Mohammed Shami : ಫೈನಲ್​ ಪಂದ್ಯದ ವೇಳೆ ಏಕಾಏಕಿ ಆಸ್ಪತ್ರೆಗೆ ದಾಖಲಾದ ಶಮಿಯ ತಾಯಿ Vistara News

ಕ್ರಿಕೆಟ್

Mohammed Shami : ಫೈನಲ್​ ಪಂದ್ಯದ ವೇಳೆ ಏಕಾಏಕಿ ಆಸ್ಪತ್ರೆಗೆ ದಾಖಲಾದ ಶಮಿಯ ತಾಯಿ

ಶಮಿಯ (Mohammed Shami) ತಾಯಿ ಏಕಾಏಕಿ ಆಸ್ಪತ್ರೆಗೆ ದಾಖಲಾಗಿದ್ದ ಕಾರಣ ಕುಟುಂಬದ ಕೆಲವರಿಗೆ ಪಂದ್ಯ ವೀಕ್ಷಣೆ ಮಾಡಲು ಸಾಧ್ಯವಾಗಿರಲಿಲ್ಲ.

VISTARANEWS.COM


on

Mohammed Shami
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ವಿಶ್ವಕಪ್ 2023 ರ ಫೈನಲ್ ಪಂದ್ಯದ ವೇಳೆ ಅನಾರೋಗ್ಯಕ್ಕೆ ಒಳಗಾದ ಮೊಹಮ್ಮದ್ ಶಮಿ (Mohammed Shami) ಅವರ ತಾಯಿ ಅನುಮ್ ಅರಾ ಅವರನ್ನು ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಸಹಶ್ಪುರ್ ಗ್ರಾಮದ ಬಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಪಂದ್ಯದ ಸಮಯದಲ್ಲಿ ಅವರು ಜ್ವರದಿಂದ ಬಳಲುತ್ತಿದ್ದರು ಮತ್ತು ಶಮಿ ಅವರ ಸಂಬಂಧಿಕರು ಅವರನ್ನು ತಪಾಸಣೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು ಎಂದು ವರದಿ ಹೇಳಿದೆ. ಪ್ರಾಥಮಿಕ ಚಿಕಿತ್ಸೆಯ ನಂತರ ಅವರನ್ನು ಮತ್ತೊಂದು ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಅವರ ಸ್ಥಿತಿ ಈಗ ಸ್ಥಿರವಾಗಿದೆ ಎಂದು ವರದಿ ತಿಳಿಸಿದೆ. ಜ್ವರ ಮತ್ತು ಆತಂಕದಿಂದಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಆಕೆಯ ಸ್ಥಿತಿ ಸಾಮಾನ್ಯವಾಗಿದೆ. ಶಮಿ ಅವರ ಸೋದರಸಂಬಂಧಿ ಡಾ.ಮುಮ್ತಾಜ್ ತಿಳಿಸಿದ್ದಾರೆ.

2023ರ ಐಸಿಸಿ ಕ್ರಿಕೆಟ್ ವಿಶ್ವಕಪ್​ನಲ್ಲಿ ಶಮಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಪಂದ್ಯಾವಳಿಯ ಮೊದಲಾರ್ಧವನ್ನು ಕಳೆದುಕೊಂಡಿದ್ದ ಶಮಿ, ನ್ಯೂಜಿಲೆಂಡ್ ವಿರುದ್ಧದ ಭಾರತದ ಐದನೇ ಲೀಗ್ ಹಂತದ ಪಂದ್ಯದಲ್ಲಿ ತಂಡ ಪ್ರವೇಶಿಸಿದ್ದರು. ಬಳಿಕ ಬಹಳಷ್ಟು ಬೌಲರ್​ಗಳು ತಮ್ಮ ಇಡೀ ವಿಶ್ವಕಪ್ ವೃತ್ತಿಜೀವನದಲ್ಲಿ ಮಾಡದ ಪ್ರಭಾವವನ್ನು ಬೀರಿದರು.

ಏಳು ಪಂದ್ಯಗಳಲ್ಲಿ, ಶಮಿ 10.70 ಸರಾಸರಿ ಮತ್ತು 12.20 ಸ್ಟ್ರೈಕ್ ರೇಟ್ನೊಂದಿಗೆ 24 ವಿಕೆಟ್​ಗಳನ್ನು ಪಡೆದರು. ಶಮಿ ಪಂದ್ಯಾವಳಿಯಲ್ಲಿ ಮೂರು ಐದು ವಿಕೆಟ್ ಸಾಧನೆ ಮತ್ತು ನಾಲ್ಕು ವಿಕೆಟ್ ಸಾಧನೆಯನ್ನು ಹೊಂದಿದ್ದರು ಮತ್ತು ವಿಶ್ವಕಪ್ ಇತಿಹಾಸದಲ್ಲಿ ಭಾರತೀಯರ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳನ್ನು ದಾಖಲಿಸಿದ್ದರು.

18 ವಿಶ್ವಕಪ್ ಪಂದ್ಯಗಳಲ್ಲಿ, ಶಮಿ 13.52 ಸರಾಸರಿ ಮತ್ತು 15.81 ಸ್ಟ್ರೈಕ್ ರೇಟ್ನೊಂದಿಗೆ 55 ವಿಕೆಟ್​ಗಳನ್ನು ಪಡೆದಿದ್ದಾರೆ. ವೇಗಿ ತಮ್ಮ ವಿಶ್ವಕಪ್ ವೃತ್ತಿಜೀವನದಲ್ಲಿ ನಾಲ್ಕು ಬಾರಿ ಐದು ವಿಕೆಟ್​ಗಳ ಸಾಧನೆ ಮಾಡಿದ್ದಾರೆ ಇದು ಯಾವುದೇ ಬೌಲರ್ ಮಾಡಿರುವ ಅಮೋಘ ಸಾಧನೆಯಾಗಿದೆ. ಆಸ್ಟ್ರೇಲಿಯಾದ ಗ್ಲೆನ್ ಮೆಕ್ಗ್ರಾತ್ 39 ಪಂದ್ಯಗಳಲ್ಲಿ 71 ವಿಕೆಟ್​​ಗಳೊಮದಿಗೆ ವಿಶ್ವ ಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ : Virat Kohli : ಕೊಹ್ಲಿಯ ವಿಶ್ವ ದಾಖಲೆಯ ಶತಕ ಕಂಡು ಸಂತಸದ ಕಣ್ಣೀರು ಸುರಿಸಿದ ಪತ್ನಿ ಅನುಷ್ಕಾ

