US Open 2023: ಯುಎಸ್‌ ಓಪನ್‌ ಟೂರ್ನಿಯಲ್ಲಿ ಕಾಣಿಸಿಕೊಂಡ ಧೋನಿ - Vistara News

ಕ್ರಿಕೆಟ್

US Open 2023: ಯುಎಸ್‌ ಓಪನ್‌ ಟೂರ್ನಿಯಲ್ಲಿ ಕಾಣಿಸಿಕೊಂಡ ಧೋನಿ

ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ಬುಧವಾರ ತಡರಾತ್ರಿ ನಡೆದ ಕಾರ್ಲೋಸ್‌ ಅಲ್ಕರಾಜ್‌(Carlos Alcaraz) ಮತ್ತು ಅಲೆಕ್ಸಾಂಡರ್‌ ಜ್ವೆರೇವ್‌(Alexander Zverev) ನಡುವಿನ ಕ್ವಾರ್ಟರ್​ ಫೈನಲ್​​ ಪಂದ್ಯವನ್ನು ವೀಕ್ಷಿಸಿದ್ದಾರೆ.

VISTARANEWS.COM


on

MS Dhoni in US Open 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನ್ಯೂಯಾರ್ಕ್: ಇಲ್ಲಿ ನಡೆಯುತ್ತಿರುವ ವರ್ಷದ ಕೊನೆಯ ಗ್ರ್ಯಾನ್​ಸ್ಲಾಮ್‌ ಟೂರ್ನಿಯಾದ ಯುಎಸ್‌ ಓಪನ್‌(US Open 2023) ಕ್ವಾರ್ಟರ್​ ಫೈನಲ್​​ ಪಂದ್ಯಕ್ಕೆ ಟೀಮ್​ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಹಾಜರಾಗಿದ್ದಾರೆ. ಬುಧವಾರ ತಡರಾತ್ರಿ ನಡೆದ ಕಾರ್ಲೋಸ್‌ ಅಲ್ಕರಾಜ್‌(Carlos Alcaraz) ಮತ್ತು ಅಲೆಕ್ಸಾಂಡರ್‌ ಜ್ವೆರೇವ್‌(Alexander Zverev) ನಡುವಿನ ಕ್ವಾರ್ಟರ್​ ಫೈನಲ್​​ ಪಂದ್ಯವನ್ನು ವೀಕ್ಷಿಸಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಇದೇ ವರ್ಷ ನಡೆದ 16ನೇ ಆವೃತ್ತಿಯ ಐಪಿಎಲ್​ನಲ್ಲಿ ಚೆನ್ನೈ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಿದ ಬಳಿಕ ಧೋನಿ ಬಿಡುವಿನ ವೇಳೆಯನ್ನು ತಮ್ಮ ನೆಚ್ಚಿನ ತಾಣಗಳಿಗೆ ಪ್ರವಾಸ ಹೋಗುತ್ತಾ ಎಂಜಾಯ್​ ಮಾಡುತ್ತಿದ್ದಾರೆ. ಕಾರ್ಲೋಸ್‌ ಅಲ್ಕರಾಜ್‌ ಮತ್ತು ಅಲೆಕ್ಸಾಂಡರ್‌ ಜ್ವೆರೇವ್‌ ನಡುವಣ ಕ್ವಾರ್ಟರ್​ ಫೈನಲ್​ ಪಂದ್ಯವನ್ನು ಧೋನಿ ಸಂಪೂರ್ಣವಾಗಿ ವೀಕ್ಷಿಸಿದ್ದಾರೆ. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕಾರ್ಲೋಸ್‌ ಅಲ್ಕರಾಜ್‌ 6-3, 6-2, 6-4 ನೇರ ಸೆಟ್​ನಿಂದ ಮಣಿಸಿ ಸೆಮಿಫೈನಲ್​ ಪ್ರವೇಶಿಸಿದ್ದಾರೆ. ಸೆಮಿಫೈನಲ್​ನಲ್ಲಿ ವಿಶ್ವದ ಮೂರನೇ ಶ್ರೇಯಾಂಕದ ಬಲಿಷ್ಠ ಆಟಗಾರ ಡೇನಿಯಲ್​ ಮೆಡ್ವಡೇವ್​ ಸವಾಲನ್ನು ಎದುರಿಸಲಿದ್ದಾರೆ.

ವಿಂಬಲ್ಡನ್​ 2023ರ ಫೈನಲ್​ ಪಂದ್ಯದಲ್ಲಿ ಕಾರ್ಲೋಸ್‌ ಅಲ್ಕರಾಜ್‌ ಸರ್ಬಿಯಾದ ಸ್ಟಾರ್​ ಆಟಗಾರ, 4 ಬಾರಿಯ ಹಾಲಿ ಚಾಂಪಿಯನ್‌ ಆಗಿದ್ದ ನೊವಾಕ್‌ ಜೊಕೋವಿಕ್‌(Novak Djokovic)ಸೋಲಿನ ರುಚಿ ತೋರಿಸಿದ್ದರು. ಇದೀಗ ಈ ಟೂರ್ನಿಯ ಫೈನಲ್​ನಲ್ಲಿಯೂ ಉಭಯ ಆಟಗಾರರು ಮತ್ತೆ ಮುಖಾಮುಖಿಯಾಗುವ ಸಾಧ್ಯತೆ ಇದೆ.

