Jay Shah: ಕೊಹ್ಲಿಯನ್ನೇ ದಿಟ್ಟಿಸಿ ನೋಡುತ್ತಾ ನಿಂತ ಜಯ್​ ಶಾ; ವಿಡಿಯೊ ವೈರಲ್​ - Vistara News

ಕ್ರೀಡೆ

Jay Shah: ಕೊಹ್ಲಿಯನ್ನೇ ದಿಟ್ಟಿಸಿ ನೋಡುತ್ತಾ ನಿಂತ ಜಯ್​ ಶಾ; ವಿಡಿಯೊ ವೈರಲ್​

Jay Shah: ವಿರಾಟ್​ ಕೊಹ್ಲಿ ಅವರು ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಕಳೆದ 15 ವರ್ಷಗಳಲ್ಲಿ ರೋಹಿತ್ ಶರ್ಮಾ ಅವರನ್ನು ಇಷ್ಟೊಂದು ಭಾವುಕರಾಗಿ ಎಂದೂ ನೋಡಿರಲಿಲ್ಲ ಎಂದರು.

VISTARANEWS.COM


on

Jay Shah
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಟಿ20 ವಿಶ್ವಕಪ್(T20 World Cup) ಗೆದ್ದು ತವರಿಗೆ ಮರಳಿದ ಟೀಮ್ ಇಂಡಿಯಾ(Team India) ಆಟಗಾರರಿಗೆ ನಿನ್ನೆ)ಗುರುವಾರ) ಮುಂಬೈಯಲ್ಲಿ ಭರ್ಜರಿ ಸ್ವಾಗತ ಕೋರಲಾಯಿತು. ಮುಂಬೈಯಲ್ಲಿ ಒಂದು ರೀತಿಯ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು. ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳ ಮಧ್ಯೆ ತೆರೆದ ಬಸ್‌ನಲ್ಲಿ ಆಟಗಾರರರನ್ನು ಮೆರವಣಿಗೆ ಮಾಡಿ ವಾಂಖೆಡೆ ಮೈದಾನದಲ್ಲೂ ಸಂಭ್ರಮ ಆಚರಿಸಲಾಯಿತು. ಈ ವೇಳೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ(Jay Shah) ಅವರು ವಿರಾಟ್​ ಕೊಹ್ಲಿಗೆ(virat kohli) ಹಸ್ತಲಾಘವ ನೀಡಿದ ಬಳಿಕವೂ ಕೊಹ್ಲಿಯನ್ನೇ ದಿಟ್ಟಿಸಿ ನೋಡುತ್ತಾ ನಿಂತು ಮೈಮರೆತ ವಿಡಿಯೊವೊಂದು ವೈರಲ್​ ಆಗಿದೆ.

ಮೋದಿ ಭೇಟಿ ಬಳಿಕ ಟೀಮ್​ ಇಂಡಿಯಾ ಆಟಗಾರರು ಮುಂಬೈಗೆ ತಲುಪಿದೊಡನೆ ‘ಮುಂಬೈನ ನರೀಮನ್ ಪಾಯಿಂಟ್‌ನಿಂದ ರೋಡ್‌ ಶೋ ಮಾಡಲಾಯಿತು. ಅದಾದ ಮೇಲೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಟಗಾರರನ್ನು ಮತ್ತು ಮತ್ತು ಸಿಬ್ಬಂದಿ ಬಳಗವನ್ನು ಸನ್ಮಾನಿಸಲಾಯಿತು. ಬಳಿಕ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ವತಿಯಿಂದ ಚಾಂಪಿಯನ್‌ ಭಾರತ ತಂಡಕ್ಕೆ ಘೋಷಿಸಿದ್ದ 125 ಕೋಟಿ ರೂಪಾಯಿ ಮೊತ್ತದ ಚೆಕ್‌ ಅನ್ನು ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ, ಉಪಾಧ್ಯಕ್ಷ ರಾಜೀವ್‌ ಶುಕ್ಲಾ, ಕಾರ್ಯದರ್ಶಿ ಜಯ್‌ ಶಾ ಹಸ್ತಾಂತರಿಸಿದರು.

ಚೆಕ್‌ ವಿತರಣೆಯ ಕಾರ್ಯಕ್ರಮದ ವೇಳೆ ವೇದಿಕೆಯಲ್ಲಿದ್ದ ಬಿಸಿಸಿಐ ಅಧಿಕಾರಿಗಳಿಗೆ ಆಟಗಾರರು ಹಸ್ತಲಾಘವ ನೀಡುವ ಮೂಲಕ ಗೌರವ ಸೂಚಿಸಿದರು. ಎಲ್ಲ ಆಟಗಾರರಂತೆ ಕೊಹ್ಲಿ ಕೂಡ ಸರತಿ ಸಾಲಿನಲ್ಲಿ ಅಧಿಕಾರಿಗಳ ಕೈ ಕುಲುಕಿ ಮುಂದೆ ಸಾಗಿದರು. ಈ ವೇಳೆ ಜಯ್​ ಶಾ, ಕೊಹ್ಲಿ ಕೈ ಕುಲುಕಿದ ಬಳಿಕ ಕೊಹ್ಲಿಯನ್ನೇ ನೋಡುವುದರಲ್ಲೇ ಮಗ್ನರಾದರು. ನಂತರ ಬಂದ ಆಟಗಾರರಿಗೆ ಕೈ ಕುಲುಕುವುದನ್ನೇ ಮರೆತುಬಿಟ್ಟರು. ಈ ವಿಡಿಯೊ ವೈರಲ್​ ಆಗಿದೆ. ಜಯ್​ ಶಾ ಅವರು ಕೊಹ್ಲಿಯನ್ನೇ ನೋಡುತ್ತಾ ನಿಂತಿದ್ದು ಯಾಕೆ ಎಂಬ ಬಗ್ಗೆ ನೆಟ್ಟಿಗರು ಚರ್ಚೆ ನಡೆಸಲಾರಂಭಿಸಿದ್ದಾರೆ.

ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಟ್ರೋಫಿ ವೇಳೆ ಸರಣಿ ಶ್ರೇಷ್ಠ ಪ್ರಶಸ್ತಿ ಸ್ವಿಕರಿಸುವಾಗ ಕೊಹ್ಲಿ ಜಯ್​ ಶಾ ಮುಖವನ್ನು ಕೂಡ ನೋಡದೆ ನೇರವಾಗಿ ಬಂದಿದ್ದರು. ಈ ವಿಡಿಯೊ ಕೂಡ ವೈರಲ್​ ಆಗಿತ್ತು. ಯಾರಿಗೆ ಗೌರವ ನೀಡಬೇಕು ಮತ್ತು ನೀಡಬಾರದು ಎಂಬುದು ಕಿಂಗ್​ ಕೊಹ್ಲಿಗೆ ತಿಳಿದಿದೆ ಎಂಬುದಾಗಿ ಕೊಹ್ಲಿ ಅಭಿಮಾನಿಗಳು ಈ ವಿಡಿಯೊಗೆ ಕಮೆಂಟ್​ ಮಾಡಿದ್ದರು.

