ರಾಂಚಿ: ಆರ್ಸಿಬಿ ವಿರುದ್ಧ ಸೋಲುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್(CSK) ತಂಡ 17ನೇ ಆವೃತ್ತಿಯ ಐಪಿಎಲ್ನಿಂದ ಹೊರಬಿದ್ದಿತ್ತು. ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಚೆನ್ನೈ 27 ರನ್ಗಳ ಅಂತರದಿಂದ ಸೋಲು ಕಂಡಿತ್ತು. ಈ ಸೋಲಿನ ಮರು ದಿನವೇ ಧೋನಿ(MS Dhoni) ತಮ್ಮ ತವರಾದ ರಾಂಚಿಗೆ ಮರಳಿದ್ದರು. ಇದೀಗ ತವರಿನಲ್ಲಿ ಬೈಕ್ ರೈಡಿಂಗ್ ಮಾಡಿದ್ದಾರೆ. ಅವರು ಬೈಕ್ನಲ್ಲಿ ಸುತ್ತಾಡಿಕೊಂಡು ವಾಪಸ್ ಮನೆಗೆ ಬರುತ್ತಿರುವ ವಿಡಿಯೊ ವೈರಲ್ ಆಗಿದೆ. ಸದ್ಯ ಧೋನಿ ಅವರು ಬೈಕ್ ಓಡಿಸಿದ(MS Dhoni Bike Riding) ವಿಡಿಯೊ ವೈರಲ್(Viral Video) ಆಗಿದ್ದು, ಅವರ ಅಭಿಮಾನಿಗಳು ಹಲವು ಕಮೆಂಟ್ಗಳನ್ನು ಮಾಡಿದ್ದಾರೆ.
ಧೋನಿ ಬಳಿ ಇದೆ ದೊಡ್ಡ ಬೈಕ್ ಗ್ಯಾರೇಜ್
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳಿದ ಬಳಿಕ ವಿಶ್ರಾಂತ ಜೀವನವನ್ನು ಎಂಜಾಯ್ ಮಾಡುತ್ತಿರುವ ಧೋನಿ ಅವರು ತಮ್ಮ ಬೈಕ್ ಮತ್ತು ಕಾರ್ಗಳನ್ನು ಇರಿಸಲು ತಮ್ಮ ಮನೆಯ ಪಕ್ಕದಲ್ಲಿ ದೊಡ್ಡ ಕಟ್ಟಡವನ್ನೇ ಹೊಂದಿದ್ದಾರೆ. ಕೆಳವು ದಿನಗಳ ಹಿಂದೆ ವೆಂಕಟೇಶ್ ಪ್ರಸಾದ್ ಮತ್ತು ಸುನಿಲ್ ಜೋಶಿ ಅವರು ಧೋನಿಯ ರಾಂಚಿಯಲ್ಲಿರುವ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಧೋನಿ ಫಾರ್ಮ್ ಹೌಸ್ನಲ್ಲಿರುವ ಬೈಕ್(ms dhoni bike collection) ಮತ್ತು ಕಾರುಗಳ ವಿಡಿಯೊವನ್ನು ಹಂಚಿಕೊಂಡಿದ್ದರು. ಇದನ್ನು ಕಂಡ ಅನೇಕರು ಅಬ್ಬಾ… ಎಂದು ಆಶ್ಚರ್ಯವಾಗಿದ್ದರು. ಈ ಫಾರ್ಮ್ಹೌಸ್ನ ವಿಡಿಯೊ ವೈರಲ್ ಆಗುತ್ತು.
