮ ವೈಯಕ್ತಿಕ ಕಾರಣಗಳಿಂದ ತಂಡ ಸೇರುವುದು ಕೊಂಚ ತಡವಾಗಲಿದೆ ಎಂದು ಬಿಸಿಸಿಐ ಈಗಾಗಲೇ ತಿಳಿಸಿದೆ. ಕೊಹ್ಲಿ ಬಾಂಗ್ಲಾದೇಶ ವಿರುದ್ಧದ ಏಕೈಕ ಅಭ್ಯಾಸ ಪಂದ್ಯಕ್ಕೂ ಅಲಭ್ಯರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೊಹ್ಲಿ ಮೇ 30ಕ್ಕೆ ಚಾರ್ಟರ್​ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ ಎನ್ನಲಾಗಿದೆ.

ಹಾರ್ದಿಕ್ ಪಾಂಡ್ಯ(Hardik Pandya) ಅವರು ಪತ್ನಿ, ಸರ್ಬಿಯಾದ ನಟಿ ನತಾಶಾ ಸ್ಟಾನ್‌ಕೋವಿಕ್‌(Natasa Stankovic) ಅವರಿಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಮಾತುಗಳು ಕೆಲದಿನಗಳಿಂದ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜತೆಗೆ ವಿಚ್ಛೇದನ(Hardik Pandya and Natasa Stankovic divorce) ಪ್ರಕ್ರಿಯೆಯ ಭಾಗವಾಗಿ, ಹಾರ್ದಿಕ್ ಪಾಂಡ್ಯ ಅವರು ತಮ್ಮ ಆಸ್ತಿಯಲ್ಲಿ ಶೇ. 70 ರಷ್ಟು ಭಾಗವನ್ನು ನತಾಶಾಗೆ ವರ್ಗಾಯಿಸಬೇಕಿದೆ ಎನ್ನಲಾಗಿದೆ. ಈ ಎಲ್ಲ ಮಾತುಗಳ ಮಧ್ಯೆಯೂ ಪಾಂಡ್ಯ ದೇಶದ ಕರ್ತವ್ಯಕ್ಕೆ ಹಾಜರಾಗಿದ್ದು ಟಿ20 ವಿಶ್ವಕಪ್​ಗೆ ಅಭ್ಯಾಸ ಆರಂಭಿಸಿದ್ದಾರೆ. ಇದಕ್ಕೆ ಅನೇಕ ನೆಟ್ಟಿಗರು ಪಾಂಡ್ಯಗೆ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ T20 World Cup : ಭಾರತ- ಪಾಕ್ ಪಂದ್ಯ ಐಸಿಸ್​ ಉಗ್ರರಿಂದ ಬಾಂಬ್ ಬೆದರಿಕೆ

ಭಾರತ ತನ್ನ ಮೊದಲ ಲೀಗ್​ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

ಭಾರತದ ಪಂದ್ಯಗಳು

ದಿನಾಂಕಎದುರಾಳಿಸ್ಥಳ
ಜೂನ್​ 5ಐರ್ಲೆಂಡ್​ನ್ಯೂಯಾರ್ಕ್​
ಜೂನ್​ 9ಪಾಕಿಸ್ತಾನನ್ಯೂಯಾರ್ಕ್​
ಜೂನ್​ 12ಅಮೆರಿಕನ್ಯೂಯಾರ್ಕ್
ಜೂನ್​ 15ಕೆನಡಾಫ್ಲೋರಿಡಾ


Continue Reading
Advertisement
Karnataka Weather
ಮಳೆ12 mins ago

Karnataka Weather: ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಇಂದು ಸಂಜೆ ಭಾರಿ ಮಳೆ ಸಾಧ್ಯತೆ!