ಸೆಮಿಫೈನಲ್​ಗೇರಿದ ಜೋಕೊ

ಸರ್ಬಿಯದ ನೊವಾಕ್‌ ಜೊಕೋವಿಕ್‌ ಅವರು ಕ್ವಾರ್ಟರ್​ ಫೈನಲ್​ನಲ್ಲಿ ಟಯ್ಲರ್‌ ಫ್ರಿಟ್ಜ್ ವಿರುದ್ಧ ಗೆದ್ದು ಸೆಮಿಫೈನಲ್‌ ಹಂತಕ್ಕೇರಿದ್ದಾರೆ. ಜತೆಗೆ ಈ ಟೂರ್ನಿಯಲ್ಲಿ ನಾಲ್ಕನೇ ಬಾರಿ ಪ್ರಶಸ್ತಿ ಗೆಲ್ಲುವತ್ತ ಇನ್ನೊಂದು ಹೆಜ್ಜೆ ಇಟ್ಟಿದ್ದಾರೆ. ಪ್ರಚಂಡ ಫಾರ್ಮ್​ನಲ್ಲಿರುವ ಜೊಕೋವಿಕ್‌ ಅವರು ಟಯ್ಲರ್‌ ಫ್ರಿಟ್ಜ್ ವಿರುದ್ಧ 6-1, 6-4, 6-4 ನೇರ ಸೆಟ್‌ಗಳಿಂದ ಗೆದ್ದು ಬೀಗಿದರು.

ಇದನ್ನೂ ಓದಿ US Open 2023: ಯುಎಸ್ ಓಪನ್​ನಲ್ಲಿ ಸೆಮಿಫೈನಲ್​ ಪ್ರವೇಶಿಸಿದ ಬೋಪಣ್ಣ-ಎಬ್ಡೆನ್‌ ಜೋಡಿ

ಸಿನಿಮಾ ಕ್ಷೇತ್ರಕ್ಕೂ ಧೋನಿ ಎಂಟ್ರಿ

ಎಂ.ಎಸ್ ಧೋನಿ ಅವರು ಈಗಾಗಲೇ ಪತ್ನಿ‌ ಸಾಕ್ಷಿ(Sakshi Dhoni) ಜತೆಗೂಡಿ ತಮ್ಮದೇ ಧೋನಿ ಎಂಟರ್‌ಟೇನ್‌ಮೆಂಟ್‌ ಮೂಲಕ ಈಗಾಗಲೇ ಚೊಚ್ಚಲ ತಮಿಳು ಸಿನಿಮಾ’ಎಲ್‌ಜಿಎಂ-ಲೆಟ್ಸ್ ಗೆಟ್ ಮ್ಯಾರೀಡ್’ ಎಂಬ ಚಿತ್ರವನ್ನು ನಿರ್ಮಿಸಿದ್ದಾರೆ. ಕೆಲ ದಿನಗಳ ಹಿಂದೆ ತಾವು ಕೂಡ ಚಿತ್ರದಲ್ಲಿ ನಟಿಸಲು ಮುಂದಾಗಿರುವುದಾಗಿ ವರದಿಯಾಗಿತ್ತು.  ‘ಕ್ಯಾಪ್ಟನ್​ ಕೂಲ್’ ಮಾಹಿ ಅವರು​ ತಲಪತಿ ವಿಜಯ್‌ ಜತೆ ನಟಿಸಲು ಸಿದ್ಧರಾಗಿದ್ದಾರೆ ಎನ್ನಲಾಗಿತ್ತು.

ತಲಪತಿ ವಿಜಯ್‌(Thalapathy Vijay) ಅವರ ಬಹುನಿರೀಕ್ಷಿತ ಚಿತ್ರವಾಗಿರುವ ‘ತಲಪತಿ 68’ ಸಿನಿಮಾದಲ್ಲಿ(Thalapathy 68’) ಧೋನಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಧೋನಿ ಅವರು ಯಾವ ಪಾತ್ರವನ್ನು ಮಾಡಲಿದ್ದಾರೆ ಅಥವಾ ಧೋನಿ ನಿಜವಾಗಿಯೂ ಈ ಚಿತ್ರದಲ್ಲಿ ನಟಿಸಲಿದ್ದಾರಾ ಎಂಬುದನ್ನು ಧೋನಿ ಮತ್ತು ಚಿತ್ರ ತಂಡ ಅಧಿಕೃತಪಡಿಸಿಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Kavya Maran: ರೋಚಕ ಗೆಲುವು ಕಂಡು ಆಕಾಶಕ್ಕೆ ಜಿಗಿದಂತೆ ಕುಣಿದು ಸಂಭ್ರಮಿಸಿದ ಕಾವ್ಯಾ ಮಾರನ್; ವಿಡಿಯೊ ವೈರಲ್​

Kavya Maran: ಕಾವ್ಯ ಚೆನ್ನೈ ಮೂಲದ ಮಾಧ್ಯಮ ಮತ್ತು ಟಿವಿ ಸಮೂಹ ಸನ್ ಟಿವಿ ನೆಟ್‌ವರ್ಕ್‌ನ ಮಾಲಕ ಕಲಾನಿತಿ ಮಾರನ್ ಅವರ ಪುತ್ರಿ. ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸ್ಟರ್ನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಪದವೀಧರರಾಗಿದ್ದಾರೆ. ಐಪಿಎಲ್​ ಪಂದ್ಯದಲ್ಲಿ ಮಾತ್ರವಲ್ಲದೆ ಹರಾಜಿನ ವೇಳೆಯೂ ಅವರು ಪ್ರಧಾನ ಆಕರ್ಷಣೆಯಾಗಿರುತ್ತಾರೆ.