ಇದನ್ನೂ ಓದಿ MS Dhoni Retirement: ಧೋನಿ ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಚೆನ್ನೈ ಫ್ರಾಂಚೈಸಿ
ಎಂಎಸ್ ಧೋನಿ ಬೈಕ್ ಕಲೆಕ್ಷನ್
ಯಮಹಾ, ಡುಕಾಟಿ, ಕವಾಸಕಿ ಮುಂತಾದ ಪ್ರಸಿದ್ಧ ಬ್ರಾಂಡ್ ಗಳು ಧೋನಿ ಅವರ ಆಕರ್ಷಕ ಬೈಕ್ ಗಳ ಸಂಗ್ರಹದಲ್ಲಿವೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ. ಹೆಚ್ಚುವರಿಯಾಗಿ, ಕಾನ್ಫೆಡರೇಟ್ ಎಕ್ಸ್ 132 ಹೆಲ್ ಕ್ಯಾಟ್, ವಿಂಟೇಜ್ ನಾರ್ಟನ್ ಜುಬಿಲಿ 250 ಮತ್ತು ಹಲವಾರು ಗಮನಾರ್ಹ ಬೈಕುಗಳಂತಹ ವಿಶಿಷ್ಟ ಮತ್ತು ಅಪರೂಪದ ಮಾದರಿಗಳನ್ನು ಹೊಂದಿದ್ದಾರೆ. ಇತ್ತೀಚೆಗೆ, ಧೋನಿ ಹೊಸದಾಗಿ ಕಸ್ಟಮೈಸ್ ಮಾಡಿದ ಜಾವಾ 42 ಬಾಬ್ಬರ್ ಅನ್ನು ತಮ್ಮ ಬೆಳೆಯುತ್ತಿರುವ ಬೈಕುಗಳ ಸಂಗ್ರಹಕ್ಕೆ ಸೇರಿಸಿದ್ದಾರೆ.
ಮಹೇಂದ್ರ ಸಿಂಗ್ ಧೋನಿ(MS Dhoni Retirement) ಅವರ ನಿವೃತ್ತಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೀಗ ಧೋನಿ ನಿವೃತ್ತಿ ವಿಚಾರವಾಗಿ ಸಿಎಸ್‌ಕೆ ಫ್ರಾಂಚೈಸಿಯ ಅಧಿಕಾರಿಯೊಬ್ಬರು ಮಹತ್ವದ ಹೇಳಿಕೆ ನೀಡಿದ್ದಾರೆ.
“ಧೋನಿ ಅವರು ಸಿಎಸ್‌ಕೆ ಜತೆ ಯಾರೊಂದಿಗೂ ತಮ್ಮ ನಿವೃತ್ತಿ ಬಗ್ಗೆ ಇದುವರೆಗೂ ಮಾತನಾಡಿಲ್ಲ. ಕೆಲವು ಸಕ್ರಿಯ ಕ್ರಿಕೆಟಿಗರಿಂದ ಹೆಚ್ಚು ಟೀಕೆಗೆ ಒಳಗಾಗಿರುವ ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮವು ಧೋನಿಯ ನಿವೃತ್ತಿಯ ವಿಚಾರದಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆಯಿದೆ. ನಿಯಮವು ಮುಂದುವರಿದರೆ, ತಂಡದೊಂದಿಗೆ ನಿರ್ದಿಷ್ಟ ಕೆಲಸವನ್ನು ಪೂರೈಸಲು ಇದು ಅವರಿಗೆ ಸ್ವಾತಂತ್ರ್ಯವನ್ನು ನೀಡುತ್ತದೆ. ನಿಯಮವನ್ನು ರದ್ದುಗೊಳಿಸಿದರೆ, ಧೋನಿ ಆಡುವುದು ಕಷ್ಟ” ಎಂದು ಹೇಳಿದ್ದಾರೆ.
ಕಳೆದ ವರ್ಷವೇ ಧೋನಿ ಅವರು ಐಪಿಎಲ್ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್ಗೂ ಗುಡ್ಬೈ ಹೇಳಲಾಗಿತ್ತು. ಇದೀಗ ಚೆನ್ನೈ ಸೋತು ಟೂರ್ನಿಯಿಂದ ಹೊರಬಿದ್ದರೂ ಧೋನಿ ತಮ್ಮ ನಿವೃತ್ತಿ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.