ಹೈದರಾಬಾದ್ : ನಾಯಕ ನಿತೀಶ್ ರಾಣಾ (42) ಹಾಗೂ ಯುವ ಬ್ಯಾಟರ್ ರಿಂಕು ಸಿಂಗ್ (46) ಅವರ ಸಮಯೋಚಿತ ಬ್ಯಾಟಿಂಗ್ ಹಾಗೂ ಬೌಲರ್ಗಳ ಹೋರಾಟದ ನೆರವು ಪಡೆದ ಕೋಲ್ಕೊತಾ ನೈಟ್ ರೈಡರ್ಸ್ ತಂಡ ಐಪಿಎಲ್ 16ನೇ ಆವೃತ್ತಿಯ 47ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 5 ರನ್ಗಳ ರೋಚಕ ಜಯ ಪಡೆಯಿತು. ಈ ಮೂಲಕ ಮತ್ತೆ ಸೋಲಿನ ಸುಳಿಗೆ ಸಿಲುಕಿತು. ಹಿಂದಿನ ಪಂದ್ಯದಲ್ಲಿ ಎಸ್ಆರ್ಎಚ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯ ದಾಖಲಿಸಿದ್ದ ಎಸ್ಆರ್ಎಚ್ ಗೆಲುವಿಗಿದ್ದ ಮತ್ತೊಂದು ಅವಕಾಶವನ್ನು ನಷ್ಟ ಮಾಡಿಕೊಂಡಿತು.
ಇಲ್ಲಿನ ರಾಜೀವ್ಗಾಂಧಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 171 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಎಸ್ಆರ್ಎಚ್ ತಂಡ ತನ್ನ ಪಾಲಿನ 20 ಓವರ್ಗಳು ಮುಕ್ತಾಯಗೊಂಡಾಗ 8 ವಿಕೆಟ್ ನಷ್ಟಕ್ಕೆ 166 ರನ್ ಬಾರಿಸಿ ಸೋಲೊಪ್ಪಿಕೊಂಡಿತು.
ಗುರಿ ಬೆನ್ನಟ್ಟಲು ಆರಂಭಿಸಿದ ಹೈದರಾಬಾದ್ ತಂಡ ಮತ್ತೆ ಬ್ಯಾಟಿಂಗ್ನಲ್ಲಿ ವೈಫಲ್ಯ ಕಂಡಿತು. ನಾಯಕ ಏಡೆನ್ ಮಾರ್ಕ್ರಮ್ (42) ಹಾಗೂ ಹೆನ್ರಿಚ್ ಕ್ಲಾಸೆನ್ (36) ಹೊರತುಪಡಿಸಿ ಮಿಕ್ಕೆಲ್ಲರೂ ಬ್ಯಾಟಿಂಗ್ನಲ್ಲಿ ವೈಫಲ್ಯ ಕಂಡರು. ಕೊನೇ ಓವರ್ನಲ್ಲಿ ಎಸ್ಆರ್ಎಚ್ ತಂಡದ ಗೆಲುವಿಗೆ 10 ರನ್ ಬೇಕಾಗಿತ್ತು. ಆದರೆ, ರನ್ ಬಾರಿಸಲೂ ತಂಡಕ್ಕೆ ಸಾಧ್ಯವಾಗಲಿಲ್ಲ.
ಕೆಕೆಆರ್ ಪರ ಬ್ಯಾಟಿಂಗ್ ಆರಂಭಿಸಿದ ಕೆಕೆಆರ್ ತಂಡಕ್ಕೆ ರಹಮನುಲ್ಲಾ ಗುರ್ಬಜ್ ವಿಕೆಟ್ ಶೂನ್ಯಕ್ಕೆ ಪತನವಾಗುವ ಮೂಲಕ ನಿರಾಸೆ ಎದುರಾಯಿತು. ಬಳಿಕ ಬಂದ ವೆಂಕಟೇಶ್ ಅಯ್ಯರ್ ಕೂಡ 7 ರನ್ಗೆ ವಿಕೆಟ್ ಒಪ್ಪಿಸವುದರೊಂದಿಗೆ ಇನ್ನಷ್ಟು ಆಘಾತ ಎದುರಾಯಿತು. ಜೇಸನ್ ರಾಯ್ 19 ಎಸೆತಕ್ಕೆ 20 ರನ್ ಬಾರಿಸಿದ ಕಾರಣ ತಂಡದ ಪಾಲಿಗೆ ಉತ್ತಮ ಆರಂಭ ದೊರೆತಂತಾಗಲಿಲ್ಲ.
ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ನಿತೀಶ್ ರಾಣಾ ಹಾಗೂ ಐದನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿದ ರಿಂಕು ಸಿಂಗ್ ತಂಡಕ್ಕೆ ಆಧಾರವಾದರು. 35 ರನ್ಗಳಿಗೆ ಮೊದಲ ಮೂರು ವಿಕೆಟ್ ನಷ್ಟ ಮಾಡಿಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನೆರವಾದರು. ಆದರೆ, ತಂಡದ ಮೊತ್ತ 96 ಆಗುವಷ್ಟರಲ್ಲಿ ನಿತೀಶ್ ರಾಣಾ ವಿಕೆಟ್ ಒಪ್ಪಿಸಿದರು. ದೊಡ್ಡ ಹೊಡೆತಕ್ಕೆ ಮುಂದಾದ ಅವರು ಕ್ಯಾಚಿತ್ತು ನಿರ್ಗಮಿಸಿದರು. ವಿಂಡೀಸ್ ದೈತ್ಯ ಆಂಡ್ರೆ ರಸೆಲ್ (15 ಎಸೆತಕ್ಕೆ 24 ರನ್) ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರೂ ದೀರ್ಘ ಇನಿಂಗ್ಸ್ ಕಟ್ಟಲು ಅವರಿಗೆ ಸಾಧ್ಯವಾಗಲಿಲ್ಲ.
ವಿಕೆಟ್ಗಳು ಪತನಗೊಳ್ಳುತ್ತಿದ್ದ ನಡುವೆಯೂ ರಿಂಕು ಸಿಂಗ್ ಸಮಯೋಚಿತ ಬ್ಯಾಟಿಂಗ್ ಮಾಡಿದ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಆದರೆ, ನಾಲ್ಕು ರನ್ಗಳ ಕೊರತೆಯಿಂದ ಐಪಿಎಲ್ನಲ್ಲಿ ಎರ