VISTARANEWS.COM


on

Kavya Maran
Koo

ಹೈದರಾಬಾದ್​: ಗುರುವಾರ ರಾತ್ರಿ ನಡೆದ ಐಪಿಎಲ್​ನ(IPL 2024) 50ನೇ ಪಂದ್ಯದಲ್ಲಿ ಭುವನೇಶ್ವರ್​ ಕುಮಾರ್(Bhuvneshwar Kumar)​ ಅವರು ಅಂತಿಮ ಎಸೆತದ ಮ್ಯಾಜಿಕ್​ನಿಂದ ಸನ್​ರೈಸರ್ಸ್ ಹೈದರಾಬಾದ್(Sunrisers Hyderabad)​ ತಂಡ ರಾಜಸ್ಥಾನ್​ ರಾಯಲ್ಸ್(Rajasthan Royals)​ ವಿರುದ್ಧ ರೋಚಕ 1 ರನ್​ ಅಂತರದ ಗೆಲುವು ಸಾಧಿಸಿತು. ಈ ಗೆಲುವನ್ನು ತಂಡದ ಆಟಗಾರರಿಗಿಂತಲ್ಲೂ ಹೆಚ್ಚು ಸಂಭ್ರಮಿಸಿದ್ದು ತಂಡದ ಮಾಲಕಿ ಕಾವ್ಯಾ ಮಾರನ್​. ಗ್ಯಾಲರಿಯಲ್ಲಿದ್ದ ಕಾವ್ಯ ತಂಡ ಗೆಲ್ಲುತ್ತಿದ್ದಂತೆ ಫೂಲ್​ ಜೋಶ್​ನಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೊ ವೈರಲ್(viral video)​ ಆಗಿದೆ.

31 ಹರೆಯದ ಕಾವ್ಯಾ ತನ್ನ ಅದ್ಭುತ ನೋಟ ಮತ್ತು ಆಟದ ಮೇಲಿನ ಅಪಾರ ಉತ್ಸಾಹಕ್ಕೆ ಹೆಸರುವಾಸಿಯಾಗಿದ್ದಾರೆ. ಪಂದ್ಯ ಸೋತಾಗ ಮತ್ತು ಗೆದ್ದಾಗ ಅವರು ವಿಭಿನ್ನವಾಗಿ ಕಂಡುಬರುತ್ತಾರೆ. ಕ್ಯಾಮೆರಾ ಮೆನ್​ಗಳು ಕೂಡ ಪಂದ್ಯದ ವೇಳೆ ಇವರ ಮೇಲೆ ವಿಶೇಷ ನಿಗಾ ಇರಿಸಿರುತ್ತಾರೆ. ಪಂದ್ಯ ಸೋತಾಗ ಅತಿಯಾದ ಬೇಸರಿಂದ ಸಪ್ಪೆ ಮೋರೆ ಹಾಕಿ ಕುಳಿತಿದ್ದ ವಿಡಿಯೊ ಮತ್ತು ಫೋಟೊಗಳು ಕೂಡ ಹಲವು ಬಾರಿ ವೈರಲ್​ ಆಗಿತ್ತು.

ಖ್ಯಾತ ಸೂಪರ್​ ಸ್ಟಾರ್​ ನಟ ರಜನಿಕಾಂತ್ ಅವರು ಐಪಿಎಲ್​ ಆರಂಭಕ್ಕೂ ಮುನ್ನ ನಡೆದಿದ್ದ ಸಿನೆಮಾ ಕಾರ್ಯಕ್ರಮದ ಸಮಾರಂಭದ ವೇದಿಕೆಯಲ್ಲಿ ಸನ್​ರೈಸರ್ಸ್ ಹೈದರಾಬಾದ್​ ತಂಡಕ್ಕೆ ಒಳ್ಳೆ ಆಟಗಾರರನ್ನು ಆಯ್ಕೆ ಮಾಡಿ ಏಕೆಂದರೆ ಈ ಪಂದ್ಯ ಸೋತಾಗ ಕಾವ್ಯಾ ಅವರು ನೋಡಲು ಸಾಧ್ಯವಾಗುದಿಲ್ಲ ಎಂದು ಹೇಳಿದ್ದರು.

ಕಾವ್ಯ ಚೆನ್ನೈ ಮೂಲದ ಮಾಧ್ಯಮ ಮತ್ತು ಟಿವಿ ಸಮೂಹ ಸನ್ ಟಿವಿ ನೆಟ್‌ವರ್ಕ್‌ನ ಮಾಲಕ ಕಲಾನಿತಿ ಮಾರನ್ ಅವರ ಪುತ್ರಿ. ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸ್ಟರ್ನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಪದವೀಧರರಾಗಿದ್ದಾರೆ. ಐಪಿಎಲ್​ ಪಂದ್ಯದಲ್ಲಿ ಮಾತ್ರವಲ್ಲದೆ ಹರಾಜಿನ ವೇಳೆಯೂ ಅವರು ಪ್ರಧಾನ ಆಕರ್ಷಣೆಯಾಗಿರುತ್ತಾರೆ.

ಪಂದ್ಯ ಗೆದ್ದ ಹೈದರಾಬಾದ್​


ರಾಜೀವ್​ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಎಸ್​ಆರ್​ಎಚ್​ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ಗೆ 201 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ರಾಜಸ್ಥಾನ್ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 7 ವಿಕೆಟ್​ಗೆ 200 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಕೊನೇ ಓವರ್​ನಲ್ಲಿ ರಾಯಲ್ಸ್ ತಂಡಕ್ಕೆ 13 ರನ್​ಗಳು ಬೇಕಾಗಿತ್ತು. ಪೊವೆಲ್​ ನಿಖರವಾಗಿ ರನ್​ ಗಳಿಸಿ ತಂಡವನ್ನು ಗೆಲುವಿನ ಹೊಸ್ತಿಲಲ್ಲಿ ತಂದು ನಿಲ್ಲಿಸಿದ್ದರು. ಆದರೆ, ಭುವನೇಶ್ವರ್ ಕುಮಾರ್​ ಲೊ ಪುಲ್​ಟಾಸ್​ ಹಾಕುವ ಮೂಲಕ ಪೊವೆಲ್ ಅವರನ್ನು ಎಲ್​ಬಿಡಬ್ಲ್ಯು ಬಲೆಗೆ ಕೆಡವಿದರು.