ಭಾರತಕ್ಕೆ ಸೋಲು

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್ ಗಳಲ್ಲಿ 240 ರನ್ ಗಳಿಗೆ ಆಲೌಟ್ ಆಯಿತು. ನಾಯಕ ರೋಹಿತ್ ಶರ್ಮಾ (31 ಎಸೆತಗಳಲ್ಲಿ 47 ರನ್, 4 ಬೌಂಡರಿ, 3 ಸಿಕ್ಸರ್), ವಿರಾಟ್ ಕೊಹ್ಲಿ (63 ಎಸೆತಗಳಲ್ಲಿ 54 ರನ್, 4 ಬೌಂಡರಿ, 4 ಬೌಂಡರಿ) ಮತ್ತು ಕೆಎಲ್ ರಾಹುಲ್ (107 ಎಸೆತಗಳಲ್ಲಿ 66 ರನ್, ಒಂದು ಬೌಂಡರಿ) ಪ್ರಮುಖ ಬ್ಯಾಟಿಂಗ್ ಪ್ರದರ್ಶಿಸಿದರು. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 55ಕ್ಕೆ 3 ವಿಕೆಟ್ ಪಡೆದರು. ನಾಯಕ ಪ್ಯಾಟ್ ಕಮಿನ್ಸ್ (34ಕ್ಕೆ 2) ಮತ್ತು ಜೋಶ್ ಹೇಜಲ್ವುಡ್ (60ಕ್ಕೆ 2) ಕೂಡ ಉತ್ತಮವಾಗಿ ಬೌಲಿಂಗ್ ಮಾಡಿದರು. ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಆಡಮ್ ಜಂಪಾ ತಲಾ 1 ವಿಕೆಟ್ ಪಡೆದರು.

241 ರನ್​ಗಳ ಗುರಿ ಬೆನ್ನಟ್ಟಿ್ದ ಆಸ್ಟ್ರೇಲಿಯಾ ಆರಂಭದಲ್ಲಿ 3 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿತ್ತು. ಟ್ರಾವಿಸ್ ಹೆಡ್ (120 ಎಸೆತಗಳಲ್ಲಿ 137 ರನ್, 15 ಬೌಂಡರಿ ಮತ್ತು 4 ಸಿಕ್ಸರ್) ಮತ್ತು ಮಾರ್ನಸ್ ಲಾಬುಶೇನ್ (110 ಎಸೆತಗಳಲ್ಲಿ 58 ರನ್, ನಾಲ್ಕು ಬೌಂಡರಿಗಳೊಂದಿಗೆ) ಅವರ ಅಮೋಘ ಇನಿಂಗ್ಸ್​​ ಭಾರತ ವಿರುದ್ಧ ಆರು ವಿಕೆಟ್​ಗಳ ಗೆಲುವಿಗೆ ನೆರವು ನೀಡಿತು. ಭಾರತದ ಪರ ಮೊಹಮ್ಮದ್ ಶಮಿ 1 ವಿಕೆಟ್ ಕಿತ್ತರೆ, ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದರು. ಶತಕ ಬಾರಿಸಿದ ಟ್ರಾವಿಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರಿಕೆಟ್

Rishabh Pant : ಸಿಎಸ್​ಕೆ ತಂಡ ಸೇರ್ತಾರಾ ರಿಷಭ್​ ಪಂತ್​?

Rishabh Pant: ಧೋನಿ ಹಾಗೂ ರಿಷಭ್ ಆತ್ಮೀಯರಾಗಿರುವ ಕಾರಣ ಚೆನ್ನೈಗೆ ತರಲು ಫ್ರಾಂಚೈಸಿ ಪ್ರಯತ್ನ ಮಾಡಬಹುದು ಎಂದು ದೀಪ್​ ದಾಸ್​​ಗುಪ್ತಾ ಹೇಳಿದ್ದಾರೆ.

VISTARANEWS.COM


on

Dhoni and Rishabh Pant
Koo

ನವದೆಹಲಿ: ಎಂಎಸ್ ಧೋನಿ ಐಪಿಎಲ್ 2024 ರ ನಂತರ ನಿವೃತ್ತಿ ಹೊಂದಲು ನಿರ್ಧರಿಸಿದರೆ ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ರಿಷಭ್ ಪಂತ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವದು ಖಚಿತ ಎಂದು ಭಾರತದ ಮಾಜಿ ವಿಕೆಟ್​ ಕೀಪರ್ ದೀಪ್ ದಾಸ್​​ ಗುಪ್ತಾ ಹೇಳಿದ್ದಾರೆ.

ದೀಪ್​ದಾಸ್​ಗುಪ್ತಾ ಹೇಳಿಕೆ ವಿಡಿಯೊ ಇಲ್ಲಿದೆ

ರಿಷಭ್ ಪಂತ್ 2016 ರಲ್ಲಿ ಐಪಿಎಲ್​ಗೆ ಪಾದಾರ್ಪಣೆ ಮಾಡಿದಾಗಿನಿಂದ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಪರ 98 ಪಂದ್ಯಗಳನ್ನು ಆಡಿದ್ದಾರೆ. ಒಂದು ಶತಕ ಮತ್ತು 15 ಅರ್ಧಶತಕಗಳೊಂದಿಗೆ 34.61 ಸರಾಸರಿ ಮತ್ತು 147.97 ಸ್ಟ್ರೈಕ್ ರೇಟ್​​ನಲ್ಲಿ 2838 ರನ್ ಗಳಿಸಿದ್ದಾರೆ. ಐಪಿಎಲ್ 2021 ಮತ್ತು 2022ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು.

ಪಂತ್ ಅವರು ಡಿಸೆಂಬರ್ 2022ರಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದ ವೇಳೆ ಉಂಟಾದ ಗಾಯದಿಂದ ಸ್ಥಿರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅದೇ ಕಾರಣಕ್ಕೆ ಐಪಿಎಲ್ 2023 ಅನ್ನು ತಪ್ಪಿಸಿಕೊಂಡಿದ್ದರು. ಪಂತ್ ಉತ್ತಮ ಸ್ಥಿತಿಯಲ್ಲಿದ್ದಾರೆ ಮತ್ತು ಐಪಿಎಲ್ 2024 ರಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಡಿಸಿ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಹೇಳಿದ್ದಾರೆ. ಹೀಗಾಗಿ ಅವರು ಈ ಬಾರಿ ಆಡುವುದು ಖಚಿತ ಎನ್ನಲಾಗಿದೆ.