Viral News
ವೈರಲ್ ನ್ಯೂಸ್28 mins ago

Viral News: 10 ಅಡಿಯ ದೈತ್ಯ ಮೊಸಳೆಯಿಂದ ಕಬ್ಬಿಣದ ಗೇಟು ಹಾರಲು ಯತ್ನ; ಮೈ ಜುಮ್ಮೆನ್ನಿಸುವ ವಿಡಿಯೊ ಇಲ್ಲಿದೆ

Rashmika Mandanna shares why she doesn’t speak English
ಸಿನಿಮಾ32 mins ago

Rashmika Mandanna: ಸಮಾರಂಭಗಳಲ್ಲಿ ರಶ್ಮಿಕಾ ಇಂಗ್ಲೀಷ್‌ ಏಕೆ ಮಾತನಾಡಲ್ಲ? ನಟಿ ಕೊಟ್ಟ ಸ್ಪಷ್ಟನೆ ಏನು?

Bhavani Revanna
ಕರ್ನಾಟಕ38 mins ago

Bhavani Revanna: ಭವಾನಿ ರೇವಣ್ಣ ‘ಜಾಮೀನು’ ತೀರ್ಪು ಕಾಯ್ದಿರಿಸಿದ ಕೋರ್ಟ್;‌ ಮೇ 31 ಅಮ್ಮ-ಮಗನಿಗೆ ಬಿಗ್‌ ಡೇ!

Team India's T20 WC Jersey
ಕ್ರೀಡೆ39 mins ago

Team India’s T20 WC Jersey: ನೂತನ ಜೆರ್ಸಿಯಲ್ಲಿ ಕಂಗೊಳಿಸಿದ ರಿಷಭ್​ ಪಂತ್​; ಅಭಿಮಾನಿಗಳಿಂದಲೂ ಬೆಂಬಲ

Missing Case
ಕರ್ನಾಟಕ53 mins ago

Missing Case: ಚಿಕ್ಕಬಳ್ಳಾಪುರದಲ್ಲಿ ಯುವತಿಯರ ನಾಪತ್ತೆ ಕೇಸ್‌ಗಳು ಹೆಚ್ಚಳ; ಒಂದೇ ವಾರದಲ್ಲಿ ಇಬ್ಬರು ಮಿಸ್ಸಿಂಗ್‌!

Prajwal Revanna Case
ಕರ್ನಾಟಕ1 hour ago

Prajwal Revanna Case: ಭಾರತಕ್ಕೆ ಬರುವ ಮೊದಲೇ ಜಾಮೀನಿಗಾಗಿ ಪ್ರಜ್ವಲ್‌ ಅರ್ಜಿ ಸಲ್ಲಿಕೆ; ಮುಂದೇನಾಗತ್ತೆ?

Virat Kohli
ಕ್ರೀಡೆ1 hour ago

Virat Kohli: ನ್ಯೂಯಾರ್ಕ್‌ನಲ್ಲಿ ಭಾರತ ತಂಡದ ಕಠಿಣ ಅಭ್ಯಾಸ; ಮುಂಬೈನಲ್ಲಿ ಪಾರ್ಟಿ ಮಾಡುತ್ತಾ ಎಂಜಾಯ್​ ಮಾಡುತ್ತಿರುವ ಕೊಹ್ಲಿ

PM Narendra Modi
ದೇಶ2 hours ago

PM Narendra Modi: ಒಡಿಶಾ ಸಿಎಂ ಆರೋಗ್ಯ ಹದಗೆಟ್ಟಿರುವ ಹಿಂದೆ ಇದ್ಯಾ ಭಾರೀ ಸಂಚು? ಏನಂದ್ರು ಪ್ರಧಾನಿ ಮೋದಿ?-ವಿಡಿಯೋ ಇದೆ

Arvind Kejriwal
ದೇಶ2 hours ago

Arvind Kejriwal: ಕಾಂಗ್ರೆಸ್‌ ಜತೆ ನಮ್ಮ ‘ಮದುವೆ’ ಶಾಶ್ವತ ಅಲ್ಲ ಎಂದ ಕೇಜ್ರಿವಾಲ್;‌ ‘ಡಿವೋರ್ಸ್‌’ ಯಾವಾಗ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ22 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 day ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