ಬೆಂಗಳೂರು: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ (MS Dhoni ) ಅವರ ಬುದ್ಧಿವಂತಿಕೆ, ಚಮತ್ಕಾರ ಮತ್ತು ಗೇಮ್ ಪ್ಲಾನ್ ಯಾವುದಕ್ಕೂ ಕಡಿಮೆಯಿಲ್ಲ. ಎಸ್ಕೆ ನಾಯಕ ತಮ್ಮ ಆಟದ ಯೋಜನೆಯ ಮೂಲಕ ಎಂತಹ ಎದುರಾಳಿಯನ್ನೂ ಮೀರಿಸುತ್ತಾರೆ. ತಮ್ಮ ಅಂತಾರಾಷ್ಟ್ರಿಯ ಕ್ರಿಕೆಟ್ ಸಂದರ್ಭದಲ್ಲಿ ಅವರು ಈ ರೀತಿಯ ಹಲವಾರು ಜಾಣ್ಮೆಯ ಮೂಲಕ ಪಂದ್ಯವನ್ನು ಗೆಲ್ಲಿಸಿದ್ದರು. ಎದುರಾಳಿ ತಂಡಗಳ ಯೋಜನೆಗಳನ್ನು ಬುಡಮೇಲು ಮಾಡಿದ ಅವರು ಇದು ಹೇಗೆ ಸಾಧ್ಯ ಎಂದು ಅಂದುಕೊಳ್ಳುವಂತೆ ಮಾಡಿದ್ದರು. ಇದೇ ಮಾದರಿಯಲ್ಲಿ ಬೆಂಗಾಲಿ ಭಾಷೆ ಗೊತ್ತಿದ್ದೂ ಬಾಂಗ್ಲಾದೇಶ ತಂಡದ ಮುಂದೆ ಗೊತ್ತಿಲ್ಲದಂತೆ ನಟಿಸಿ ಅವರ ಗೇಮ್ ಪ್ಲ್ಯಾನ್ ತಿಳಿದುಕೊಂಡ ಘಟನೆಯೊಂದಿದೆ. ಅದನ್ನು ಅವರು ಈ ವಿವರಿಸಿದ್ದಾರೆ.
Mahendra Singh Dhoni 😭😂🤣🤣pic.twitter.com/zui1D0DfUm
— Byomkesh (@byomkesbakshy) October 30, 2023
ಬೆಂಗಾಲಿ ಚೆನ್ನಾಗಿ ತಿಳಿದುಕೊಳ್ಳುವ ಮೂಲಕ ಬಾಂಗ್ಲಾದೇಶ ತಂಡವನ್ನು ಹೇಗೆ ಮೀರಿಸಿದರು ಎಂಬ ಕಥೆಯನ್ನು 42 ವರ್ಷದ ಆಟಗಾರ ವಿವರಿಸುವ ವೀಡಿಯೊ ವೈರಲ್ ಆಗಿದೆ. ಪರಸ್ಪರ ಬೆಂಗಾಲಿ ಮಾತನಾಡುವ ಮೂಲಕ ತಮ್ಮ ವಿಕೆಕೆಟ್ ಉರುಳಿಸಲು ಮುಂದಾಗಿದ್ದ ಬಾಂಗ್ಲಾ ತಂಡದ ಯೋಜನೆಯನ್ನು ಬುಡಮೇಲು ಮಾಡಿದ್ದು ಹೇಗೆ ಎಂಬುದನ್ನು ವಿವರಿಸಿದ್ದಾರೆ.
ಲೆಜೆಂಡರಿ ವಿಕೆಟ್ ಕೀಪರ್ ಬ್ಯಾಟರ್ ಧೋನಿಗೆ ಬೆಂಗಾಲಿ ತಿಳಿದಿದೆ ಎಂದು ಬಾಂಗ್ಲಾದೇಶ ತಂಡಕ್ಕೆ ಗೊತ್ತಿರಲಿಲ್ಲ . ಹೀಗಾಗಿ ಧೋನಿ ವಿಕೆಟ್ ಪಡೆಯಲು ಅವರ ಬೆಂಗಾಲಿ ಭಾಷೆಯಲ್ಲಿ ಪರಸ್ಪರ ಮಾತನಾಡಿದ್ದರು. ಬಾಂಗ್ಲಾದೇಶಿಗಳು ಏನು ಮಾಡಲು ಪ್ರಯತ್ನಿಸುತ್ತಿದ್ದಾರೆಂದು ಧೋನಿಗೆ ಅರ್ಥವಾಗಿದ್ದು ಮಾತ್ರವಲ್ಲ, ಮುಂದಿನ ಎಸೆತದಲ್ಲಿ ಬೌಲರ್ ಏನು ಬೌಲಿಂಗ್ ಮಾಡುತ್ತಾರೆಂದು ಅವರಿಗೆ ಗೊತ್ತಾಗುತ್ತಿತ್ತು. ಆದರೆ, ಅವರು ಸುಮ್ಮನಿದ್ದರು. ಈ ಕುರಿತು ಅವರು ವಿಡಿಯೊದಲ್ಲಿ ವಿವರಣೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: KCC Cup 2023: ಡಿಸೆಂಬರ್‌ನಲ್ಲಿ KCC ಕಪ್; ಟೂರ್ನಿಗೆ ಬರ್ತಾರಾ ಸಚಿನ್, ಧೋನಿ?
