Glenn Maxwell : 8ನೇ ವಿಕೆಟ್​​ ಜತೆಯಾಟದ ಹೊಸ ದಾಖಲೆ ಬರೆದ ಮ್ಯಾಕ್ಸ್​ವೆಲ್​- ಕಮಿನ್ಸ್​ - Vistara News

ಕ್ರಿಕೆಟ್

Glenn Maxwell : 8ನೇ ವಿಕೆಟ್​​ ಜತೆಯಾಟದ ಹೊಸ ದಾಖಲೆ ಬರೆದ ಮ್ಯಾಕ್ಸ್​ವೆಲ್​- ಕಮಿನ್ಸ್​

ಗ್ಲೆನ್ಸ್ ಮ್ಯಾಕ್ಸ್​ವೆಲ್​ ಮತ್ತು ಪ್ಯಾಟ್​ ಕಮಿನ್ಸ್ ಎಂಟನೇ ವಿಕೆಟ್​ಗೆ ಮುರಿಯದ 202 ರನ್​ಗಳನ್ನು ಬಾರಿಸಿ ಹೊಸ ದಾಖಲೆಯನ್ನುಬರೆದಿದ್ದಾರೆ.

VISTARANEWS.COM


on

Glen Maxwell
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಆಸ್ಟ್ರೇಲಿಯಾ ತಂಡದ ಗ್ಲೆನ್​ ಮ್ಯಾಕ್ಸ್​ವೆಲ್​ (Glenn Maxwell) ಮತ್ತು ಪ್ಯಾಟ್ ಕಮಿನ್ಸ್ ಏಕ ದಿನ ಕ್ರಿಕೆಟ್ ಇತಿಹಾಸದಲ್ಲಿ 8ನೇ ವಿಕೆಟ್​ಗೆ ಗರಿಷ್ಠ ರನ್​ಗಳ ಜತೆಯಾಟದ ದಾಖಲೆ ಬರೆದಿದ್ದಾರೆ. ಈ ಜೋಡಿ ಅಫಘಾನಿಸ್ತಾನ ವಿರುದ್ಧ 170 ಎಸೆತಗಳಲ್ಲಿ ಅಜೇಯ 202 ರನ್ ಬಾರಿಸಿದ್ದಾರೆ. ಇವರಿಬ್ಬರು ಈ ಹಿಂದೆ ದಕ್ಷಿಣ ಆಫ್ರಿಕಾದ ಆ್ಯಂಡ್ರ್ಯೂ ಹಾಲ್​ ಮತ್ತು ಜಸ್ಟಿನ್ ಕೆಂಪ್​ ಮಾಡಿದ್ದ ಅಜೇಯ 138 ರನ್​ಗಳ ದಾಖಲೆಯನ್ನು ಮರಿದಿದ್ದಾರೆ. ದಕ್ಷಿಣ ಆಫ್ರಿಕಾದ ಆಟಗಾರರು 2006ರ ನವೆಂಬರ್​ 26ರಂದು ಈ ದಾಖಲೆ ಬರೆದಿದ್ದರು.

ಅಜೇಯ 201 ರನ್ ಗಳಿಸುವ ಮೂಲಕ ಗ್ಲೆನ್ ಮ್ಯಾಕ್ಸ್​ವೆಲ್ ವಿಶ್ವಕಪ್​ನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದ ಮೂರನೇ ಬ್ಯಾಟರ್​​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾರ್ಟಿನ್ ಗಪ್ಟಿಲ್ (237) ಮತ್ತು ಕ್ರಿಸ್ ಗೇಲ್ (215) ಮಾತ್ರ ಅವರಿಗಿಂತ ಮುಂದಿದ್ದಾರೆ. ಏಕದಿನ ಇತಿಹಾಸದಲ್ಲಿ ಚೇಸಿಂಗ್ ಮಾಡುವಾಗ 5 ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 150 ರನ್ ಗಳಿಸಿದ ಮೊದಲ ಬ್ಯಾಟರ್​ ಎಂಬ ಶ್ರೆಯಸ್ಸಿಗೂ ಮ್ಯಾಕ್ಸ್​ವೆಲ್​ ಪಾತ್ರರಾಗಿದ್ದಾರೆ. ಗ್ಲೆನ್ ಮ್ಯಾಕ್ಸ್ವೆಲ್ ವಿಶ್ವಕಪ್ ಆವೃತ್ತಿಯಲ್ಲಿ 5 ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 2 ಶತಕಗಳನ್ನು ಗಳಿಸಿದ ಮೊದಲ ಆಟಗಾರ.

ಆಪ್ಘನ್​ ವಿರುದ್ಧ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್​ ದಾಖಲೆಗಳು

  • ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಮೊದಲ ಆಸ್ಟ್ರೇಲಿಯಾದ ಆಟಗಾರ.
  • ಏಕದಿನ ಚೇಸಿಂಗ್ ನಲ್ಲಿ ಗರಿಷ್ಠ ಸ್ಕೋರ್.
  • ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಮೊದಲ ಆರಂಭಿಕ ಆಟಗಾರನಲ್ಲ ಎಂಬ ಖ್ಯಾತಿ
  • ಏಕದಿನ ಪಂದ್ಯದಲ್ಲಿ ರನ್ ಚೇಸ್ ನಲ್ಲಿ ಮೊದಲ ದ್ವಿಶತಕ.
  • ವಿಶ್ವಕಪ್​ನಲ್ಲಿ 5 ಅಥವಾ ಅದಕ್ಕಿಂತ ಕಡಿಮೆ ಬ್ಯಾಟಿಂಗ್ ಮಾಡುವಾಗ ಅಧಿಕ ಶತಕಗಳು.

ವಿಶ್ವಕಪ್ ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್​ಗಳು

237* – ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್) ವೆಸ್ಟ್​ಇಂಡಿಸ್ ವಿರುದ್ಧ , ವೆಲ್ಲಿಂಗ್ಟನ್, 2015
215 – ಕ್ರಿಸ್ ಗೇಲ್ (ವಿಐ) ಜಿಂಬಾಬ್ವೆ ವಿರುದ್ಧ , ಕ್ಯಾನ್ಬೆರಾ, 2015
201* – ಗ್ಲೆನ್ ಮ್ಯಾಕ್ಸ್​ವೆಲ್​ (ಆಸ್ಟ್ರೇಲಿಯಾ) ಅಫಘಾನಿಸ್ತಾನ ವಿರುದ್ಧ. ಮುಂಬೈ ಡಬ್ಲ್ಯೂಎಸ್, 2023
188* – ಗ್ಯಾರಿ ಕರ್ಸ್ಟನ್ (ಎಸ್ಎ) ಯುಎಇ ವಿರುದ್ಧ , ರಾವಲ್ಪಿಂಡಿ, 1996
183 – ಸೌರವ್ ಗಂಗೂಲಿ (ಭಾರತ) ಶ್ರೀಲಂಕಾ ವಿರುದ್ಧ , ಟೌಂಟನ್, 1999

