ಮುಂಬಯಿ: ಆಸ್ಟ್ರೇಲಿಯಾ ತಂಡದ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಮತ್ತು ಪ್ಯಾಟ್ ಕಮಿನ್ಸ್ ಏಕ ದಿನ ಕ್ರಿಕೆಟ್ ಇತಿಹಾಸದಲ್ಲಿ 8ನೇ ವಿಕೆಟ್ಗೆ ಗರಿಷ್ಠ ರನ್ಗಳ ಜತೆಯಾಟದ ದಾಖಲೆ ಬರೆದಿದ್ದಾರೆ. ಈ ಜೋಡಿ ಅಫಘಾನಿಸ್ತಾನ ವಿರುದ್ಧ 170 ಎಸೆತಗಳಲ್ಲಿ ಅಜೇಯ 202 ರನ್ ಬಾರಿಸಿದ್ದಾರೆ. ಇವರಿಬ್ಬರು ಈ ಹಿಂದೆ ದಕ್ಷಿಣ ಆಫ್ರಿಕಾದ ಆ್ಯಂಡ್ರ್ಯೂ ಹಾಲ್ ಮತ್ತು ಜಸ್ಟಿನ್ ಕೆಂಪ್ ಮಾಡಿದ್ದ ಅಜೇಯ 138 ರನ್ಗಳ ದಾಖಲೆಯನ್ನು ಮರಿದಿದ್ದಾರೆ. ದಕ್ಷಿಣ ಆಫ್ರಿಕಾದ ಆಟಗಾರರು 2006ರ ನವೆಂಬರ್ 26ರಂದು ಈ ದಾಖಲೆ ಬರೆದಿದ್ದರು.
Australia – 293/7.
— VINEETH𓃵🦖 (@sololoveee) November 7, 2023
Glenn Maxwell – 201*(128).
Maxwell & Cummins partnership – 202*(170).
Maxwell alone – 189* runs.
Hands down the Greatest ODI innings of All Time in the Cricket History and Will Be For Long Long Time – Maxwell#AUSvsAFG #Maxwell
pic.twitter.com/MzXqwN9plk
ಅಜೇಯ 201 ರನ್ ಗಳಿಸುವ ಮೂಲಕ ಗ್ಲೆನ್ ಮ್ಯಾಕ್ಸ್ವೆಲ್ ವಿಶ್ವಕಪ್ನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದ ಮೂರನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾರ್ಟಿನ್ ಗಪ್ಟಿಲ್ (237) ಮತ್ತು ಕ್ರಿಸ್ ಗೇಲ್ (215) ಮಾತ್ರ ಅವರಿಗಿಂತ ಮುಂದಿದ್ದಾರೆ. ಏಕದಿನ ಇತಿಹಾಸದಲ್ಲಿ ಚೇಸಿಂಗ್ ಮಾಡುವಾಗ 5 ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 150 ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ಶ್ರೆಯಸ್ಸಿಗೂ ಮ್ಯಾಕ್ಸ್ವೆಲ್ ಪಾತ್ರರಾಗಿದ್ದಾರೆ. ಗ್ಲೆನ್ ಮ್ಯಾಕ್ಸ್ವೆಲ್ ವಿಶ್ವಕಪ್ ಆವೃತ್ತಿಯಲ್ಲಿ 5 ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 2 ಶತಕಗಳನ್ನು ಗಳಿಸಿದ ಮೊದಲ ಆಟಗಾರ.
Partnership batting from Maxwell and Cummins ✊
— 7Cricket (@7Cricket) November 7, 2023
Know your role, play your role #CWC23 pic.twitter.com/EbqpQm8f4j
ಆಪ್ಘನ್ ವಿರುದ್ಧ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ದಾಖಲೆಗಳು
- ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಮೊದಲ ಆಸ್ಟ್ರೇಲಿಯಾದ ಆಟಗಾರ.
- ಏಕದಿನ ಚೇಸಿಂಗ್ ನಲ್ಲಿ ಗರಿಷ್ಠ ಸ್ಕೋರ್.
- ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಮೊದಲ ಆರಂಭಿಕ ಆಟಗಾರನಲ್ಲ ಎಂಬ ಖ್ಯಾತಿ
- ಏಕದಿನ ಪಂದ್ಯದಲ್ಲಿ ರನ್ ಚೇಸ್ ನಲ್ಲಿ ಮೊದಲ ದ್ವಿಶತಕ.
- ವಿಶ್ವಕಪ್ನಲ್ಲಿ 5 ಅಥವಾ ಅದಕ್ಕಿಂತ ಕಡಿಮೆ ಬ್ಯಾಟಿಂಗ್ ಮಾಡುವಾಗ ಅಧಿಕ ಶತಕಗಳು.