Continue Reading

ಕ್ರಿಕೆಟ್

T20 World Cup 2024: ಟಿ20 ವಿಶ್ವಕಪ್​ನ ಅಧಿಕೃತ ಹಾಡು ಬಿಡುಗಡೆ; ಕುಣಿದು ಕುಪ್ಪಳಿಸಿದ ಕ್ರಿಸ್​ ಗೇಲ್​, ಉಸೇನ್‌ ಬೋಲ್ಟ್

T20 World Cup 2024: ಎಂಟು ಬಾರಿಯ ಒಲಂಪಿಕ್ ಚಿನ್ನದ ಪದಕ ವಿಜೇತ ಉಸೇನ್ ಬೋಲ್ಟ್, ವೆಸ್ಟ್ ಇಂಡೀಸ್ ಕ್ರಿಕೆಟ್ ಐಕಾನ್‌ಗಳಾದ ಕ್ರಿಸ್ ಗೇಲ್, ಶಿವನಾರಾಯಣ್ ಚಂದ್ರಪಾಲ್ ಮತ್ತು ಮಹಿಳಾ ಆಟಗಾರ್ತಿ ಸ್ಟಾಫಾನಿ ಟೇಲರ್, ಅಮೆರಿಕದ ಬೌಲರ್ ಅಲಿ ಖಾನ್ ಸೇರಿದಂತೆ ಇತರ ಪ್ರಮುಖ ಕೆರಿಬಿಯನ್ ವ್ಯಕ್ತಿಗಳು ಈ ಗೀತೆಯಲ್ಲಿ ಕಾಣಿಸಿಕೊಂಡಿದ್ದಾರೆ.

VISTARANEWS.COM


on

T20 World Cup 2024
Koo

ನವದೆಹಲಿ: ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯುವ ಐಸಿಸಿ(ICC) ಪುರುಷರ ಟಿ20 ವಿಶ್ವಕಪ್​ ಟೂರ್ನಿ(T20 World Cup 2024) ಆರಂಭಕ್ಕೆ ಇನ್ನು ಕೇವಲ ಬೆರಳೆಣಿಕೆಯ ದಿನಗಳು ಮಾತ್ರ ಬಾಕಿ ಉಳಿದಿವೆ. ವಿಶ್ವಕಪ್​ ಪಂದ್ಯವಾವಳಿಗಳು ಜೂನ್​ 1ರಿಂದ ಆರಂಭವಾಗಿ ಜೂನ್​ 29ಕ್ಕೆ ಮುಕ್ತಾಯ ಕಾಣಲಿದೆ. ಒಟ್ಟು 55 ಪಂದ್ಯಗಳು ಇರಲಿದೆ. ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆಯೇ ಐಸಿಸಿ ಪಂದ್ಯಾವಳಿಯ ಅಧಿಕೃತ ಗೀತೆಯನ್ನು ಅನಾವರಣಗೊಳಿಸಿದೆ.

ಗ್ರ್ಯಾಮಿ ಪ್ರಶಸ್ತಿ ವಿಜೇತ ಕಲಾವಿದ ಸೀನ್ ಪಾಲ್ ಮತ್ತು ಸೋಕಾ ಸೂಪರ್‌ಸ್ಟಾರ್ ಕೇಸ್ ಅವರು ‘ಔಟ್ ಆಫ್ ದಿಸ್ ವರ್ಲ್ಡ್’ ಎಂಬ ಶೀರ್ಷಿಕೆಯ ಗೀತೆಯನ್ನು ರಚಿಸಿದ್ದಾರೆ. ಇದು ಸಂಗೀತ ಮತ್ತು ಕ್ರೀಡೆಗಳೆರಡರಲ್ಲೂ ಕೆಲವು ಪ್ರಮುಖ ವ್ಯಕ್ತಿಗಳ ನಡುವಿನ ಸಹಯೋಗವನ್ನು ಇದು ಒಳಗೊಂಡಿದೆ. ಅಮೆರಿಕದ ಈ ಮೂರು ಕ್ರೀಡಾಂಗಣಗಳಲ್ಲಿ 16 ಪಂದ್ಯಗಳು ನಡೆಯಲಿದೆ. ಉಳಿದ 39 ಪಂದ್ಯಗಳಿಗೆ ವೆಸ್ಟ್ ಇಂಡೀಸ್ ಆತಿಥ್ಯ ವಹಿಸಿದೆ. 

