Site icon Vistara News

ಅಂಡರ್​-19 ವಿಶ್ವಕಪ್‌ ಆಡಲಿದ್ದಾರೆ ಕರ್ನಾಟಕದ ಯುವ ವೇಗಿ

Dhanush Gowda India U-19 World Cup

ಬೆಂಗಳೂರು: ಮುಂದಿನ ವರ್ಷ ಜನವರಿ 19ರಿಂದ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಐಸಿಸಿ ಅಂಡರ್‌-19 ಏಕದಿನ(U-19 World Cup) ವಿಶ್ವಕಪ್‌ಗೆ ಬಿಸಿಸಿಐ 15 ಸದಸ್ಯರ ಭಾರತ ತಂಡವನ್ನು ಮಂಗಳವಾರ ಪ್ರಕಟಸಿತ್ತು. ಈ ತಂಡದಲ್ಲಿ ಕರ್ನಾಟಕದ ಯುವ ವೇಗಿ ಧನುಷ್‌ ಗೌಡ(Dhanush Gowda) ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಧನುಷ್‌ ಗೌಡ ಅವರು ಈಗಾಗಲೇ ಕಿರಿಯರ ಕ್ರಿಕೆಟ್​ನಲ್ಲಿ ತಮ್ಮ ಕರಾರುವಾಕ್​ ಬೌಲಿಂಗ್​ ಮೂಲಕ ಗಮನಸೆಳೆದಿದ್ದಾರೆ. ಇದೇ ಕಾರಣದಿಂದ ಅವರು ವಿಶ್ವಕಪ್ ತಂಡದಲ್ಲಿಯೂ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವಕಪ್​ ಆಡುವ ಬಳಗದಲ್ಲಿಯೂ ಅವರಿಗೆ ಸ್ಥಾನ ಸಿಕ್ಕಿ ಉತ್ತಮ ಪ್ರದರ್ಶನ ತೋರುವಂತಾಗಲಿ ಎನ್ನುವುದು ಎಲ್ಲ ಕನ್ನಡಿಗರ ಹಾರೈಕೆಯಾಗಿದೆ.​

ತಂಡವನ್ನು ಉದಯ್‌ ಶಹರನ್‌ ಮುನ್ನಡೆಸಲಿದ್ದಾರೆ. ಪ್ರಸಕ್ತ ಸಾಗುತ್ತಿರುವ ಅಂಡರ್​-19 ಏಷ್ಯಾಕಪ್​ನಲ್ಲಿಯೂ ಶಹರನ್‌ ಭಾರತ ತಂಡದ ನಾಯಕನಾಗಿದ್ದಾರೆ. ಸೌಮಿ ಕುಮಾರ್‌ ಪಾಂಡೆ ಉಪನಾಯಕನಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಭಾರತ ತಂಡ

ಉದಯ್‌(ನಾಯಕ), ಸೌಮಿ, ಅರ್ಶಿನ್‌ ಕುಲಕರ್ಣಿ, ಆದರ್ಶ್‌ ಸಿಂಗ್‌, ರುದ್ರ ಮಯೂರ್‌, ಸಚಿನ್‌ ದಾಸ್‌, ಪ್ರಿಯಾನ್ಶು ಮೋಲಿಯಾ, ಮುಶೀರ್ ಖಾನ್‌, ಮುರುಗನ್‌ ಅಭಿಷೇಕ್‌, ಅವನೀಶ್‌ ರಾವ್‌, ಇನ್ನೇಶ್‌ ಮಹಾಜನ್‌, ಧನುಶ್‌, ಆರಾಧ್ಯ ಶುಕ್ಲಾ, ರಾಜ್‌ ಲಿಂಬಾನಿ, ನಮನ್‌ ತಿವಾರಿ.

ವಿಶ್ವಕಪ್​ಗೂ ಮುನ್ನ ಇದೇ ತಂಡ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ತ್ರಿಕೋನ ಸರಣಿಯಲ್ಲಿ ಆಡಲಿದೆ. ಮೂರು ತಂಡಗಳ ತ್ರಿಕೋನ ಸರಣಿ ಡಿಸೆಂಬರ್ 29 ರಿಂದ ಆರಂಭವಾಗಿ ಜನವರಿ 10ರ ತನಕ ನಡೆಯಲಿದೆ. ಜನವರಿ 19 ರಿಂದ ಫ್ರೆಬ್ರವರಿ 11 ರವರೆಗೆ ವಿಶ್ವಕಪ್ ಟೂರ್ನಿ ನಡೆಯಲಿದೆ. ಹಾಲಿ ಚಾಂಪಿಯನ್​ ಭಾರತ ಜನವರಿ 20ಕ್ಕೆ ನಡೆಯುವ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಕಣಕಿಳಿಯುವ ಮೂಲಕ ತನ್ನ ವಿಶ್ವಕಪ್​ ಅಭಿಯಾನ ಆರಂಭಿಸಲಿದೆ.

ಇದನ್ನೂ ಓದಿ IND vs SA 3rd T20: ನಾಳೆ ನಡೆಯುವ ಅಂತಿಮ ಟಿ20 ಪಂದ್ಯದ ಹವಾಮಾನ ವರದಿ ಹೇಗಿದೆ?

5 ಬಾರಿಯ ಚಾಂಪಿಯನ್​

ಅಂಡರ್​-19 ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತನ್ನದೇ ಆದ ದಾಖಲೆ ಹೊಂದಿದೆ. ಅಲ್ಲದೆ ಟೂರ್ನಿಯ ಶ್ರೇಷ್ಠ ತಂಡ ಎಂಬ ಹಿರಿಮೆಯನ್ನು ಪಡೆದಿದೆ. ಒಟ್ಟು ಐದು ಪ್ರಶಸ್ತಿಗಳನ್ನು ಗೆದ್ದಿರುವ ಭಾರತ, ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿದೆ. ಆಸ್ಟ್ರೇಲಿಯಾ ಮೂರು ಪ್ರಶಸ್ತಿಗಳೊಂದಿಗೆ ನಂತರದ ಸ್ಥಾನದಲ್ಲಿದೆ. ಪಾಕಿಸ್ತಾನ ಎರಡು ಬಾರಿ ಗೆದ್ದರೆ, ಇಂಗ್ಲೆಂಡ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಲಾ ಒಂದು ಬಾರಿ ಕಿರೀಟವನ್ನು ಎತ್ತಿ ಹಿಡಿದಿವೆ.

ಭಾರತ ತಂಡದ ಲೀಗ್​ ಹಂತದ ವೇಳಾಪಟ್ಟಿ

ಜನವರಿ 20- ಭಾರತ vs ಬಾಂಗ್ಲಾದೇಶ

ಜನವರಿ 22- ಭಾರತ vs ಐರ್ಲೆಂಡ್

ಜನವರಿ 28- ಭಾರತ vs ಯುಎಸ್​ಎ

Exit mobile version