15 ವರ್ಷಗಳಲ್ಲಿ ರೋಹಿತ್‌ರನ್ನು ಇಷ್ಟು ಭಾವುಕರಾಗಿ ಎಂದೂ ನೋಡಿರಲಿಲ್ಲ ಎಂದ ಕೊಹ್ಲಿ


ವಿರಾಟ್​ ಕೊಹ್ಲಿ ಅವರು ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಕಳೆದ 15 ವರ್ಷಗಳಲ್ಲಿ ರೋಹಿತ್ ಶರ್ಮಾ ಅವರನ್ನು ಇಷ್ಟೊಂದು ಭಾವುಕರಾಗಿ ಎಂದೂ ನೋಡಿರಲಿಲ್ಲ ಎಂದರು. ನಾವು ಕೆನ್ಸಿಂಗ್ಟನ್ ಓವಲ್‌ನಲ್ಲಿ ಮೆಟ್ಟಿಲುಗಳನ್ನು ಹತ್ತುವಾಗ ಅಳುತ್ತಿದ್ದೆವು. 2011ರಲ್ಲಿ ಇದೇ ಮೈದಾನದಲ್ಲಿ ಏಕದಿನ ವಿಶ್ವಕಪ್ ಗೆಲುವಿನ ಬಳಿಕ ಅಂದು ಹಿರಿಯ ಆಟಗಾರರು ಭಾವುಕರಾಗಿದ್ದಾಗ ಅವರ ಭಾವನೆಗಳನ್ನು ಅಷ್ಟೊಂದು ಆಳವಾಗಿ ಗ್ರಹಿಸಲು ಸಾಧ್ಯವಾಗಿರಲಿಲ್ಲ. ಆದರೆ ನನಗೀಗ ಎಲ್ಲವೂ ಅರ್ಥವಾಗುತ್ತಿದೆ’ ಎಂದು ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Yuzvendra Chahal : ಪತ್ನಿ ಧನಶ್ರೀ ವರ್ಮಾಗೆ ವಿಶ್ವ ಕಪ್​ ಪದಕ ಅರ್ಪಿಸಿದ ಯಜ್ವೇಂದ್ರ ಚಹಲ್​

Yuzvendra Chahal : ತವರಿಗೆ ಮರಳಿದ ನಂತರ, ಯಜುವೇಂದ್ರ ಚಾಹಲ್ ಈಗ ತಮ್ಮ ಪತ್ನಿ ಧನಶ್ರೀ ವರ್ಮಾ ಅವರಿಗೆ ಗೆಲುವಿನ ಪದಕವನ್ನು ಅರ್ಪಿಸಿದ್ದಾರೆ. ಟೀಮ್ ಇಂಡಿಯಾ ಪರ ಟ್ರೋಫಿ ಗೆಲ್ಲವಲು ‘ಲೇಡಿ ಲಕ್’ ತಂದಿರುವುದು ಪತ್ನಿ ಧನಶ್ರೀ ಎಂಬರ್ಥದಲ್ಲಿ ಹೇಳಿದ್ದಾರೆ. ಯಜ್ವೇಂದ್ರ ಹಾಗೂ ಕೊರಿಯೋಗ್ರಾಫರ್ ಧನಶ್ರೀ ವರ್ಮಾ ಪ್ರೀತಿಸಿ ಮದುವೆಯಾಗಿದ್ದು ಕ್ರಿಕೆಟ್​ನ ಸ್ಟಾರ್ ದಂಪತಿ ಎನಿಸಿಕೊಂಡಿದ್ದಾರೆ. ಆದಾಗ್ಯೂ ಅವರ ಸಂಬಂಧಗಳ ಬಗ್ಗೆ ಆಗಾಗ ಅನಗತ್ಯ ಮಾತುಗಳು ಕೇಳಿ ಬರುತ್ತಿರುತ್ತವೆ. ಆದರೆ ಚಹಲ್ ತಮ್ಮಿಬ್ಬರ ಪ್ರೀತಿಯನ್ನು ಆಗಾಗ ವ್ಯಕ್ತಪಡಿಸುತ್ತಲೇ ಇರುತ್ತಾರೆ.

VISTARANEWS.COM


on

Yuzvendra Chahal
Koo

ಬೆಂಗಳೂರು: ಜುಲೈ 4 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತದ 2024 ರ ಟಿ 20 ವಿಶ್ವಕಪ್ ವಿಜಯೋತ್ಸವದಲ್ಲಿ ಯುಜ್ವೇಂದ್ರ ಚಹಲ್ (Yuzvendra Chahal ತಮ್ಮ ಇತರ ಸಹ ಆಟಗಾರರೊಂದಿಗೆ ಭಾಗವಹಿಸಿದ್ದರು. ಅವರು ಟೂರ್ನಿಯಲ್ಲಿ ಆಡಲು ಅವಕಾಶ ಪಡೆಯದ ಹೊರತಾಗಿಯೂ ಪ್ರಭಾವ ಬೀರಬಲ್ಲ ಆಟಗಾರರಾಗಿದ್ದರು. ಆದಾಗ್ಯೂ ಗೆಲುವಿನ ಶ್ರೇಯಸ್ಸು ಅವರಿಗೂ ದೊರೆಯಬೇಕಾಗಿದೆ. ಅಂತೆಯೇ ಜೂನ್ 29 ರಂದು ಬಾರ್ಬಡೋಸ್​ನಲ್ಲಿ ನಡೆದ ಫೈನಲ್​​ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಟಿ 20 ವಿಶ್ವ ಪ್ರಶಸ್ತಿ ಗೆದ್ದ ವಿಜೇತ ಭಾರತೀಯ ಗುಂಪಿನ ಭಾಗವಾಗಿದ್ದು ಅವರಿಗೆ ಹೆಮ್ಮೆಯ ಸಂಗತಿ.

ತವರಿಗೆ ಮರಳಿದ ನಂತರ, ಯಜುವೇಂದ್ರ ಚಹಲ್ (Yuzvendra Chahal) ಈಗ ತಮ್ಮ ಪತ್ನಿ ಧನಶ್ರೀ ವರ್ಮಾ ಅವರಿಗೆ ಗೆಲುವಿನ ಪದಕವನ್ನು ಅರ್ಪಿಸಿದ್ದಾರೆ. ಟೀಮ್ ಇಂಡಿಯಾ ಪರ ಟ್ರೋಫಿ ಗೆಲ್ಲವಲು ‘ಲೇಡಿ ಲಕ್’ ತಂದಿರುವುದು ಪತ್ನಿ ಧನಶ್ರೀ ಎಂಬರ್ಥದಲ್ಲಿ ಹೇಳಿದ್ದಾರೆ. ಯಜ್ವೇಂದ್ರ ಹಾಗೂ ಕೊರಿಯೋಗ್ರಾಫರ್ ಧನಶ್ರೀ ವರ್ಮಾ ಪ್ರೀತಿಸಿ ಮದುವೆಯಾಗಿದ್ದು ಕ್ರಿಕೆಟ್​ನ ಸ್ಟಾರ್ ದಂಪತಿ ಎನಿಸಿಕೊಂಡಿದ್ದಾರೆ. ಆದಾಗ್ಯೂ ಅವರ ಸಂಬಂಧಗಳ ಬಗ್ಗೆ ಆಗಾಗ ಅನಗತ್ಯ ಮಾತುಗಳು ಕೇಳಿ ಬರುತ್ತಿರುತ್ತವೆ. ಆದರೆ ಚಹಲ್ ತಮ್ಮಿಬ್ಬರ ಪ್ರೀತಿಯನ್ನು ಆಗಾಗ ವ್ಯಕ್ತಪಡಿಸುತ್ತಲೇ ಇರುತ್ತಾರೆ.


ಯಜುವೇಂದ್ರ ಚಹಲ್ ಜುಲೈ 6 ರಂದು ಎಕ್ಸ್ (ಈ ಹಿಂದೆ ಟ್ವಿಟರ್) ನಲ್ಲಿ ತಮ್ಮ ಪತ್ನಿ ಧನಶ್ರೀ ಚಾಹಲ್ ಅವರೊಂದಿಗೆ ಇರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಕ್ರಿಕೆಟಿಗ 2024 ರ ಟಿ 20 ವಿಶ್ವಕಪ್ ವಿಜೇತ ಪದಕವನ್ನು ಸಹ ಹಿಂದಿನಿಂದ ಹಿಡಿದುಕೊಂಡಿದ್ದರು. ಇದೇ ವೇಳೆ ಅವರು “ಲೇಡಿ ಲಕ್” ಎಂದು ಶೀರ್ಷಿಕೆಯಲ್ಲಿ ಕೊಟ್ಟಿದ್ದಾರೆ.

