ಬೆಂಗಳೂರು: ದೇಶಾದ್ಯಂತ ದೀಪಾವಳಿ(diwali 2023) ಹಬ್ಬದ ಸಂಭ್ರಮ ಜೋರಾಗಿದೆ. ಎಲ್ಲೆಲ್ಲೂ ಪಟಾಕಿ ಸದ್ದು ಕೇಳಿಸುತ್ತಿದೆ. ಕುಟುಂಬಸ್ಥರು, ಸಂಬಂಧಿಕರು, ಗೆಳೆಯರ ಜತೆ ಹಬ್ಬದ ಆಚರಣೆ ಭರ್ಜರಿಯಾಗಿದೆ. ಇದರ ಬೆನ್ನಲೇ ಟೀಮ್ ಇಂಡಿಯಾದ ಸ್ಟಾರ್ ಆಟಗಾರ, ಕನ್ನಡಿಗ ಕೆ.ಎಲ್ ರಾಹುಲ್(KL Rahul) ಅವರು ನಾಡಿದ ಜನತೆಗೆ ದೀಪಾವಳಿ ಶುಭಾಶಯ(diwali wishes) ಕೋರಿದ್ದಾರೆ. ಅದು ಕೂಡ ಕನ್ನಡದಲ್ಲೇ ಶುಭ ಕೋರಿ ಎಲ್ಲ ಕನ್ನಡಿಗರ ಹೃದಯ ಗೆದ್ದಿದ್ದಾರೆ.
ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಅವರು ಶತಕ ಬಾರಿಸಿ ಸಂಭ್ರಮಿಸಿದ್ದರು. ತಮ್ಮ ಶತಕದ ಮತ್ತು ಪಂದ್ಯದ ಫೋಟೊಗಳನ್ನು ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಾಕಿ ‘ದೀಪಾವಳಿಯ ಶುಭಾಶಯಗಳು’ ಎಂದು ಬರೆದು ತಿವರ್ಣ ಧ್ವಜ ಮತ್ತು ಹಣತೆಯ ಎಮೋಜಿಯನ್ನು ಹಾಕಿದ್ದಾರೆ.
ದೀಪಾವಳಿಯ ಶುಭಾಶಯಗಳು 🇮🇳🪔🙏🏽 pic.twitter.com/Y2OJg82kkl
— K L Rahul (@klrahul) November 12, 2023
ದಾಖಲೆ ಬರೆದ ರಾಹುಲ್
ನೆದರ್ಲೆಂಡ್ಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಕೆ.ಎಲ್ ರಾಹುಲ್ 62 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ವಿಶ್ವಕಪ್ನಲ್ಲಿ ಅತಿ ವೇಗದ ಶತಕ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವೇಳೆ ಅವರು 2023 ರ (ಹಾಲಿ ಆವೃತ್ತಿಯ) ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 63 ಎಸೆತಗಳಲ್ಲಿ ಶತಕ ಬಾರಿಸಿದ ರೋಹಿತ್ ಶರ್ಮಾ ಅವರ ದಾಖಲೆ ಅವರು ಮುರಿದರು.
ರಾಹುಲ್ 64 ಎಸೆತಗಳಲ್ಲಿ 102 ರನ್ ಗಳಿಸುವ ಹಾದಿಯಲ್ಲಿ 11 ಬೌಂಡರಿ ಮತ್ತು ನಾಲ್ಕು ಸಿಕ್ಸರ್ಗಳನ್ನು ಬಾರಿಸಿದರು, ಇದು ವಿಶ್ವಕಪ್ ಪಂದ್ಯದಲ್ಲಿ ಭಾರತವನ್ನು ಎರಡನೇ ಅತಿ ಹೆಚ್ಚು ಮೊತ್ತಕ್ಕೆ (410/4) ಮುನ್ನಡೆಸಿತು. ಇದು ರಾಹುಲ್ ಅವರ ಆರನೇ ಏಕದಿನ ಶತಕವಾಗಿದೆ. ಭಾರತದ 5ನೇ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಜೊತೆಗೂಡಿ 208 ರನ್ಗಳ ಜೊತೆಯಾಟವಾಡಿದ್ದು, ಇದು ಏಕದಿನ ವಿಶ್ವಕಪ್ನಲ್ಲಿ ನಾಲ್ಕನೇ ವಿಕೆಟ್ಗೆ ಅತಿ ಹೆಚ್ಚು ರನ್ಗಳ ಜೊತೆಯಾಟದ ದಾಖಲೆಯಾಗಿದೆ.
ಇದನ್ನೂ ಓದಿ MS Dhoni: ಧೋನಿ ಕುಟುಂಬದೊಂದಿಗೆ ದೀಪಾವಳಿ ಆಚರಿಸಿದ ರಿಷಭ್ ಪಂತ್
ತವರಿನ ಅಂಗಳದಲ್ಲಿ ರಾಹುಲ್ ಅವರು ಪ್ರಚಂಡ ಬ್ಯಾಟಿಂಗ್ ತೋರ್ಪಡಿಸುವ ಮೂಲಕ ನೆರೆದಿದ್ದ ತವರಿನ ಅಭಿಮಾನಿಗಳಿಗೆ ಭರಪೂರ ರಂಚನೆ ನೀಡಿದರು. ಬ್ಯಾಟಿಂಗ್ ಮಾತ್ರವಲ್ಲದೆ ಕೀಪಿಂಗ್ನಲ್ಲಿಯೂ ಮಿಂಚಿದ ಅವರು 2 ಅದ್ಭುತ ಕ್ಯಾಚ್ಗಳನ್ನು ಕೂಡ ಹಿಡಿದು ಮಿಂಚಿದರು.
ಜತೆಯಾಟದಲ್ಲಿಯೂ ದಾಖಲೆ ಬರೆದ ರಾಹುಲ್
ಈ ಪಂದ್ಯದಲ್ಲಿ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡದ ಪರವಾಗಿ ನಾಲ್ಕನೇ ಅತ್ಯಧಿಕ ರನ್ಗಳ ಜತೆಯಾಟ ನಡೆಸಿ ದಾಖಲೆಯ ಬರೆದರು. ಉಭಯ ಆಟಗಾರರು ನಾಲ್ಕನೇ ವಿಕೆಟ್ಗೆ 208 ರನ್ಗಳ ಜತೆಯಾಟ ನೀಡಿದರು. ಈ ಮೂಕಲ ವಿಶ್ವಕಪ್ನಲ್ಲಿ ನಾಲ್ಕನೇ ವಿಕೆಟ್ ಅಥವಾ ಅದಕ್ಕಿಂತ ಕಡಿಮೆ ವಿಕೆಟ್ಗೆ ಭಾರತದ ಅತ್ಯಧಿಕ ಜತೆಯಾಟ ನಡೆಸಿದ ದಾಖಲೆ ನಿರ್ಮಿಸಿದರು.