ಬೆಂಗಳೂರು: ಆಸ್ಟ್ರೇಲಿಯಾದ ಕ್ರಿಕೆಟಿಗ ಮಿಚೆಲ್ ಮಾರ್ಷ್ (Mitchell Marsh) ವಿಶ್ವಕಪ್ ಟ್ರೋಫಿಯ ಮೇಲೆ ಎರಡೂ ಕಾಲುಗಳನ್ನು ಇಟ್ಟುಕೊಂಡು ವಿಶ್ರಾಂತಿ ಪಡೆಯುತ್ತಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬೆಳಗ್ಗೆಯೇ ವೈರಲ್ ಆದ ಆ ಚಿತ್ರದ ಬಗ್ಗೆ ನಿರಂತರ ಬೇಸರ ವ್ಯಕ್ತಪಡಿಸಿದ್ದರೆ. ಅಂದಹಾಗೆ ಈ ಫೋಟೋವನ್ನು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಇನ್ಸ್ಟಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲಿಂದ, ಅದನ್ನು ತೆಗೆದುಕೊಂಡ ಹಲವರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ. ಆಸೀಸ್ ಆಟಗಾರರ ದುರಹಂಕಾರ ಹಾಗೂ ಅಗೌರವ ಎಂದು ಕರೆದ ನೈಜ ಕ್ರಿಕೆಟ್ ಪ್ರೇಮಿಗಳ ಆಸೀಸ್ ಆಲ್ರೌಂಡರ್ನನ್ನು ತರಾಟೆಗೆ ತೆಗೆದುಕೊಂಡರು.
Is this behaviour of #MitchellMarsh accepted. He has put his legs up on the trophy. @CricketAus @cricketworldcup . Such People are not fit to be called Sportsmen. #CricketWorldCupFinals2023 pic.twitter.com/Bl8M9mbBqM
— kusum Bhutani | ❤️❤️ BHEDIYA ❤️❤️ (@kusumbhutani) November 20, 2023
ಆಸ್ಟ್ರೇಲಿಯಾ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದ ಕೆಲವೇ ಗಂಟೆಗಳ ನಂತರ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ನವೆಂಬರ್ 19 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಆತಿಥೇಯ ಭಾರತವನ್ನು ಎದುರಿಸಿತು. ಆಸ್ಟ್ರೇಲಿಯಾ ತಂಡವು ಆರಾಮವಾಗಿ ಕುಳಿತು ಪರಸ್ಪರ ಮಾತನಾಡುತ್ತಿದ್ದ ಹೋಟೆಲ್ ಕೋಣೆಯಿಂದ ಈ ಫೋಟೋ ಶೇರ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಮಾರ್ಷ್ ತಮ್ಮ ಚಿನ್ನದ ಟ್ರೋಫಿಯ ಮೇಲೆ ತಮ್ಮ ಎರಡೂ ಕಾಲುಗಳನ್ನು ವಿಶ್ರಾಂತಿ ಪಡೆಯುತ್ತಿದ್ದರು. ಚಿತ್ರ ವೈರಲ್ ಆದ ಕೂಡಲೇ, ಟ್ರೋಫಿಗೆ ‘ಅಗೌರವ’ ತೋರಿದ್ದಕ್ಕಾಗಿ ಜನರು ಅವರ ವಿರುದ್ಧ ಬೈಗುಳಗಳನ್ನು ಪ್ರಾರಂಭಿಸಿದರು.
ಭಾನುವಾರ ನಡೆದ ವಿಶ್ವಕಪ್ ಫೈನಲ್ನಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ಅನೇಕ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಬೇಸರ ಮೂಡಿಸಿದ್ದರು. ಆದಾಗ್ಯೂ ಗೆದ್ದ ಕಪ್ಗೆ ಸೂಕ್ತ ಮರ್ಯಾದೆ ಕೊಡದ ಆ ತಂಡದ ಆಟಗಾರರ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಆಸ್ಟ್ರೇಲಿಯಾವು ಕ್ರಿಕೆಟ್ನ ಅತಿದೊಡ್ಡ ಟ್ರೋಫಿಯನ್ನು ಗೆದ್ದಿರಬಹುದು, ಆದರೆ ಗೌರವವನ್ನು ಗೆದ್ದಿಲ್ಲ ಕೆಲವರು ಅಭಿಪ್ರಾಯಪಟ್ಟರು.