ಯಜುವೇಂದ್ರ ಚಾಹಲ್ ಜೂನ್​​ನಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್ಎನಲ್ಲಿ ನಡೆದ 2024 ರ ಟಿ 20 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರೂ, ಲೆಗ್ ಸ್ಪಿನ್ನರ್ ಪಂದ್ಯಾವಳಿಯುದ್ದಕ್ಕೂ ಪ್ಲೇಯಿಂಗ್ ಇಲೆವೆನ್​​ನಲ್ಲಿ ಒಂದೇ ಒಂದು ಅವಕಾಶ ಪಡೆಯಲಿಲ್ಲ. ಚಾಹಲ್ ಅವರು ಟೀಮ್ ಇಂಡಿಯಾಕ್ಕಾಗಿ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಗಸ್ಟ್ 2023 ರಲ್ಲಿ ಲಾಡರ್​ಹಿಲ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಆಡಿದ್ದರು.

ಇದನ್ನೂ ಓದಿ: Abhishek Sharma : ಅಭಿಷೇಕ್ ಶರ್ಮಾ ದಾಖಲೆಯ ಶತಕ ಬಾರಿಸಿದ್ದು ಶುಭ್​​ಮನ್ ಗಿಲ್​ ಬ್ಯಾಟ್​ನಲ್ಲಿ!

72 ಏಕದಿನ ಮತ್ತು 80 ಟಿ 20 ಐ ಪಂದ್ಯಗಳನ್ನು ಆಡಿದ ಅನುಭವಿ 34 ವರ್ಷದ ಸ್ಪಿನ್ನರ್​ ಇಲ್ಲಿಯವರೆಗೆ ಎರಡೂ ಸ್ವರೂಪಗಳಲ್ಲಿ ಒಟ್ಟು 217 ಅಂತರರಾಷ್ಟ್ರೀಯ ವಿಕೆಟ್​ಗಳನ್ನು ಪಡೆದಿದ್ದಾರೆ.

ಇತ್ತೀಚೆಗೆ, ಅವರು ಈ ವರ್ಷದ ಐಪಿಎಲ್ 2024 ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯನ್ನು ಪ್ರತಿನಿಧಿಸಿದ್ದರು.

ಈಗಿನಂತೆ, ಯಜುವೇಂದ್ರ ಚಾಹಲ್ ಸೀಮಿತ ಓವರ್ಗಳ ನಿಯೋಜನೆಗಾಗಿ ಭಾರತೀಯ ತಂಡಕ್ಕೆ ಮತ್ತೊಂದು ಕರೆಯನ್ನು ಯಾವಾಗ ಪಡೆಯುತ್ತಾರೆ ಎಂಬುದನ್ನು ನೋಡಬೇಕಾಗಿದೆ.

Continue Reading

ಪ್ರಮುಖ ಸುದ್ದಿ

Abhishek Sharma : ಅಭಿಷೇಕ್ ಶರ್ಮಾ ದಾಖಲೆಯ ಶತಕ ಬಾರಿಸಿದ್ದು ಶುಭ್​​ಮನ್ ಗಿಲ್​ ಬ್ಯಾಟ್​ನಲ್ಲಿ!

Abhishek Sharma :

VISTARANEWS.COM


on

Abhishek Sharma
Koo

ಹರಾರೆ: ಜುಲೈ 7 ರಂದು ಹರಾರೆಯಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ (ZIMvsIND) ಭಾರತದ ಆರಂಭಿಕ ಅಭಿಷೇಕ್ ಶರ್ಮಾ (Abhishek Sharma) ದಾಖಲೆಯ ಶತಕ ಬಾರಿಸಿದ್ದರು. ಇದು ಅವರ ಚೊಚ್ಚಲ ಅಂತಾರಾಷ್ಟ್ರೀಯ ಶತಕ. ಈ ಮೂಲಕ ಅವರು ತಮ್ಮ ಅಂತಾರಾಷ್ಟ್ರೀಯ ಎರಡನೇ ಇನಿಂಗ್ಸ್​​ನಲ್ಲೇ ಶತಕ ಬಾರಿಸಿ ಮಿಂಚಿದರು. ಜತೆಗೆ ಹಲವಾರು ದಾಖಲೆಗಳನ್ನು ಅವರು ಹಿಮ್ಮೆಟ್ಟಿಸಿದರು. ಅಂದ ಹಾಗೆ ಅವರು ಈ ಹೊಡೆಬಡಿಯ ಇನಿಂಗ್ಸ್ ಆಡಿದ್ದ ಸಹ ಆಟಗಾರ ಮತ್ತು ನಾಯಕ ಶುಭ್ಮನ್ ಗಿಲ್ ಅವರ ಬ್ಯಾಟ್ ನಲ್ಲಿ ಎಂಬುದು ವಿಶೇಷ. ಅಂದ ಹಾಗೆ ಇದು ಜಿಂಬಾಬ್ವೆ ವಿರುದ್ಧ ಭಾರತೀಯನೊಬ್ಬನ ಮೊದಲ ಸೆಂಚುರಿ.

ಅಭಿಷೇಕ್​ ಶರ್ಮಾ ಮೊದಲ ಎಸೆತಕ್ಕೆ ಸಿಕ್ಸರ್ ಬಾರಿಸುವುದು ಸೇರಿದಂತೆ ಸಿಕಂದರ್ ರಾಜಾ ನೇತೃತ್ವದ ಜಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಟಿ 20 ಐ ಸರಣಿಯ ಎರಡನೇ ಪಂದ್ಯದಲ್ಲಿ 47 ಎಸೆತಗಳಲ್ಲಿ 100 ರನ್ ಗಳಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜುಲೈ 6 ರಂದು ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಪಂದ್ಯದಲ್ಲಿ ಡಕ್ ಔಟ್ ಆದ ನಂತರ, ಅಭಿಷೇಕ್ ಅವರ ಸ್ಫೋಟಕ ಇನ್ನಿಂಗ್ಸ್ ಮೂಡಿ ಬಂತು. ಮೊದಲ ಪಂದ್ಯದಲ್ಲಿ ಸೊನ್ನೆ ಹಾಗೂ ಎರಡನೇ ಪಂದ್ಯದಲ್ಲಿ 100 ರನ್ ಬಾರಿಸಿದ ಖ್ಯಾತಿ ಅವರಿಗೆ ದೊರಕಿತು.

ನಾಯಕ ಶುಭ್​ಮನ್​ ಗಿಲ್​ ಬೇಗನೆ ಔಟ್ ಅದ ನಂತರ ಋತುರಾಜ್ ಅವರೊಂದಿಗೆ ಕ್ರೀಸ್​ನಲ್ಲಿ ಗಟ್ಟಿಯಾಗಿ ನಿಂತ ಅಭಿಷೇಕ್ ಭರ್ಜರಿ ಇನಿಂಗ್ಸ್ ಆಡಿದರು. ಅವರಿಬ್ಬರು 137 ರನ್​​ ಜೊತೆಯಾಟ ಆಡಿದರು. ಅಂತಿಮವಾಗಿ ಋತುರಾಜ್ 46 ಎಸೆತಗಳಲ್ಲಿ ಅಜೇಯ 77 ರನ್ ಮತ್ತು ರಿಂಕು ಸಿಂಗ್ 22 ಎಸೆತಗಳಲ್ಲಿ 48 ರನ್ ಗಳಿಸಿದರು. ಹೀಗಾಗಿ ಭಾರತ 234 ರನ್ ಬಾರಿಸಿತು.

ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ, ಅಭಿಷೇಕ್ ಅವರು ತಮ್ಮ ನಾಯಕನ ಬ್ಯಾಟ್ ಅನ್ನು ಬಳಸಿದ್ದೇನೆ ಎಂದು ಬಹಿರಂಗಪಡಿಸಿದರು.ತಾವು ಅದೇ ರೀತಿ ಮಾಡುತ್ತಿರುವುದು ಇದೇ ಮೊದಲಲ್ಲ ಎಂದೂ ವಿವರಿಸಿದರು. “ನಾನು ಇಂದು ಶುಭ್​​ಮನ್​​ ಬ್ಯಾಟ್​ನಲ್ಲಿ ಆಡಿದ್ದೇನೆ. ನಾನು ಅದನ್ನು ಈ ಹಿಂದೆಯೂ ಮಾಡಿದ್ದೇನೆ. ನನಗೆ ರನ್ ಬೇಕಾದಾಗಲೆಲ್ಲಾ ನಾನು ಅವರ ಬ್ಯಾಟ್ ಕೇಳುತ್ತೇನೆ ಎಂದು ಅಭಿಷೇಕ್ ಹೇಳಿದರು.

ಶುಬ್ಮನ್ ಮತ್ತು ಅಭಿಷೇಕ್ ಇಬ್ಬರೂ ಪಂಜಾಬ್​ನ ದೇಶೀಯ ಕ್ರಿಕೆಟ್ ತಂಡದಲ್ಲಿ ಜತೆಯಾಗಿ ಆಡಿದ್ದಾರೆ. ಹಲವು ವರ್ಷಗಳಿಂದ ಗೆಳೆತನ ಹೊಂದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಸಮಯದಲ್ಲಿಯೂ, ಅಭಿಷೇಕ್ ಗುಜರಾತ್​​ ವಿರುದ್ಧದ ಎಸ್ಆರ್​ಎಚ್​ ಪಂದ್ಯದ ವೇಳೆ ಶುಭ್​ಮನ್​​ಗೆ ತಮ್ಮ ಕುಟುಂಬವನ್ನು ಪರಿಚಯ ಮಾಡಿಸಿಕೊಟ್ಟಿದ್ದರು.

ಇದನ್ನೂ ಓದಿ: WCPL 2024 : ಸಿಪಿಎಲ್​​ನ ಟ್ರಿನ್​ಬ್ಯಾಗೊ ರೈಡರ್ಸ್​ ತಂಡಕ್ಕೆ ಜೆಮಿಮಾ, ಶಿಖಾ ಸೇರ್ಪಡೆ

ಭಾರತಕ್ಕೆ ಭರ್ಜರಿ ವಿಜಯ

ರವಿ ಬಿಷ್ಣೋಯ್, ಅವೇಶ್ ಖಾನ್ ಮತ್ತು ಮುಖೇಶ್ ಕುಮಾರ್ ಅವರಂತಹ ಅತ್ಯುತ್ತಮ ಬೌಲಿಂಗ್ ಪ್ರದರ್ಶನದೊಂದಿಗೆ ಭಾರತ ಗೆಲುವು 100 ರನ್​ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 1-1 ಸಮಬಲದ ಸೃಷ್ಟಿಯಾಗಿದೆ. ಬೌಲಿಂಗ್​ನಲ್ಲಿ ಆವೇಶ್ ಅವರ 3/15, ಬಿಷ್ಣೋಯ್ ಅವರ 2/11 ಮತ್ತು ಮುಖೇಶ್ ಅವರ 3/37 ಸ್ಪೆಲ್​ಗಳು ಭಾರತಕ್ಕೆ ನೆರವಾಯಿತು. ಸಿಕಂದರ್​ ರಾಜಾ ಅವರ ಜಿಂಬಾಬ್ವೆ ತಂಡ ಕೇವಲ 134 ರನ್​ಗಳಿಗೆ ಆಲ್​ಔಟ್ ಆಯಿತು. ಬುಧವಾರ (ಜುಲೈ9ರಂದು) ಮೂರನೇ ಪಂದ್ಯ ನಡೆಯಲಿದೆ.

Continue Reading

ಅಂಕಣ

ರಾಜಮಾರ್ಗ ಅಂಕಣ: ದಕ್ಷಿಣ ಆಫ್ರಿಕಾದಲ್ಲಿ ಚಿನ್ನದ ಪದಕ ಗೆದ್ದ ಕಾರ್ಕಳದ ಬೋಳ ಅಕ್ಷತಾ ಪೂಜಾರಿ

ರಾಜಮಾರ್ಗ ಅಂಕಣ: ಕಾರ್ಕಳ ತಾಲೂಕಿನ ಬೋಳ ಎಂಬ ಪುಟ್ಟ ಗ್ರಾಮದಿಂದ ಲಂಡನ್, ಅಮೆರಿಕ, ಆಫ್ರಿಕ, ದುಬಾಯಿ, ಕಝಾಕಿಸ್ತಾನ್ ತಲುಪಿದ ಬೋಳ ಅಕ್ಷತಾ ಪೂಜಾರಿಯ ಹೋರಾಟ ಮತ್ತು ಸಾಹಸಗಳು ಸಾವಿರಾರು ಗ್ರಾಮೀಣ ಸಾಧಕರಿಗೆ ಸ್ಫೂರ್ತಿ ಆಗಬಲ್ಲದು. ಸರಕಾರ ಆಕೆಯನ್ನು ದೊಡ್ಡದಾಗಿ ಗುರುತಿಸಬೇಕು.

VISTARANEWS.COM


on

ರಾಜಮಾರ್ಗ ಅಂಕಣ bola akshta pujari
Koo

ಪವರ್ ಲಿಫ್ಟಿಂಗ್ ಮತ್ತು ಬೆಂಚ್ ಪ್ರೆಸ್ ವಿಭಾಗದಲ್ಲಿ ಮತ್ತೆ ಆಕೆಯಿಂದ ವಿಶ್ವವಿಕ್ರಮ!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಈ ಶನಿವಾರ ದಕ್ಷಿಣ ಆಫ್ರಿಕಾದ ಫೊಚೇಫಸ್ಟಮ್ ನಗರದಲ್ಲಿ ನಡೆದ ಏಷಿಯಾ ಪೆಸಿಫಿಕ್ ಆಫ್ರಿಕನ್ (ಅಂದರೆ ಎರಡು ಖಂಡಗಳ ಮಟ್ಟದ) ಪವರ್ ಲಿಫ್ಟಿಂಗ್ (power lifting) ಮತ್ತು ಬೆಂಚ್ ಪ್ರೆಸ್ (bench press) ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಬೋಳ ಅಕ್ಷತಾ ಪೂಜಾರಿ (Bola Akshata Pujrai ಈ ಬಾರಿಯೂ ಚಿನ್ನದ ಪದಕ (gold medal) ಗೆದ್ದಿದ್ದಾರೆ! ಆಕೆ ನನ್ನೂರು ಕಾರ್ಕಳ ತಾಲೂಕಿನ ಬೋಳ ಎಂಬ ಪುಟ್ಟ ಗ್ರಾಮದವರು ಅನ್ನೋದು ನಮಗೆಲ್ಲ ಹೆಮ್ಮೆ. ನಾನು ಬಾಲ್ಯದಿಂದಲೂ ಆಕೆಯ ಬೆಳವಣಿಗೆಯನ್ನು ಗಮನಿಸಿದ್ದೇನೆ ಅನ್ನುವುದು ನನಗೆ ಅಭಿಮಾನ.