ಏಕದಿನ ಕ್ರಿಕೆಟ್​ನ ರನ್ ಚೇಸ್ ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್

201* – ಗ್ಲೆನ್ ಮ್ಯಾಕ್ಸ್ವೆಲ್ (ಆಸ್ಟ್ರೇಲಿಯಾ) ಅಫ್ಘನ್ ವಿರುದ್ಧ ,​ ಮುಂಬೈ , 2023 ವಿಶ್ವಕಪ್
193 – ಫಖರ್ ಜಮಾನ್ (ಪಾಕಿಸ್ತಾನ) ದಕ್ಷಿಣ ಆಫ್ರಿಕಾ ವಿರುದ್ಧ , ಜೋಹಾನ್ಸ್ಬರ್ಗ್, 2021
185* – ಶೇನ್ ವ್ಯಾಟ್ಸನ್ (ಆಸ್ಟ್ರೇಲಿಯಾ) ಬಾಂಗ್ಲಅ ವಿರುದ್ಧ, ಮಿರ್​ಪುರ, 2011
183* – ಎಂಎಸ್ ಧೋನಿ (ಭಾರತ) ಶ್ರೀಲಂಕಾ ವಿರುದ್ಧ, ಜೈಪುರ, 2005
183 – ವಿರಾಟ್ ಕೊಹ್ಲಿ (ಭಾರತ) ಪಾಕಿಸ್ತಾನ ವಿರುದ್ಧ, ಮಿರ್​ಪುರ, 2012

ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಪರ ಗರಿಷ್ಠ ವೈಯಕ್ತಿಕ ಸ್ಕೋರ್

201* – ಗ್ಲೆನ್ ಮ್ಯಾಕ್ಸ್ವೆಲ್, ಆಫ್ಘನ್​ ವಿರುದ್ಧ , ಮುಂಬೈ ಡಬ್ಲ್ಯೂಎಸ್, 2023 ವಿಶ್ವಕಪ್
185* – ಶೇನ್ ವ್ಯಾಟ್ಸನ್, ಬಾಂಗ್ಲಾ ವಿರುದ್ಧ ಮಿರ್ಪುರ್, 2011
181* – ಮ್ಯಾಥ್ಯೂ ಹೇಡನ್, ನ್ಯೂಜಿಲೆಂಡ್ ವಿರುದ್ಧ , ಹ್ಯಾಮಿಲ್ಟನ್, 2007
179 – ಡೇವಿಡ್ ವಾರ್ನರ್, ಪಾಕಿಸ್ತಾನ ವಿರುದ್ಧ , ಅಡಿಲೇಡ್, 2017
178 – ಡೇವಿಡ್ ವಾರ್ನರ್, ಆಫ್ಘನ್​ ವಿರುದ್ಧ ಪರ್ತ್, 2015 ವಿಶ್ವಕಪ್

ಪಂದ್ಯದಲ್ಲಿ ಏನಾಯಿತು?

ಗ್ಲೆನ್​ ಮ್ಯಾಕ್ಸ್​ವೆಲ್ ಅವರ ವಿಶ್ವ ದಾಖಲೆಯ ದ್ವಿಶತಕದ (ಅಜೇಯ 201 ರನ್​) ನೆರವು ಪಡೆದ ಆಸ್ಟ್ರೇಲಿಯಾ ತಂಡ ಅಫಘಾನಿಸ್ತಾನ ವಿರುದ್ಧದ ತನ್ನ ವಿಶ್ವ ಕಪ್​ ಪಂದ್ಯದಲ್ಲಿ (ICC World Cup 2023) 3 ವಿಕೆಟ್​ ಗೆಲುವು ಸಾಧಿಸಿದೆ. ಈ ಮೂಲಕ ಪ್ಯಾಟ್ ಕಮಿನ್ಸ್ ನೇತೃತ್ವದ ಆಸೀಸ್​ ಬಳಗ ವಿಶ್ವ ಕಪ್​ನ ಸೆಮಿಫೈನಲ್​ಗೆ ಪ್ರವೇಶ ಪಡೆದಿದ್ದು, ದಕ್ಷಿಣ ಆಫ್ರಿಕಾಗೆ ಎದುರಾಗಲಿದೆ. ಇದು ವಿಶ್ವ ಕಪ್​ ಇತಿಹಾಸದಲ್ಲಿ ಆಸ್ಟ್ರೇಲಿಯಾ ತಂಡ ಚೇಸ್​ ಮಾಡಿದ ಗರಿಷ್ಠ ಮೊತ್ತವೂ ಆಗಿದೆ. 91 ರನ್​ಗಳಿಗೆ 7 ವಿಕೆಟ್​ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡ ಮ್ಯಾಕ್ಸ್​ವೆಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮುರಿಯದ ಏಳನೇ ವಿಕೆಟ್​ಗೆ 202 ರನ್ ಪೇರಿಸುವ ಮೂಲಕ ಗೆಲುವು ದಾಖಲಿಸಿತು. ಇದು ಹಾಲಿ ವಿಶ್ವ ಕಪ್​ನಲ್ಲಿ ಮೂಡಿ ಬಂದ ಮತ್ತೊಂದು ಅಚ್ಚರಿಯ ಫಲಿತಾಂಶವಾಗಿದೆ. ಅಲ್ಲದೆ, ಈ ಗೆಲುವು ಆಸ್ಟ್ರೇಲಿಯಾ ತಂಡದ ಪಾಲಿಗೆ ಹಾಗೂ ಮ್ಯಾಕ್ಸ್​ವೆಲ್​ಗೆ ಐತಿಹಾಸಿಕ ದಾಖಲೆ.

ಈ ಸುದ್ದಿಯನ್ನೂ ಓದಿ: ICC World Cup 2023 : ಆಸ್ಟ್ರೇಲಿಯಾ ತಂಡ ಸೆಮೀಸ್​ಗೆ, ಅಂಕಪಟ್ಟಿಯಲ್ಲಿ ಆಫ್ಘನ್​ ಸ್ಥಾನವೇನು?

ಆಸ್ಟ್ರೇಲಿಯಾ ತಂಡ 49 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡಿದ್ದ ವೇಳೆ ಆಡಲು ಬಂದ ಗ್ಲೆನ್​ ಮ್ಯಾಕ್ಸ್​ವೆಲ್​ ಕೊನೆ ತನಕ ಅಜೇಯರಾಗಿ ಉಳಿದು ತಂಡವನ್ನು ಗೆಲ್ಲಿಸಿಕೊಟ್ಟರು. ತಾನು ಎದುರಿಸಿದ ಮೊದಲ ಎಸೆತದಲ್ಲಿಯೇ ಡಿಆರ್​ಎಸ್​ ಮನವಿ ಎದುರಿಸಿದ ಗ್ಲೆನ್​ ಮ್ಯಾಕ್ಸ್​ವೆಲ್ ಅಲ್ಲಿಂದ 128 ಎಸೆತಗಳನ್ನು ಎದುರಿಸಿ 21 ಫೋರ್ ಹಾಗೂ 10 ಸಿಕ್ಸರ್​ಗಳ ನೆರವಿನಿಂದ ದ್ವಿಶತಕ ಬಾರಿಸಿ ಗೆಲುವು ತಂದುಕೊಟ್ಟರು. ಅದಕ್ಕಿಂತ ಮೊದಲು ನೂರ್ ಅಹಮದ್​ ಎಸೆತದಲ್ಲಿ ಅಂಪೈರ್ ನೀಡಿದ್ದ ಎಲ್​ಬಿಡಬ್ಲ್ಯು ಔಟ್​ ವಿರುದ್ದ ಡಿಆರ್​ಎಸ್​ ಪಡೆದುಕೊಂಡು ಅಲ್ಲೂ ಬಚಾವಾಗಿದ್ದರು. ಎಲ್ಲದಕ್ಕಿಂತ ಮುಖ್ಯವಾಗಿ ಆಫ್ಘನ್ ತಂಡದ ಮುಜೀಬ್​ ಉರ್ ರಹಮಾನ್ ಅವರು ಮ್ಯಾಕ್ಸ್​ವೆಲ್ ಅವರ ಕ್ಯಾಚೊಂದನ್ನು ಕೈ ಚೆಲ್ಲುವ ಮೂಲಕ ಅವರಿಗೆ ಜೀವದಾನ ಕೊಟ್ಟಿದ್ದರು. ಅದರನ್ನು ಸದ್ಬಳಕೆ ಮಾಡಿಕೊಂಡ ಮ್ಯಾಕ್ಸ್​ವೆಲ್​ ಇತಿಹಾಸವನ್ನೇ ಸೃಷ್ಟಿಸಿದರು. ಮತ್ತೊಂದು ತುದಿಯಲ್ಲಿ 68 ಎಸೆತಗಳನ್ನು ಎದುರಿಸಿದ ನಾಯಕ ಪ್ಯಾಟ್​ ಕಮಿನ್ಸ್​ 12 ರನ್ ಮಾತ್ರ ಬಾರಿಸಿದರೂ ಅವರು ಕೊಟ್ಟ ಜತೆಯಾಟವೂ ಗೆಲುವಿಗೆ ಪ್ರಮುಖ ಕಾರಣವಾಯಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರಿಕೆಟ್

