ಹೈದರಾಬಾದ್: ಐಪಿಎಲ್ 16ನೇ ಆವೃತ್ತಿಯ 34ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಗ್ರ ಕ್ರಮಾಂಕದ ಬ್ಯಾಟರ್ಗಳು ಮತ್ತೆ ವೈಫಲ್ಯ ಅನುಭವಿಸಿದರು. ಅಕ್ಷರ್ಪ ಟೇಲ್ (34) ಹಾಗೂ ಮನೀಶ್ ಪಾಂಡೆ (34) ಕೆಳ ಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾಗಿದ್ದರಿಂದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 144 ರನ್ಗಳನ್ನು ಪೇರಿಸಿತು. ಇದರೊಂದಿಗ ಆತಿಥೇಯ ಬಳಗಕ್ಕೆ.. ರನ್ಗಳ ಸಾಧಾರಣ ಮೊತ್ತದ ಗುರಿ ಎದುರಾಗಿದೆ.
ಇಲ್ಲಿನ ರಾಜೀವ್ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಪಾಲಿನ 20 ಓವರ್ಗಳಲ್ಲಿ 9 ವಿಕೆಟ್ ನಷ್ಟ ಮಾಡಿಕೊಂಡು 144 ರನ್ ಬಾರಿಸಿತು.
ಬ್ಯಾಟಿಂಗ್ ವೈಫಲ್ಯ ಕಾಣುತ್ತಿರುವ ಪೃಥ್ವಿ ಶಾ ಬದಲಿಗೆ ಇನಿಂಗ್ಸ್ ಆರಂಭಿಸಲು ಮುಂದಾದ ಫಿಲ್ ಸಾಲ್ಟ್ ಶೂನ್ಯಕ್ಕೆ ಔಟಾಗುವ ಮೂಲಕ ತಂಡದ ಹಿನ್ನಡೆಗೆ ಕಾರಣಾದರು. ಡೇವಿಡ್ ವಾರ್ನರ್ ಸ್ಫೋಟಿಸುವ ಲಕ್ಷಣ ತೋರಿದರೂ 21 ರನ್ಗೆ ವಿಕೆಟ್ ಒಪ್ಪಿಸಿದರು. ಮಿಚೆಲ್ ಮಾರ್ಷ್ 15 ಎಸೆತದಲ್ಲಿ 25 ರನ್ ಬಾರಿಸಿ ವಿಶ್ವಾಸ ಮೂಡಿಸಿದರೂ ನಟರಾಜನ್ ಎಸೆತಕ್ಕೆ ಎಲ್ಬಿಡಬ್ಲ್ಯು ಔಟಾದರು. ಸರ್ಫರಾಜ್ ಖಾನ್ 10 ರನ್ಗೆ ಔಟಾದರು. ಅಮನ್ ಹಕಿಮ್ 4 ರನ್ಗೆ ವಿಕೆಟ್ ಒಪ್ಪಿಸಿದರು.
62 ರನ್ಗಳಿಗೆ 5 ವಿಕೆಟ್ ನಷ್ಟಮಾಡಿಕೊಂಡ ಡೆಲ್ಲಿ ತಂಡಕ್ಕೆ ಮನೀಶ್ ಹಾಗೂ ಅಕ್ಷರ್ ಪಟೇಲ್ ಸ್ವಲ್ಪ ಮಟ್ಟಿಗೆ ಆಧಾರವಾದರು. 6ನೇ ವಿಕೆಟ್ಗೆ ಈ ಜೋಡಿ 71 ರನ್ ಬಾರಿಸಿ ಮರ್ಯಾದೆ ಕಾಪಾಡಿತು. ಅಕ್ಷರ್ 34 ಎಸೆತಗಳಲ್ಲಿ 34 ರನ್ ಬಾರಿಸಿ ಔಟಾದರೆ ಮನೀಶ್ 27 ಎಸೆತಗಳಲ್ಲಿ 34 ರನ್ ಬಾರಿಸಿದರು. ಮನೀಶ್ ಅನಗತ್ಯ ರನ್ಔಟ್ಗೆ ಬಲಿಯಾದ ಬಳಿಕ ತಂಡ ಮತ್ತೆ ಸಂಪೂರ್ಣವಾಗಿ ಪತನಗೊಂಡಿತು.