ಎಂಟು ಬಾರಿಯ ಒಲಂಪಿಕ್ ಚಿನ್ನದ ಪದಕ ವಿಜೇತ ಉಸೇನ್ ಬೋಲ್ಟ್, ವೆಸ್ಟ್ ಇಂಡೀಸ್ ಕ್ರಿಕೆಟ್ ಐಕಾನ್‌ಗಳಾದ ಕ್ರಿಸ್ ಗೇಲ್, ಶಿವನಾರಾಯಣ್ ಚಂದ್ರಪಾಲ್ ಮತ್ತು ಮಹಿಳಾ ಆಟಗಾರ್ತಿ ಸ್ಟಾಫಾನಿ ಟೇಲರ್, ಅಮೆರಿಕದ ಬೌಲರ್ ಅಲಿ ಖಾನ್ ಸೇರಿದಂತೆ ಇತರ ಪ್ರಮುಖ ಕೆರಿಬಿಯನ್ ವ್ಯಕ್ತಿಗಳು ಈ ಗೀತೆಯಲ್ಲಿ ಕಾಣಿಸಿಕೊಂಡಿದ್ದಾರೆ. ಬೀಚ್​ ಒಂದರಲ್ಲಿ ಟಿ20 ವಿಶ್ವಕಪ್​ ಎಂದು ಬರೆದಿರುವ ಚೆಂಡೊಂದು ಬಿದ್ದಿರುತ್ತದೆ. ಇದನ್ನು ಹೆಕ್ಕುವ ಮೂಲಕ ಗೀತೆ ಆರಂಭೊಂಡಿದೆ. ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ, ಜಾಸ್​ ಬಟ್ಲರ್​, ಗ್ಲೆನ್​ ಮ್ಯಾಕ್ಸ್​ವೆಲ್ ಅವರ ಕ್ರಿಕೆಟ್​ ಶಾಟ್​ಗಳ ಶೈಲಿಯಲ್ಲಿ ನೃತ್ಯ ಮಾಡಿದ್ದು ಕೂಡ ಈ ದೃಶ್ಯದಲ್ಲಿ ನೋಡಬಹುದಾಗಿದೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ಗೆ ಪಾಕಿಸ್ತಾನ ತಂಡ ಪ್ರಕಟಿಸಲು ಹೆದರುತ್ತಿರುವುದಕ್ಕೆ ಇದುವೇ ಅಸಲಿ ಕಾರಣ

ಕ್ರಿಕೆಟ್ ಯಾವಾಗಲೂ ಕೆರಿಬಿಯನ್ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ. ಆದ್ದರಿಂದ ಟಿ20 ವಿಶ್ವಕಪ್‌ಗಾಗಿ ಅಧಿಕೃತ ಗೀತೆಯನ್ನು ಬರೆಯಲು ಮತ್ತು ರೆಕಾರ್ಡ್ ಮಾಡಲು ನನಗೆ ಗೌರವವಿದೆ. ಈ ಗೀತೆಗೆ ಸ್ಫೂರ್ತಿ ನೀಡಿದ ಸೃಜನಾತ್ಮಕ ಇನ್‌ಪುಟ್‌ನ ಸಂಪೂರ್ಣ ಸಿಬ್ಬಂದಿಗೆ ಗೌರವವು ಸಲ್ಲುತ್ತದೆ ಎಂದು ಸೋಕಾ ಸೂಪರ್‌ಸ್ಟಾರ್ ಕೆಸ್ ಹೇಳಿದ್ದಾರೆ.

ವಿಶ್ವಕಪ್​ಗೆ ಮುನ್ನ ಎಲ್ಲ 20 ತಂಡಗಳು ತಮ್ಮ ಆಗಮನಕ್ಕೆ ತಕ್ಕಂತೆ ತಲಾ 2 ಅಭ್ಯಾಸ ಪಂದ್ಯಗಳನ್ನು ಆಡಲಿವೆ. ಟೂರ್ನಿಯ ಲೀಗ್​ ಮತ್ತು ಸೂಪರ್​ 8 ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲ. ಈ ಪಂದ್ಯಗಳಿಗೆ ಮಳೆ ಬಂದು ಪಂದ್ಯ ರದ್ದಾದರೆ ಸಮಾನ ಅಂಕ ನೀಡಲಾಗುತ್ತದೆ. ಆದರೆ, ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳಿಗೆ ಮೀಸಲು ದಿನ ಇರಲಿದೆ. ಒಂದೊಮ್ಮೆ ಸೆಮಿ ಮತ್ತು ಫೈನಲ್​ ಫೈನಲ್​ ಪಂದ್ಯಗಳು ಕೂಡ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡಕ್ಕೆ ಲಾಭ ಸಿಗಲಿದೆ.

Continue Reading

ಕ್ರೀಡೆ

T20 World Cup 2024: ಟಿ20 ವಿಶ್ವಕಪ್​ಗೆ ಪಾಕಿಸ್ತಾನ ತಂಡ ಪ್ರಕಟಿಸಲು ಹೆದರುತ್ತಿರುವುದಕ್ಕೆ ಇದುವೇ ಅಸಲಿ ಕಾರಣ

T20 World Cup 2024: ಮೇ 24 ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲು ಅಂತಿಮ ದಿನವಾಗಿದೆ. ಹೀಗಾಗಿ ಪಾಕ್​ ಇದೇ ದಿನ ತನ್ನ ತಂಡವನ್ನು ಪ್ರಕಟಿಸಲು ಯೋಜನೆಯೊಂದನ್ನು ಹಾಕಿಕೊಂಡಂತಿದೆ. ಆದರೆ ಮೇ 1 ತಂಡದ ಆಯ್ಕೆಗೆ ಅಂತಿಮ ದಿನವಾದ ಕಾರಣ ಐಸಿಸಿ ಇದಕ್ಕೆ ಅನುಮತಿ ನೀಡಲಿದೆಯೇ ಎಂದು ಕಾದು ನೋಡಬೇಕಿದೆ.

VISTARANEWS.COM


on

T20 World Cup 2024
Koo

ಕರಾಚಿ: ಮುಂಬರುವ ಟಿ20 ವಿಶ್ವಕಪ್​ಗೆ(T20 World Cup 2024) ಈಗಾಗಲೇ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್​, ನ್ಯೂಜಿಲ್ಯಾಂಡ್​ ಸೇರಿ ಹಲವು ದೇಶಗಳು ತಮ್ಮ ತಂಡವನ್ನು ಪ್ರಕಟಿಸಿದೆ. ತಂಡ ಪ್ರಕಟಿಸಲು ಮೇ 1 ಅಂತಿಮ ದಿನವಾಗಿದ್ದರೂ ಕೂಡ ಪಾಕ್​ ಇದುವರೆಗೆ ತಂಡವನ್ನು ಪ್ರಕಟಿಸಿಲ್ಲ. ಇದಕ್ಕೆ ಕಾರಣ ಏನೆಂಬುದು ತಿಳಿದು ಬಂದಿದೆ. ಹೌದು, ಕೆಲವು ಪ್ರಮುಖ ಆಟಗಾರರು ಫಿಟ್‌ನೆಸ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಮೇ 23 ಅಥವಾ 24ರ ವೇಳೆ ತಂಡವನ್ನು ಪ್ರಕಟಿಸುವುದು ಪಿಸಿಬಿ ಯೋಜನೆಯಾಗಿದೆ.

