Site icon Vistara News

Jay Shah: ಕೊಹ್ಲಿಯನ್ನೇ ದಿಟ್ಟಿಸಿ ನೋಡುತ್ತಾ ನಿಂತ ಜಯ್​ ಶಾ; ವಿಡಿಯೊ ವೈರಲ್​

Jay Shah

Jay Shah:bcci secretary Jay Shah's reaction after meeting Virat Kohli at Wankhede grabs attention

ಮುಂಬಯಿ: ಟಿ20 ವಿಶ್ವಕಪ್(T20 World Cup) ಗೆದ್ದು ತವರಿಗೆ ಮರಳಿದ ಟೀಮ್ ಇಂಡಿಯಾ(Team India) ಆಟಗಾರರಿಗೆ ನಿನ್ನೆ)ಗುರುವಾರ) ಮುಂಬೈಯಲ್ಲಿ ಭರ್ಜರಿ ಸ್ವಾಗತ ಕೋರಲಾಯಿತು. ಮುಂಬೈಯಲ್ಲಿ ಒಂದು ರೀತಿಯ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು. ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳ ಮಧ್ಯೆ ತೆರೆದ ಬಸ್‌ನಲ್ಲಿ ಆಟಗಾರರರನ್ನು ಮೆರವಣಿಗೆ ಮಾಡಿ ವಾಂಖೆಡೆ ಮೈದಾನದಲ್ಲೂ ಸಂಭ್ರಮ ಆಚರಿಸಲಾಯಿತು. ಈ ವೇಳೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ(Jay Shah) ಅವರು ವಿರಾಟ್​ ಕೊಹ್ಲಿಗೆ(virat kohli) ಹಸ್ತಲಾಘವ ನೀಡಿದ ಬಳಿಕವೂ ಕೊಹ್ಲಿಯನ್ನೇ ದಿಟ್ಟಿಸಿ ನೋಡುತ್ತಾ ನಿಂತು ಮೈಮರೆತ ವಿಡಿಯೊವೊಂದು ವೈರಲ್​ ಆಗಿದೆ.

ಮೋದಿ ಭೇಟಿ ಬಳಿಕ ಟೀಮ್​ ಇಂಡಿಯಾ ಆಟಗಾರರು ಮುಂಬೈಗೆ ತಲುಪಿದೊಡನೆ ‘ಮುಂಬೈನ ನರೀಮನ್ ಪಾಯಿಂಟ್‌ನಿಂದ ರೋಡ್‌ ಶೋ ಮಾಡಲಾಯಿತು. ಅದಾದ ಮೇಲೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಟಗಾರರನ್ನು ಮತ್ತು ಮತ್ತು ಸಿಬ್ಬಂದಿ ಬಳಗವನ್ನು ಸನ್ಮಾನಿಸಲಾಯಿತು. ಬಳಿಕ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ವತಿಯಿಂದ ಚಾಂಪಿಯನ್‌ ಭಾರತ ತಂಡಕ್ಕೆ ಘೋಷಿಸಿದ್ದ 125 ಕೋಟಿ ರೂಪಾಯಿ ಮೊತ್ತದ ಚೆಕ್‌ ಅನ್ನು ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ, ಉಪಾಧ್ಯಕ್ಷ ರಾಜೀವ್‌ ಶುಕ್ಲಾ, ಕಾರ್ಯದರ್ಶಿ ಜಯ್‌ ಶಾ ಹಸ್ತಾಂತರಿಸಿದರು.