ಈ ಬಾರಿಯೂ ಆಡಲಿದ್ದಾರೆ ಧೋನಿ

ಸಿಎಸ್​ಕೆ ತಂಡ ಐಪಿಎಲ್ 2023ರ ಆವೃತ್ತಿಯಲ್ಲಿ ಚಾಂಪಿಯನ್ ಆದ ಬಳಿಕ ನಾಯಕ ಎಂಎಸ್ ಧೋನಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಂದಿನಿಂದ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಐಪಿಎಲ್ 2024 ರ ಹರಾಜಿಗೆ ಮುಂಚಿತವಾಗಿ ಸಿಎಸ್ಕೆ ಧೋನಿಯನ್ನು ಉಳಿಸಿಕೊಂಡಿರುವುದರಿಂದ, ಅವರು ಮುಂದಿನ ವರ್ಷ ಐಪಿಎಲ್​​ನಲ್ಲಿ ಆಡುವುದು ಖಚಿತವಾಗಿದೆ.

ಐಪಿಎಲ್ 2025 ರ ಹೊತ್ತಿಗೆ ಎಂಎಸ್ ಧೋನಿಗೆ ಸುಮಾರು 44 ವರ್ಷ ವಯಸ್ಸಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಿಎಸ್​ಕೆ ತಮ್ಮ ಬಲಿಷ್ಠ ನಾಯಕನ ಬದಲಿಯಾಗಿ ಪಂತ್ ಅವರನ್ನು ತಂಡಕ್ಕೆ ಕರೆತರಬಹುದು ಭಾರತದ ಮಾಜಿ ಕೀಪರ್ ದೀಪ್ ದಾಸ್​ಗುಪ್ತಾ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : Virat kohli : ಪಂಚೆ ಉಟ್ಟು ಹೋದರೆ ಕೊಹ್ಲಿಯ ರೆಸ್ಟೋರೆಂಟ್​ಗೆ ಪ್ರವೇಶವಿಲ್ಲ!

ಐಪಿಎಲ್ 2025ರ ವೇಳೆಗೆ ರಿಷಭ್ ಪಂತ್ ಚೆನ್ನೈ ಸೇರಿದರೆ ಆಶ್ಚರ್ಯ ಪಡಬೇಡಿ. ಎಂಎಸ್ ಧೋನಿ ಮತ್ತು ರಿಷಭ್ ಪಂತ್​​​​ಗೆ ತುಂಬಾ ಸಾಮ್ಯತೆಗಳಿವೆ. ನಿಸ್ಸಂಶಯವಾಗಿ ರಿಷಭ್ ಅವರು ಎಂಎಸ್ ಧೋನಿಯನ್ನು ಆರಾಧಿಸುತ್ತಾರೆ. ಎಂಎಸ್ ಕೂಡ ಅವರನ್ನು ತುಂಬಾ ಇಷ್ಟಪಡುತ್ತಾರೆ. ಅವರು ಒಟ್ಟಿಗೆ ಸಾಕಷ್ಟು ಸಮಯ ಕಳೆಯುತ್ತಾರೆ. ಅವರ ಸಂಪರ್ಕ ಮತ್ತು ರಿಷಭ್ ಅವರ ಆಲೋಚನೆ ತುಂಬಾ ಹೋಲುತ್ತದೆ, ಅವರು ತುಂಬಾ ಆಕ್ರಮಣಕಾರಿ ಮತ್ತು ಸಕಾರಾತ್ಮಕವಾಗಿದ್ದಾರೆ. ಅವರು ಯಾವಾಗಲೂ ಗೆಲ್ಲುವ ಬಗ್ಗೆ ಮಾತನಾಡುತ್ತಾರೆ” ಎಂದು ದಾಸ್​ಗುಪ್ತಾ ಹೇಳಿದ್ದಾರೆ.

ದುಬೈನಲ್ಲಿ ಮಿನಿ ಹರಾಜು

ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) ರ ಮಿನಿ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಭಾನುವಾರ ದೃಢಪಡಿಸಿದೆ. ಅಂದ ಹಾಗೆ ವಿದೇಶದಲ್ಲಿ ಐಪಿಎಲ್​ ಹರಾಜು ನಡೆಯುತ್ತಿರುವುದು ಇದೇ ಮೊದಲು. ಆದರೆ, ಮೂರು ಬಾರಿ ವಿದೇಶಿ ನೆಲದಲ್ಲಿ ಟೂರ್ನಿ ನಡೆದಿದೆ.

ಮಿನಿ ಹರಾಜಿಗೆ 1166 ಆಟಗಾರರು ತಮ್ಮ ಹೆಸರನ್ನು ನೋಂದಾಯಿಕೊಂಡಿದ್ದಾರೆ ಎಂದು ವರದಿಗಳು ಸೂಚಿಸಿವೆ. ಈ ಪಟ್ಟಿಯಲ್ಲಿ 212 ಅಂತಾರಾಷ್ಟ್ರೀಯ ಪಂದ್ಯವಾಡಿದವರು , 909 ಅಂತಾರಾಷ್ಟ್ರೀಯ ಕ್ರಿಕೆಟ್ ಆಡದವರು ಮತ್ತು 45 ಅಸೋಸಿಯೇಟ್ ಆಟಗಾರರು ಇದ್ದಾರೆ. ಈ ಪೈಕಿ ವಿದೇಶಿ ಆಟಗಾರರ ಸಂಖ್ಯೆ 336.

Continue Reading

ಕ್ರಿಕೆಟ್

Virat kohli : ಪಂಚೆ ಉಟ್ಟು ಹೋದರೆ ಕೊಹ್ಲಿಯ ರೆಸ್ಟೋರೆಂಟ್​ಗೆ ಪ್ರವೇಶವಿಲ್ಲ!

Virat kohli : ತಮ್ಮನ್ನು ಒಳಗೆ ಬಿಟ್ಟಿಲ್ಲ ಎಂಬುದಾಗಿ ತಮಿಳುನಾಡಿನ ವ್ಯಕ್ತಿಯೊಬ್ಬರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.