ಈ ಬಾರಿ ಆಕೆ ಸ್ಪರ್ಧೆ ಮಾಡಿದ್ದು 52 ಕೆಜಿ ದೇಹತೂಕದ ಸೀನಿಯರ್ ವಿಭಾಗದಲ್ಲಿ. ಅಲ್ಲಿ ಸ್ಪರ್ಧೆ ತುಂಬಾ ಕಠಿಣ ಆಗಿದ್ದು 18 ಮಂದಿ ವಿದೇಶದ ಸ್ಪರ್ಧಿಗಳು ಇದ್ದರು! ಅಲ್ಲಿ ಅಕ್ಷತಾ ಪೂಜಾರಿ ಚಿನ್ನದ ಪದಕ ಗೆದ್ದು ತ್ರಿವರ್ಣ ಧ್ವಜ ಹಾರಿಸಿದ್ದಾರೆ ಅಂದರೆ ಅದು ಎಷ್ಟೊಂದು ದೊಡ್ಡ ಸಾಧನೆ!

ಆಕೆ ವಿಶ್ವಮಟ್ಟದ ಪದಕ ಗೆದ್ದಿರುವುದು ಇದೇ ಮೊದಲಲ್ಲ!

ಆಕೆಯ ಯಶೋಗಾಥೆಯು ಆರಂಭ ಆದದ್ದು 2011ರಲ್ಲಿ. ಅಂದು ಆಕೆ ಲಂಡನ್ ಕಾಮನ್ ವೆಲ್ತ್ ಕೂಟದಲ್ಲಿ ಭಾಗವಹಿಸಿ 8 ಚಿನ್ನದ ಪದಕ ಪಡೆದಿದ್ದರು! ಅದರ ಮುಂದಿನ ವರ್ಷ (2012) ಮತ್ತೆ ಏಷಿಯನ್ ಕೂಟದಲ್ಲಿ ಗೋಲ್ಡ್! ಮತ್ತೆ 2014ರಲ್ಲಿ ವರ್ಲ್ಡ್ ಚಾಂಪಿಯನಶಿಪನಲ್ಲಿ ಗೋಲ್ಡ್! 2018ರಲ್ಲಿ ಏಷಿಯನ್ ದುಬಾಯಿ ಕೂಟದ ಗೋಲ್ಡ್! 2022ರಲ್ಲಿ ಕಝಾಕ್ ಸ್ಥಾನ ಕೂಟದಲ್ಲಿ ಸಿಲ್ವರ್ ಮೆಡಲ್! ಮತ್ತು ಈ ಬಾರಿ ಸೌಥ್ ಆಫ್ರಿಕಾ ಕೂಟದಲ್ಲಿ ಗೋಲ್ಡ್ ಮೆಡಲ್!

ಒಬ್ಬಳು ಹಳ್ಳಿಯ ಸಾಮಾನ್ಯ ಕೃಷಿಕ ಕುಟುಂಬದಿಂದ ಬಂದ ಓರ್ವ ಸೀದಾಸಾದಾ ಹುಡುಗಿ ಇಷ್ಟೊಂದು ವಿದೇಶದ ಕೂಟಗಳಿಗೆ ಹೋಗಿ ಭಾರತವನ್ನು ಪ್ರತಿನಿಧಿಸುವುದೇ ದೊಡ್ಡ ಅಚ್ಚರಿ ಆಗಿರುವಾಗ ಈಕೆ ಹೋದಲ್ಲೆಲ್ಲ ಪದಕಗಳ ಗೊಂಚಲನ್ನು ಗೆದ್ದು ತರುತ್ತಿರುವುದು ನಿಜಕ್ಕೂ ವಿಸ್ಮಯವೇ ಸರಿ. ಅದರ ಜೊತೆಗೆ ಕಳೆದ 14 ವರ್ಷಗಳಲ್ಲಿ ಆಕೆ ಭಾರತದಲ್ಲಿ ಬೇರೆ ಬೇರೆ ನಗರಗಳಲ್ಲಿ ನಡೆದ ಪವರ್ ಲಿಫ್ಟಿಂಗ್ ಕೂಟಗಳಲ್ಲಿ ಭಾಗವಹಿಸಿ ಹೋದಲ್ಲೆಲ್ಲ ಪದಕಗಳನ್ನು ಗೆದ್ದಿದ್ದಾರೆ! ಆಕೆಯ ಬೋಳದ ಮನೆಯ ಶೋಕೇಸಿನಲ್ಲಿ ಮಿಂಚುತ್ತಿರುವ ಹೊಳೆಯುವ ಪದಕಗಳು ಯಾರಿಗಾದರೂ ಸ್ಫೂರ್ತಿಯ ಚಿಲುಮೆ ಆಗುವುದು ಖಂಡಿತ!

ಅಕ್ಷತಾ ಬಾಲ್ಯದಿಂದಲೂ ಗಟ್ಟಿಗಿತ್ತಿ!

ಅಕ್ಷತಾ ಬೋಳ ಗ್ರಾಮದ ಕೃಷಿ ಸಂಸ್ಕೃತಿಯ ಕೆಳಮಧ್ಯಮ ಕುಟುಂಬದಿಂದ ಬಂದವರು. ಅವರ ಮನೆಯಲ್ಲಿ ಯಾರೂ ಹೆಚ್ಚು ಓದಿದವರು ಇರಲಿಲ್ಲ. ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಆಕೆ 6-7 ಕಿಮೀ ದೂರದ ಬೆಳ್ಮಣ್ ಜ್ಯೂ. ಕಾಲೇಜಿಗೆ ಬೆಳಿಗ್ಗೆ ಮತ್ತು ಸಂಜೆ ನಡೆದುಕೊಂಡು ಬರುತ್ತಿದ್ದರು! ಹಸಿವು ಆಕೆಗೆ ಅಭ್ಯಾಸ ಆಗಿತ್ತು. ಕ್ರೀಡೆಯಲ್ಲಿ ಅತೀವ ಆಸಕ್ತಿ ಆಕೆಗೆ ಹೇಗೆ ಬಂತು ಎನ್ನುವುದು ಆಕೆಗೇ ಗೊತ್ತಿಲ್ಲ. ಮುಂದೆ ಪದವಿಯ ಶಿಕ್ಷಣಕ್ಕಾಗಿ ನಿಟ್ಟೆ ವಿದ್ಯಾಸಂಸ್ಥೆಯನ್ನು ಸೇರಿದ್ದು ಆಕೆಯ ಬದುಕಿನಲ್ಲಿ ಮಹತ್ವದ ತಿರುವು ಆಯಿತು. ಅಲ್ಲಿ ಆಕೆಗೆ ಪವರ್ ಲಿಫ್ಟಿಂಗ್ ಆರಿಸಿಕೊಳ್ಳಲು ಸಲಹೆ ದೊರೆಯಿತು ಮತ್ತು ಒಳ್ಳೆಯ ಕೋಚ್ ದೊರಕಿದರು. ಅಲ್ಲಿ ಅಕ್ಷತಾ ಬೆಳಿಗ್ಗೆ ಮತ್ತು ಸಂಜೆ ಕನಿಷ್ಠ 4 ಘಂಟೆ ಜಿಮ್ ನಲ್ಲಿ ಬೆವರು ಬಸಿಯುತ್ತಿದ್ದರು. ಸಾಧನೆಯ ಹಸಿವು ಕಿಡಿ ಆಗಿದ್ದು ನಿಟ್ಟೆಯಲ್ಲೇ ಎಂದು ಹೇಳಬಹುದು. ʼಪವರ್ ಲಿಫ್ಟಿಂಗ್ ಇಂಡಿಯಾ’ ಎಂಬ ರಾಷ್ಟ್ರಮಟ್ಟದ ಸಂಸ್ಥೆಯು ಆಕೆಗೆ ಇಷ್ಟೊಂದು ಅವಕಾಶಗಳನ್ನು ಮಾಡಿಕೊಟ್ಟಿತು ಮತ್ತು ಇದೇ ವಿಭಾಗದಲ್ಲಿ ಮಿಂಚುತ್ತಿದ್ದ ವಿಜಯ್ ಕಾಂಚನ್ ಎಂಬ ಸಾಧಕರು ಆಕೆಗೆ ಗುರುವಾಗಿ ಸಿಕ್ಕರು.

