ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ವಿಶ್ವಕಪ್ 2023 ರ ಫೈನಲ್ ಪಂದ್ಯದ ವೇಳೆ ಅನಾರೋಗ್ಯಕ್ಕೆ ಒಳಗಾದ ಮೊಹಮ್ಮದ್ ಶಮಿ (Mohammed Shami) ಅವರ ತಾಯಿ ಅನುಮ್ ಅರಾ ಅವರನ್ನು ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಸಹಶ್ಪುರ್ ಗ್ರಾಮದ ಬಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಪಂದ್ಯದ ಸಮಯದಲ್ಲಿ ಅವರು ಜ್ವರದಿಂದ ಬಳಲುತ್ತಿದ್ದರು ಮತ್ತು ಶಮಿ ಅವರ ಸಂಬಂಧಿಕರು ಅವರನ್ನು ತಪಾಸಣೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು ಎಂದು ವರದಿ ಹೇಳಿದೆ. ಪ್ರಾಥಮಿಕ ಚಿಕಿತ್ಸೆಯ ನಂತರ ಅವರನ್ನು ಮತ್ತೊಂದು ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಅವರ ಸ್ಥಿತಿ ಈಗ ಸ್ಥಿರವಾಗಿದೆ ಎಂದು ವರದಿ ತಿಳಿಸಿದೆ. ಜ್ವರ ಮತ್ತು ಆತಂಕದಿಂದಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಆಕೆಯ ಸ್ಥಿತಿ ಸಾಮಾನ್ಯವಾಗಿದೆ. ಶಮಿ ಅವರ ಸೋದರಸಂಬಂಧಿ ಡಾ.ಮುಮ್ತಾಜ್ ತಿಳಿಸಿದ್ದಾರೆ.
2023ರ ಐಸಿಸಿ ಕ್ರಿಕೆಟ್ ವಿಶ್ವಕಪ್ನಲ್ಲಿ ಶಮಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಪಂದ್ಯಾವಳಿಯ ಮೊದಲಾರ್ಧವನ್ನು ಕಳೆದುಕೊಂಡಿದ್ದ ಶಮಿ, ನ್ಯೂಜಿಲೆಂಡ್ ವಿರುದ್ಧದ ಭಾರತದ ಐದನೇ ಲೀಗ್ ಹಂತದ ಪಂದ್ಯದಲ್ಲಿ ತಂಡ ಪ್ರವೇಶಿಸಿದ್ದರು. ಬಳಿಕ ಬಹಳಷ್ಟು ಬೌಲರ್ಗಳು ತಮ್ಮ ಇಡೀ ವಿಶ್ವಕಪ್ ವೃತ್ತಿಜೀವನದಲ್ಲಿ ಮಾಡದ ಪ್ರಭಾವವನ್ನು ಬೀರಿದರು.
ಏಳು ಪಂದ್ಯಗಳಲ್ಲಿ, ಶಮಿ 10.70 ಸರಾಸರಿ ಮತ್ತು 12.20 ಸ್ಟ್ರೈಕ್ ರೇಟ್ನೊಂದಿಗೆ 24 ವಿಕೆಟ್ಗಳನ್ನು ಪಡೆದರು. ಶಮಿ ಪಂದ್ಯಾವಳಿಯಲ್ಲಿ ಮೂರು ಐದು ವಿಕೆಟ್ ಸಾಧನೆ ಮತ್ತು ನಾಲ್ಕು ವಿಕೆಟ್ ಸಾಧನೆಯನ್ನು ಹೊಂದಿದ್ದರು ಮತ್ತು ವಿಶ್ವಕಪ್ ಇತಿಹಾಸದಲ್ಲಿ ಭಾರತೀಯರ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳನ್ನು ದಾಖಲಿಸಿದ್ದರು.