VISTARANEWS.COM


on

One8 Commune
Koo

ಮುಂಬೈ: ಮುಂಬೈನ ವಿರಾಟ್ ಕೊಹ್ಲಿ ರೆಸ್ಟೋರೆಂಟ್​ಗಳಿಗೆ ತಮಿಳುನಾಡಿನ ವ್ಯಕ್ತಿಯೊಬ್ಬರಿಗೆ ಪ್ರವೇಶ ನಿರಾಕರಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜುಹೂಬಲ್ಲಿರುವ ಒನ್ 8 ಕಮ್ಯೂನ್ ಕೊಹ್ಲಿಗೆ ಸೇರಿದ ರೆಸ್ಟೋರೆಂಟ್ ಆಗಿದೆ. ಅಲ್ಲಿಗೆ ಹೋಗಿದ್ದ ವ್ಯಕ್ತಿಯನ್ನು ಅಲ್ಲಿನ ಸಿಬ್ಬಂದಿ ವಾಪಸ್ ಕಳುಹಿಸಿದ್ದಾರೆ ಎಂಬುದಾಗಿ ಸುದ್ದಿಯಾಗಿದೆ. ಅಂದ ಹಾಗೆ ರೆಸ್ಟೊರೆಂಟ್​ಗೆ ವಿಲಕ್ಷಣ ಕಾರಣ ನೀಡಿ ಪ್ರವೇಶ ನಿರಾಕರಿಸಲಾಗಿದೆ ಎಂದು ಆ ವ್ಯಕ್ತಿ ಆರೋಪಿಸಿದ್ದಾರೆ. ವಿಡಿಯೊ ಮಾಡಿರುವ ಗ್ರಾಹಕ ಬಿಳಿ ಪಂಚೆ ಹಾಗೂ ಬಿಳಿ ಬಣ್ಣದ ಶರ್ಟ್​ ಹಾಕಿಕೊಂಡು ಅಲ್ಲಿಗೆ ಹೋಗಿದ್ದರು. ಅದಕ್ಕೆ ಅವರಿಗೆ ಸರ್ವಿಸ್ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ವೀಡಿಯೊದಲ್ಲಿರುವ ವ್ಯಕ್ತಿ ಬಿಳಿ ಬಣ್ಣದ ವಸ್ತ್ರಗಳನ್ನು ಧರಿಸಿ, ರೆಸ್ಟೋರೆಂಟ್ ಮುಂದೆಯೇ ವಿಡಿಯೊ ಮಾಡಿದ್ದಾರೆ. ಇದು ದಕ್ಷಿಣ ಭಾರತದ ಕೆಲವರ ಕೋಪಕ್ಕೆ ಕಾರಣವಾಗಿದೆ. ಬಿಳಿ ಪಂಚೆ ಹಾಗೂ ಶರ್ಟ್​ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತೀಯರ ಸಾಂಪ್ರದಾಯಿಕ ದಿರಸಾಗಿದೆ. ಅದನ್ನು ನಿರಾಕರಿಸಿದ್ದು ತಪ್ಪು ಎಂಬುದಾಗಿ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

ವಿನೀತ್ ಎಂಬುವರು ಈ ವಿಡಿಯೊವನ್ನು ಟ್ವೀಟ್ ಮಾಡಿದ್ದು, ಈ ರೆಸ್ಟೋರೆಂಟ್​ಗೆ ಚಡ್ಡಿ ಹಾಕಿಕೊಂಡು ಹೋದರೆ ಸರ್ವ್ ಮಾಡುತ್ತಾರೆ. ನಾಯಿ- ಬೆಕ್ಕನ್ನೂ ಕರೆದುಕೊಂಡು ಹೋಗಬಹುದು. ಆದರೆ ಪಂಚೆ ಹಾಕಿಕೊಂಡು ಹೋದರೆ ಅವಕಾಶ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೊಬ್ಬರು ಇದಕ್ಕೆ ತದ್ವಿರುದ್ಧ ಟ್ವೀಟ್ ಮಾಡಿದ್ದಾರೆ. ಅದು ಖಾಸಗಿ ಆಸ್ತಿ. ಅಲ್ಲಿನ ನಿಯಮವನ್ನು ಗ್ರಾಹಕರು ಪಾಲಿಸಲೇಬೇಕು. ನಮ್ಮದೇ ನಿಯಮ ಅಲ್ಲಿಗೆ ಅನ್ವಯವಾಗಲ್ಲ ಎಂದು ಹೇಳಿದ್ದಾರೆ.

ಎಲ್ಲ ರೆಸ್ಟೋರೆಂಟ್​​ಗಳಲ್ಲಿ ಅಲ್ಲಿನದ್ದೇ ಕೆಲವು ನಿಯಮಗಳು ಇರುತ್ತವೆ. ಅದು ನಿಮಗೆ ಸೂಕ್ತ ಅಲ್ಲ ಎಂದು ಅನಿಸಿದರೆ ಅಲ್ಲಿಗೆ ಹೋಗದಿರುವುದೇ ಒಳಿತು. ಅದನ್ನು ಹೊರತುಪಡಿಸಿ ಪುಕ್ಕಟೆ ಪ್ರಚಾರ ಪಡೆದುಕೊಳ್ಳುವುದು ಸೂಕ್ತವಲ್ಲ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : Virat kohli : ಸಿಹಿ ಮಾವಿನ ಹಣ್ಣಿನ ಕತೆ ಕೆದಕಿದ ನವಿನ್ ಉಲ್ ಹಕ್​

ಬೆಂಗಳೂರಿನ ಕೆಲವು ಪಬ್​ಗಳಲ್ಲಿ ಹುಡುಗರು ಚಪ್ಪಲಿ ಹಾಕಿಕೊಂಡು ಬರುವುದನ್ನು ಒಪ್ಪುವುದಿಲ್ಲ. ಆದರೆ, ಹುಡುಗಿಯರು ಸ್ಯಾಂಡಲ್ಸ್​ ಮತ್ತು ಹೈಹೀಲ್ಡ್​ ಹಾಕಿಕೊಂಡು ಬರುತ್ತಾರೆ. ಅವೆಲ್ಲವೂ ಅವರ ನಿಯಮಗಳು. ಅನಗತ್ಯ ತಕರಾರು ತೆಗೆಯಬಾರದು ಎಂದು ಇನ್ನೊಬ್ಬರು ಕೊಹ್ಲಿ ಪರ ಬ್ಯಾಟ್ ಬೀಸಿದ್ದಾರೆ.

