Site icon Vistara News

IPL 2023 : ಲಕ್ನೊ ವಿರುದ್ಧ ಟಾಸ್​ ಗೆದ್ದ ತಂಡದಿಂದ ಮೊದಲು ಬ್ಯಾಟಿಂಗ್ ಆಯ್ಕೆ

Cricket Score IPL 2023

#image_title

ಚೆನ್ನೈ: ಐಪಿಎಲ್​ 16ನೇ ಆವೃತ್ತಿಯ ಎಲಿಮಿನೇಟರ್​ ಪಂದ್ಯದಲ್ಲಿ ಲಕ್ನೊ ಸೂಪರ್​ ಜೈಂಟ್ಸ್​ ತಂಡದ ವಿರುದ್ಧ ಟಾಸ್​ ಗೆದ್ದ ಮುಂಬಯಿ ಇಂಡಿಯನ್ಸ್​ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಮಂಗಳವಾರ ಇದೇ ಸ್ಟೇಡಿಯಮ್​ನಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ್ದ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ವಿಜಯ ಸಾಧಿಸಿತ್ತು. ಹೀಗಾಗಿ ಮತ್ತದೇ ರೀತಿಯ ಅವಕಾಶಗಳು ಸೃಷ್ಟಿಯಾಗಬಹುದು ಎಂಬ ಉದ್ದೇಶದಿಂದ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಳ್ಳಲಾಗಿದೆ.

ಚೆನ್ನೈ ಎಂಎ ಚಿದಂಬರಂ ಸ್ಟೇಡಿಯಮ್​ನಲ್ಲಿ ಪಂದ್ಯ ನಡೆಯುತ್ತಿದ್ದು ಮೊದಲು ಬ್ಯಾಟ್​ ಮಾಡಿದ ತಂಡಕ್ಕೆ ಇಲ್ಲಿ ಹೆಚ್ಚಿನ ಜಯ ಲಭಿಸಿದೆ. ಇದು ಸ್ಪರ್ಧಾತ್ಮಕ ಪಿಚ್ ಎನಿಸಿಕೊಂಡಿದ್ದು ಪಂದ್ಯ ಸಾಗುತ್ತಿದ್ದಂತೆ ನಿಧಾನಗೊಳ್ಳುತ್ತದೆ. ಆರಂಭದಲ್ಲಿ ಬ್ಯಾಟರ್​​ಗಳಿಗೆ ಅಲ್ಪ ನೆರವಾದರೆ ಬಳಿಕ ಬೌಲರ್​ಗಳ ಪಾಲಿನ ಸ್ವರ್ಗ ಎನಿಸಿಕೊಳ್ಳುತ್ತದೆ.

ಈ ಪಂದ್ಯದಲ್ಲಿ ಜಯ ಸಾಧಿಸುವ ತಂಡ ಕ್ವಾಲಿಫೈಯರ್-2ಕ್ಕೆ ಪ್ರವೇಶ ಪಡೆದುಕೊಳ್ಳಲಿದೆ. ಸೋತ ತಂಡ ನಿರ್ಗಮಿಸಲಿದೆ. ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಸೋತಿರುವ ಗುಜರಾತ್​ ಟೈಟನ್ಸ್ ತಂಡದ ಇಂದಿನ ಪಂದ್ಯದ ವಿಜೇತರಿಗೆ ಎದುರಾಳಿ.

ಲಕ್ನೊ ಸೂಪರ್ ಜೈಂಟ್ಸ್ ಬಳಗ ಲೀಗ್ ಹಂತದಲ್ಲಿ ಆಡಿರುವ ಒಟ್ಟು 14 ಪಂದ್ಯಗಳಲ್ಲಿ ಎಂಟು ಗೆಲುವುಗಳನ್ನು ದಾಖಲಿಸಿದೆ. ಅದೇ ರೀತಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಲೀಗ್ ಹಂತದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ಲಕ್ನೊ ತಂಡ ಒಟ್ಟು 17 ಅಂಕಗಳೊಂದಿಗೆ ಪ್ಲೇಆಫ್​ ಹಂತಕ್ಕೇರಿತು. ಅತ್ತ ಮುಂಬಯಿ ಇಂಡಿಯನ್ಸ್ ತಂಡ ಆಡಿರುವ 14ರಲ್ಲಿ 8 ಗೆಲುವುಗಳನ್ನು ದಾಖಲಿಸಿ 16 ಅಂಕಗಳೊಂದಿಗೆ ನಾಲ್ಕನೇ ತಂಡವಾಗಿ ಪ್ಲೇಆಫ್​ ಹಂತಕ್ಕೇರಿತ್ತು. ಲೀಗ್​ ಹಂತದ ಕೊನೇ ಪಂದ್ಯದಲ್ಲಿ ಆರ್​ಸಿಬಿ ತಂಡದ ಸೋತ ಕಾರಣ ಮುಂಬಯಿ ತಂಡಕ್ಕೆ ಪ್ಲೇಆಫ್​ ಅವಕಾಶ ಸೃಷ್ಟಿಯಾಗಿತ್ತು.

ತಂಡ ಇಂತಿದೆ:

ಲಕ್ನೊ ಸೂಪರ್ ಜೈಂಟ್ಸ್​: ಆಯುಷ್ ಬದೋನಿ, ದೀಪಕ್ ಹೂಡಾ, ಪ್ರೇರಕ್ ಮಂಕಡ್, ಮಾರ್ಕ್​ ಸ್ಟೊಯಿನಿಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ (ನಾಯಕ), ಕೃಷ್ಣಪ್ಪ ಗೌತಮ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಯಶ್ ಠಾಕೂರ್, ಮೊಹ್ಸಿನ್ ಖಾನ್.

ಮುಂಬೈ ಇಂಡಿಯನ್ಸ್ : ರೋಹಿತ್ ಶರ್ಮಾ (ನಾಯ), ಇಶಾನ್ ಕಿಶನ್ (), ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ತಿಲಕ್ ವರ್ಮಾ, ಕ್ರಿಸ್ ಜೋರ್ಡಾನ್, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆನ್ಡಾರ್ಫ್, ಆಕಾಶ್ ಮಧ್ವಾಲ್.

Exit mobile version