ವಿಶ್ವಕಪ್ ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ಗಳು
237* – ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್) ವೆಸ್ಟ್ಇಂಡಿಸ್ ವಿರುದ್ಧ , ವೆಲ್ಲಿಂಗ್ಟನ್, 2015
215 – ಕ್ರಿಸ್ ಗೇಲ್ (ವಿಐ) ಜಿಂಬಾಬ್ವೆ ವಿರುದ್ಧ , ಕ್ಯಾನ್ಬೆರಾ, 2015
201* – ಗ್ಲೆನ್ ಮ್ಯಾಕ್ಸ್ವೆಲ್ (ಆಸ್ಟ್ರೇಲಿಯಾ) ಅಫಘಾನಿಸ್ತಾನ ವಿರುದ್ಧ. ಮುಂಬೈ ಡಬ್ಲ್ಯೂಎಸ್, 2023
188* – ಗ್ಯಾರಿ ಕರ್ಸ್ಟನ್ (ಎಸ್ಎ) ಯುಎಇ ವಿರುದ್ಧ , ರಾವಲ್ಪಿಂಡಿ, 1996
183 – ಸೌರವ್ ಗಂಗೂಲಿ (ಭಾರತ) ಶ್ರೀಲಂಕಾ ವಿರುದ್ಧ , ಟೌಂಟನ್, 1999
ಏಕದಿನ ಕ್ರಿಕೆಟ್ನ ರನ್ ಚೇಸ್ ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್
201* – ಗ್ಲೆನ್ ಮ್ಯಾಕ್ಸ್ವೆಲ್ (ಆಸ್ಟ್ರೇಲಿಯಾ) ಅಫ್ಘನ್ ವಿರುದ್ಧ , ಮುಂಬೈ , 2023 ವಿಶ್ವಕಪ್
193 – ಫಖರ್ ಜಮಾನ್ (ಪಾಕಿಸ್ತಾನ) ದಕ್ಷಿಣ ಆಫ್ರಿಕಾ ವಿರುದ್ಧ , ಜೋಹಾನ್ಸ್ಬರ್ಗ್, 2021
185* – ಶೇನ್ ವ್ಯಾಟ್ಸನ್ (ಆಸ್ಟ್ರೇಲಿಯಾ) ಬಾಂಗ್ಲಅ ವಿರುದ್ಧ, ಮಿರ್ಪುರ, 2011
183* – ಎಂಎಸ್ ಧೋನಿ (ಭಾರತ) ಶ್ರೀಲಂಕಾ ವಿರುದ್ಧ, ಜೈಪುರ, 2005
183 – ವಿರಾಟ್ ಕೊಹ್ಲಿ (ಭಾರತ) ಪಾಕಿಸ್ತಾನ ವಿರುದ್ಧ, ಮಿರ್ಪುರ, 2012
ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಪರ ಗರಿಷ್ಠ ವೈಯಕ್ತಿಕ ಸ್ಕೋರ್
201* – ಗ್ಲೆನ್ ಮ್ಯಾಕ್ಸ್ವೆಲ್, ಆಫ್ಘನ್ ವಿರುದ್ಧ , ಮುಂಬೈ ಡಬ್ಲ್ಯೂಎಸ್, 2023 ವಿಶ್ವಕಪ್
185* – ಶೇನ್ ವ್ಯಾಟ್ಸನ್, ಬಾಂಗ್ಲಾ ವಿರುದ್ಧ ಮಿರ್ಪುರ್, 2011
181* – ಮ್ಯಾಥ್ಯೂ ಹೇಡನ್, ನ್ಯೂಜಿಲೆಂಡ್ ವಿರುದ್ಧ , ಹ್ಯಾಮಿಲ್ಟನ್, 2007
179 – ಡೇವಿಡ್ ವಾರ್ನರ್, ಪಾಕಿಸ್ತಾನ ವಿರುದ್ಧ , ಅಡಿಲೇಡ್, 2017
178 – ಡೇವಿಡ್ ವಾರ್ನರ್, ಆಫ್ಘನ್ ವಿರುದ್ಧ ಪರ್ತ್, 2015 ವಿಶ್ವಕಪ್
ಪಂದ್ಯದಲ್ಲಿ ಏನಾಯಿತು?