ಬ್ರಿಟನ್​ನಲ್ಲಿದ್ದಾರೆ ಕೊಹ್ಲಿ ದಂಪತಿ

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಲಂಡನ್​ನಲ್ಲಿ ರಜಾ ಕಳೆಯುತ್ತಿದ್ದಾರೆ. ಅವರಿಬ್ಬರು ತಮ್ಮ ಮುದ್ದಾದ ಮಗಳು ವಾಮಿಕಾ ಜತೆ ಸುಂದರ ಕೌಟುಂಬಿಕ ಸಮಯವನ್ನು ಕಳೆಯುತ್ತಿದ್ದಾರೆ. ಅನುಷ್ಕಾ ಶರ್ಮಾ ಅವರ ಚಳಿಗಾಲದ ಉಡುಪು ಹಾಕಿಕೊಂಡಿದ್ದು, ಕರಿವರ್ಣದ ಬಟ್ಟೆಯೊಂದಿಗೆ ದಂಪತಿಗಳ ಅಭಿಮಾನಿಗಳ ಕಣ್ಮನ ಸೆಳೆದಿದ್ದಾರೆ.

ಈ ಕುಟುಂಬದ ಜತೆ ಸಮಯ ಕಳೆಯುವ ಉದ್ದೇಶದಿಂದ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದ ವೈಟ್-ಬಾಲ್ ಕ್ರಿಕೆಟ್​ ಸರಣಿಯಲ್ಲಿ ಪಾಲ್ಗೊಳ್ಳದಿರಲು ವಿರಾಟ್​ ಕೊಹ್ಲಿ ನಿರ್ಧರಿಸಿದ್ದಾರೆ. ಹೀಗಾಗಿ ಗುರುವಾರ ತಂಡ ಘೋಷಿಸಿದಾಗ ಅವರ ಹೆಸರು ಅಲ್ಲಿ ಇರಲಿಲ್ಲ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಅದೇ ಹೆಜ್ಜೆಗಳನ್ನು ಅನುಸರಿಸಿದ್ದಾರೆ. ಟಿ 20 ಐ ಮತ್ತು ಏಕದಿನ ಸರಣಿಗಳಿಂದ ಹೊರಗುಳಿಯುತ್ತಿದ್ದಾರೆ. ನೇರವಾಗಿ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.

Continue Reading

ಕ್ರಿಕೆಟ್

ಪಾಕಿಸ್ತಾನ ಕ್ರಿಕೆಟ್​ ತಂಡದ ದುರ್ಗತಿ; ನೇಮಕವಾದ ಒಂದೇ ದಿನದಲ್ಲಿ ತಂಡದ ಸಲಹೆಗಾರ ಔಟ್​

Pakistan Cricket Team : ಸಲ್ಮಾನ್ ಬಟ್​ ನೇಮಕಗೊಂಡ ಬಳಿಕ ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತಗೊಂಡಿತು.

VISTARANEWS.COM


on

Salman Butt
Koo

ಕರಾಚಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket Team) ಶುಕ್ರವಾರ (ಡಿಸೆಂಬರ್ 1ರಂದು) ಮ್ಯಾಚ್​ ಫಿಕ್ಸಿಂಗ್​ ಕಳಂಕಿತ ಸಲ್ಮಾನ್ ಬಟ್ ಅವರನ್ನು ತಂಡದ ಸಲಹೆಗಾರನನ್ನಾಗಿ ಆಯ್ಕೆ ಮಾಡಿತ್ತು. ಇದೀಗ ಒಂದೇ ದಿನದಲ್ಲಿ ಅವರು ಅಧಿಕಾರ ಕಳೆದುಕೊಂಡಿದ್ದು ವಿರೋಧದ ಹಿನ್ನೆಲೆಯಲ್ಲಿ ಅವರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಲಾಗಿದೆ. ಕಮ್ರಾನ್ ಅಕ್ಮಲ್ ಮತ್ತು ರಾವ್ ಇಫ್ತಿಕಾರ್ ಅಂಜುಮ್ ಕೂಡ ಬಟ್​ ಜತೆ ಸಲಹೆಗಾರರಾಗಿ ನೇಮಕಗೊಂಡಿದ್ದರು.

ವಹಾಬ್ ರಿಯಾಜ್​ ನೇತೃತ್ವದ ಸಮಿತಿಯಲ್ಲಿ ಬಟ್​ ಸದಸ್ಯರಾಗಿ ನೇಮಕಗೊಂಡಿದ್ದರು. ಆದರೆ ಅವರ ಆಯ್ಕೆ ಬಗ್ಗೆ ಸಿಕ್ಕಾಪಟ್ಟೆ ಟೀಕೆಗಳು ವ್ಯಕ್ತಗೊಂಡವು. ಬಳಿಕ ಅವರನ್ನು ಶನಿವಾರ (ಡಿಸೆಂಬರ್ 2ರಂದು) ಉಚ್ಛಾಟನೆ ಮಾಡಲಾಯಿತು. ಈ ಕುರಿತು ವಹಾಬ್​ ರಿಯಾಜ್​ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಪ್ರಕಟಿಸಿದ್ದಾರೆ.

“ಸಲ್ಮಾನ್ ಬಟ್ ಪಿಸಿಬಿಯ ಯಾವುದೇ ಸಮಿತಿಯಲ್ಲಿಲ್ಲ. ನನ್ನ ಪ್ರಕಾರ, ಅವರು ಕ್ರಿಕೆಟ್ ಅನ್ನು ಅರ್ಥಮಾಡಿಕೊಳ್ಳುವ ಉತ್ತಮ ಆಟಗಾರ. ಕಳೆದ 2-3 ವರ್ಷಗಳಿಂದ ದೇಶೀಯ ಕ್ರಿಕೆಟ್​ನಲ್ಲಿ ಉತ್ತಮಾಗಿ ವರದಿ ಮಾಡುತ್ತಿದ್ದಾರೆ. ಅವರ ಅಭಿಪ್ರಾಯವನ್ನು ಪಡೆಯಲು ಅವರನ್ನು ನನ್ನ ಸಲಹೆಗಾರರನ್ನಾಗಿ ಮಾಡಲಾಯಿತು, ಅದರ ಕೆಲವು ಮಾಧ್ಯಮ ಸಂಸ್ಥೆಗಳು ಮತ್ತು ಜನರು ಅಪಪ್ರಚಾರ ಮಾಡಲು ಪ್ರಾರಂಭಿಸಿದರು” ಎಂದು ವಹಾಬ್ ಸುದ್ದಿಗಾರರಿಗೆ ತಿಳಿಸಿದರು.