18 ವಿಶ್ವಕಪ್ ಪಂದ್ಯಗಳಲ್ಲಿ, ಶಮಿ 13.52 ಸರಾಸರಿ ಮತ್ತು 15.81 ಸ್ಟ್ರೈಕ್ ರೇಟ್ನೊಂದಿಗೆ 55 ವಿಕೆಟ್ಗಳನ್ನು ಪಡೆದಿದ್ದಾರೆ. ವೇಗಿ ತಮ್ಮ ವಿಶ್ವಕಪ್ ವೃತ್ತಿಜೀವನದಲ್ಲಿ ನಾಲ್ಕು ಬಾರಿ ಐದು ವಿಕೆಟ್ಗಳ ಸಾಧನೆ ಮಾಡಿದ್ದಾರೆ ಇದು ಯಾವುದೇ ಬೌಲರ್ ಮಾಡಿರುವ ಅಮೋಘ ಸಾಧನೆಯಾಗಿದೆ. ಆಸ್ಟ್ರೇಲಿಯಾದ ಗ್ಲೆನ್ ಮೆಕ್ಗ್ರಾತ್ 39 ಪಂದ್ಯಗಳಲ್ಲಿ 71 ವಿಕೆಟ್ಗಳೊಮದಿಗೆ ವಿಶ್ವ ಕಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ : Virat Kohli : ಕೊಹ್ಲಿಯ ವಿಶ್ವ ದಾಖಲೆಯ ಶತಕ ಕಂಡು ಸಂತಸದ ಕಣ್ಣೀರು ಸುರಿಸಿದ ಪತ್ನಿ ಅನುಷ್ಕಾ
ಭಾರತಕ್ಕೆ ಸೋಲು
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್ ಗಳಲ್ಲಿ 240 ರನ್ ಗಳಿಗೆ ಆಲೌಟ್ ಆಯಿತು. ನಾಯಕ ರೋಹಿತ್ ಶರ್ಮಾ (31 ಎಸೆತಗಳಲ್ಲಿ 47 ರನ್, 4 ಬೌಂಡರಿ, 3 ಸಿಕ್ಸರ್), ವಿರಾಟ್ ಕೊಹ್ಲಿ (63 ಎಸೆತಗಳಲ್ಲಿ 54 ರನ್, 4 ಬೌಂಡರಿ, 4 ಬೌಂಡರಿ) ಮತ್ತು ಕೆಎಲ್ ರಾಹುಲ್ (107 ಎಸೆತಗಳಲ್ಲಿ 66 ರನ್, ಒಂದು ಬೌಂಡರಿ) ಪ್ರಮುಖ ಬ್ಯಾಟಿಂಗ್ ಪ್ರದರ್ಶಿಸಿದರು. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 55ಕ್ಕೆ 3 ವಿಕೆಟ್ ಪಡೆದರು. ನಾಯಕ ಪ್ಯಾಟ್ ಕಮಿನ್ಸ್ (34ಕ್ಕೆ 2) ಮತ್ತು ಜೋಶ್ ಹೇಜಲ್ವುಡ್ (60ಕ್ಕೆ 2) ಕೂಡ ಉತ್ತಮವಾಗಿ ಬೌಲಿಂಗ್ ಮಾಡಿದರು. ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಆಡಮ್ ಜಂಪಾ ತಲಾ 1 ವಿಕೆಟ್ ಪಡೆದರು.
241 ರನ್ಗಳ ಗುರಿ ಬೆನ್ನಟ್ಟಿ್ದ ಆಸ್ಟ್ರೇಲಿಯಾ ಆರಂಭದಲ್ಲಿ 3 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿತ್ತು. ಟ್ರಾವಿಸ್ ಹೆಡ್ (120 ಎಸೆತಗಳಲ್ಲಿ 137 ರನ್, 15 ಬೌಂಡರಿ ಮತ್ತು 4 ಸಿಕ್ಸರ್) ಮತ್ತು ಮಾರ್ನಸ್ ಲಾಬುಶೇನ್ (110 ಎಸೆತಗಳಲ್ಲಿ 58 ರನ್, ನಾಲ್ಕು ಬೌಂಡರಿಗಳೊಂದಿಗೆ) ಅವರ ಅಮೋಘ ಇನಿಂಗ್ಸ್ ಭಾರತ ವಿರುದ್ಧ ಆರು ವಿಕೆಟ್ಗಳ ಗೆಲುವಿಗೆ ನೆರವು ನೀಡಿತು. ಭಾರತದ ಪರ ಮೊಹಮ್ಮದ್ ಶಮಿ 1 ವಿಕೆಟ್ ಕಿತ್ತರೆ, ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದರು. ಶತಕ ಬಾರಿಸಿದ ಟ್ರಾವಿಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.