ಗ್ಲೆನ್ ಮ್ಯಾಕ್ಸ್ವೆಲ್ ಅವರ ವಿಶ್ವ ದಾಖಲೆಯ ದ್ವಿಶತಕದ (ಅಜೇಯ 201 ರನ್) ನೆರವು ಪಡೆದ ಆಸ್ಟ್ರೇಲಿಯಾ ತಂಡ ಅಫಘಾನಿಸ್ತಾನ ವಿರುದ್ಧದ ತನ್ನ ವಿಶ್ವ ಕಪ್ ಪಂದ್ಯದಲ್ಲಿ (ICC World Cup 2023) 3 ವಿಕೆಟ್ ಗೆಲುವು ಸಾಧಿಸಿದೆ. ಈ ಮೂಲಕ ಪ್ಯಾಟ್ ಕಮಿನ್ಸ್ ನೇತೃತ್ವದ ಆಸೀಸ್ ಬಳಗ ವಿಶ್ವ ಕಪ್ನ ಸೆಮಿಫೈನಲ್ಗೆ ಪ್ರವೇಶ ಪಡೆದಿದ್ದು, ದಕ್ಷಿಣ ಆಫ್ರಿಕಾಗೆ ಎದುರಾಗಲಿದೆ. ಇದು ವಿಶ್ವ ಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ತಂಡ ಚೇಸ್ ಮಾಡಿದ ಗರಿಷ್ಠ ಮೊತ್ತವೂ ಆಗಿದೆ. 91 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡ ಮ್ಯಾಕ್ಸ್ವೆಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮುರಿಯದ ಏಳನೇ ವಿಕೆಟ್ಗೆ 202 ರನ್ ಪೇರಿಸುವ ಮೂಲಕ ಗೆಲುವು ದಾಖಲಿಸಿತು. ಇದು ಹಾಲಿ ವಿಶ್ವ ಕಪ್ನಲ್ಲಿ ಮೂಡಿ ಬಂದ ಮತ್ತೊಂದು ಅಚ್ಚರಿಯ ಫಲಿತಾಂಶವಾಗಿದೆ. ಅಲ್ಲದೆ, ಈ ಗೆಲುವು ಆಸ್ಟ್ರೇಲಿಯಾ ತಂಡದ ಪಾಲಿಗೆ ಹಾಗೂ ಮ್ಯಾಕ್ಸ್ವೆಲ್ಗೆ ಐತಿಹಾಸಿಕ ದಾಖಲೆ.
ಈ ಸುದ್ದಿಯನ್ನೂ ಓದಿ: ICC World Cup 2023 : ಆಸ್ಟ್ರೇಲಿಯಾ ತಂಡ ಸೆಮೀಸ್ಗೆ, ಅಂಕಪಟ್ಟಿಯಲ್ಲಿ ಆಫ್ಘನ್ ಸ್ಥಾನವೇನು?
ಆಸ್ಟ್ರೇಲಿಯಾ ತಂಡ 49 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ವೇಳೆ ಆಡಲು ಬಂದ ಗ್ಲೆನ್ ಮ್ಯಾಕ್ಸ್ವೆಲ್ ಕೊನೆ ತನಕ ಅಜೇಯರಾಗಿ ಉಳಿದು ತಂಡವನ್ನು ಗೆಲ್ಲಿಸಿಕೊಟ್ಟರು. ತಾನು ಎದುರಿಸಿದ ಮೊದಲ ಎಸೆತದಲ್ಲಿಯೇ ಡಿಆರ್ಎಸ್ ಮನವಿ ಎದುರಿಸಿದ ಗ್ಲೆನ್ ಮ್ಯಾಕ್ಸ್ವೆಲ್ ಅಲ್ಲಿಂದ 128 ಎಸೆತಗಳನ್ನು ಎದುರಿಸಿ 21 ಫೋರ್ ಹಾಗೂ 10 ಸಿಕ್ಸರ್ಗಳ ನೆರವಿನಿಂದ ದ್ವಿಶತಕ ಬಾರಿಸಿ ಗೆಲುವು ತಂದುಕೊಟ್ಟರು. ಅದಕ್ಕಿಂತ ಮೊದಲು ನೂರ್ ಅಹಮದ್ ಎಸೆತದಲ್ಲಿ ಅಂಪೈರ್ ನೀಡಿದ್ದ ಎಲ್ಬಿಡಬ್ಲ್ಯು ಔಟ್ ವಿರುದ್ದ ಡಿಆರ್ಎಸ್ ಪಡೆದುಕೊಂಡು ಅಲ್ಲೂ ಬಚಾವಾಗಿದ್ದರು. ಎಲ್ಲದಕ್ಕಿಂತ ಮುಖ್ಯವಾಗಿ ಆಫ್ಘನ್ ತಂಡದ ಮುಜೀಬ್ ಉರ್ ರಹಮಾನ್ ಅವರು ಮ್ಯಾಕ್ಸ್ವೆಲ್ ಅವರ ಕ್ಯಾಚೊಂದನ್ನು ಕೈ ಚೆಲ್ಲುವ ಮೂಲಕ ಅವರಿಗೆ ಜೀವದಾನ ಕೊಟ್ಟಿದ್ದರು. ಅದರನ್ನು ಸದ್ಬಳಕೆ ಮಾಡಿಕೊಂಡ ಮ್ಯಾಕ್ಸ್ವೆಲ್ ಇತಿಹಾಸವನ್ನೇ ಸೃಷ್ಟಿಸಿದರು. ಮತ್ತೊಂದು ತುದಿಯಲ್ಲಿ 68 ಎಸೆತಗಳನ್ನು ಎದುರಿಸಿದ ನಾಯಕ ಪ್ಯಾಟ್ ಕಮಿನ್ಸ್ 12 ರನ್ ಮಾತ್ರ ಬಾರಿಸಿದರೂ ಅವರು ಕೊಟ್ಟ ಜತೆಯಾಟವೂ ಗೆಲುವಿಗೆ ಪ್ರಮುಖ ಕಾರಣವಾಯಿತು.