“ಮುಖ್ಯ ಆಯ್ಕೆಗಾರನಾಗಿ, ನನ್ನೊಂದಿಗೆ ಯಾರು ಕೆಲಸ ಮಾಡಬೇಕು ಮತ್ತು ನನಗೆ ಯಾರ ಬೆಂಬಲ ಬೇಕು ಎಂಬುದು ನನ್ನ ನಿರ್ಧಾರ. ಆದರೆ ಜನರು ಸ್ವಜನಪಕ್ಷಪಾತ ಮತ್ತು ಗೆಳೆತದನ ಬಗ್ಗೆ ಚರ್ಚಿಸಲು ಪ್ರಾರಂಭಿಸಿದರು. ಈ ಕಾರಣದಿಂದಾಗಿ ನಾನು ಈ ನಿರ್ಧಾರವನ್ನು ಹಿಂತೆಗೆದುಕೊಳ್ಳುತ್ತಿದ್ದೇನೆ. ನಾನು ಈಗಾಗಲೇ ಸಲ್ಮಾನ್ ಬಟ್ ಅವರೊಂದಿಗೆ ಮಾತನಾಡಿದ್ದೇನೆ. ಅವರು ನನ್ನ ತಂಡದ ಭಾಗವಾಗಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿಸಿದ್ದೇನೆ, “ಎಂದು ಅವರು ಮಾಹಿತಿ ನೀಡಿದರು.

ಸ್ಪಾಟ್​ ಫಿಕ್ಸಿಂಗ್ ಕಳಂಕಿತ

ಸಲ್ಮಾನ್ ಬಟ್ 2010 ರಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾಗಿದ್ದರು. ಇದರ ಪರಿಣಾಮವಾಗಿ, ಅವರು ಐಸಿಸಿಯಿಂದ 10 ವರ್ಷಗಳ ನಿಷೇಧಕ್ಕೆ ಒಳಗಾಗಿದ್ದರು. ಯುಕೆಯಲ್ಲಿ ಅವರು ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಬೇಕಾಯಿತು.

ಸಲ್ಮಾನ್ ಅವರನ್ನು ನೇಮಕ ಮಾಡುವುದು ಸಂಪೂರ್ಣವಾಗಿ ತಮ್ಮ ನಿರ್ಧಾರವಾಗಿದೆ ಮತ್ತು ಯಾವುದೇ ರೀತಿಯ ಒತ್ತಡದಲ್ಲಿ ತೆಗೆದುಕೊಳ್ಳಲಾಗಿಲ್ಲ ಎಂದು ವಹಾಬ್ ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ಪಿಸಿಬಿ ಹಿನ್ನಡೆಯನ್ನು ಎದುರಿಸಿದ ನಂತರ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಬೇಕಾಯಿತು ಎಂಬುದು ಸ್ಪಷ್ಟ.

ಇದನ್ನೂ ಓದಿ : Ind vs Aus : ಬೆಂಗಳೂರಿನಲ್ಲಿಂದು ನಡೆಯಲಿದೆ ಔಪಚಾರಿಕ ಪಂದ್ಯ

“ಪಿಸಿಬಿಯನ್ನು ಅವಮಾನಿಸುವುದು ಕೆಲವರ ಉದ್ದೇಶ. ಕ್ರಿಕೆಟ್ ಮಂಡಳಿಯ ಮೇಲೆ ಕೆಸರು ಎರಚಲು ಮತ್ತು ವೈಯಕ್ತಿಕ ಲಾಭ ಪಡೆಯಲು ಕೆಲವು ಬಯಸಿದ್ದರಿಂದ ಅವರು ಸಂಚು ರೂಪಿಸಿದರು. ನಾನು ಈ ಸಂಸ್ಥೆಯ ಭಾಗವಾಗಿರುವುದರಿಂದ ಅಂತಹ ಯಾವುದೇ ಅನಪೇಕ್ಷಿತ ಸಂಗತಿಗಳಿಗೆ ನಾನು ಅವಕಾಶಗಳನ್ನು ಕೊಡುವುದಿಲ್ಲ. , ನನ್ನ ನಿರ್ಧಾರದಿಂದಾಗಿ ಆದ್ದರಿಂದ ನಾನು ಅದನ್ನು ಹಿಂತೆಗೆದುಕೊಂಡೆ” ಎಂದು ಅವರು ಹೇಳಿದರು.

ಮುಖ್ಯ ಆಯ್ಕೆದಾರರಿಗೆ ಸಲಹೆಗಾರ ಸದಸ್ಯರಾಗಿ ಅವರ ಮೊದಲ ನೇಮಕವು ಜನವರಿ 12ರಿಂದ ಪ್ರಾರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಐ ಸರಣಿಯನ್ನು ಒಳಗೊಂಡಿದೆ.

Continue Reading

ಕ್ರಿಕೆಟ್

Ind vs Aus : ಬೆಂಗಳೂರಿನಲ್ಲಿಂದು ನಡೆಯಲಿದೆ ಔಪಚಾರಿಕ ಪಂದ್ಯ

Ind vs Aus : ಭಾರತ ಕ್ರಿಕೆಟ್​ ತಂಡ ಐದು ಪಂದ್ಯಗಳ ಸರಣಿಯನ್ನುಈಗಾಗಲೇ 3-1 ಅಂತರದಿಂದ ತನ್ನದಾಗಿಸಿಕೊಂಡಿದೆ.

VISTARANEWS.COM


on

Cricket news
Koo

ಬೆಂಘಳೂರು: ಐದು ಪಂದ್ಯಗಳ ಸರಣಿಯ 4ನೇ ಟಿ20 ಪಂದ್ಯದಲ್ಲಿ 20 ರನ್​ಗಳ ಭರ್ಜರಿ ಜಯ ಸಾಧಿಸಿರುವ ಭಾರತ ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ 5ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ (Ind vs Aus) ಸೆಣಸಲಿದೆ. ಈ ಮೂಲಕ ಟಿ20 ಸರಣಿಯಲ್ಲಿ ಭಾರತ 3-1ರ ಮುನ್ನಡೆ ಸಾಧಿಸಿದೆ. ಇಂದು ಡಿಸೆಂಬರ್​ 3ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐದನೇ ಹಾಗೂ ಕೊನೇ ಪಂದ್ಯ ನಡೆಯಲಿದೆ. ಸರಣಿಯನ್ನು ಭಾರತ ತಂಡ ಗೆದ್ದಿರುವ ಕಾರಣ ಇದು ಔಪಚಾರಿಕ ಪಂದ್ಯ ಎನಿಸಿಕೊಳ್ಳಲಿದೆ.