ಮನೆಯಂಗಳದಲ್ಲಿ ಬಾವಿಯನ್ನು ಕೊರೆದರು

ಅಕ್ಷತಾ ಸಾಧನೆಯ ಹಾದಿಯು ಸುಲಭದ್ದು ಆಗಿರಲಿಲ್ಲ. ತನಗಾದ ಕಿರುಕುಳ, ಅಪಮಾನ, ನೋವು ಎಲ್ಲವೂ ಆಕೆಯನ್ನು ಗಟ್ಟಿ ಮಾಡಿತು ಎಂದು ನನ್ನ ಭಾವನೆ. ತನ್ನದೇ ಮನೆಯಂಗಳದಲ್ಲಿ ಆಕೆ ತನ್ನ ಕುಟುಂಬದ ಸದಸ್ಯರ ಜೊತೆ ಸೇರಿಕೊಂಡು ಒಂದು ಆಳವಾದ ಬಾವಿ ಕೊರೆದದ್ದು ಬಹಳ ದೊಡ್ಡ ಸುದ್ದಿ ಆಗಿತ್ತು. ಕೊರೋನಾ ಸಮಯದಲ್ಲಿ ಕೂಡ ಆಕೆ ತನ್ನ ತರಬೇತಿಯನ್ನು ನಿಲ್ಲಿಸಲಿಲ್ಲ ಅನ್ನುವುದು ನಿಜಕ್ಕೂ ಗ್ರೇಟ್!

ನನಗೆ ಅದಕ್ಕಿಂತ ಕಠಿಣ ಅನ್ನಿಸಿದ್ದು ಆಕೆ ಉದ್ಯೋಗ ಪಡೆಯಲು ಮಾಡಿದ ಸ್ವಾಭಿಮಾನಿ ಹೋರಾಟ. ತನ್ನ ಚಿನ್ನದ ಪದಕಗಳನ್ನು ಆಕೆ ತೆಗೆದುಕೊಂಡು ಕಚೇರಿಯಿಂದ ಕಚೇರಿಗೆ ಅಲೆಯುವ ದೃಶ್ಯ ನನಗೆ ಭಾರೀ ನೋವು ಕೊಡುತ್ತಿತ್ತು. ಆಗ ನಿಟ್ಟೆಯ ಒಂದು ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ (ಈಗ ಮಾಜಿ) ಬಂದಿದ್ದಾಗ ನಾನು ಆಕೆಯನ್ನು ಕರೆದುಕೊಂಡು ಫೈಲ್ ಮುಂದಿಟ್ಟು ಸರಕಾರಿ ನೌಕರಿ ನೀಡಲು ವಿನಂತಿ ಮಾಡಿದ್ದೆ. ಆಗ ಆ ಸಿಎಂ ನಿರುತ್ಸಾಹ ತೋರಿಸಿ ‘ಏನಮ್ಮಾ, ಪವರ್ ಲಿಫ್ಟಿಂಗಿಗೆ ಮಾನ್ಯತೆ ಇದೆಯಾ? ಅದು ಒಲಿಂಪಿಕ್ಸ್ ಕೂಟದಲ್ಲಿ ಬರ್ತದಾ?’ ಎಂದೆಲ್ಲ ಕೇಳಿದ್ದರು.

ಈ ಪ್ರಶ್ನೆಯನ್ನು ಅಕ್ಷತಾ ಹಲವು ಬಾರಿ ಎದುರಿಸಿದ್ದಾರೆ. ಆದರೆ ಲಂಡನ್ ಕಾಮನ್ ವೆಲ್ತ್ ಕೂಟದಲ್ಲಿ ಆಕೆ 8 ಪದಕಗಳನ್ನು ಗೆದ್ದದ್ದು, ವರ್ಲ್ಡ್ ಚಾಂಪಿಯನಶಿಪ್ ಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದದ್ದು ಭಾರತವನ್ನು ಪ್ರತಿನಿಧಿಸಿ ಎನ್ನುವುದನ್ನು ಎಲ್ಲರೂ ಮರೆಯುತ್ತಾರೆ! ಇದು ನಿಜವಾಗಿಯೂ ಕ್ರೀಡಾಲೋಕದ ದುರಂತ ಅಲ್ಲವೇ?

ಇದಕ್ಕಿಂತ ದೊಡ್ಡ ದುರಂತ ಎಂದರೆ…

ಆಕೆ ಪ್ರತೀ ಬಾರಿ ವಿದೇಶದ ಲಿಫ್ಟಿಂಗ್ ಕೂಟಗಳಿಗೆ ಹಾಜರಾಗುವಾಗ ‘ಪವರ್ ಲಿಫ್ಟಿಂಗ್ ಇಂಡಿಯಾ’ ಸಂಸ್ಥೆಯು ಅನುಮತಿ ಮತ್ತು ಮಾರ್ಗದರ್ಶನ ಮಾಡುತ್ತದೆ. ಆದರೆ ಆಕೆಯ ಪ್ರಯಾಣದ ಮತ್ತು ಇತರ ಖರ್ಚುಗಳಿಗೆ ಸರಕಾರದ ಅನುದಾನ ಇಲ್ಲ, ನೀವೇ ಹೊಂದಿಸಿಕೊಳ್ಳಬೇಕು ಎನ್ನುವ ಪತ್ರ ಬರೆಯುತ್ತದೆ. ಆಗೆಲ್ಲ ಅಕ್ಷತಾ ನೆರವಿಗೆ ಬರುವುದು ಆಕೆಯ ಅಭಿಮಾನಿಗಳು, ಗೆಳೆಯರು ಮತ್ತು ಒಂದಿಷ್ಟು ಕ್ರೀಡಾಭಿಮಾಮಾನಿ ಸಂಘಟನೆಗಳು ಅಂದರೆ ನೀವು ನಂಬಲೇಬೇಕು. ಸ್ವಾಭಿಮಾನಿ ಅಕ್ಷತಾ ಅವರಿಗೆ ಇದು ತುಂಬಾ ನೋವು ಕೊಡುವ ಸಂಗತಿ. ಈ ಬಾರಿ ಕೂಡ ಆಕೆ ತನ್ನ ಆಫ್ರಿಕಾ ಪ್ರಯಾಣಕ್ಕೆ ಒಂದು ಲಕ್ಷ ಮೂವತ್ತು ಸಾವಿರ ದುಡ್ಡು ಹೊಂದಿಸಬೇಕಾಯಿತು! ಇದನ್ನೆಲ್ಲ ಗಮನಿಸಿದಾಗ ಆಕೆಯ ಕ್ರೀಡಾ ಸಾಧನೆ ನಮಗೆ ಇನ್ನಷ್ಟು ಹೊಳೆದು ಕಾಣುತ್ತದೆ. ಸರಕಾರದ ಕ್ರೀಡಾ ಇಲಾಖೆ, ಕ್ರೀಡಾಭಿಮಾನಿ ಸಂಘಟನೆಗಳು, ಜನಪ್ರತಿನಿಧಿಗಳು ಅಕ್ಷತಾ ಅವರಂತಹ ಕ್ರೀಡಾ ಸಾಧಕರ ನೆರವಿಗೆ ನಿಲ್ಲದೆ ಹೋದರೆ ನೂರಾರು ಕ್ರೀಡಾ ಪ್ರತಿಭೆಗಳು ನಲುಗಿ ಹೋಗುವ ಅಪಾಯ ಇದೆ. ಅಂದಹಾಗೆ ಅಕ್ಷತಾಗೆ ಆಫ್ರಿಕಾದಲ್ಲಿ ಬೆಸ್ಟ್ ಲಿಫ್ಟರ್ ಆಫ್ ದ ಟೂರ್ನಿ ಪ್ರಶಸ್ತಿ ಕೂಡ ದೊರೆತಿದೆ.

