Site icon Vistara News

Lakshya Sen: ಭಾರತದ ಲಕ್ಷ್ಯ ಸೇನ್‌, ಕೆನಡಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ ಚಾಂಪಿಯನ್‌

Lakshya Sen Canada Open Champion

Canada Open 2023: Lakshya Sen Is Champion, beats Li Shi Feng in straight games

ಒಟ್ಟಾವ: ಭಾರತದ ಯುವ ಬ್ಯಾಡ್ಮಿಂಟನ್‌ ಆಟಗಾರ, ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತ ಲಕ್ಷ್ಯ ಸೇನ್‌ (Lakshya Sen) ಅವರು ಕೆನಡಾ ಓಪನ್‌ 2023ರ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಪುರಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌, ಚೀನಾದ ಲಿ ಶಿ ಫೆಂಗ್‌ ಅವರನ್ನು 21-18, 22-20 ನೇರ ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಚಾಂಪಿಯನ್‌ ಎನಿಸಿದ್ದಾರೆ.

ಕೆನಡಾದ ಕ್ಯಾಲ್ಗರಿಯಲ್ಲಿ ಭಾನುವಾರ ರಾತ್ರಿ ನಡೆದ ಕೆನಡಾ ಓಪನ್‌ ಸೂಪರ್‌ 500 ಟೂರ್ನಿಯ ಫೈನಲ್ ಪಂದ್ಯದಲ್ಲಿ 19ನೇ ಶ್ರೇಯಾಂಕಿತ ಲಕ್ಷ್ಯ ಸೇನ್‌ ಅವರು ಎದುರಾಳಿಗೆ ಮುನ್ನಡೆ ಪಡೆಯಲು ಯಾವ ಅವಕಾಶವೂ ಕೊಡದೆ ಚಾಂಪಿಯನ್‌ ಆಟವಾಡಿದರು. ಮೊದಲ ಸೆಟ್‌ನಲ್ಲಿ ಮುನ್ನಡೆ ಸಾಧಿಸಲು ಲಿ ಶಿ ಫೆಂಗ್‌ ಎಷ್ಟೇ ಪ್ರಯತ್ನಪಟ್ಟರೂ ಲಕ್ಷ್ಯ ಸೇನ್‌ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಎರಡನೇ ಸೆಟ್‌ನಲ್ಲಿ ಫೆಂಗ್‌ ತೀವ್ರ ಪೈಪೋಟಿ ಒಡ್ಡಿದರೂ ಫಲ ಕೊಡಲಿಲ್ಲ. ‌

ಕೆನಡಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಗೆಲುವಿನೊಂದಿಗೆ ಲಕ್ಷ್ಯ ಸೇನ್‌ ಅವರು ಎರಡನೇ ಬಾರಿಗೆ ಬಿಡಬ್ಲ್ಯೂಎಫ್‌ ವರ್ಲ್ಡ್‌ ಟೂರ್‌ ಚಾಂಪಿಯನ್‌ ಎನಿಸಿದಂತಾಗಿದೆ. ಇದಕ್ಕೂ ಮೊದಲು ಅವರು 2022ರಲ್ಲಿ ಇಂಡಿಯಾ ಓಪನ್‌ ಚಾಂಪಿಯನ್‌ ಎನಿಸಿದ್ದರು.

ಇದನ್ನೂ ಓದಿ: PV Sindhu: ನೂತನ ಕೋಚ್​ ಮೊರೆ ಹೋದ ಪಿ.ವಿ. ಸಿಂಧು

2022ರ ಆಗಸ್ಟ್‌ನಲ್ಲಿ ನಡೆದ ವರ್ಲ್ಡ್‌ ಚಾಂಪಿಯನ್‌ಶಿಪ್‌ ಬಳಿಕ ಲಕ್ಷ್ಯ ಸೇನ್‌ ಅವರು ಮೂಗಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದಾದ ಬಳಿಕ ಅವರು ದೀರ್ಘ ವಿಶ್ರಾಂತಿ ಪಡೆದಿದ್ದರು. ಈಗ ಉತ್ತಮವಾಗಿ ಕಮ್‌ಬ್ಯಾಕ್‌ ಮಾಡಿರುವ ಅವರು ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಲಕ್ಷ್ಯ ಸೇನ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಅಭಿನಂದಿಸಿದ್ದಾರೆ.

Exit mobile version