Site icon Vistara News

ಭಾರತ್ ಎಂದು ಹೆಸರು ಬದಲಿಸಲು ಸೂಚಿಸಿದ್ದೇ ಮೊಹಮ್ಮದ್​ ಶಮಿ ಪತ್ನಿ; ವರ್ಷಗಳ ಹಿಂದೆ ಮೋದಿಗೆ ಟ್ವೀಟ್

Mohammed Shami's wife Hasin Jahan

ನವದೆಹಲಿ: ದೇಶದೆಲ್ಲೆಡೆ ಈಗ ‘ಇಂಡಿಯಾ’ ಹಾಗೂ ‘ಭಾರತ’ ಎಂಬ ಪದಗಳದ್ದೇ ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ ರಾಷ್ಟ್ರಪತಿ ಭವನದಿಂದ ಸೆಪ್ಟೆಂಬರ್ 9ರ G20 ಔತಣಕೂಟಕ್ಕೆ ಪ್ರತಿಪಕ್ಷಗಳಿಗೆ ಆಹ್ವಾನ ನೀಡಿದ್ದು, ಅದರಲ್ಲಿ ʼPresident of India’ ಬದಲಿಗೆ ʼPresident of Bharatʼ ಎಂದು ಉಲ್ಲೇಖಿಸಿದ ಬಳಿಕವಂತೂ, ಕೇಂದ್ರ ಸರ್ಕಾರವು ಇಂಡಿಯಾ ಎಂಬ ಹೆಸರನ್ನು ಭಾರತ ಎಂಬುದಾಗಿ ಬದಲಿಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದರ ಬೆನ್ನಲ್ಲೇ, ಮೊಹಮ್ಮದ್​ ಶಮಿ(Mohammed Shami) ಅವರ ವಿಚ್ಛೇದಿತ ಪತ್ನಿ ಹಸಿನ್ ಜಹಾನ್(Hasin Jahan) ಮಾಡಿರುವ ಪೋಸ್ಟ್​ ಒಂದು ಇದೀಗ ವೈರಲ್​ ಆಗಿದೆ.

ಹಸಿನ್ ಜಹಾನ್ ಪೋಸ್ಟ್​ನಲ್ಲಿ ಏನಿದೆ?

ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿ ಹಸಿನ್ ಜಹಾನ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪೋಸ್ಟ್​ ಒಂದನ್ನು ಮಾಡಿದ್ದರು. ಈ ಪೋಸ್ಟ್​ನಲ್ಲಿ “ನಮ್ಮ ದೇಶ, ನಮ್ಮ ಗೌರವ. ನಾನು ಭಾರತವನ್ನು ಪ್ರೀತಿಸುತ್ತೇನೆ. ನಮ್ಮ ದೇಶದ ಹೆಸರು ಹಿಂದೂಸ್ತಾನ್ ಅಥವಾ ಭಾರತ ಎಂದು ಇರಬೇಕು. ಮಾನ್ಯ ಪ್ರಧಾನಮಂತ್ರಿ ಮತ್ತು ಗೃಹಸಚಿವರಲ್ಲಿ ನನ್ನದೊಂದು ಮನವಿ ಇಂಡಿಯಾ ಎನ್ನುವ ಹೆಸರನ್ನು ಬದಲಾಯಿಸಲು ವಿನಂತಿಸುತ್ತಿರುವೆ. ನಮ್ಮ ದೇಶದ ಹೆಸರನ್ನು ಇಂಡಿಯಾ ಎಂದು ಕರೆಯುವ ಬದಲು ಭಾರತ ಅಥವಾ ಹಿಂದುಸ್ತಾನ್​ ಎಂದು ಕರೆಯುವಂತೆ ಮಾಡಿ” ಎಂದು ಬರೆದುಕೊಂಡಿದ್ದರು. ಇದೀಗ ಈ ಪೋಸ್ಟ್​ ಎಲ್ಲಡೆ ಭಾರಿ ಸದ್ದು ಮಾಡುತ್ತಿದೆ.

ಇಂಡಿಯಾ ಬದಲು ಭಾರತ್​ ಎಂಬ ಹೆಸರಿನ ಐಡಿಯಾವನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದೇ ಮೊಹಮ್ಮದ್​ ಶಮಿ ಪತ್ನಿ ಎಂದು ಕೆಲವು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆನ. ಒಟ್ಟಾರೆ ಒಂದು ವರ್ಷಗಳ ಹಿಂದಿನ ಈ ಪೋಸ್ಟ್​ ಈಗ ವೈರಲ್​ ಆಗುತ್ತಿದೆ. ಕೌಟುಂಬಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶಮಿ ಮತ್ತು ಹಸಿನ್ ಜಹಾನ್ ನಡುವೆ ಕೋರ್ಟ್​ನಲ್ಲಿ ಕೇಸ್​ ನಡೆಯುತ್ತಿದೆ.

