Site icon Vistara News

MS Dhoni: ಕೂಲ್​ ಆಗಿ ರೋಲ್ಸ್​ ರಾಯ್ಸ್​ ಕಾರು ಓಡಿಸಿದ ಧೋನಿ; ವಿಡಿಯೊ ವೈರಲ್​

MS Dhoni Driving Luxury Car

ರಾಂಚಿ: ಟೀಮ್​ ಇಂಡಿಯಾದ ಎರಡು ವಿಶ್ವಕಪ್​ ವಿಜೇತ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ಕ್ರಿಕೆಟ್​ಗೆ ನಿವೃತ್ತಿ ಹೇಳಿದ ಬಳಿಕ ವಿಶ್ರಾಂತ ಜೀವನವನ್ನು ಎಂಜಾಯ್​ ಮಾಡುತ್ತಿದ್ದಾರೆ. ಅವರ ಬೈಕ್ ಮತ್ತು ಕಾರ್​ಗಳ ಪ್ರೀತಿಯ ವಿಚಾರ ಅಭಿಮಾನಿಗಳಿಗೆ ಈಗಾಗಲೇ ತಿಳಿದೇ ಇದೆ. ಧೋನಿ ಅವರು ತಮ್ಮ ಬೈಕ್ ಮತ್ತು ಕಾರ್​ಗಳನ್ನು ಇರಿಸಲು ತಮ್ಮ ಮನೆಯ ಪಕ್ಕದಲ್ಲಿ ದೊಡ್ಡ ಕಟ್ಟಡವನ್ನೇ ಹೊಂದಿದ್ದಾರೆ.

ಕೆಳ ದಿನಗಳ ಹಿಂದೆ ವೆಂಕಟೇಶ್ ಪ್ರಸಾದ್ ಮತ್ತು ಸುನಿಲ್ ಜೋಶಿ ಅವರು ಧೋನಿಯ ರಾಂಚಿಯಲ್ಲಿರುವ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಧೋನಿ ಫಾರ್ಮ್ ಹೌಸ್​ನಲ್ಲಿರುವ ಬೈಕ್​ ಮತ್ತು ಕಾರುಗಳ ವಿಡಿಯೊವನ್ನು ಹಂಚಿಕೊಂಡಿದ್ದರು. ಇದನ್ನು ಕಂಡ ಅನೇಕರು ಅಬ್ಬಾ… ಎಂದು ಆಶ್ಚರ್ಯವಾಗಿದ್ದರು. ಇದೀಗ ಧೋನಿ ತಮ್ಮ ಮಗಳೊಂದಿಗೆ ರಾಂಚಿಯಲ್ಲಿ ವಿಂಟೇಜ್​ ರೋಲ್ಸ್​ ರಾಯ್ಸ್​ ಕಾರನ್ನು ಡ್ರೈವಿಂಗ್​ ಮಾಡುತ್ತಾ ಹೋಗುತ್ತಿರುವ ವಿಡಿಯೊವೊಂದು ವೈರಲ್(viral video)​ ಆಗಿದೆ.

ಧೋನಿ ಅವರ ತಮ್ಮ ತವರಾದ ರಾಂಚಿಯ ಹಳ್ಳಿಯಲ್ಲಿ ರೋಲ್ಸ್​ ರಾಯ್ಸ್​ ಕಾರು ಓಡಿಸುತ್ತಿರುದನ್ನು ಇಲ್ಲಿನ ಸ್ಥಳೀಯರೊಬ್ಬರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಕಂಡ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಧೋನಿ ಅಭಿಮಾನಿಗಳು “ತಲಾ ಧೋನಿ ಈಸ್​ ಬ್ಯಾಕ್​” ಎಂದು ಕಮೆಂಟ್​​ ಮಾಡಿದ್ದಾರೆ. ಇನ್ನೂ ಕೆಲವರು ಕ್ಯಾಪ್ಟನ್​ ಕೂಲ್​ ಧೋನಿಯಿಂದ ಕೂಲ್​ ರೈಡಿಂಗ್​ ಎಂದಿದ್ದಾರೆ.

ಇದನ್ನೂ ಓದಿ MS Dhoni: ಧೋನಿ ಮನೆಯಲ್ಲಿರುವ ಗ್ಯಾರೇಜ್‌​ ಕಂಡು ಬೆರಗಾದ ವೆಂಕಟೇಶ್​ ಪ್ರಸಾದ್‌

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ ಧೋನಿ ಕೇವಲ ಐಪಿಎಲ್​ ಟೂರ್ನಿಯಲ್ಲಿ ಮಾತ್ರ ಆಡುತ್ತಿದ್ದಾರೆ. (Indian Premier League) 2023ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 5ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಬಾರಿ ಐಪಿಎಲ್ ಬಳಿಕ​ ಧೋನಿ ನಿವೃತ್ತಿ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಆಸೆಯಂತೆ ಇನ್ನೊಂದು ಆವೃತ್ತಿಯ ಐಪಿಎಲ್ ಆಡುವುದಾಗಿ ಫೈನಲ್​ ಬಳಿಕ ಧೋನಿ ಹೇಳಿದ್ದರು. ಹೀಗಾಗಿ ಅವರ ಆಟವನ್ನು ಮುಂದಿನ ಆವೃತ್ತಿಯಲ್ಲಿಯೂ ಕಣ್ತುಂಬಿಕೊಳ್ಳಬಹುದಾಗಿದೆ.

Exit mobile version