ಭರತವಾಕ್ಯ

ಏನಿದ್ದರೂ ಕಾರ್ಕಳ ತಾಲೂಕಿನ ಬೋಳ ಎಂಬ ಪುಟ್ಟ ಗ್ರಾಮದಿಂದ ಲಂಡನ್, ಅಮೆರಿಕ, ಆಫ್ರಿಕ, ದುಬಾಯಿ, ಕಝಾಕಿಸ್ತಾನ್ ತಲುಪಿದ ಆಕೆಯ ಹೋರಾಟ ಮತ್ತು ಸಾಹಸಗಳು ಸಾವಿರಾರು ಗ್ರಾಮೀಣ ಸಾಧಕರಿಗೆ ಸ್ಫೂರ್ತಿ ಆಗಬಲ್ಲದು. ಸರಕಾರ ಆಕೆಯನ್ನು ದೊಡ್ಡದಾಗಿ ಗುರುತಿಸಬೇಕು. ಆಕೆಯ ಬದುಕಿನ ಕಥೆಯು ಹೈಸ್ಕೂಲಿನ ಕನ್ನಡ ಪಠ್ಯಪುಸ್ತಕದಲ್ಲಿ ಸ್ಥಾನ ಪಡೆಯಬೇಕು. ಏನಂತೀರಿ?

ಅಭಿನಂದನೆಗಳು ಅಕ್ಷತಾ. ಯು ಮೇಡ್ ಅಸ್ ಪ್ರೌಡ್.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಕ್ಯಾಪ್ಟನ್ ಪ್ರಾಂಜಲ್ ಪರಾಕ್ರಮಕ್ಕೆ ಒಲಿದ ಶೌರ್ಯ ಚಕ್ರ

Continue Reading

ಪ್ರಮುಖ ಸುದ್ದಿ

WCPL 2024 : ಸಿಪಿಎಲ್​​ನ ಟ್ರಿನ್​ಬ್ಯಾಗೊ ರೈಡರ್ಸ್​ ತಂಡಕ್ಕೆ ಜೆಮಿಮಾ, ಶಿಖಾ ಸೇರ್ಪಡೆ

VISTARANEWS.COM


on

WCPL 2024
Koo

ಬೆಂಗಳೂರು: 2024ರ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್​​ನಲ್ಲಿ (WCPL 2024) ಟ್ರಿನ್​ಬ್ಯಾಗೊ ನೈಟ್ ರೈಡರ್ಸ್ ತಂಡವನ್ನು ಜೆಮಿಮಾ ರೊಡ್ರಿಗಸ್ ಹಾಗೂ ಶಿಖಾ ಪಾಂಡೆ ಸೇರಿಕೊಂಡಿದ್ದಾರೆ. ಈ ಋತುವಿನಲ್ಲಿ ನೈಟ್ ರೈಡರ್ಸ್ ಪರ ವಿದೇಶಿ ಆಟಗಾರರಾಗಿ ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ ಮತ್ತು ಜೆಸ್ ಜೊನಾಸೆನ್ ಸೇರಲಿದ್ದಾರೆ. 2024ರ ಸಿಪಿಎಲ್ ಆಗಸ್ಟ್ 21ರಿಂದ 29ರವರೆಗೆ ಟ್ರಿನಿಡಾಡ್​ನಲ್ಲಿ ನಡೆಯಲಿದ್ದು, ಎಲ್ಲಾ ಏಳು ಪಂದ್ಯಗಳು ಟ್ರಿನಿಡಾಡ್​​ನ ತರೂಬಾದ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯಲಿವೆ.

ಇದೇ ಮೊದಲ ಬಾರಿಗೆ ನಾನು ಡಬ್ಲ್ಯುಸಿಪಿಎಲ್​​ಗೆ ಬರುತ್ತಿದ್ದೇನೆ. ನಾನು ಕೆರಿಬಿಯನ್​​ನಲ್ಲಿ ಭಾರತಕ್ಕಾಗಿ ಸಾಕಷ್ಟು ಆಡಿದ್ದೇನೆ, ಆದರೆ ನಾನು ಡಬ್ಲ್ಯುಸಿಪಿಎಲ್​​ನ ನೈಟ್ ರೈಡರ್ಸ್ ಅನ್ನು ಪ್ರತಿನಿಧಿಸಲಿದ್ದೇನೆ ಎಂದು ತಿಳಿದು ಉತ್ಸುಕನಾಗಿದ್ದೇನೆ,” ಎಂದು ರೋಡ್ರಿಗಸ್ ಹೇಳಿದ್ದಾರೆ.

ಪ್ರಪಂಚದಾದ್ಯಂತ ಅವರು ಹೊಂದಿರುವ ಪರಂಪರೆ ನಮಗೆಲ್ಲರಿಗೂ ತಿಳಿದಿದೆ. 2022ರ ಚಾಂಪಿಯನ್ ಟಿಕೆಆರ್ ಮಹಿಳಾ ತಂಡ ಕೂಡ ಹೆಮ್ಮೆಯ ತಂಡವಾಗಿದೆ. ಅಕ್ಟೋಬರ್​ನಲ್ಲಿ ನಡೆಯಲಿರುವ ಮಹಿಳಾ ವಿಶ್ವ ಟಿ20ಗೆ ಮುಂಚಿತವಾಗಿ ಈ ಪಂದ್ಯಾವಳಿಯು ನಮಗೆ ಉತ್ತಮ ಸಿದ್ಧತೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ನಾನು ನಂಬುತ್ತೇನೆ. ವಿಶ್ವದ ಕೆಲವು ಅತ್ಯುತ್ತಮ ಆಟಗಾರರು ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ, “ಎಂದು ಅವರು ಹೇಳಿದರು.

ನೈಟ್ ರೈಡರ್ಸ್ 2023 ರ ಋತುವಿನಲ್ಲಿ ತಮ್ಮನ್ನು ಪ್ರತಿನಿಧಿಸಿದ ಐದು ಆಟಗಾರರನ್ನು ಉಳಿಸಿಕೊಂಡಿದೆ, ಡಿಯಾಂಡ್ರಾ ಡಾಟಿನ್, ಶಮಿಲಾ ಕಾನ್ನೆಲ್, ಕೈಸಿಯಾ ನೈಟ್, ಜೈದಾ ಜೇಮ್ಸ್ ಮತ್ತು ಸಮರಾ ರಾಮ್​​ನಾಥ್ ಮರಳಿದ್ದಾರೆ. ತಂಡದಲ್ಲಿ ಇನ್ನೂ ಆರು ಸ್ಥಾನಗಳು ಉಳಿದಿದ್ದು, ಜುಲೈನಲ್ಲಿ ನಡೆಯಲಿರುವ ಡಬ್ಲ್ಯುಸಿಪಿಎಲ್ ಡ್ರಾಫ್ಟ್​​ನಲ್ಲಿ ಈ ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: Abhishek Sharma : 47 ಎಸೆತಕ್ಕೆ ಶತಕ ಬಾರಿಸಿ ಹಲವಾರು ದಾಖಲೆ ಮುರಿದಿ ಅಭಿಷೇಕ್​ ಶರ್ಮಾ