ನಾನು ಖರಗ್ಪುರದಲ್ಲಿ ಕೆಲಸ ಮಾಡುತ್ತಿದ್ದಾಗ ಬೆಂಗಾಲಿ ಚೆನ್ನಾಗಿ ಮಾತನಾಡುತ್ತಿದ್ದೆ. ಈಗ ಕೂಡ ನಾನು ಮಾತನಾಡುತ್ತೇನೆ. ಆದರೆ ನಿರರ್ಗಳವಾಗಿ ಅಲ್ಲ. ಆದರೆ ನಾನು ಬೆಂಗಾಲಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲದೆ. ನೀವು ನನ್ನ ಮುಂದೆ ಆ ಭಾಷೆಯನ್ನು ಮಾತನಾಡಿದರೆ, ನಾನು ಅದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. ಎಂದು ಧೋನಿ ವಿಡಿಯೊದಲ್ಲಿ ಹೇಳಿದ್ದಾರೆ.
ಕುತೂಹಲಕಾರಿ ಸಂಗತಿಯೆಂದರೆ, ನಾವು ಬಾಂಗ್ಲಾದೇಶದ ವಿರುದ್ಧ ಆಡುತ್ತಿದ್ದೆವು, ಮತ್ತು ನಾನು ಬ್ಯಾಟಿಂಗ್ ಮಾಡಲು ಬಂದಿದ್ದೆ. ನಾನು ಬಂಗಾಳಿಯನ್ನು ಅರ್ಥಮಾಡಿಕೊಳ್ಳಬಲ್ಲೆ ಎಂದು ಎದುರಾಳಿ ತಂಡಕ್ಕೆ ತಿಳಿದಿರಲಿಲ್ಲ. ಕೀಪರ್ ಬೌಲರ್ಗೆ ಕೆಲವು ಆಟದ ಯೋಜನೆಯನ್ನು ಬೆಂಗಾಲಿ ಭಾಷೆಯಲ್ಲಿ ಸೂಚಿಸುತ್ತಿದ್ದನು. ಬೌಲರ್ ಏನು ಬೌಲಿಂಗ್ ಮಾಡುತ್ತಾನೆ ಎಂದು ನನಗೆ ಮೊದಲೇ ಗೊತ್ತಾಗುತ್ತಿತ್ತು. ಪಂದ್ಯ ಮುಗಿದ ಬಳಿಕ ಆಟಗಾರರು ಏನನ್ನೋ ಚರ್ಚಿಸುತ್ತಿದ್ದರು. ನಾನು ಆಗ ನಗಾಡಿದೆ. ಆ ವೇಲೆ ಆಟಗಾರರೊಬ್ಬರು ಹೇಯ್ ಅವರು ಬಂಗಾಳಿಯನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಹೇಳಿದರು ಎಂದು ಧೋನಿ ವಿವರಿಸಿದ್ದಾರೆ.
ಐಪಿಎಲ್ 2024 ಆಡುವ ಬಗ್ಗೆ ಎಂಎಸ್ ಧೋನಿ
ಐಪಿಎಲ್ 2024 ಯೋಜನೆಗಳು ಆರಂಭವಾಗಿದ್ದು. ಎಲ್ಲರ ಕಣ್ಣುಗಳು ಮತ್ತೊಮ್ಮೆ ಧೋನಿಯ ಮೇಲೆ ನೆಟ್ಟಿವೆ. ಪ್ರಸ್ತುತ, ಸಿಎಸ್ಕೆ ನಾಯಕ ರಾಂಚಿಯಲ್ಲಿದ್ದು, ತಮ್ಮ ವಿಂಟೇಜ್ ಕಾರುಗಳು ಮತ್ತು ಬೈಕುಗಳನ್ನು ಓಡಿಸುವಲ್ಲಿ ನಿರತರಾಗಿದ್ದಾರೆ. ಅವರು ಜೂನ್ ನಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸಿಎಸ್ಕೆ ಪರ ಮತ್ತೊಂದು ಐಪಿಎಲ್ ಋತುವಿನಲ್ಲಿ ಆಡುವ ಬಗ್ಗೆ ಧೋನಿ ಆಶಾವಾದಿಯಾಗಿದ್ದಾರೆ. ಆದಾಗ್ಯೂ, ಅದು ಸಂಭವಿಸಬೇಕಾದರೆ ಅವರ ಮೊಣಕಾಲು ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಬೇಕು.
ಫ್ರಾಂಚೈಸಿಗಳು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಾಗಿರುವುದರಿಂದ ನವೆಂಬರ್ 15 ರೊಳಗೆ ಧೋನಿ ಐಪಿಎಲ್ 2024 ಋತುವಿನಲ್ಲಿ ಸಿಎಸ್ಕೆ ಪರ ಆಡುವ ಬಗ್ಗೆ ನಮಗೆ ಸ್ಪಷ್ಟ ಚಿತ್ರಣ ಸಿಗಲಿದೆ.