T20 World Cup Viral Video: ಪಾಕ್​ ತಂಡದ ವೇಗಿಗೆ ತವರಿನ ಅಭಿಮಾನಿಗಳಿಂದಲೇ ಗೇಲಿ

T20 World Cup Viral Video: ಪಂದ್ಯ ಮುಗಿಸಿ ಡ್ರೆಸಿಂಗ್​ ರೋಮ್​ಗೆ ತೆರಳುವ ವೇಳೆ ಅಮೀರ್​ ಅವರು ಅಭಿಮಾನಿಗಳಿಗೆ ಏನೋ ಕೈ ಸನ್ನೆ ಮಾಡುವ ಮೂಲಕ ಅಹಂಕಾರದ ವರ್ತನೆ ತೋರಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ಅಭಿಮಾನಿಗಳು ಜೋರಾಗಿ ಫಿಕ್ಸರ್​…ಫಿಕ್ಸರ್​ ಎಂದು ಕರೆದು ಗೇಲಿ ಮಾಡಿದ್ದಾರೆ.

VISTARANEWS.COM


on

T20 World Cup Viral Video
Koo

ನ್ಯೂಯಾರ್ಕ್​: ಟಿ20 ವಿಶ್ವಕಪ್(T20 World Cup)​ ಆಡುವ ಸಲುವಾಗಿ ನಿವೃತ್ತಿ ಹಿಂಪಡೆದು ಪಾಕಿಸ್ತಾನ ತಂಡದ ಪರ ಆಡುತ್ತಿರುವ ಅನುಭವಿ ಹಾಗೂ ಹಿರಿಯ ವೇಗಿ ಮೊಹಮ್ಮದ್​ ಅಮೀರ್(Mohammad Amir)​ ಅವರು ನ್ಯೂಯಾರ್ಕ್​ನಲ್ಲಿ ತವರಿನ ಅಭಿಮಾನಿಗಲೇ ಗೇಲಿ ಮಾಡಿದ್ದಾರೆ. ಅಮೀರ್​ ಅವರನ್ನು ಫಿಕ್ಸರ್…ಫಿಕ್ಸರ್​ ಎಂದು ಕರೆದಿದ್ದಾರೆ. ಈ ವಿಡಿಯೊ ವೈರಲ್​(T20 World Cup Viral Video) ಆಗಿದೆ.

ಪಂದ್ಯ ಮುಗಿಸಿ ಡ್ರೆಸಿಂಗ್​ ರೋಮ್​ಗೆ ತೆರಳುವ ವೇಳೆ ಅಮೀರ್​ ಅವರು ಅಭಿಮಾನಿಗಳಿಗೆ ಏನೋ ಕೈ ಸನ್ನೆ ಮಾಡುವ ಮೂಲಕ ಅಹಂಕಾರದ ವರ್ತನೆ ತೋರಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ಅಭಿಮಾನಿಗಳು ಜೋರಾಗಿ ಫಿಕ್ಸರ್​…ಫಿಕ್ಸರ್​ ಎಂದು ಕರೆದು ಗೇಲಿ ಮಾಡಿದ್ದಾರೆ. ಈ ವೇಳೆ ಅಮೀರ್​ ಕೋಪಗೊಂಡು ಬೈದಿದ್ದಾರೆ. ಇದರಿಂದ ಕೆರಳಿದ ಅಭಿಮಾನಿಗಳು ಮತ್ತೂ ಜೋರಾಗಿ ನೀನೊಬ್ಬ ಫಿಕ್ಸರ್​ ಎನ್ನುವುದನ್ನು ಮರಿಬೇಡ, ಜೈಲು ಶಿಕ್ಷೆಯೂ ಅನುಭವಿಸಿದ್ದೀಯ ಎಂದು ಹೇಳಿದ್ದಾರೆ. ಇದು ಬಾಬರ್​ ಅಜಂ ಅವರ ಅಭಿಮಾನಿಗಳು ಎಂದು ಹೇಳಲಾಗಿದೆ.

2010ರ ಆಗಸ್ಟ್‌ ತಿಂಗಳಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಅಮೀರ್​ ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದರು. ಹೀಗಾಗಿ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಅವರ ಮೇಲೆ ಕ್ರಿಕೆಟ್ ಆಡದಂತೆ ಐದು ವರ್ಷಗಳ ನಿಷೇಧ ವಿಧಿಸಲಾಗಿತ್ತು. ಆಗ ಅವರಿಗೆ 18 ವರ್ಷ ವಯಸ್ಸಾಗಿತ್ತು. 2015ರಲ್ಲಿ ನಿಷೇಧ ಮುಕ್ತರಾಗಿ ಅವರು ದೇಶಿ ಕ್ರಿಕೆಟ್‌ನಲ್ಲಿ ಆಡುವ ಅವಕಾಶ ಪಡೆದು ಬಳಿಕ ರಾಷ್ಟ್ರೀಯ ತಂಡಕ್ಕೆ ಮತ್ತೆ ಪುನರಾಗಮನ ಮಾಡಿದ್ದರು. ಈ ಪ್ರಕರಣದಲ್ಲಿ ಅಮೀರ್​ ಮಾತ್ರವಲ್ಲದೆ ತಂಡದ ನಾಯಕ ಸಲ್ಮಾನ್ ಭಟ್ ಮತ್ತು ಮೊಹಮ್ಮದ್ ಆಸೀಫ್ ಕೂಡ ನಿಷೇಧಕ್ಕೊಳಗಾಗಿದ್ದರು.

ಇದನ್ನೂ ಓದಿ WI vs NZ: ಕಿವೀಸ್​ ಕಿವಿ ಹಿಂಡಿ ಸೂಪರ್​-8ಗೆ ಪ್ರವೇಶಿಸಿದ ವೆಸ್ಟ್​ ಇಂಡೀಸ್​

 2021 ರಲ್ಲಿ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಆದಾಗ್ಯೂ, ಅವರು ಜಗತ್ತಿನಾದ್ಯಂತ T20 ಲೀಗ್‌ಗಳಲ್ಲಿ ಆಡುವುದನ್ನು ಮುಂದುವರೆಸಿದ್ದರು. ಈ ಬಾರಿಯ ಟಿ20 ವಿಶ್ವಕಪ್​ ಆಡುವ ಸಲುವಾಗಿಯೇ ಅವರು ತಮ್ಮ ನಿವೃತ್ತಿಯನ್ನು ಹಿಂಪಡೆದು ಮತ್ತೆ ತಂಡ ಸೇರಿದ್ದರು. 32 ವರ್ಷದ ಅಮೀರ್ ಇದುವರೆಗೆ 36 ಟೆಸ್ಟ್‌ಗಳು, 61 ಏಕದಿ ಮತ್ತು 61 ಟಿ20 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 81, ಟೆಸ್ಟ್​ನಲ್ಲಿ 119 ಮತ್ತು ಟಿ20ಯಲ್ಲಿ 69 ವಿಕೆಟ್​ ಕೆಡವಿದ್ದಾರೆ.