4ನೇ ಟಿ20 ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿರುವುದು ನಿಜವಾದರೂ ರಿಂಕು ಸಿಂಗ್ ಅವರ 46 ಮತ್ತು ಯಶಸ್ವಿ ಜೈಸ್ವಾಲ್ ಅವರ 37 ರನ್​ಗಳ ನೆರವಿನಿಂದ ಭಾರತ 174 ರನ್ ಗಳಿಸಿತು. ಉಳಿದಂತೆ ಕೆಲವು ಬ್ಯಾಟರ್​​ಗಳು ವಿಫಲಗೊಂಡಿದ್ದರು. ಭಾರತದ ಯುವ ಬ್ಯಾಟಿಂಗ್ ಲೈನ್ ಅಪ್ ತಮ್ಮಲ್ಲಿ ಸಾಕಷ್ಟು ಫೈರ್ ಪವರ್ ಇದೆ ಎಂದು ತೋರಿಸಿದೆ. ರಿಂಕು ಸಿಂಗ್ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಅವರು ಪಂದ್ಯದ ಅಗತ್ಯಗಳಿಗೆ ಅನುಗುಣವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಸರಣಿಯಲ್ಲಿ ತನ್ನ ಮೊದಲ ಪಂದ್ಯವನ್ನು ಆಡಿದ ಜಿತೇಶ್ ಶರ್ಮಾ 35 ರನ್ ಗಳಿಸಿ ಭಾರತ 174 ರನ್ ಗಳಿಸಲು ನೆರವಾಗಿದ್ದೂ ಅನುಕೂಲಕರವಾಗಿತ್ತು.

ಹಾಲಿ ಟಿ 20 ಐ ಸರಣಿಯಲ್ಲಿ ಭಾರತವು ಇನ್ನಿಂಗ್ಸ್​​ನಲ್ಲಿ 200 ಕ್ಕಿಂತ ಕಡಿಮೆ ರನ್ ಗಳಿಸಿರುವುದು ಇದೇ ಮೊದಲು. ತಿಲಕ್ ವರ್ಮಾ ಬದಲಿಗೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಶ್ರೇಯಸ್ ಅಯ್ಯರ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಆದರೆ ಅವರ ಫಾರ್ಮ್ ಅನ್ನು ಪರಿಗಣಿಸಿದರೆ, ಭಾರತವು ಅಯ್ಯರ್ ಅವರ ಮೇಲೆ ಉತ್ತಮವಾಗಿ ಆಡಲು ಪಣತೊಡುತ್ತದೆ.

ಸ್ಪಿನ್ನರ್​ಗಳ ಸಾಧನೆ

ಭಾರತದ ಬೌಲಿಂಗ್ ಬಗ್ಗೆ ಮಾತನಾಡುವುದಾದರೆ ಸ್ಪಿನ್ನರ್​ಗಳು ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ ಪಂದ್ಯದಲ್ಲಿ ರವಿ ಬಿಷ್ಣೋಯ್ ಮತ್ತು ಅಕ್ಷರ್ ಪಟೇಲ್ ಅವರಂತಹ ಆಟಗಾರರು ವಿಕೆಟ್ ಪಡೆದುಕೊಂಡಿದ್ದಾರೆ. ವೇಗದ ಬೌಲಿಂಗ್ ಘಟಕವು ಕಳವಳಕಾರಿಯಾಗಿದೆ. 4ನೇ ಟಿ20ಯಲ್ಲಿ ಅವೇಶ್ ಖಾನ್ ಹೊರತುಪಡಿಸಿದರೆ ಬೇರೆ ಯಾರೂ ಆರಾಮದಾಯಕವಾಗಿ ಕಾಣಲಿಲ್ಲ. ಬೆಂಗಳೂರು ಪಿಚ್ ಬೌಲರ್​ಗಳಿಗೆ ಆಘಾತಕಾರಿಯಾಗಿರುವುದರಿಂದ ಮತ್ತಷ್ಟು ಬಲ ಕಂಡುಕೊಳ್ಳಬೇಕಾಗಿದೆ.

ಆಸ್ಟ್ರೇಲಿಯಾ ಕೆಲವು ಬದಲಾವಣೆಗಳನ್ನು ಮಾಡಿದೆ. ಗ್ಲೆನ್ ಮ್ಯಾಕ್ಸ್ವೆಲ್, ಆಡಮ್ ಜಂಪಾ ಮತ್ತು ಸ್ಟೋಯ್ನಿಸ್ ಅವರಂತಹ ಹಲವಾರು ಹಿರಿಯ ಆಟಗಾರರು ತವರಿಗೆ ಮರಳಿರುವುದರಿಂದ ತಂಡ ಬಲ ಕ್ಷೀಣಿಸಿತ್ತಿದೆ. ಪವರ್ ಪ್ಲೇನಲ್ಲಿ ಟ್ರಾವಿಸ್ ಹೆಡ್ ಭಾರತದ ಬೌಲಿಂಗ್ ದಾಳಿಯನ್ನು ಹಿಮ್ಮಟ್ಟಿಸುತ್ತಿದ್ದಾರೆ. ನಾಯಕ ಮ್ಯಾಥ್ಯೂ ವೇಡ್ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಸರಣಿಯುದ್ದಕ್ಕೂ ಭಾರತೀಯ ಬ್ಯಾಟರ್​ಗಳು ಆಸ್ಟ್ರೇಲಿಯಾದ ಬೌಲರ್​​ಗಳನ್ನು ಬೆಂಡೆತ್ತಿದ್ದಾರೆ. 4ನೇ ಟಿ20 ಪಂದ್ಯದಲ್ಲಿ ಬೆನ್ ದ್ವಾರ್ಶುಯಿಸ್ 3 ವಿಕೆಟ್ ಪಡೆದರೂ, 4 ಓವರ್​ಗಳಲ್ಲಿ 40 ರನ್ ನೀಡಿ ಮಿಂಚಿದ್ದಾರೆ.