ನಮ್ಮ ಸ್ಥಳೀಯ ಕೆರಿಬಿಯನ್ ಆಟಗಾರರನ್ನು ಉಳಿಸಿಕೊಳ್ಳಲು ಮತ್ತು ಈ ವರ್ಷದ ಮಹಿಳಾ ಸಿಪಿಎಲ್​​ಗೆ ನಾಲ್ಕು ವಿಶ್ವಪ್ರಸಿದ್ಧ ವಿದೇಶಿ ಆಟಗಾರರೊಂದಿಗೆ ಸಹಿ ಮಾಡಲು ನಾವು ತುಂಬಾ ಉತ್ಸುಕರಾಗಿದ್ದೇವೆ” ಎಂದು ನೈಟ್ ರೈಡರ್ಸ್ ಗ್ರೂಪ್​​​ನ ಸಿಇಒ ವೆಂಕಿ ಮೈಸೂರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಡಿಯಾಂಡ್ರಾ ಡಾಟಿನ್ ಮತ್ತೊಮ್ಮೆ ತಂಡವನ್ನು ಮುನ್ನಡೆಸುತ್ತಿರುವುದು ಸಂತಸ ತಂದಿದೆ. ಉದ್ಘಾಟನಾ ವರ್ಷದಿಂದ ಅವರು ತಂಡದ ಅದ್ಭುತ ನಾಯಕಿಯಾಗಿದ್ದಾರೆ, 2022 ರಲ್ಲಿ ನಮ್ಮ ಪ್ರಶಸ್ತಿ ಗೆದ್ದಾಗಿನಿಂದ ನಾಯಕ ಮತ್ತು ಆಟಗಾರ್ತಿಯಾಗಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ “ಎಂದು ಅವರು ಹೇಳಿದರು.

ಜೆಮಿಮಾ ರೊಡ್ರಿಗಸ್ ಮತ್ತು ಶಿಖಾ ಪಾಂಡೆ ಪಂದ್ಯಾವಳಿಯ ಗುಣಮಟ್ಟ ಹೆಚ್ಚಿಸಲಿದ್ದಾರೆ. ಡಬ್ಲ್ಯುಸಿಪಿಎಲ್​​ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ನಾವು ಬಿಸಿಸಿಐಗೆ ತುಂಬಾ ಕೃತಜ್ಞರಾಗಿದ್ದೇವೆ. ಸೂಪರ್ ಸ್ಟಾರ್​ಗಳಾದ ಮೆಗ್ ಲ್ಯಾನಿಂಗ್ ಮತ್ತು ಜೆಸ್ ಜೊನಾಸೆನ್ ಅವರೊಂದಿಗೆ ಈ ಎರಡು ದೊಡ್ಡ ಭಾರತೀಯ ಹೆಸರುಗಳ ಸೇರ್ಪಡೆಯು ಕ್ರಿಕೆಟ್ ಗೆ ಕಳೆ ಹೆಚ್ಚಿಸಲಿದೆ, “ಎಂದು ಅವರು ಹೇಳಿದರು.

ಮಹಿಳಾ ತಂಡದ ಆಟಗಾರರು ಇವರು

ಡಿಯಾಂಡ್ರಾ ಡಾಟಿನ್, ಮೆಗ್ ಲ್ಯಾನಿಂಗ್, ಜೆಸ್ ಜೊನಾಸೆನ್, ಜೆಮಿಮಾ ರೊಡ್ರಿಗಸ್, ಶಿಖಾ ಪಾಂಡೆ, ಕೈಸಿಯಾ ನೈಟ್, ಶಮಿಲಾ ಕಾನ್ನೆಲ್, ಜೈದಾ ಜೇಮ್ಸ್, ಸಮರಾ ರಾಮನಾಥ್.

Continue Reading
Advertisement
Yuzvendra Chahal
ಕ್ರಿಕೆಟ್13 mins ago

Yuzvendra Chahal : ಪತ್ನಿ ಧನಶ್ರೀ ವರ್ಮಾಗೆ ವಿಶ್ವ ಕಪ್​ ಪದಕ ಅರ್ಪಿಸಿದ ಯಜ್ವೇಂದ್ರ ಚಹಲ್​

Rahul Gandhi
ರಾಜಕೀಯ21 mins ago

Rahul Gandhi: ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿಗೆ ಇರುವ ಅಧಿಕಾರ ಏನೇನು?

karthik purohith samatha actor darshan
ಕ್ರೈಂ22 mins ago

Actor Darshan: ಪವಿತ್ರ ಗೌಡ ಆಪ್ತೆ, ಶಾಸಕರ ಕಾರು ಚಾಲಕನಿಗೆ ಸಂಕಷ್ಟ; 2ನೇ ಬಾರಿ ವಿಚಾರಣೆ, ಬಂಧನ?

Kashmir Encounter
ಪ್ರಮುಖ ಸುದ್ದಿ34 mins ago

Terrorists Killed : ನಕಲಿ ಬಂಕರ್​ನಲ್ಲಿ ಅಡಗಿ ಕುಳಿತಿದ್ದ ನಾಲ್ವರು ಉಗ್ರರನ್ನು ಹತ್ಯೆ ಮಾಡಿದ ಭದ್ರತಾ ಪಡೆ

ATM Robbery case
ಕ್ರೈಂ52 mins ago

Robbery Case: ಬೆಂಗಳೂರಿನ ಎಟಿಎಂಗಳಲ್ಲಿ ಹರ್ಯಾಣದ ಗ್ಯಾಂಗ್‌ಗಳಿಂದ ದರೋಡೆ!

Abhishek Sharma
ಪ್ರಮುಖ ಸುದ್ದಿ55 mins ago

Abhishek Sharma : ಅಭಿಷೇಕ್ ಶರ್ಮಾ ದಾಖಲೆಯ ಶತಕ ಬಾರಿಸಿದ್ದು ಶುಭ್​​ಮನ್ ಗಿಲ್​ ಬ್ಯಾಟ್​ನಲ್ಲಿ!

Ghee benefits
ಲೈಫ್‌ಸ್ಟೈಲ್1 hour ago

How to spot fake ghee: ನಾವು ಖರೀದಿಸಿದ ತುಪ್ಪ ಶುದ್ಧವೋ ಕಲಬೆರಕೆಯೋ ಪರೀಕ್ಷಿಸುವುದು ಹೇಗೆ?

ರಾಜಮಾರ್ಗ ಅಂಕಣ bola akshta pujari
ಅಂಕಣ1 hour ago

ರಾಜಮಾರ್ಗ ಅಂಕಣ: ದಕ್ಷಿಣ ಆಫ್ರಿಕಾದಲ್ಲಿ ಚಿನ್ನದ ಪದಕ ಗೆದ್ದ ಕಾರ್ಕಳದ ಬೋಳ ಅಕ್ಷತಾ ಪೂಜಾರಿ

karnataka weather Forecast
ಮಳೆ2 hours ago

Karnataka Weather : ಬೆಂಗಳೂರಲ್ಲಿ ಗುಡುಗು ಸಹಿತ ಮಳೆ; ಕರಾವಳಿ, ಮಲೆನಾಡಿನಲ್ಲಿ ವರುಣಾರ್ಭಟ ಮುಂದುವರಿಕೆ

Vastu Tips
ಧಾರ್ಮಿಕ2 hours ago

Vastu Tips: ಮನೆಯಲ್ಲಿ ನೆಮ್ಮದಿ ನೆಲೆಸಬೇಕೆ? ಹಾಗಿದ್ದರೆ ಅಡುಗೆ ಒಲೆಯ ದಿಕ್ಕು ಸರಿಯಾಗಿರಲಿ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ12 hours ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ15 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ16 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ1 day ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ2 days ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ2 days ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು2 days ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ2 days ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ2 days ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

ಟ್ರೆಂಡಿಂಗ್‌