ಪಾಕಿಸ್ತಾನ ತಂಡ ಈ ಬಾರಿಯ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದು ಟೂರ್ನಿಯಿಂದ ಹೊರಬೀಳುವ ಹಂತದಲ್ಲಿದೆ. ಅಮೆರಿಕ ತಂಡ ಮುಂದಿನ ಪಂದ್ಯದಲ್ಲಿ ಐರ್ಲೆಂಡ್​ ವಿರುದ್ಧ ಗೆದ್ದರೆ ಪಾಕ್​ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ.

ಪಾಕ್​ ಆಟಗಾರನಿಗೆ ‘ನಾಲಾಯಕ್’ ಎಂದ ಹರ್ಭಜನ್​ ಸಿಂಗ್


ಭಾರತ ಮತ್ತು ಪಾಕ್​(IND vs PAK) ಪಂದ್ಯದ ವೇಳೆ ಸಿಕ್ಖ್ ಸಮುದಾಯವನ್ನು ಅವಹೇಳನ ಮಾಡುವ ರೀತಿಯಲ್ಲಿ ಜನಾಂಗೀಯ ನಿಂದನೆ ಮಾಡಿ ಬಳಿಕ ಕ್ಷಮೆಯಾಚಿಸಿದ್ದ ಪಾಕಿಸ್ತಾನದ ಮಾಜಿ ಆಟಗಾರ ಕಮ್ರಾನ್​ ಅಕ್ಮಲ್(Kamran Akmal) ವಿರುದ್ಧ ಹರ್ಭಜನ್​ ಸಿಂಗ್(Harbhajan Singh) ಮತ್ತೆ ಕಿಡಿ ಕಾರಿದ್ದಾರೆ. ನಿನೋಬ್ಬ ನಾಲಾಯಕ್(Nalaayak)​ ಎಂದು ಹೇಳಿದ್ದಾರೆ. ಈ ವಿಡಿಯೊ ವೈರಲ್(viral video)​ ಆಗಿದೆ. ಎಎನ್​ಐ ಜತೆಗಿನ ಸಂದರ್ಶನದಲ್ಲಿ ಮಾತನಾಡುವ ವೇಳೆ ಹರ್ಭಜನ್​ ಸಿಂಗ್ ಅವರು ಕಮ್ರಾನ್​ ಅಕ್ಮಲ್​ ಒಬ್ಬ ನಾಲಾಯಕ್​, ಈತನಿಂದ ಮಾತ್ರ ಈ ರೀತಿಯ ಹೇಳಿಕೆ ನೀಡಲು ಸಾಧ್ಯ ಎಂದು ತೀಕ್ಷ್ಣ ಮಾತುಗಳಿಂದ ಜಾಡಿಸಿದ್ದಾರೆ.

Continue Reading

ಕ್ರೀಡೆ

WI vs NZ: ಕಿವೀಸ್​ ಕಿವಿ ಹಿಂಡಿ ಸೂಪರ್​-8ಗೆ ಪ್ರವೇಶಿಸಿದ ವೆಸ್ಟ್​ ಇಂಡೀಸ್​

WI vs NZ: ಚೇಸಿಂಗ್​ ಆರಂಭಿಸಿದ ನ್ಯೂಜಿಲ್ಯಾಂಡ್​ ಆರಂಭದಲ್ಲೇ ಸತತವಾಗಿ ವಿಕೆಟ್​ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಟಿ20 ಸ್ಪೆಷಲಿಸ್ಟ್​ಗಳನ್ನು ಹೆಚ್ಚಾಗಿ ನೆಚ್ಚಿಕೊಂಡ ಬಲಿಷ್ಠ ತಂಡವಾಗಿದ್ದರೂ ಕೂಡ ಯಾರೋಬ್ಬರು ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಯಶಸ್ಸು ಕಾಣಲೇ ಇಲ್ಲ

VISTARANEWS.COM


on

WI vs NZ
Koo

ಟ್ರಿನಿಡಾಡ್: ಸೂಪರ್​-8 ಆಸೆ ಜೀವಂತವಿರಿಸುವ ಇರಾದೆಯೊಂದಿಗೆ ಆಡಲಿಳಿದ ನ್ಯೂಜಿಲ್ಯಾಂಡ್(WI vs NZ)ಗೆ ಆತಿಥೇಯ ವೆಸ್ಟ್​ ಇಂಡೀಸ್(West Indies) ಆಘಾತವಿಕ್ಕಿದೆ. 13 ರನ್​​ಗಳ ಅಂತರದ ಸೋಲುಣಿಸಿದೆ. ಗೆಲುವು ಸಾಧಿಸಿದ ವಿಂಡೀಸ್​ ‘ಸಿ’ ಗುಂಪಿನಿಂದ ಸೂಪರ್​-8ಗೆ ಪ್ರವೇಶ ಪಡೆಯಿತು. ಸತತ 2 ಸೋಲು ಕಂಡ ನ್ಯೂಜಿಲ್ಯಾಂಡ್​(New Zealand) ಟೂರ್ನಿಯಿಂದ ಬಹುತೇಕ ಹೊರಬೀಳುವ ಸ್ಥಿತಿಗೆ ಬಂದು ನಿಂತಿದೆ. ನಾಳೆ ನಡೆಯುವ ಪಂದ್ಯದಲ್ಲಿ ಅಫಘಾನಿಸ್ತಾನ ತಂಡ ಪಪುವಾ ನ್ಯೂ ಗಿನಿಯಾ ವಿರುದ್ಧ ಗೆದ್ದರೆ ಕಿವೀಸ್​ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ. ಏಕದಿನ ಸೇರಿದಂತೆ ಕಳೆದ ಆರೂ ವಿಶ್ವಕಪ್‌ ಪಂದ್ಯಾವಳಿಗಳಲ್ಲಿ ಸೆಮಿಫೈನಲ್‌ ಪ್ರವೇಶಿಸಿರುವ ನ್ಯೂಜಿಲ್ಯಾಂಡ್‌ ಈ ರೀತಿಯ ಶೋಚನೀಯ ಸ್ಥಿತಿ ತಲುಪಿದ್ದು ಇದೇ ಮೊದಲು.