ಚೆಕ್‌ ವಿತರಣೆಯ ಕಾರ್ಯಕ್ರಮದ ವೇಳೆ ವೇದಿಕೆಯಲ್ಲಿದ್ದ ಬಿಸಿಸಿಐ ಅಧಿಕಾರಿಗಳಿಗೆ ಆಟಗಾರರು ಹಸ್ತಲಾಘವ ನೀಡುವ ಮೂಲಕ ಗೌರವ ಸೂಚಿಸಿದರು. ಎಲ್ಲ ಆಟಗಾರರಂತೆ ಕೊಹ್ಲಿ ಕೂಡ ಸರತಿ ಸಾಲಿನಲ್ಲಿ ಅಧಿಕಾರಿಗಳ ಕೈ ಕುಲುಕಿ ಮುಂದೆ ಸಾಗಿದರು. ಈ ವೇಳೆ ಜಯ್​ ಶಾ, ಕೊಹ್ಲಿ ಕೈ ಕುಲುಕಿದ ಬಳಿಕ ಕೊಹ್ಲಿಯನ್ನೇ ನೋಡುವುದರಲ್ಲೇ ಮಗ್ನರಾದರು. ನಂತರ ಬಂದ ಆಟಗಾರರಿಗೆ ಕೈ ಕುಲುಕುವುದನ್ನೇ ಮರೆತುಬಿಟ್ಟರು. ಈ ವಿಡಿಯೊ ವೈರಲ್​ ಆಗಿದೆ. ಜಯ್​ ಶಾ ಅವರು ಕೊಹ್ಲಿಯನ್ನೇ ನೋಡುತ್ತಾ ನಿಂತಿದ್ದು ಯಾಕೆ ಎಂಬ ಬಗ್ಗೆ ನೆಟ್ಟಿಗರು ಚರ್ಚೆ ನಡೆಸಲಾರಂಭಿಸಿದ್ದಾರೆ.

ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಟ್ರೋಫಿ ವೇಳೆ ಸರಣಿ ಶ್ರೇಷ್ಠ ಪ್ರಶಸ್ತಿ ಸ್ವಿಕರಿಸುವಾಗ ಕೊಹ್ಲಿ ಜಯ್​ ಶಾ ಮುಖವನ್ನು ಕೂಡ ನೋಡದೆ ನೇರವಾಗಿ ಬಂದಿದ್ದರು. ಈ ವಿಡಿಯೊ ಕೂಡ ವೈರಲ್​ ಆಗಿತ್ತು. ಯಾರಿಗೆ ಗೌರವ ನೀಡಬೇಕು ಮತ್ತು ನೀಡಬಾರದು ಎಂಬುದು ಕಿಂಗ್​ ಕೊಹ್ಲಿಗೆ ತಿಳಿದಿದೆ ಎಂಬುದಾಗಿ ಕೊಹ್ಲಿ ಅಭಿಮಾನಿಗಳು ಈ ವಿಡಿಯೊಗೆ ಕಮೆಂಟ್​ ಮಾಡಿದ್ದರು.

15 ವರ್ಷಗಳಲ್ಲಿ ರೋಹಿತ್‌ರನ್ನು ಇಷ್ಟು ಭಾವುಕರಾಗಿ ಎಂದೂ ನೋಡಿರಲಿಲ್ಲ ಎಂದ ಕೊಹ್ಲಿ


ವಿರಾಟ್​ ಕೊಹ್ಲಿ ಅವರು ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಕಳೆದ 15 ವರ್ಷಗಳಲ್ಲಿ ರೋಹಿತ್ ಶರ್ಮಾ ಅವರನ್ನು ಇಷ್ಟೊಂದು ಭಾವುಕರಾಗಿ ಎಂದೂ ನೋಡಿರಲಿಲ್ಲ ಎಂದರು. ನಾವು ಕೆನ್ಸಿಂಗ್ಟನ್ ಓವಲ್‌ನಲ್ಲಿ ಮೆಟ್ಟಿಲುಗಳನ್ನು ಹತ್ತುವಾಗ ಅಳುತ್ತಿದ್ದೆವು. 2011ರಲ್ಲಿ ಇದೇ ಮೈದಾನದಲ್ಲಿ ಏಕದಿನ ವಿಶ್ವಕಪ್ ಗೆಲುವಿನ ಬಳಿಕ ಅಂದು ಹಿರಿಯ ಆಟಗಾರರು ಭಾವುಕರಾಗಿದ್ದಾಗ ಅವರ ಭಾವನೆಗಳನ್ನು ಅಷ್ಟೊಂದು ಆಳವಾಗಿ ಗ್ರಹಿಸಲು ಸಾಧ್ಯವಾಗಿರಲಿಲ್ಲ. ಆದರೆ ನನಗೀಗ ಎಲ್ಲವೂ ಅರ್ಥವಾಗುತ್ತಿದೆ’ ಎಂದು ಹೇಳಿದರು.

Exit mobile version