Site icon Vistara News

ಶಮಿಯ ಮನೆಗೆ ಬಂತು ದುಬಾರಿ Jaguar F-Type Sports Car

Jaguar F-type sports

ಬೆಂಗಳೂರು: ಭಾರತ ತಂಡದ ವೇಗದ ಬೌಲರ್‌ ಮೊಹಮ್ಮದ್ ಶಮಿ Jaguar F-Type ಕಾರು ಖರೀದಿ ಮಾಡಿದ್ದಾರೆ. ಕಾರಿನ ಬೆಲೆ ಸುಮಾರು ೧ ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.

ಮೊಹಮ್ಮದ್ ಶಮಿ ಪ್ರಸ್ತುತ ನಡೆಯುತ್ತಿರುವ ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಪಂದ್ಯಗಳ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಈ ಅವಧಿಯಲ್ಲಿ ಅವರು ಜಾಗ್ವರ್‌ ಕಾರನ್ನು ಖರೀದಿ ಮಾಡಿದ್ದಾರೆ.

ಶಮಿ ಖರೀದಿ ಮಾಡಿರುವ ಕಾರು ಕೆಂಪು ಬಣ್ಣದ್ದಾಗಿದ್ದು, ಎಕ್ಸ್‌ಶೋರೂಮ್‌ ಬೆಲೆ 98.13 ಲಕ್ಷ ರೂಪಾಯಿ. ಈ ಕಾರು ಕೇವಲ ೩.೭ ಸೆಕೆಂಡ್‌ಗಳಲ್ಲಿ ೧೦೦ ಕಿಲೋ ಮೀಟರ್‌ ವೇಗವನ್ನು ಪಡೆಯುವ ಸಾಮರ್ಥ್ಯ ಹೊಂದಿದೆ.

ಶಮಿ ಖರೀದಿ ಮಾಡಿರುವ Jaguar F-Type Coupe R-Dynamic 2.0 ಕಾರು ಹೆಸರೇ ಸೂಚಿಸುವಂತೆ ೨ ಲೀಟರ್‌ನ ಟರ್ಬೊ ಚಾರ್ಜ್‌ ಪೆಟ್ರೋಲ್‌ ಎಂಜಿನ್‌ ಹೊಂದಿದೆ. ಇದರಲ್ಲಿ ೮ ಸ್ಪೀಡ್‌ನ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ಇದೆ.

ಕಾರು ಶೋ ರೂಮ್‌ನ ಮಾಲೀಕರು ಶಮಿ ಕಾರು ಖರೀದಿ ಮಾಡುವ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ. ಮಾಲೀಕರು ಶಮಿಗೆ ಕಾರಿನ ಕೀ ಕೊಟ್ಟರೆ, ಶಮಿ ಸಹಿ ಹಾಕಿದ ಕ್ರಿಕೆಟ್‌ ಚೆಂಡನ್ನು ಅವರಿಗೆ ಕೊಟ್ಟಿದ್ದಾರೆ.

ಮೋಟಾರು ಪ್ರಿಯ ಶಮಿ

ಮೊಹಮ್ಮದ್ ಶಮಿ ಕಾರು ಪ್ರಿಯ ಎಂಬುದು ಗೊತ್ತಿರುವ ಸಂಗತಿ. ಅವರ ಬಳಿ ಟೊಯೋಟಾ ಫಾರ್ಚೂನರ್‌, ಬಿಎಂಡಬ್ಲ್ಯು-೫ ಸೀರಿಸ್‌ ಹಾಗೂ ಆಡಿ ಕಾರಿದೆ. ಇತ್ತೀಚೆಗೆ ಅವರು ಹೊಚ್ಚ ಹೊಸ ರಾಯಲ್‌ ಎನ್‌ಫೀಲ್ಡ್‌ ಕಾಂಟಿನೆಂಟಲ್‌ ಜಿಟಿ ೬೫೦ ಬೈಕ್‌ ಅನ್ನು ಖರೀದಿ ಮಾಡಿದ್ದರು. ಅದರ ಚಿತ್ರವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮೊಹಮ್ಮದ್‌ ಶಮಿಗೆ ವೆಸ್ಟ್‌ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಅವರು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತಕ್ಕೆ ವಾಪಸಾಗಿದ್ದಾರೆ. ಆದರೆ, ಜುಲೈ ೨೯ರಿಂದ ನಡೆಯಲಿರುವ ಐದು ಪಂದ್ಯಗಳ ಟಿ೨೦ ಸರಣಿಯಲ್ಲಿ ಆಡಬೇಕಾಗಿದೆ.

ಇದನ್ನೂ ಓದಿ | INDvsENG ODI : ಬೌಲಿಂಗ್‌ ಸಾಧನೆಯಲ್ಲಿ ಅಗರ್ಕರ್‌ ಹಿಂದಿಕ್ಕಿದ ಶಮಿ

Exit mobile version