Pictures tell you everything 🇮🇳💯 have some decency and respect Mitchell Marsh this is not the way Trophy to jeet li but learn first how to respect 🏆#INDvsAUSfinal #INDvsAUS #Worldcupfinal2023 #MitchellMarsh pic.twitter.com/39F2pQpVec
— Yash k_335 (@335Yash) November 20, 2023
ಭಾರತದ ಬಳಕೆದಾರರೊಬ್ಬರು 1983 ರ ವಿಶ್ವಕಪ್ ವಿಜೇತ ಕ್ಷಣವನ್ನು ಪೋಸ್ಟ್ ಮಾಡಿದ್ದಾರೆ, ಇದರಲ್ಲಿ ಕಪಿಲ್ ದೇವ್ ಟ್ರೋಫಿಯನ್ನು ತಲೆಯ ಮೇಲೆ ಇಟ್ಟುಕೊಂಡಿದ್ದಾರೆ. “ನಮ್ಮ ಸಂಸ್ಕೃತಿ ಮತ್ತು ಅವರ ಸಂಸ್ಕೃತಿಯ ನಡುವಿನ ವ್ಯತ್ಯಾಸ” ಎಂದು ಅವರು ಹೇಳಿದರು.
ಇದನ್ನೂ ಓದಿ : Mohammed Shami : ಫೈನಲ್ ಪಂದ್ಯದ ವೇಳೆ ಏಕಾಏಕಿ ಆಸ್ಪತ್ರೆಗೆ ದಾಖಲಾದ ಶಮಿಯ ತಾಯಿ
“ಆಸೀಸ್ಗೆ ಇದೊಂದು ಮುಖ್ಯ ವಿಷಯವಲ್ಲ. , ಅವರು ನಮ್ಮಂತೆ ಭಾವನಾತ್ಮಕ ವಿಷಯಗಳನ್ನು ನೋಡುವುದಿಲ್ಲ. ಮುಂದುವರಿಯಿರಿ. ಚಿಂತಿಸಲು ಹಲವಾರು ವಿಷಯಗಳಿವೆ ಎಂದು ಇನ್ನೊಬ್ಬರು ಹೇಳಿದ್ದಾರೆ. “ಈ ರೀತಿಯ ಮನಸ್ಥಿತಿಯನ್ನು ಸೋಲಿಸಲು ಅಸಾಧಾರಣ ಮಟ್ಟದ ಕೌಶಲ್ಯ ಮತ್ತು ಕ್ರೌರ್ಯದ ಅಗತ್ಯವಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದರು.
2023 ರ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾದ ಗೆಲುವು ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳಿಗೆ ಉಲ್ಲಾಸಕರ ಕ್ಷಣವಾಗಿದೆ. ಬ್ಯಾಟಿಂಗ್ನಲ್ಲಿ ಮಿಚೆಲ್ ಮಾರ್ಷ್ ಅವರ ಪ್ರಮುಖ ಕೊಡುಗೆಗಳು, ವಿಶೇಷವಾಗಿ ಟ್ರಾವಿಸ್ ಹೆಡ್ ಅವರ ಆಟ ಗಮನ ಸೆಳೆಯಿತು. ಸಂಭ್ರಮಾಚರಣೆಯ ನಡುವೆ, ಮಾರ್ಷ್ ಟ್ರೋಫಿಯ ಮೇಲೆ ಪಾದವನ್ನು ಇಟ್ಟಿರುವ ಚಿತ್ರವು ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆಯನ್ನು ಹುಟ್ಟುಹಾಕಿತು.
ಅವರ ವಿಜಯದ ನಂತರ, ಡ್ರೆಸ್ಸಿಂಗ್ ರೂಮ್ನಲ್ಇ ಸಂತೋಷದ ದೃಶ್ಯಗಳು ಮಾರ್ಷ್ ಅವರ ಉತ್ಸಾಹವನ್ನು ಸೆರೆಹಿಡಿದವು, ಮಾರ್ಷ್ಗೆ ಇದು ಸಹಜ ಸಾಮಾನ್ಯ ವಿಷಯವಾಗಿದ್ದರೂ ಅಭಿಮಾನಿಗಳು ಅದನ್ನು ವಿಭಿನ್ನವಾಗಿ ವ್ಯಾಖ್ಯಾನಿಸಿದರು. ಅನೇಕರು ನಿರಾಶೆ ವ್ಯಕ್ತಪಡಿಸಿದರು, ಅಂತಹ ಕ್ರಮವು ಟ್ರೋಫಿ ಮತ್ತು ಕ್ರೀಡೆಯ ನೀತಿಗಳಿಗೆ ಗೌರವವನ್ನು ಹೊಂದಿಲ್ಲ ಎಂದು ಅಭಿಪ್ರಾಯಪಟ್ಟರು.