ಪ್ರಮುಖ ಟಿ20 ಆಟಗಾರರಾದ ಮೊಹಮ್ಮದ್‌ ರಿಜ್ವಾನ್‌, ಆಜಂ ಖಾನ್‌, ಇರ್ಫಾನ್‌ ಖಾನ್‌ ನಿಯಾಜಿ ಮತ್ತು ಹ್ಯಾರಿಸ್‌ ರೌಫ್ ಅವರು ಫಿಟ್‌ನೆಸ್‌ ಹೊಂದಿಲ್ಲ. ಹೀಗಾಗಿ ಇವರನ್ನು ಮುಂಬರುವ ಐರ್ಲೆಂಡ್‌, ಇಂಗ್ಲೆಂಡ್‌ ಸರಣಿಗಳಲ್ಲಿ ಆಡಿಸಿ ನೋಡುವುದು ಪಾಕ್​ನ ಉದ್ದೇಶವಾಗಿದೆ. ಮೇ 24 ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲು ಅಂತಿಮ ದಿನವಾಗಿದೆ. ಹೀಗಾಗಿ ಪಾಕ್​ ಇದೇ ದಿನ ತನ್ನ ತಂಡವನ್ನು ಪ್ರಕಟಿಸಲು ಯೋಜನೆಯೊಂದನ್ನು ಹಾಕಿಕೊಂಡಂತಿದೆ. ಆದರೆ ಮೇ 1 ತಂಡದ ಆಯ್ಕೆಗೆ ಅಂತಿಮ ದಿನವಾದ ಕಾರಣ ಐಸಿಸಿ ಇದಕ್ಕೆ ಅನುಮತಿ ನೀಡಲಿದೆಯೇ ಎಂದು ಕಾದು ನೋಡಬೇಕಿದೆ.

ಭಾರತ ಮತ್ತು ಪಾಕಿಸ್ತಾನ ತಂಡಗಳು ಜೂನ್​ 9ರಂದು ನಡೆಯುವ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕಾಗಿ ಉಭಯ ದೇಶಗಳ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ನ್ಯೂಯಾರ್ಕ್​ನಲ್ಲಿ ತಾತ್ಕಾಲಿಕವಾಗಿ ತಲೆ ಎತ್ತಿದ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ(Nassau County International Cricket Stadium)ನಲ್ಲಿ ಇತ್ತಂಡಗಳ ನಡುವಣ ಪಂದ್ಯ ನಡೆಯಲಿದೆ.

34 ಸಾವಿರ ಪ್ರೇಕ್ಷಕರು ಕೂರುವಷ್ಟು ಸಾಮರ್ಥ್ಯದ ಸ್ಟೇಡಿಯಂ ಇದಾಗಿದ್ದು. ಭಾರತ-ಪಾಕ್​ ಪಂದ್ಯಕ್ಕಾಗಿಯೇ ಇದನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿದೆ. ಪಂದ್ಯದ ನಂತರ ಇದನ್ನು ಕೆಡವಲಾಗುತ್ತದೆ. ಎಂದು ತಿಳಿಸಲಾಗಿದೆ. ಭಾರತ ಮತ್ತು ಪಾಕ್​ ನಡುವಣ ಪಂದ್ಯ ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕಾರಣವೂ ಕೂಡ ಇದೆ. ಏಕೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ T20 World Cup 2024: ಡ್ರಾಪ್ -ಇನ್ ಪಿಚ್ ಅಳವಡಿಕೆ ಕಾರ್ಯ ಆರಂಭಿಸಿದ ಐಸಿಸಿ

ನ್ಯೂಯಾರ್ಕ್ ಮತ್ತು ನವದೆಹಲಿ ನಡುವೆ 10.5 ಗಂಟೆಗಳ ಸಮಯದ ವ್ಯತ್ಯಾಸವಿರುವುದರಿಂದ, ಸಂಘಟಕರು ಕೆಲವು ಪಂದ್ಯಗಳನ್ನು, ವಿಶೇಷವಾಗಿ ಭಾರತವನ್ನು ಒಳಗೊಂಡ ಪಂದ್ಯಗಳನ್ನು ಬೆಳಗ್ಗೆ ಪ್ರಾರಂಭಿಸಲು ಒಪ್ಪಿಕೊಂಡಿದ್ದಾರೆ. ಇದು ಭಾರತೀಯ ದೂರದರ್ಶನ ಪ್ರೇಕ್ಷಕರಿಗೆ ತಮ್ಮ ಅನುಕೂಲದ ಸಮಯದಲ್ಲಿ ಪಂದ್ಯವನ್ನು ನೋಡಲು ಸಹಾಯ ಮಾಡಲಿದೆ. ಜೂನ್​ 9 ಕೂಡ ಭಾನುವಾರವಾಗಿದೆ. ಅಮೆರಿಕದಲ್ಲಿ ರಾತ್ರಿ ಪಂದ್ಯ ಆಯೋಜಿಸಿದರೆ, ಭಾರತದಲ್ಲಿ ಸೋಮವಾರ ಮುಂಜಾನೆ ಪಂದ್ಯ ಪ್ರಸಾರವಾಗುತ್ತದೆ. ಹೀಗಾಗಿ ಅಮೆರಿಕದಲ್ಲಿ ರಾತ್ರಿ ಪಂದ್ಯ ನಡೆಸುವುದಾದರೆ ಜೂನ್​ 8ರಂದೇ ನಡೆಯಲಿದೆ. ಆಗ ಭಾರತದಲ್ಲಿ ಭಾನುವಾರ ಬೆಳಗ್ಗೆ ಪಂದ್ಯ ಪ್ರಸಾರವಾಗಲಿದೆ.

