Site icon Vistara News

IPL 2023 : ಪಂಜಾಬ್​ ಕಿಂಗ್ಸ್ ವಿರುದ್ಧ ಕೆಕೆಆರ್​ ತಂಡಕ್ಕೆ 5 ವಿಕೆಟ್​ ಗೆಲುವು

#image_title

ಕೋಲ್ಕೊತಾ: ನಾಯಕ ನಿತೀಶ್ ರಾಣಾ (51) ಅರ್ಧ ಶತಕ ಹಾಗೂ ಆ್ಯಂಡ್ರೆ ರಸೆಲ್​ (42) ಅವರ ಸ್ಫೋಟಕ ಬ್ಯಾಟಿಂಗ್ ನೆರವು ಪಡೆದ ಕೆಕೆಆರ್ ತಂಡ ಐಪಿಎಲ್ 16ನೇ ಆವೃತ್ತಿಯ (IPL 2023) 53ನೇ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್ ವಿರುದ್ಧ 5 ವಿಕೆಟ್​ಗಳ ವಿಜಯ ಸಾಧಿಸಿತು. ಈ ಪಂದ್ಯವೂ ಹಾಲಿ ಆವೃತ್ತಿಯ ಐಪಿಎಲ್​ನ ಲಾಸ್ಟ್​ ಬಾಲ್​ ಥ್ರಿಲ್​ ಪಂದ್ಯ. ಕೊನೇ ಎಸೆತಕ್ಕೆ ಕೆಕೆಆರ್​ ತಂಡದ ಗೆಲುವಿಗೆ 2 ರನ್​ ಬೇಕಾಗಿತ್ತು. ರಿಂಕು ಸಿಂಗ್ ಫೋರ್ ಬಾರಿಸುವ ಮೂಲಕ ಗೆಲುವು ತಂದುಕೊಟ್ಟು ಸಂಭ್ರಮಿಸಿದರು. ಕೆಕೆಆರ್ ತಂಡಕ್ಕೆ ಇದು ಸತತ ಎರಡನೇ ಗೆಲುವಾಗಿದ್ದು, ಹಿಂದಿನ ಪಂದ್ಯದಲ್ಲಿ ಎಸ್​ಆರ್​ಎಚ್ ತಂಡವನ್ನು ಮಣಿಸಿತ್ತು. ಅತ್ತ ಪಂಜಾಬ್ ತಂಡಕ್ಕೆ ಬೆನ್ನು ಬೆನ್ನಿಗೆ ಎರಡು ಸೋಲು ಎದುರಾಯಿತು. ಹಿಂದಿನ ಪಂದ್ಯದಲ್ಲಿ ಈ ತಂಡ ಮುಂಬಯಿ ಇಂಡಿಯನ್ಸ್​ಗೆ ಶರಣಾಗಿತ್ತು.

ಈಡನ್​ ಗಾರ್ಡನ್ಸ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಪಂಜಾಬ್ ಕಿಂಗ್ಸ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟ ಮಾಡಿಕೊಂಡು 179 ರನ್​ ಬಾರಿಸಿತು. ಪ್ರತಿಯಾಗಿ ಆಡಿದ ಕೆಕೆಆರ್​ ತಂಡ 20 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 182 ರನ್ ಬಾರಿಸಿ ವಿಜಯ ಸಾಧಿಸಿತು.

ದೊಡ್ಡ ಗುರಿಯನ್ನು ಬೆನ್ನಟ್ಟಲು ಆರಂಭಿಸಿ ಕೆಕೆಆರ್​ ತಂಡ ಸಮರ್ಥ ರೀತಿಯಲ್ಲಿ ಬ್ಯಾಟಿಂಗ್ ಆರಂಭಿಸಿತು. ಆದರೆ, ಆರಂಭಿಕ ಬ್ಯಾಟರ್​ ರಹ್ಮನುಲ್ಲಾ ಗುರ್ಬಜ್​ 15 ರನ್​ಗಳಿಗೆ ಔಟಾಗುವ ಮೂಲಕ ತಂಡಕ್ಕೆ ಆಘಾತವಾಯಿತು. ಆದರೆ, ಮತ್ತೊಬ್ಬ ಆರಂಭಿಕ ಬ್ಯಾಟರ್​ ಜೇಸನ್​ ರಾಯ್​ 38 ರನ್​ ಬಾರಿಸಿ ತಂಡಕ್ಕೆ ಆಧಾರವಾಧರು. ಬಳಿಕ ವೆಂಕಟೇಶ್​ ಅಯ್ಯರ್​ 11 ರನ್ ಕೊಡುಗೆ ಕೊಟ್ಟರು. ಆದರೆ, ಅದಕ್ಕಿಂದ ಮೊದಲು ಆಡಲು ಬಂದ ನಾಯಕ ನಿತೀಶ್ ರಾಣಾ 51 ರನ್ ಬಾರಿಸಿ ತಂಡದ ಗೆಲುವಿಗೆ ಮುನ್ನುಡಿ ಬರೆದರು.

