ನ್ಯೂಯಾರ್ಕ್: ಬುಧವಾರವಷ್ಟೇ ಮಹೇಂದ್ರ ಸಿಂಗ್ ಧೋನಿ(MS Dhoni) ಅವರು ಯುಎಸ್ ಓಪನ್ ಟೆನಿಸ್ ಟೂರ್ನಿಯ ಅಲೆಕ್ಸಾಂಡರ್ ಜ್ವೆರೆವ್ ಮತ್ತು ಕಾರ್ಲೋಸ್ ಅಲ್ಕರಾಜ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯವನ್ನು ವೀಕ್ಷಿಸಿ ಸುದ್ದಿಯಾಗಿದ್ದರು. ಇದೀಗ ಒಂದೇ ದಿನಗಳ ಅಂತರದಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಧೋನಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(former USA President Donald Trump ) ಅವರೊಂದಿಗೆ ಗಾಲ್ಫ್ ಆಡಿ(MS Dhoni played golf with Donald Trump) ಗಮನ ಸೆಳೆದಿದ್ದಾರೆ. ಟ್ರಂಪ್ ಮತ್ತು ಧೋನಿ ಗಾಲ್ಫ್ ಆಡುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್(viral news) ಆಗಿದೆ.
ದುಬೈ ಮೂಲದ ಉದ್ಯಮಿ ಹಿತೇಶ್ ಸಾಂಘ್ವಿ ಅವರು ನ್ಯೂಜೆರ್ಸಿಯ ಟ್ರಂಪ್ ನ್ಯಾಷನಲ್ ಗಾಲ್ಫ್ ಕ್ಲಬ್ ಬೆಡ್‌ಮಿನ್‌ಸ್ಟರ್‌ನಲ್ಲಿ ಧೋನಿ ಮತ್ತು ಟ್ರಂಪ್ ಜತೆಯಾಗಿ ಗಾಲ್ಫ್ ಆಡುತ್ತಿರುವ ಫೋಟೋವನ್ನು ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ನಡೆದ 16ನೇ ಆವೃತ್ತಿಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದನೇ ಬಾರಿ ಚಾಂಪಿಯನ್ ಪಟ್ಟಕೇರಿಸಿದ ಧೋನಿ ಈಗ ತಮ್ಮ ಬಿಡುವನ್ನು ಪ್ರವಾಸದ ಮೂಲಕ ನಿರಂತರವಾಗಿ ಆನಂದಿಸುತ್ತಿದ್ದಾರೆ. ಬುಧವಾರ, ಯುಎಸ್ ಓಪನ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ ಅಲ್ಕರಾಜ್ ಮತ್ತು ಜ್ವೆರೆವ್ ವಿರುದ್ಧದ ಹೋರಾಟವನ್ನು ವೀಕ್ಷಿಸಲು ಧೋನಿ ಹಾಜರಾಗಿದ್ದರು. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ 6-3, 6-2, 6-4 ನೇರ ಸೆಟ್ನಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ್ದರು.
ಇದನ್ನೂ ಓದಿ US Open 2023: ಯುಎಸ್ ಓಪನ್ ಟೂರ್ನಿಯಲ್ಲಿ ಕಾಣಿಸಿಕೊಂಡ ಧೋನಿ
ಜೈಲು ಸೇರಿದ್ದ ಟ್ರಂಪ್
ಡೊನಾಲ್ಡ್ ಟ್ರಂಪ್ (Donald Trump) ಅವರು ಆಗಸ್ಟ್ 25 ರಂದು ಜಾರ್ಜಿಯಾದಲ್ಲಿ ಬಂಧನಕ್ಕೊಳಗಾಗಿ ಅಟ್ಲಾಂಟಾದ ಫುಲ್ಟನ್ ಕೌಂಟಿ ಜೈಲಿನಲ್ಲಿ (Atlanta Fulton county jail) 30 ನಿಮಿಷಗಳ ದಿಗ್ಬಂಧನದಲ್ಲಿದ್ದು, ಬಳಿಕ 2 ಲಕ್ಷ ಡಾಲರ್ ಬಾಂಡ್‌ನೊಂದಿಗೆ ಬಿಡುಗಡೆಗೊಂಡು ಹೊರಬಂದಿದ್ದರು.
ಅವರ ಬಂಧನಕ್ಕೆ ಕಾರಣವಾಗಿದ್ದು ಚುನಾವಣಾ ಅಕ್ರಮ (Election Irregularities). 2020ರಲ್ಲಿ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ (Presidential Election) ಸಂದರ್ಭದಲ್ಲಿ ಜಾರ್ಜಿಯಾ ರಾಜ್ಯದಲ್ಲಿನ ಚುನಾವಣಾ ಫಲಿತಾಂಶವನ್ನೇ ಬುಡಮೇಲು ಮಾಡಲು ಪ್ರಯತ್ನಿಸಿದ್ದರು ಎಂಬುದು ಅವರ ಮೇಲೆ ಇರುವ ಆರೋಪ. ಇಂಥಹುದೊಂದು ಚುನಾವಣಾ ಅಕ್ರಮದ ಆರೋಪದೊಂದಿಗೆ ಜೈಲುಪಾಲಾದ ಅಮೆರಿಕದ ಮೊದಲ ಹಾಲಿ ಇಲ್ಲವೇ ಮಾಜಿ ಅಧ್ಯಕ್ಷ ಎಂಬ ಅಪಕೀರ್ತಿಯೂ ಅವರನ್ನು ಸುತ್ತಿಕೊಂಡಿದೆ.
ಇದನ್ನೂ ಓದಿ Viral Video: ಮೂರು ಹೆಬ್ಬಾವುಗಳನ್ನು ಹಿಡಿದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ
ಅಮೆರಿಕ ಚುನಾವಣೆಯಲ್ಲಿ ಜಾರ್ಜಿಯಾ ಅತ್ಯಂತ ಪ್ರಮುಖವಾದ ಭಾಗ. ಅದರಲ್ಲಿ ಗೆಲುವು ಸಾಧಿಸಬೇಕು ಎನ್ನುವುದು ಟ್ರಂಪ್ ಹಠವಾಗಿತ್ತು. ಆದರೆ, ಅಂತಿಮವಾಗಿ ಗಮನಿಸಿದಾಗ 11,783 ಮತಗಳು ಕಡಿಮೆ ಬೀಳುವ ಒಂದು ಪರಿಸ್ಥಿತಿ ನಿರ್ಮಾಣವಾಗಿತ್ತು. ಅದನ್ನು ಹೇಗಾದರೂ ಮಾಡಿ ಸರಿ ಮಾಡಬಹುದಾ ಎಂದು ಡೊನಾಲ್ಡ್ ಟ್ರಂಪ್ ಹಲವಾರು ಅಧಿಕಾರಿಗಳು, ವಕೀಲರುಗಳ ಜತೆ ಸೇರಿ ನಡೆಸಿದ ಸಂಚೇ ಈ ಅಕ್ರಮ.