ಇಲ್ಲಿನ ಬ್ರಿಯನ್​ ಲಾರಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ವೆಸ್ಟ್​ ಇಂಡೀಸ್​ ಆರಂಭಿಕ ಆಘಾತ ಕಂಡರೂ ಕೂಡ ಶೆರ್ಫೇನ್ ರುದರ್ಫೋರ್ಡ್(68) ಅಜೇಯ ಅರ್ಧಶತಕದ ಬ್ಯಾಟಿಂಗ್​ ಹೋರಾಟದಿಂದ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 149 ರನ್​ ಬಾರಿಸಿತು. ಗುರಿ ಬೆನ್ನತ್ತಿದ ನ್ಯೂಜಿಲ್ಯಾಂಡ್​ ನಾಟಕೀಯ ಕುಸಿತ ಕಂಡು 9 ವಿಕೆಟ್​ಗೆ 136 ರನ್​ ಗಳಿಸಿ ಸೋಲಿಗೆ ತುತ್ತಾಯಿತು. ಕಳೆದ ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ಧವೂ ಕೇವಲ 75 ರನ್​ಗೆ ಕುಸಿದು ಹೀನಾಯ ಸೋಲು ಕಂಡಿತ್ತು.

ಚೇಸಿಂಗ್​ ಆರಂಭಿಸಿದ ನ್ಯೂಜಿಲ್ಯಾಂಡ್​ ಆರಂಭದಲ್ಲೇ ಸತತವಾಗಿ ವಿಕೆಟ್​ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಟಿ20 ಸ್ಪೆಷಲಿಸ್ಟ್​ಗಳನ್ನು ಹೆಚ್ಚಾಗಿ ನೆಚ್ಚಿಕೊಂಡ ಬಲಿಷ್ಠ ತಂಡವಾಗಿದ್ದರೂ ಕೂಡ ಯಾರೋಬ್ಬರು ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಯಶಸ್ಸು ಕಾಣಲೇ ಇಲ್ಲ. ಡೆವೋನ್​ ಕಾನ್ವೆ(5), ನಾಯಕ ಕೇನ್​ ವಿಲಿಯಮ್ಸನ್​(1), ರಚಿನ್​ ರವೀಂದ್ರ(10), ಡ್ಯಾರಿಲ್​ ಮಿಚೆಲ್​(12), ಜೇಮ್ಸ್​ ನೀಶಮ್​(10) ಅಲ್ಪ ಮೊತ್ತಕ್ಕೆ ವಿಕೆಟ್​ ಕೈಚೆಲ್ಲಿ ಪೆವಿಲಿಯನ್​ ಪರೇಡ್​ ನಡೆಸಿದರು. ತಂಡಕ್ಕೆ ಆಸರೆಯಾದ ಆಟಗಾರನೆಂದರೆ ಗ್ಲೆನ್​ ಫಿಲಿಫ್ಸ್​ ಮಾತ್ರ.

ಇದನ್ನೂ ಓದಿ IND vs USA: ಭಾರತಕ್ಕೆ 5​ ಪೆನಾಲ್ಟಿ ರನ್ ಲಭಿಸಿದ್ದು ಹೇಗೆ?

ಒಂದೆಡೆ ಸಹ ಆಟಗಾರರ ವಿಕೆಟ್​ ಬೀಳುತ್ತಿದ್ದರೂ ಕೂಡ ವಿಂಡೀಸ್​ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತ ಫಿಲಿಫ್ಸ್​ ತಂಡದ ಗೆಲುವಿಗಾಗಿ ಶಕ್ತಿ ಮೀರಿ ಹೋರಾಟ ನಡೆಸಿದರು. ಆದರೆ 40 ರನ್​ ಗಳಿಸಿದ ವೇಳೆ ಇವರ ವಿಕೆಟ್​ ಕೂಡ ಪತನಗೊಂಡಿತು. ಈ ವಿಕೆಟ್​ ಬೀಳುತ್ತಿದ್ದಂತೆ ನ್ಯೂಜಿಲ್ಯಾಂಡ್​ ಸೋಲು ಕೂಡ ಖಚಿತಗೊಂಡಿತು. ಅಂತಿಮ ಹಂತದಲ್ಲಿ ಮಿಚೆಲ್​ ಸ್ಯಾಂಟ್ನರ್ ಅವರು 12 ಎಸೆತಗಳಿಂದ ಅಜೇಯ 21 ರನ್​ ಬಾರಿಸಿದರೂ ಕೂಡ ಇವರಿಗೆ ತಂಡವವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ವಿಂಡೀಸ್​ ಪರ ಘಾತಕ ಬೌಲಿಂಗ್​ ದಾಳಿ ನಡೆಸಿದ ಅಲ್ಜಾರಿ ಜೋಸೆಫ್​ 19 ರನ್​ಗೆ 4 ವಿಕೆಟ್​ ಕಿತ್ತರೆ, ಗುಡಾಕೇಶ್ ಮೋತಿ 3 ವಿಕೆಟ್​ ಕಿತ್ತು ಮಿಂಚಿದರು.

ಬಿರುಸಿನ ಬ್ಯಾಟಿಂಗ್​ ನಡೆಸಿದ ರುದರ್ಫೋರ್ಡ್

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ವಿಂಡೀಸ್​ 30 ರನ್​ಗೆ 5 ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ಜಾನ್ಸನ್ ಚಾರ್ಲ್ಸ್ ಮತ್ತು ರೋಸ್ಟನ್ ಚೇಸ್ ಶೂನ್ಯ ಸಂಕಟಕ್ಕೆ ಸಿಲುಕಿದರು. ಅನುಭವಿ ನಿಕೋಲಸ್​ ಪೂರಣ್(17) ಮತ್ತು ಆರಂಭಿಕ ಆಟಗಾರ ಬ್ರೆಂಡನ್​ ಕಿಂಗ್​(9), ನಾಯಕ ರೋವ್ಮನ್ ಪೊವೆಲ್(1) ಸಂಪೂರ್ಣ ಬ್ಯಾಟಿಂಗ್​ ವೈಫಲ್ಯ ಕಂಡರು. ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ವಿಂಡೀಸ್​ಗೆ ಆಸರೆಯಾದದ್ದು 7ನೇ ಕ್ರಮಾಂಕದಲ್ಲಿ ಆಡಲಿಳಿದ ಶೆರ್ಫೇನ್ ರುದರ್ಫೋರ್ಡ್. ಬಿರುಸಿನ ಬ್ಯಾಟಿಂಗ್​ ನಡೆಸಿದ ಶೆರ್ಫೇನ್ ರುದರ್ಫೋರ್ಡ್ 39 ಎಸೆತಗಳಲ್ಲಿ ಬರೋಬ್ಬರಿ 6 ಸಿಕ್ಸರ್​ ಮತ್ತು 2 ಬೌಂಡರಿ ಸಿಡಿಸಿ ಅಜೇಯ 68 ರನ್​ಗಳ ಕೊಡುಗೆ ನೀಡಿದರು. ಇವರು ನಿಂತು ಆಡದೇ ಹೋಗಿದ್ದರೆ ವಿಂಡೀಸ್​ ಅಲ್ಪ ಮೊತ್ತಕ್ಕೆ ಕುಸಿಯುತ್ತಿತ್ತು.

Continue Reading

ಕ್ರೀಡೆ

Anushka Sharma: ಕೊಹ್ಲಿಯಂತೆ ತಾಳ್ಮೆ ಕಳೆದುಕೊಂಡ ಪತ್ನಿ ಅನುಷ್ಕಾ; ವಿಡಿಯೊ ವೈರಲ್​

Anushka Sharma: ಅನೇಕ ಬಾರಿ ಅನುಷ್ಕಾ
ಸ್ಟೇಡಿಯಂನಲ್ಲಿದ್ದು, ಪತಿ ಕೊಹ್ಲಿಗೆ ಚಿಯರ್ ಅಪ್ ಮಾಡಿದ್ದರು. ಕಳೆದ ಬಾರಿ ಏಕದಿನ ವಿಶ್ವಕಪ್ ಟೂರ್ನಿಯ ವೇಳೆಯೂ ಬಹುತೇಖ ಪಂದ್ಯಗಳಲ್ಲಿ ಅನುಷ್ಕಾ ಅವರು ಕೊಹ್ಲಿಗೆ ಹುರಿದುಂಬಿಸಿದ ಫೋಟೊ ಮತ್ತು ವಿಡಿಯೊಗಳು ವೈರಲ್​ ಆಗಿತ್ತು.