ಇದನ್ನೂ ಓದಿ : IPL 2024 : ಐಪಿಎಲ್​ ಹರಾಜಿನ ದಿನಾಂಕ, ಸ್ಥಳದ ಬಗ್ಗೆ ಖಚಿತ ಮಾಹಿತಿ ನೀಡಿದ ಬಿಸಿಸಿಐ

ಪಿಚ್ ವರದಿ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವು ಬ್ಯಾಟಿಂಗ್ ಸ್ವರ್ಗವಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್​​ನಲ್ಲಿ ಹೆಚ್ಚಿನ ತಂಡಗಳು ತಮ್ಮ ಇನ್ನಿಂಗ್ಸ್​ನಲ್ಲಿ 300 ಕ್ಕಿಂತ ಹೆಚ್ಚು ರನ್ ದಾಖಲಾಗಿದ್ದವು. ಚಿನ್ನಸ್ವಾಮಿಯಲ್ಲಿ ಆಡಿದ 8 ಟಿ 20 ಪಂದ್ಯಗಳಲ್ಲಿ ಎರಡನೇ ಬ್ಯಾಟಿಂಗ್ ಮಾಡುವ ತಂಡಗಳು 5ರಲ್ಲಿ ಗೆದ್ದಿದ್ದರೆ, ಮೊದಲು ಬ್ಯಾಟಿಂಗ್ ಮಾಡುವ ತಂಡವು ಎರಡು ಬಾರಿ ಗೆದ್ದಿದೆ. 5 ನೇ ಟಿ 20 ಐ ಪಿಚ್ ಸಾಕಷ್ಟು ರನ್​ಗಳೊಂದಿಗೆ ಸಮತಟ್ಟಾಗುವ ನಿರೀಕ್ಷೆಯಿದೆ.

ಸಂಭಾವ್ಯ ಪ್ಲೇಯಿಂಗ್ ಇಲೆವೆನ್

ಭಾರತ: ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಿಂಕು ಸಿಂಗ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ದೀಪಕ್ ಚಹರ್, ಅವೇಶ್ ಖಾನ್, ಮುಖೇಶ್ ಕುಮಾರ್.

ಆಸ್ಟ್ರೇಲಿಯಾ: ಟ್ರಾವಿಸ್ ಹೆಡ್, ಜೋಶ್ ಫಿಲಿಪ್, ಆರೋನ್ ಹಾರ್ಡಿ, ಬೆನ್ ಮೆಕ್ಡರ್ಮಾಟ್, ಟಿಮ್ ಡೇವಿಡ್, ಮ್ಯಾಟ್ ಶಾರ್ಟ್, ಮ್ಯಾಥ್ಯೂ ವೇಡ್ (ನಾಯಕ/ ವಿಕೆಟ್ ಕೀಪರ್), ಬೆನ್ ಡ್ವಾರ್ಶುಯಿಸ್, ತನ್ವೀರ್ ಸಂಘಾ, ಕ್ರಿಸ್ ಗ್ರೀನ್, ಜೇಸನ್ ಬೆಹ್ರೆನ್ಡಾರ್ಫ್.

Continue Reading
Advertisement
BL Santhosh and Priyank Kharge
ಕರ್ನಾಟಕ6 mins ago

Assembly Elections 2023 : ಈಗ ಏನಾದ್ರೂ ಹೇಳ್ತೀರಾ ಸರ್‌!; ಪ್ರಿಯಾಂಕ್‌ ಖರ್ಗೆಗೆ ಬಿ.ಎಲ್‌ ಸಂತೋಷ್‌ ಗೇಲಿ

Speaker UT Khadar
ಕರ್ನಾಟಕ19 mins ago

Assembly Session: ಅಧಿವೇಶನಕ್ಕೆ ಬೇಗ ಬಂದವರಿಗೆ ಟೀ ಕಪ್‌; ತಡವಾಗಿ ಬಂದವರಿಗೂ ಪ್ರಶಸ್ತಿ: ಯು.ಟಿ. ಖಾದರ್‌

Model Fashion Life
ಫ್ಯಾಷನ್23 mins ago

Model Fashion Life: ವಿಂಟರ್‌ನಲ್ಲೂ ವಿಂಟೇಜ್ ಫ್ಯಾಷನ್‌ಗೆ ಮಾಡೆಲ್ ವಿಭಾ ಸಿಂಹ ಆದ್ಯತೆ

Dhoni and Rishabh Pant
ಕ್ರಿಕೆಟ್33 mins ago

Rishabh Pant : ಸಿಎಸ್​ಕೆ ತಂಡ ಸೇರ್ತಾರಾ ರಿಷಭ್​ ಪಂತ್​?

JDS submits drought study report to Governor
ಕರ್ನಾಟಕ35 mins ago

JDS Drought Study: ರಾಜ್ಯಪಾಲರಿಗೆ ಬರ ಅಧ್ಯಯನ ವರದಿ ಸಲ್ಲಿಸಿದ ಜೆಡಿಎಸ್‌

Hormonal Imbalance
ಆರೋಗ್ಯ38 mins ago

Hormonal Imbalance: ಹಾರ್ಮೋನು ಏರುಪೇರಿನ ಸಮಸ್ಯೆಗೆ ಯಾವ ಆಹಾರಗಳು ಸೂಕ್ತ?

One8 Commune
ಕ್ರಿಕೆಟ್55 mins ago

Virat kohli : ಪಂಚೆ ಉಟ್ಟು ಹೋದರೆ ಕೊಹ್ಲಿಯ ರೆಸ್ಟೋರೆಂಟ್​ಗೆ ಪ್ರವೇಶವಿಲ್ಲ!

Will BJP Leader Vasundhara Raje succeed to CM of Rajasthan?
ದೇಶ56 mins ago

Rajasthan Election Result: ಬಿಜೆಪಿ ನಾಯಕಿ ವಸಂಧರಾ ‘ರಾಜ’ಸ್ಥಾನದ ಮುಖ್ಯಮಂತ್ರಿ ಆಗ್ತಾರಾ?

CM Siddaramaiah
ಕರ್ನಾಟಕ1 hour ago

Assembly Elections 2023 : ನಮ್ಮ ಗ್ಯಾರಂಟಿ ಯಶಸ್ಸಿನಿಂದ ತೆಲಂಗಾಣದಲ್ಲಿ ಗೆಲುವು: ಸಿಎಂ ಸಿದ್ದರಾಮಯ್ಯ

ಕರ್ನಾಟಕ1 hour ago

ವಿಶೇಷಚೇತನರ ಬೇಡಿಕೆ ಶೀಘ್ರ ಈಡೇರಿಕೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Police call off protest FIR against lawyer who slapped police
ಕರ್ನಾಟಕ7 hours ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ13 hours ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ1 day ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ2 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ2 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ3 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ3 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ6 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

ಟ್ರೆಂಡಿಂಗ್‌