ಅಂತಿಮ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಆ್ಯಂಡ್ರೆ ರಸೆಲ್ 23 ಎಸೆತಗಳಲ್ಲಿ 43 ರನ್ ಬಾರಿಸಿದರು. ರಿಂಕು ಸಿಂಗ್ ಅವರಿಗೆ ಉತ್ತಮ ಜತೆಯಾಟ ನೀಡಿ 10 ಎಸೆತಗಳಿಗೆ 21 ರನ್ ಬಾರಿಸಿದರು. ಪಂಜಾಬ್​ ಪರ ರಾಹುಲ್ ಚಾಹರ್ ಎರಡು ವಿಕೆಟ್​ ಪಡೆದರು. ಈ ಸೋಲಿನೊಂದಿಗೆ ಪಂಜಾಬ್​ ನಾಯಕ ಶಿಖರ್ ಧವನ್​ (57) ಅವರ ಅರ್ಧ ಶತಕ ವ್ಯರ್ಥಗೊಂಡಿತು.

ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ತಂಡ 21 ರನ್​ಗಳಿಗೆ ಮೊದಲ ವಿಕೆಟ್​ ಕಳೆದುಕೊಂಡಿತು. ಆರಂಭಿಕ ಬ್ಯಾಟರ್ ಪ್ರಭ್​ಸಿಮ್ರಾನ್​ ಸಿಂಗ್​ 12 ರನ್​ಗೆ ವಿಕೆಟ್​ ಒಪ್ಪಿಸುವ ಮೂಲಕ ನಿರಾಸೆ ಎದುರಿಸಿದರು. ಅದಾದ ಬಳಿಕ ಆಡಲು ಇಳಿದ ಭಾನುಕಾ ರಾಜಪಕ್ಷ ಶೂನ್ಯಕ್ಕೆ ಔಟಾಗುವುದರೊಂದಿಗೆ ತಂಡಕ್ಕೆ ಮತ್ತೊಂದು ಆಘಾತ ಉಂಟಾಯಿತು. ಹಿಂದಿನ ಪಂದ್ಯದಲ್ಲಿ ಅಮೋಘ 82 ರನ್ ಬಾರಿಸಿದ್ದ ಲಿಯಾಮ್​ ಲಿವಿಂಗ್​ಸ್ಟನ್​ ಕೂಡ 15 ರನ್​ಗಳಿಗೆ ಔಟಾದರು.

ಇದನ್ನೂ ಓದಿ ವ: IPL 2023 : ವೃದ್ಧಿಮಾನ್ ಸಾಹಸಕ್ಕೆ ಶಹಬ್ಬಾಸ್​ ಎಂದ ವಿರಾಟ್​ ಕೊಹ್ಲಿ

ವಿಕೆಟ್​ಕೀಪರ್ ಜಿತೇಶ್​ ಶರ್ಮಾ ಸ್ಫೋಟಿಸುವ ಸೂಚನೆ ಕೊಟ್ಟರೂ 21 ರನ್​​ಗಳಿಗೆ ಸೀಮಿತಗೊಂಡರು. ಸ್ಯಾಮ್​ ಕರ್ರನ್​ 4 ರನ್​ಗೆ ಔಟಾದರು. ಆಲ್​ರೌಂಡರ್​ ರಿಷಿ ಧವನ್ 19 ರನ್​ ಬಾರಿಸಿದರೆ, ಕೊನೆಯಲ್ಲಿ ಶಾರುಖ್ ಖಾನ್ 8 ಎಸೆತಕ್ಕೆ 21 ರನ್​ ಬಾರಿಸಿದರು. ಹರ್​ಪ್ರೀತ್​ ಬ್ರಾರ್ ಕೂಡ 9 ಎಸೆತಕ್ಕೆ 17 ರನ್​ ಬಾರಿಸಿದರು. ಈ ಜೋಡಿ ಎಂಟನೇ ವಿಕೆಟ್​ಗೆ 40 ರನ್ ಬಾರಿಸುವ ಮೂಲಕ ಪಂಜಾಬ್ ತಂಡಕ್ಕೆ ಸಮಾಧಾನಕರ ಮೊತ್ತ ಪೇರಿಸಲು ನೆರವಾದರು.

ಧನವ್​ ಅರ್ಧ ಶತಕದ ಸಾಧನೆ

ಪಂಜಾಬ್ ಕಿಂಗ್ಸ್ ನಾಯಕ ಬ್ಯಾಟಿಂಗ್ ಆರಂಭಿಸಿ ತಮ್ಮ ತಂಡಕ್ಕೆ ಉತ್ತಮ ಆರಂಭ ನೀಡಿದರು. ಅವರು ಕೆಲವು ಸೊಗಸಾದ ಹೊಡೆತಗಳನ್ನು ಬಾರಿಸಿದರಲ್ಲದೆ, ಋತುವಿನಲ್ಲಿ ತಮ್ಮ ಮೂರನೇ ಅರ್ಧಶತಕವನ್ನು ಗಳಿಸಿದರು. ಈ ಮೂಲಕ ಅವರು ಐಪಿಎಲ್​ನಲ್ಲಿ 50 ಅರ್ಧ ಶತಕ ಬಾರಿಸಿದ ಸಾಧನೆ ಮಾಡಿದರು. ಪಂಜಾಬ್ ಕಿಂಗ್ಸ್ ನಾಯಕ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 213 ಇನ್ನಿಂಗ್ಸ್​ಗಳಲ್ಲಿ 6592 ರನ್ ಗಳಿಸಿದ್ದಾರೆ ಮ

Exit mobile version