VISTARANEWS.COM


on

Anushka Sharma
Koo

ನ್ಯೂಯಾರ್ಕ್​: ಕಳೆದ ಭಾನುವಾರ ನಡೆದಿದ್ದ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಟಿ20 ವಿಶ್ವಕಪ್(T20 World Cup) ಪಂದ್ಯದ ವೇಳೆ ವಿರಾಟ್​ ಕೊಹ್ಲಿಯ ಪತ್ನಿ ಅನುಷ್ಕಾ ಶರ್ಮಾ(Anushka Sharma) ತಾಳ್ಮೆ ಕಳೆದುಕೊಂಡು(Anushka Sharma Loses Her Cool) ವ್ಯಕ್ತಿಯೊಬ್ಬರಿಗೆ ಬೈದಿರುವ ವಿಡಿಯೊವೊಂದು ವೈರಲ್​ ಆಗಿದೆ. ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಅನುಷ್ಕಾ ಒಬ್ಬ ವ್ಯಕ್ತಿಯೊಂದಿಗೆ ಕೋಪದಿಂದ ಮಾತನಾಡುತ್ತಿರುವುದು ಈ ವಿಡಿಯೊದಲ್ಲಿ ಕಂಡುಬಂದಿದೆ. ಯಾವ ಕಾರಣಕ್ಕೆ ಅನುಷ್ಕಾ ತಾಳ್ಮೆ ಕಳೆದುಕೊಳ್ಳಲು ಕಾರಣ ಏನೆಂಬುದು ತಿಳಿದಿಲ್ಲ.

ವಿರಾಟ್​ ಕೊಹ್ಲಿಗೆ(Virat Kohli) ಸ್ಫೂರ್ತಿ ನೀಡಲೆಂದೇ ಅನುಷ್ಕಾ ಅವರು ಪ್ರತಿ ಪಂದ್ಯದ ವೇಳೆ ಕಾಣಿಸಿಕೊಳ್ಳುತ್ತಾರೆ. ಕೊಹ್ಲಿ ಶತಕ ಬಾರಿಸಿದಾಗ, ಉತ್ತಮ ಫೀಲ್ಡಿಂಗ್​ ಮಾಡಿದಾಗ ಗ್ಯಾಲರಿಯಲ್ಲಿ ಎದು ನಿಂತು ಚಪ್ಪಾಳೆ ತಟ್ಟುತ್ತಾ ಬೆಂಬಲ ಸೂಚಿಸುತ್ತಿರುತ್ತಾರೆ. ಹಿಂದೆ ಅನೇಕ ಬಾರಿ ಅನುಷ್ಕಾ ಮೈದಾನದಲ್ಲಿದ್ದು, ಪತಿ ಕೊಹ್ಲಿಗೆ ಚಿಯರ್ ಅಪ್ ಮಾಡಿದ್ದರು. ಕಳೆದ ಬಾರಿ ಏಕದಿನ ವಿಶ್ವಕಪ್ ಟೂರ್ನಿಯ ವೇಳೆಯೂ ಬಹುತೇಖ ಪಂದ್ಯಗಳಲ್ಲಿ ಅನುಷ್ಕಾ ಅವರು ಕೊಹ್ಲಿಗೆ ಹುರಿದುಂಬಿಸಿದ ಫೋಟೊ ಮತ್ತು ವಿಡಿಯೊಗಳು ವೈರಲ್​ ಆಗಿತ್ತು.

ಕಳೆದ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾದ (Australia) ವಿರುದ್ಧ ಸೋತ ಬೇಸರದಲ್ಲಿ ವಿರಾಟ್ ಕೊಹ್ಲಿ ತಮ್ಮ ಹೆಂಡತಿ ಇರುವ ಸ್ಟ್ಯಾಂಡ್‌ನತ್ತ ಹೋದಾಗ ಅನುಷ್ಕಾ ಶರ್ಮಾ ವಿರಾಟ್‌ ಅವರನ್ನು ತಬ್ಬಿಕೊಂಡು ಸಮಾಧಾನ ಮಾಡಿದ್ದರು. ಈ ಫೋಟೊ ವೈರಲ್​ ಆಗಿತ್ತು.

ಇದನ್ನೂ ಓದಿ Virat Kohli: ಟಿ20 ವಿಶ್ವಕಪ್​ನಲ್ಲಿ ಮೊದಲ ಗೋಲ್ಡನ್​ ಡಕ್ ಸಂಕಟಕ್ಕೆ ಸಿಲುಕಿದ ವಿರಾಟ್​ ಕೊಹ್ಲಿ

ಕೊಹ್ಲಿ ಮತ್ತು ಅನುಷ್ಕಾ ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಈ ಜೋಡಿ ಸೇವಾ (seVVA) ಎಂಬ ಹೆಸರಿನ ಎನ್​ಜಿವೊ ನಡೆಸುತ್ತಿದ್ದು ಈ ಮೂಲಕ ಹಲವರಿಗೆ ಸಹಾಯವನ್ನು ಮಾಡುತ್ತಿದ್ದಾರೆ. ಕೊಹ್ಲಿಯ ಎಲ್ಲ ಏರಿಳಿತದಲ್ಲಿಯೂ ಪತ್ನಿ ಅನುಷ್ಕಾ ಬೆಂಬಲಕ್ಕೆ ನಿಂತು ಅವರಿಗೆ ಸಾದಾ ಪ್ರೋತ್ಸಾಹವನ್ನು ನೀಡುತ್ತಲೇ ಬಂದಿದ್ದಾರೆ. ಕೊಹ್ಲಿ ಕೂಡ ತನ್ನ ಬದುಕಿನಲ್ಲಿ ಅನುಷ್ಕಾ ಮುಖ್ಯ ಪಾತ್ರಹಿಸಿರುದಾಗಿ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿದ್ದರು. “ಅನುಷ್ಕಾ ಅವರ ಭೇಟಿ ನನ್ನ ಜೀವನದಲ್ಲಿ ಹೊಸ ದೃಷ್ಟಿಕೋನವನ್ನು ಕೊಟ್ಟಿದೆ. ಹಾಗೇ ಎಲ್ಲವನ್ನೂ ಸ್ವೀಕರಿಸುವ ಭಾವನೆಯನ್ನು ಬೆಳೆಸಿಕೊಳ್ಳಲು ಸಹಕರಿಸಿದೆ” ಎಂದು ಕೊಹ್ಲಿ ಹೇಳಿದ್ದರು.