16 ಆಗಸ್ಟ್ 2018 ರಂದು, ಹಸಿನ್ ಜಹಾನ್(Hasin Jahan) ಮೊಹಮ್ಮದ್ ಶಮಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ ಹಲ್ಲೆ, ಅತ್ಯಾಚಾರ, ಕೊಲೆ ಯತ್ನ ಮತ್ತು ಕೌಟುಂಬಿಕ ಹಿಂಸಾಚಾರದ ಆರೋಪದಡಿಯಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗನ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಇದೇ ವೇಳೆ ಮಗಳ ಖರ್ಚಿಗೆ ಹಾಗೂ ತನಗೆ ಯಾವುದೇ ರೀತಿಯ ಹಣಕಾಸಿನ ನೆರವು ನೀಡುತ್ತಿಲ್ಲ ಎಂದು ಹಸಿನ್ ಜಹಾನ್ ದೂರಿನಲ್ಲಿ ಅಪಾದಿಸಿದ್ದರು.

ಐಪಿಎಲ್​ ವೇಳೆ ಪ್ರೇಮಾಂಕುರ

ಮಾಡೆಲ್​ ಆಗಿರುವ ಹಸೀನ್ ಜಹಾನ್​. ಕೆಕೆಆರ್ ತಂಡದಲ್ಲಿ ಚಿಯರ್ ಲೀಡರ್ ಆಗಿ ಕೆಲಸ ಮಾಡುದ್ದರು. 2011ರಲ್ಲಿ ಶಮಿ ಮತ್ತು ಹಸೀನ್‌ ಭೇಟಿಯಾಗಿದ್ದರು. ಈ ಭೇಟಿ ಸ್ನೇಹಕ್ಕೆ ತಿರುಗಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಅಲ್ಲದೆ, 2014ರಲ್ಲಿ ಮದುವೆಯಾಗಿದ್ದರು. ಈ ಜೋಡಿಗೆ ಒಬ್ಬಳು ಹೆಣ್ಣು ಮಗಳು ಕೂಡ ಇದ್ದಾಳೆ. ಸದ್ಯ ಪ್ರತ್ಯೇಕವಾಗಿ ವಾಸಿಸುತ್ತಿರುವ ಈ ಜೋಡಿ ಕೋರ್ಟ್‌ನಲ್ಲಿ ಕೌಟುಂಬಿಕ ಸಮಸ್ಯೆ ಎದುರಿಸುತ್ತಿದ್ದಾರೆ.

ಇದನ್ನೂ ಓದಿ Mohammed Shami: ಶಮಿಗೆ 30 ದಿನಗಳ ಒಳಗಡೆ ಜಾಮೀನು ಪಡೆಯುವಂತೆ ಕೋರ್ಟ್ ಆದೇಶ

ಹಸಿನ್​ಗೆ ಜೀವನಾಂಶ ನೀಡುತ್ತಿರುವ ಶಮಿ

2018 ರಲ್ಲಿ ಹಸಿನ್ ಜಹಾನ್ ಅವರು ಮಾಸಿಕ 10 ಲಕ್ಷ ರೂ ಜೀವನಾಂಶವನ್ನು ಕೋರಿ ಶಮ್ಮಿ ವಿರುದ್ಧ ಕಾನೂನು ಮೊಕದ್ದಮೆ ಹೂಡಿದ್ದರು. ವೈಯಕ್ತಿಕ ವೆಚ್ಚಕ್ಕಾಗಿ 7 ಲಕ್ಷ ರೂ., ತಮ್ಮ ಮಗಳ ನಿರ್ವಹಣೆಗಾಗಿ 3 ಲಕ್ಷ ರೂ. ಕೇಳಿದ್ದರು. ಇದರ ವಿಚಾರಣೆ ನಡೆಸಿದ ಕೋಲ್ಕೊತಾ ನ್ಯಾಯಾಲಯ ಇದೇ ವರ್ಷದ ಜನವರಿಯಲ್ಲಿ ತೀರ್ಪು ಪ್ರಕಟಿಸಿ, ಶಮಿ ಅವರು ಪತ್ಯೇಕವಾಗಿ ವಾಸಿಸುತ್ತಿರುವ ಪತ್ನಿ ಜಹಾನ್​ಗೆ ತಿಂಗಳಿಗೆ 50 ಸಾವಿರ ರೂ. ನೀಡುವಂತೆ ಸೂಚಿಸಿತ್ತು. ಕೋರ್ಟ್​ ಸೂಚನೆಯಂತೆ ಶಮಿ ಅವರು ಈ ಮೊತ್ತವನ್ನು ನೀಡಿತ್ತಲೇ ಬರುತ್ತಿದ್ದಾರೆ.

Exit mobile version