Site icon Vistara News

IPL 2023 : ಆರ್​ಸಿಬಿ ಗೆಲುವಿಗೆ 201 ರನ್ ಸವಾಲೊಡ್ಡಿದ ಕೋಲ್ಕೊತಾ ನೈಟ್​ ರೈಡರ್ಸ್​​

Kolkata Knight Riders score 200 runs against RCB

#image_title

ಬೆಂಗಳೂರು: ಆರಂಭಿಕ ಬ್ಯಾಟರ್​ ಜೇಸನ್​ ರಾಯ್​ (56) ಅವರ ಅರ್ಧ ಶತಕ ಹಾಗೂ ನಾಯಕ ನಿತೀಶ್​ ರಾಣಾ (48) ಸ್ಫೋಟಕ ಬ್ಯಾಟಿಂಗ್ ನೆರವು ಪಡೆದ ಕೋಲ್ಕೊತಾ ನೈಟ್​ ರೈಡರ್ಸ್ ತಂಡ ಐಪಿಎಲ್​ 16ನೇ ಅವೃತ್ತಿಯ 36ನೇ ಪಂದ್ಯದಲ್ಲಿ ಎದುರಾಳಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ… ರನ್​ಗಳ ಗೆಲುವಿನ ಸವಾಲೊಡ್ಡಿದೆ. ನಾರಾಯಣ ಜಗದೀಶನ್​ (27) ಹಾಗೂ ವೆಂಕಟೇಶ್ ಅಯ್ಯರ್​ (31) ಕೂಡ ಆತಿಥೇಯರ ಬಳಕ್ಕೆ ದೊಡ್ಡ ಮೊತ್ತದ ಗುರಿಯೊಡ್ಡಲು ನೆರವಾದರು.

ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಆರ್​ಸಿಬಿ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಕೆಕೆಆರ್ ಬಳಗ ನಿಗದಿತ 20 ಓವರ್​ಗಳಲ್ಲಿ… ವಿಕೆಟ್ ನಷ್ಟಕ್ಕೆ…ರನ್​ ಬಾರಿಸಿತು.

ಇನಿಂಗ್ಸ್ ಆರಂಭಿಸಿದ ಕೋಲ್ಕೊತಾ ಬಳಗ ಉತ್ತಮ ಆರಂಭ ಪಡೆಯಿತು. ಜೇಸನ್​ ರಾಯ್​ ಹಾಗೂ ಜಗದೀಶನ್​ ಮೊದಲ ವಿಕೆಟ್​ಗೆ 83 ರನ್​ ಬಾರಿಸಿ ಭದ್ರ ಅಡಿಪಾಯ ಹಾಕಿದರು. ಜಗದೀಶನ್​ ವಿಕೆಟ್​ ಪಡೆಯುವ ಮೂಲಕ ಕರುನಾಡ ಹುಡುಗ ವಿಜಯ್​ಕುಮಾರ್​ ವೈಶಾಖ್​ ಈ ಜೋಡಿಯನ್ನು ಬೇರ್ಪಡಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ವೆಂಕಟೇಶ್​ ಅಯ್ಯರ್​ ನಿಧಾನಗತಿಯಲ್ಲಿ ಆಡಿ 31 ರನ್​ ಗಳಿಸಿದರು. 11.4 ಓವರ್​ಗಳಲ್ಲಿ 100 ರನ್​ ಪೂರೈಸಿದ ಕೆಕೆಆರ್​ ದೊಡ್ಡ ಮೊತ್ತ ಪೇರಿಸಲು ಸುಳಿವು ಕೊಟ್ಟಿತು. ಏತನ್ಮಧ್ಯೆ, ವೈಶಾಖ್​ ಕೆಕೆಆರ್​ ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದ ಜೇಸನ್ ರಾಯ್​ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು.

ಇದನ್ನೂ ಓದಿ : IPL 2023: ಪತ್ನಿಯೊಂದಿಗೆ ಮಸ್ತ್ ಸ್ಟೆಪ್ಸ್‌​ ಹಾಕಿ ಗಾಯಗೊಂಡ ವಿರಾಟ್​ ಕೊಹ್ಲಿ; ಆರ್​ಸಿಬಿ ಗತಿಯೇನು?

ಈ ವೇಳೆ ಕ್ರೀಸ್​ಗೆ ಇಳಿದ ನಾಯಕ ನಿತೀಶ್​ ರಾಣಾ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದರು ಅವರು 21 ಎಸೆತಗಳಲ್ಲಿ 48 ರನ್​ ಬಾರಿಸಿದರು. ಆದರೆ, ವೆಂಕಟೇಶ್​ ಅಯ್ಯರ್ ಹಾಗೂ ನಿತೀಶ್​ ರಾಣಾ ಇನ್ನಷ್ಟು ಹೊತ್ತು ಮೈದಾನದಲ್ಲಿ ಇರದಂತೆ ಶ್ರೀಲಂಕಾದ ಸ್ಪಿನ್ನರ್​ ವಾನಿಂದು ಹಸರಂಗ ನೋಡಿಕೊಂಡರು. ಬಳಿಕ ಬಂದ ವಿಂಡೀಸ್​ ದೈತ್ಯ ಆ್ಯಂಡ್ರೆ ರಸೆಲ್​ 1 ರನ್​ಗೆ ವಿಕೆಟ್​ ಒಪ್ಪಿಸಿ ಕೆಕೆಅರ್​ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಆದರೆ, ಕೊನೇ ಹಂತದಲ್ಲಿ ರಿಂಕು ಸಿಂಗ್​ 10 ಎಸೆತಗಳಲ್ಲಿ 18 ಹಾಗೂ ಡೇವಿಡ್​ ವೈಸ್​ 3 ಎಸೆತಗಳಲ್ಲಿ 12 ರನ್​ ಬಾರಿ ತಂಡದ ಮೊತ್ತವನ್ನು 200ಕ್ಕೆ ಏರಿಸಿದರು.

Exit mobile version