“ನನ್ನ ಜೀವನವು ಸಂಪೂರ್ಣವಾಗಿ ವಿಭಿನ್ನ ದೃಷ್ಟಿಕೋನವನ್ನು ಹೊಂದಿತ್ತು. ನೀವು ಒಬ್ಬ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಾಗ, ನಿಮ್ಮೊಳಗೆ ಆ ಬದಲಾವಣೆಗಳನ್ನು ಪ್ರಕ್ರಿಯೆಗೊಳಿಸಲು ಪ್ರಾರಂಭಿಸುತ್ತೀರಿ. ಅವಳ ಜೀವನದ ದೃಷ್ಟಿಕೋನವು ವಿಭಿನ್ನವಾಗಿತ್ತು ಮತ್ತು ಅದು ನನ್ನನ್ನು ಉತ್ತಮವಾಗಿ ಬದಲಾಯಿಸಲು ಮತ್ತು ವಿಷಯಗಳನ್ನು ಹೆಚ್ಚು ಒಪ್ಪಿಕೊಳ್ಳುವಂತೆ ಪ್ರೇರೇಪಿಸಿತು. ತಾಯಿಯಾಗಿ ಅನುಷ್ಕಾ ಮಾಡಿದ ತ್ಯಾಗಗಳು ದೊಡ್ಡವು. ಅವಳನ್ನು ನೋಡಿದಾಗ, ನನಗೆ ಏನೇ ಸಮಸ್ಯೆಗಳಿದ್ದರೂ ಏನೂ ಅಲ್ಲ ಎಂದು ಎನಿಸಿಬಿಡುತ್ತದೆ” ಎಂದು ಕೊಹ್ಲಿ ಪತ್ನಿ ಅನುಷ್ಕಾ ಬಗ್ಗೆ ಮೆಚ್ಚುಗೆಯ ಮಾತುಗಳನಾಡಿದ್ದರು.

Continue Reading

ಕ್ರೀಡೆ

Suryakumar Yadav: ಅರ್ಧಶತಕ ಬಾರಿಸಿದರೂ ಅನಗತ್ಯ ದಾಖಲೆ ಬರೆದ ಸೂರ್ಯಕುಮಾರ್​ ಯಾದವ್​

Suryakumar Yadav: ಹೊಡಿಬಡಿ ಆಟಕ್ಕೆ ಹೆಸರುವಾಸಿಯಾದ ಸೂರ್ಯಕುಮಾರ್​ ಯಾದವ್​ ಅವರು ಅಮೆರಿಕ ವಿರುದ್ಧದ ಪಂದ್ಯದಲ್ಲಿ 49 ಎಸೆತ ಎದುರಿಸಿ 50 ರನ್​ ಗಳಿಸಿ ಅರ್ಧಶತಕ ಬಾರಿಸಿದರು. ಈ ವೇಳೆ ಅವರು ಟಿ20 ವಿಶ್ವಕಪ್​ ಟೂರ್ನಿಯಲ್ಲಿ ನಿಧಾನಗತಿಯ(ಅತಿ ಹೆಚ್ಚು ಎಸೆತ ಎದುರಿಸಿ) ಅರ್ಧಶತಕ ಬಾರಿಸಿದ ವಿಶ್ವದ 5ನೇ ಬ್ಯಾಟರ್​ ಎನಿಸಿಕೊಂಡರು.

VISTARANEWS.COM


on

suryakumar yadav
Koo

ನ್ಯೂಯಾರ್ಕ್​: ನಿನ್ನೆ(ಬುಧವಾರ) ನಡೆದ ಟಿ20 ವಿಶ್ವಕಪ್(T20 World Cup 2024)​ ಟೂರ್ನಿಯ 25ನೇ ಲೀಗ್​ ಪಂದ್ಯದಲ್ಲಿ ಟೀಮ್​ ಇಂಡಿಯಾ(United States vs India) ಅಮೆರಿಕ ವಿರುದ್ಧ ಗೆದ್ದು ಸೂಪರ್​ 8ಕ್ಕೆ ಪ್ರವೇಶ ಪಡೆಯಿತು. ಅರ್ಧಶತಕ ಬಾರಿಸಿ ಭಾರತ ತಂಡದ ಗೆಲುವುವಿನ ರೂವಾರಿ ಎನಿಸಿಕೊಂಡ ಸೂರ್ಯಕುಮಾರ್​ ಯಾದವ್​(Suryakumar Yadav) ಅವರು ಈ ಸಾಧನೆಯ ಹೊರತಾಗಿಯೂ ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.

ಹೊಡಿಬಡಿ ಆಟಕ್ಕೆ ಹೆಸರುವಾಸಿಯಾದ ಸೂರ್ಯಕುಮಾರ್​ ಯಾದವ್​ ಅವರು ಅಮೆರಿಕ ವಿರುದ್ಧದ ಪಂದ್ಯದಲ್ಲಿ 49 ಎಸೆತ ಎದುರಿಸಿ 50 ರನ್​ ಗಳಿಸಿ ಅರ್ಧಶತಕ ಬಾರಿಸಿದರು. ಈ ವೇಳೆ ಅವರು ಟಿ20 ವಿಶ್ವಕಪ್​ ಟೂರ್ನಿಯಲ್ಲಿ ನಿಧಾನಗತಿಯ(ಅತಿ ಹೆಚ್ಚು ಎಸೆತ ಎದುರಿಸಿ) ಅರ್ಧಶತಕ ಬಾರಿಸಿದ ವಿಶ್ವದ 5ನೇ ಬ್ಯಾಟರ್​ ಎನಿಸಿಕೊಂಡರು. ಕೆಟ್ಟ ದಾಖಲೆ ಪಾಕಿಸ್ತಾನ ತಂಡದ ಮೊಹಮ್ಮದ್​ ರಿಜ್ವಾನ್​ ಹೆಸರಿನಲ್ಲಿದೆ. ಅವರು ಇದೇ ಆವೃತ್ತಿಯಲ್ಲಿ ನಡೆದ ಕೆನಡಾ ವಿರುದ್ಧದ ಪಂದ್ಯದಲ್ಲಿ 52 ಎಸೆತ ಎದುರಿಸಿ ಅರ್ಧಶತಕ ಬಾರಿಸಿದ್ದರು.

ಇದನ್ನೂ ಓದಿ IND vs USA: ಭಾರತಕ್ಕೆ 5​ ಪೆನಾಲ್ಟಿ ರನ್ ಲಭಿಸಿದ್ದು ಹೇಗೆ?

