Site icon Vistara News

IPL 2023 : 127 ರನ್​ಗಳಿಗೆ ಕೆಕೆಆರ್​ ಆಲ್​ಔಟ್​, ಡೆಲ್ಲಿ ತಂಡಕ್ಕೆ ಸಾಧಾರಣ ಮೊತ್ತದ ಗೆಲುವಿನ ಗುರಿ

#image_title

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲರ್​ಗಳ ಮಾರಕ ಬೌಲಿಂಗ್​ಗೆ ತತ್ತರಿಸಿದ ಕೋಲ್ಕೊತಾ ನೈಟ್​ ರೈಡರ್ಸ್​ ತಂಡ ಐಪಿಎಲ್​ 16ನೇ ಆವೃತ್ತಿಯ 28ನೇ ಪಂದ್ಯದಲ್ಲಿ 127 ರನ್​ಗಳಿಗೆ ಆಲ್​ಔಟ್ ಅಗಿದೆ. ಇದರೊಂದಿಗೆ ಗೆಲುವಿನ ರುಚಿಯನ್ನೇ ಕಾಣದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸಾಧಾರಣ ಮೊತ್ತದ ಸವಾಲು ಎದುರಾಗಿದೆ.

ಅರುಣ್​ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ಹಣಾಹಣಿಯಲ್ಲಿ ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್​ ವಾರ್ನರ್​ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯ ಮೊದಲು ಬ್ಯಾಟ್ ಮಾಡಿದ ಕೆಕೆಆರ್​ ತಂಡ 20 ಓವರ್​ಗಳಲ್ಲಿ 217 ರನ್ ಮಾಡಿ ಆಲ್ಔಟ್​ ಆಯಿತು.

ಬ್ಯಾಟಿಂಗ್​ ಆರಂಭಿಸಿದ ಕೋಲ್ಕೊತಾ ನೈಟ್​ ರೈಡರ್ಸ್​ ತಂಡದ ಆರಂಭ ಉತ್ತಮವಾಗಿರಲಿಲ್ಲ. ಬಾಂಗ್ಲಾದೇಶದ ವಿಕೆಟ್​ಕೀಪರ್ ಬ್ಯಾಟರ್​ (4) ಬೇಗನೆ ವಿಕೆಟ್​ ಒಪ್ಪಿಸಿದರು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ನಾಯಕ ನಿತೀಶ್​ ರಾಣಾ ಕೂಡ 4 ರನ್​ಗಳಿಗೆ ಔಟಾದರು. ಹೀಗಾಗಿ ಕೆಕೆಆರ್​ ತಂಡ 50 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಯಿತು.

ಕೆಕೆಆರ್ ತಂಡದ ಪರ ಜೇಸನ್​ ರಾಯ್​ (43) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅವರು ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರೆ ಕೊನೇ ಹಂತದಲ್ಲಿ ಆ್ಯಂಡ್ರೆ ರಸೆಲ್​ 4 ಸಿಕ್ಸರ್ ಹಾಗೂ 1 ಫೋರ್ ನೆರವಿನಿಂದ ಅಜೇಯ 38 ರನ್​ ಬಾರಿಸಿದರು.

ಆ ಬಳಿಕ ಪಾರಮ್ಯ ಸಾಧಿಸಿದ ಡೆಲ್ಲಿ ಬೌಲರ್​ಗಳು ಸತತವಾಗಿ ಎದುರಾಳಿ ತಂಡದ ವಿಕೆಟ್​ಗಳನ್ನು ಉರುಳಿಸಿದರು. ಮನ್​ದೀಪ್ ಸಿಂಗ್​ (12), ರಿಂಕು ಸಿಂಗ್​ (6), ಸುನೀಲ್​ ನರೈನ್​ (4), ಅಂಕುಲ್ ರಾಯ್​ (0), ಉಮೇಶ್​ ಯಾದವ್​ (3) ಬೇಗನೆ ಪೆವಿಲಿಯನ್​ಗೆ ಮರಳಿದರು.

96 ರನ್​ಗಳಿಗೆ 9 ವಿಕೆಟ್​ ಕಳೆದುಕೊಂಡಿದ್ದ ಕೆಕೆಆರ್​ ತಂಡ ಕೊನೇ ವಿಕೆಟ್​​ಗೆ 31 ರನ್ ಬಾರಿಸಿತು.

ಒಂದು ಗಂಟೆ ತಡವಾಗಿ ಪಂದ್ಯ ಆರಂಭ

ಡೆಲ್ಲಿಯಲ್ಲಿ ಗುರುವಾರ ಸಂಜೆ ಅಕಾಲಿಕ ಮಳೆಯಾಯಿತು. ಹೀಗಾಗಿ ಪಂದ್ಯ ಆರಂಭಕ್ಕೆ ಅಡಚಣೆ ಉಂಟಾಯಿತು. 7 ಗಂಟೆಗೆ ನಡೆಯಬೇಕಾಗಿದ್ದ ಟಾಸ್​ 8.15ಕ್ಕೆ ನಡೆಯಿತು. ಪಂದ್ಯ 8.30ಕ್ಕೆ ಆರಂಭಗೊಂಡಿತು. ಈ ಮೂಲಕ ಒಂದು ಗಂಟೆ ತಡವಾಗಿ ಪಂದ್ಯ ಆರಂಭಗೊಂಡಿತು.

Exit mobile version