Continue Reading

ಕ್ರೀಡೆ

IPL 2024 Points Table: ರೋಚಕ 1 ರನ್ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಹೈದರಾಬಾದ್​

IPL 2024 Points Table: ಹೈದರಾಬಾದ್​ ಗೆಲುವಿನಿಂದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ 1 ಸ್ಥಾನಗಳ ಕುಸಿತ ಕಂಡಿತು. ಇಂದು ನಡೆಯುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಮತ್ತು ಕೆಕೆಆರ್​ ತಂಡಗಳು ಮುಖಾಮುಖಿಯಾಗಲಿವೆ. ಮುಂಬೈ ಸೋತರೆ ಟೂರ್ನಿಯಿಂದ ಹೊರಬೀಳಲಿದೆ.

VISTARANEWS.COM


on

IPL 2024 Points Table
Koo

ಹೈದರಾಬಾದ್​: ಅತ್ಯಂತ ರೋಚಕವಾಗಿ ಸಾಗಿದ, ಕ್ರಿಕೆಟ್​ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸುವಂತೆ ಮಾಡಿದ ಸನ್​ರೈಸರ್ಸ್​ ಹೈದರಾಬಾದ್​ ಮತ್ತು ರಾಜಸ್ಥಾನ್​ ರಾಯಲ್ಸ್​ ನಡುವಿನ ಪಂದ್ಯದಲ್ಲಿ ಕೊನೆಗೂ ಹೈದರಾಬಾದ್​ ರೋಚಕ 1 ರನ್​ ಅಂತರದ ಗೆಲುವು ಸಾಧಿಸಿ ಮೆರೆದಾಡಿತು. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ(IPL 2024 Points Table) 4ನೇ ಸ್ಥಾನಕ್ಕೇರಿತು.

ಹೈದರಾಬಾದ್​ ಗೆಲುವಿನಿಂದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ 1 ಸ್ಥಾನಗಳ ಕುಸಿತ ಕಂಡಿತು. ಇಂದು ನಡೆಯುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಮತ್ತು ಕೆಕೆಆರ್​ ತಂಡಗಳು ಮುಖಾಮುಖಿಯಾಗಲಿವೆ. ಮುಂಬೈ ಸೋತರೆ ಟೂರ್ನಿಯಿಂದ ಹೊರಬೀಳಲಿದೆ. ಕೆಕೆಆರ್​ ಗೆದ್ದರೆ 14 ಅಂಕದೊಂದಿಗೆ 2ನೇ ಸ್ಥಾನದಲ್ಲೇ ಮುಂದುವರಿಯಲಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​98116 (+0.694)
ಕೆಕೆಆರ್​​96312 (+1.096)
ಲಕ್ನೋ​​106412 (+0.094)
ಹೈದರಾಬಾದ್​106512 (+0.072)
ಚೆನ್ನೈ​105510 (+0.627)
ಡೆಲ್ಲಿ115610 (-0.442)
ಪಂಜಾಬ್​10488 (-0.062)
ಗುಜರಾತ್​10468 (-1.113)
ಮುಂಬೈ10376 (-0.272)
ಆರ್​ಸಿಬಿ10376 (-0.415)

ರಾಜೀವ್​ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಎಸ್​ಆರ್​ಎಚ್​ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ಗೆ 201 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ರಾಜಸ್ಥಾನ್ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 7 ವಿಕೆಟ್​ಗೆ 200 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಕೊನೇ ಓವರ್​ನಲ್ಲಿ ರಾಯಲ್ಸ್ ತಂಡಕ್ಕೆ 13 ರನ್​ಗಳು ಬೇಕಾಗಿತ್ತು. ಪೊವೆಲ್​ ನಿಖರವಾಗಿ ರನ್​ ಗಳಿಸಿ ತಂಡವನ್ನು ಗೆಲುವಿನ ಹೊಸ್ತಿಲಲ್ಲಿ ತಂದು ನಿಲ್ಲಿಸಿದ್ದರು. ಆದರೆ, ಭುವನೇಶ್ವರ್ ಕುಮಾರ್​ ಲೊ ಪುಲ್​ಟಾಸ್​ ಹಾಕುವ ಮೂಲಕ ಪೊವೆಲ್ ಅವರನ್ನು ಎಲ್​ಬಿಡಬ್ಲ್ಯು ಬಲೆಗೆ ಕೆಡವಿದರು.

ಇದನ್ನೂ ಓದಿ IPL 2024 Points Table: ಚೆನ್ನೈ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ ಪಂಜಾಬ್​