ಟಿ20 ವಿಶ್ವಕಪ್​ನಲ್ಲಿ ನಿಧಾನಗತಿಯಲ್ಲಿ ಅರ್ಧಶತಕ ಬಾರಿಸಿದ ಬ್ಯಾಟರ್​ಗಳು


ಮೊಹಮ್ಮದ್​ ರಿಜ್ವಾನ್​-52 ಎಸೆತ

ಡೇವಿಡ್​ ಮಿಲ್ಲರ್​- 50 ಎಸೆತ

ಡೆವೋನ್​ ಸ್ಮಿತ್​-49 ಎಸೆತ

ಡೇವಿಡ್​ ಹಸ್ಸಿ-49 ಎಸೆತ

ಸೂರ್ಯಕುಮಾರ್​ ಯಾದವ್​-49 ಎಸೆತ

ಚೇಸಿಂಗ್​ ವೇಳೆ ಭಾರತ ಕೂಡ ಅಮೆರಿಕದಂತೆ ಆರಂಭಿಕ ಆಘಾತ ಎದುರಿಸಿತು. ವಿರಾಟ್​ ಕೊಹ್ಲಿ(0) ಮತ್ತು ರೋಹಿತ್​ ಶರ್ಮ(3) ರನ್​ ಗಳಿಸಿ ವಿಕೆಟ್​ ಕೈಚೆಲ್ಲಿದರು. ಬಳಿಕ ಬಂದ ಪಂತ್​ ಕೂಡ ಬಡಬಡನೆ ಒಂದು ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ 18 ರನ್​ಗೆ ಆಟ ಮುಗಿಸಿದರು. ಪಾಕ್​ ಮೂಲದ ಅಲಿ ಖಾನ್​ ಎಸೆತಕ್ಕೆ ಕ್ಲೀನ್ ಬೌಲ್ಡ್​ ಆದರು. ಅಲ್ಪ ಮೊತ್ತಕ್ಕೆ ಮೂರು ವಿಕೆಟ್​ ಕಳೆದುಕೊಂಡ ಭಾರತ ಒಂದು ಹಂತದಲ್ಲಿ ಈ ಮೊತ್ತವನ್ನು ಬಾರಿಸಲು ಸಾಧ್ಯವೇ ಎಂಬ ಅನುಮಾನ ಕೂಡ ಕಾಡಲಾರಂಭಿಸಿತು. ಆದರೆ, ಹಾರ್ಡ್​ ಹಿಟ್ಟರ್ ಸೂರ್ಯಕುಮಾರ್​ ಯಾದವ್​ ಯಾವುದೇ ಅಪಾಯಕಾರಿ ಹೊಡೆತಗಳಿಗೆ ಮುಂದಾಗದೆ ಸಮಯೋಚಿತ ಬ್ಯಾಟಿಂಗ್​ ನಡೆಸಿ ತಂಡಕ್ಕೆ ನೆರವಾದರು. ಇವರಿಗೆ ಮತ್ತೊಂದು ತುದಿಯಲ್ಲಿ ಶಿವಂ ದುಬೆ ಕೂಡ ಉತ್ತಮ ಸಾಥ್​ ನೀಡಿದರು.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್​ ನಡೆಸಲು ವಿಫಲವಾಗಿದ್ದ ಸೂರ್ಯಕುಮಾರ್​ ಮತ್ತು ದುಬೆ ಈ ಪಂದ್ಯದಲ್ಲಿ ಉತ್ತಮ ಜತೆಯಾಟ ನಡೆಸುವ ಮೂಲಕ ಗಮನಸೆಳೆದರು. ಗೆಲುವಿಗೆ 20 ರನ್​ ಬೇಕಿದ್ದಾಗ ಸೂರ್ಯಕುಮಾರ್​ ತಮ್ಮ ಎಂದಿನ ಶೈಲಿಯಾದ ಸ್ಫೋಟಕ ಬ್ಯಾಟಿಂಗ್​ಗೆ ಒಗ್ಗಿಕೊಂಡರು. ಸತತ ಬೌಂಡರಿ ಮತ್ತು ಸಿಕ್ಸರ್​ ಬಾರಿಸಿ ನೆರದಿದ್ದ ಪ್ರೇಕ್ಷರಕರಿಗೆ ಕೊನೆಯ ಕ್ಷಣದಲ್ಲಿ ಮನರಂಜನೆ ನೀಡಿದರು. ಜತೆಗೆ ಅರ್ಧಶತಕ ಬಾರಿಸಿ ಮಿಂಚಿದರು. ದುಬೆ ಮತ್ತು ಸೂರ್ಯ ಜೋಡಿ 4 ವಿಕೆಟ್​ಗೆ ಅಜೇಯ 72 ರನ್​ ಒಟ್ಟುಗೂಡಿಸಿತು. ಸೂರ್ಯಕುಮಾರ್​ 49 ಎಸೆತ ಎದುರಿಸಿ ತಲಾ 2 ಬೌಂಡರಿ ಮತ್ತು ಸಿಕ್ಸರ್​ ಬಾರಿಸಿ ಭರ್ತಿ 50 ರನ್​ ಗಳಿಸಿದರೆ, ದುಬೆ 35 ಎಸೆತಗಳಿಂದ 31 ರನ್​ ಬಾರಿಸಿದರು.

Continue Reading
Advertisement
Namma Metro
ಬೆಂಗಳೂರು13 mins ago

Namma Metro : ತಾಂತ್ರಿಕ ಸಮಸ್ಯೆಯಿಂದಾಗಿ ಮೆಟ್ರೋ ರೈಲು ಓಡಾಟದಲ್ಲಿ ವ್ಯತ್ಯಯ; ಕಾದು ಸುಸ್ತಾದ ಪ್ರಯಾಣಿಕರು

T20 World Cup Viral Video
ಕ್ರಿಕೆಟ್16 mins ago

T20 World Cup Viral Video: ಪಾಕ್​ ತಂಡದ ವೇಗಿಗೆ ತವರಿನ ಅಭಿಮಾನಿಗಳಿಂದಲೇ ಗೇಲಿ

Dengue Fever
ಪ್ರಮುಖ ಸುದ್ದಿ32 mins ago

Dengue Fever : ಡೆಂಗ್ಯೂ ಜ್ವರಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಬಲಿ

murder case
ಬೆಂಗಳೂರು41 mins ago

Murder Case : ಬೆಂಗಳೂರಿನಲ್ಲಿ ಬರ್ಬರ ಹತ್ಯೆ; ನಡು ರಸ್ತೆಯಲ್ಲೇ ರಕ್ತಕಾರಿದ ರೌಡಿಶೀಟರ್‌

Khalistan Terror
ವಿದೇಶ42 mins ago

Khalistan Terror: ಇಟಲಿಯಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ವಿರೂಪಗೊಳಿಸಿದ ಖಲಿಸ್ತಾನಿಗಳು

Actor Darshan Another Sandalwood actor arrested for supporting Darshan
ಸ್ಯಾಂಡಲ್ ವುಡ್58 mins ago

Actor Darshan: ದರ್ಶನ್‌ಗೆ ನೆರವು ಕೊಟ್ಟ ಮತ್ತೊಬ್ಬ ಸ್ಯಾಂಡಲ್‌ವುಡ್‌ ನಟ ಅರೆಸ್ಟ್‌!

prajwal revanna case
ಪ್ರಮುಖ ಸುದ್ದಿ1 hour ago

Prajwal Revanna Case : ಭವಾನಿ ರೇವಣ್ಣ ಕಾರಿನ ಚಾಲಕ ಅಜಿತ್ ಸಂಬಂಧಿಕನ ಮನೆಗೆ ನುಗ್ಗಿ ಹಲ್ಲೆ

Actor Darshan Pavitra Gowda's ex-husband Sanjay Singh statement
ಸ್ಯಾಂಡಲ್ ವುಡ್1 hour ago

Actor Darshan: ಪವಿತ್ರಾ ಗೌಡ ಜೈಲು ಸೇರುತ್ತಿದ್ದಂತೆ ಮಾಜಿ ಪತಿ ಪ್ರತ್ಯಕ್ಷ; ಅವರು ಹೇಳಿದ್ದೇನು?

Tollgates
ದೇಶ1 hour ago

Tollgates: ಇನ್ನು ಫಾಸ್ಟ್‌ಟ್ಯಾಗ್‌‌ ಮರೆತುಬಿಡಿ; ಟೋಲ್‌ ಸಂಗ್ರಹಕ್ಕೆ ಬರುತ್ತಿದೆ ಸ್ಯಾಟಲೈಟ್‌ ಆಧಾರಿತ ವ್ಯವಸ್ಥೆ: ಏನಿದರ ಪ್ರಯೋಜನ?

WI vs NZ
ಕ್ರೀಡೆ1 hour ago

WI vs NZ: ಕಿವೀಸ್​ ಕಿವಿ ಹಿಂಡಿ ಸೂಪರ್​-8ಗೆ ಪ್ರವೇಶಿಸಿದ ವೆಸ್ಟ್​ ಇಂಡೀಸ್​

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ2 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ2 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ2 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ2 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ6 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ6 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