ಮೊದಲು ಬ್ಯಾಟಿಂಗ್​ ನಡೆಸಿದ ಎಸ್​ಆರ್​​ಎಚ್​ ತಂಡ ಅಭಿಶೇಕ್​ ಶರ್ಮಾ ಅವರನ್ನು 12 ರನ್​ಗೆ ಕಳೆದುಕೊಂಡಿತು. ಈ ವೇಳೆ ತಂಡದ ಮೊತ್ತ 25 ಆಗಿತ್ತು. ನಂತರ ಬಂದ ಅನ್ಮೋಲ್ ಪ್ರೀತ್ ಸಿಂಗ್​ 5 ರನ್​ಗೆ ಔಟಾಗಿ ನಿರಾಸೆ ಮೂಡಿಸಿದರು. ಆ ಬಳಿಕ ಜತೆಯಾದ ನಿತೀಶ್​ ಕುಮಾರ್ ರೆಡ್ಡಿ ಅರಂಭಿಕ ಬ್ಯಾಟರ್​ ಟ್ರಾವಿಸ್​ ಹೆಡ್​ ಜತೆ ಉತ್ತಮವಾಗಿ ಬ್ಯಾಟ್ ಬೀಸಿದರು. ಅವರಿಬ್ಬರೂ ನಾಲ್ಕನೇ ವಿಕೆಟ್​ಗೆ 96 ರನ್ ಜತೆಯಾಟ ನೀಡಿದರು. ಹೆಡ್​ 58 ರನ್ ಬಾರಿಸಿದರೆ ನಿತೀಶ್​ 76 ರನ್ ಬಾರಿಸಿ ಅಜೇಯವಾಗಿ ಉಳಿದರು. ಕೊನೆಯಲ್ಲಿ ಹೆನ್ರಿಚ್ ಕ್ಲಾಸೆನ್​ 19 ಎಸೆತಕ್ಕೆ 42 ರನ್​ ಬಾರಿಸುವ ಮೂಲಕ ತಂಡದ ಮೊತ್ತವನ್ನು 200 ರ ಗಡಿ ದಾಟಿಸಲು ನೆರವಾದರು.

Continue Reading
Advertisement
Covishield vaccine Puneeth Rakumar
ಸ್ಯಾಂಡಲ್ ವುಡ್6 mins ago

Covishield vaccine: ಕೋವಿಶೀಲ್ಡ್‌ ‌ ತಗೋಬೇಡಿ, ಒಳ್ಳೆಯದಲ್ಲ ಎಂದು ಅಪ್ಪುಗೆ ಮನವಿ ಮಾಡಿದ್ದ ಅಭಿಮಾನಿ: ಪೋಸ್ಟ್‌ ವೈರಲ್‌!

Kavya Maran
ಕ್ರೀಡೆ14 mins ago

Kavya Maran: ರೋಚಕ ಗೆಲುವು ಕಂಡು ಆಕಾಶಕ್ಕೆ ಜಿಗಿದಂತೆ ಕುಣಿದು ಸಂಭ್ರಮಿಸಿದ ಕಾವ್ಯಾ ಮಾರನ್; ವಿಡಿಯೊ ವೈರಲ್​

murder case stabbing bengaluru
ಕ್ರೈಂ16 mins ago

Murder Case: ಎಣ್ಣೆ ಪಾರ್ಟಿ ನಂತರ ರಿಕ್ಷಾ ಚಾಲಕನ ಇರಿದು ಕೊಂದ ರೌಡಿ ಶೀಟರ್‌

Elephant attack in Shivamogga
ಶಿವಮೊಗ್ಗ28 mins ago

Elephant attack : ನಿಲ್ಲದ ಕಾಡು ಪ್ರಾಣಿಗಳ ಹಾವಳಿ; ಶಿವಮೊಗ್ಗದಲ್ಲಿ ಆನೆ ದಾಳಿಗೆ ವ್ಯಕ್ತಿ ಬಲಿ

Lalu Prasad Yadav
ದೇಶ30 mins ago

Lalu Prasad Yadav: ಬಿಹಾರದಲ್ಲಿ ಲಾಲೂ ಪ್ರಸಾದ್‌ ಯಾದವ್‌ v/s ಲಾಲೂ ಪುತ್ರಿ

Kiccha Sudeep jailer fame kevin has composed stunt in max
ಸ್ಯಾಂಡಲ್ ವುಡ್34 mins ago

Kiccha Sudeep: ಕಿಚ್ಚ ಸುದೀಪ್ ಸಿನಿಮಾಗೆ ‘ಜೈಲರ್’ ಸ್ಟಂಟ್ ಮಾಸ್ಟರ್ ಎಂಟ್ರಿ!

prajwal revanna case hd revanna farm house
ಕ್ರೈಂ38 mins ago

Prajwal Revanna Case: ಪ್ರಜ್ವಲ್‌ ರೇವಣ್ಣ, ರೇವಣ್ಣ ಮನೆ ಇಂಚಿಂಚೂ ತಲಾಶ್, ಸಿಗ್ತಾ ಮಹತ್ವದ ಕ್ಲೂ?

Thomas Cup 2024
ಕ್ರೀಡೆ1 hour ago

Thomas Cup 2024: ಉಬೆರ್‌ ಕಪ್‌ ಬಳಿಕ ಥಾಮಸ್‌ ಕಪ್​ನಲ್ಲಿಯೂ ಮುಗ್ಗರಿಸಿದ ಭಾರತ

ACTOR DHANUSH Nagarjuna mysterious first look from Kubera
ಕಾಲಿವುಡ್1 hour ago

Actor Dhanush: ಧನುಷ್‌ ನಟನೆಯ ʻಕುಬೇರʼ ಸಿನಿಮಾದ ನಾಗಾರ್ಜುನ ಫಸ್ಟ್‌ ಲುಕ್‌ ಪೋಸ್ಟರ್‌ ಔಟ್‌!

Viral News
ವೈರಲ್ ನ್ಯೂಸ್1 hour ago

Viral News: ಶಾಕಿಂಗ್‌ ವಿಡಿಯೊ; ಹಾವು ಕಚ್ಚಿದ್ದ ಯುವಕ ಗುಣಮುಖನಾಗಲೆಂದು ಗಂಗಾ ನದಿಯಲ್ಲಿ ನೇತಾಡಿಸಿದರು!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ6 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ16 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ1 day ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20245 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

ಟ್ರೆಂಡಿಂಗ್‌