MS Dhoni : ಬೆಂಗಾಲಿ ಭಾಷೆ ಗೊತ್ತಿದ್ದೂ ಬಾಂಗ್ಲಾ ತಂಡವನ್ನು ಮಂಗ್ಯಾ ಮಾಡಿದ್ದ ಧೋನಿ! - Vistara News

ಕ್ರಿಕೆಟ್

MS Dhoni : ಬೆಂಗಾಲಿ ಭಾಷೆ ಗೊತ್ತಿದ್ದೂ ಬಾಂಗ್ಲಾ ತಂಡವನ್ನು ಮಂಗ್ಯಾ ಮಾಡಿದ್ದ ಧೋನಿ!

ಬೆಂಗಾಳಿ ಭಾಷೆ ತಿಳಿದುಕೊಂಡಿದ್ದ ಧೋನಿ (MS Dhoni ) ಬಾಂಗ್ಲಾದೇಶ ತಂಡದ ಗೇಮ್​ ಪ್ಲಾನ್​ಗಳನ್ನು ಗೊತ್ತಿಲ್ಲದೇ ತಿಳಿದುಕೊಳ್ಳುತ್ತಿದ್ದರು.

VISTARANEWS.COM


on

Bangladesh Cricket team
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ (MS Dhoni ) ಅವರ ಬುದ್ಧಿವಂತಿಕೆ, ಚಮತ್ಕಾರ ಮತ್ತು ಗೇಮ್ ಪ್ಲಾನ್ ಯಾವುದಕ್ಕೂ ಕಡಿಮೆಯಿಲ್ಲ. ಎಸ್​ಕೆ ನಾಯಕ ತಮ್ಮ ಆಟದ ಯೋಜನೆಯ ಮೂಲಕ ಎಂತಹ ಎದುರಾಳಿಯನ್ನೂ ಮೀರಿಸುತ್ತಾರೆ. ತಮ್ಮ ಅಂತಾರಾಷ್ಟ್ರಿಯ ಕ್ರಿಕೆಟ್​ ಸಂದರ್ಭದಲ್ಲಿ ಅವರು ಈ ರೀತಿಯ ಹಲವಾರು ಜಾಣ್ಮೆಯ ಮೂಲಕ ಪಂದ್ಯವನ್ನು ಗೆಲ್ಲಿಸಿದ್ದರು. ಎದುರಾಳಿ ತಂಡಗಳ ಯೋಜನೆಗಳನ್ನು ಬುಡಮೇಲು ಮಾಡಿದ ಅವರು ಇದು ಹೇಗೆ ಸಾಧ್ಯ ಎಂದು ಅಂದುಕೊಳ್ಳುವಂತೆ ಮಾಡಿದ್ದರು. ಇದೇ ಮಾದರಿಯಲ್ಲಿ ಬೆಂಗಾಲಿ ಭಾಷೆ ಗೊತ್ತಿದ್ದೂ ಬಾಂಗ್ಲಾದೇಶ ತಂಡದ ಮುಂದೆ ಗೊತ್ತಿಲ್ಲದಂತೆ ನಟಿಸಿ ಅವರ ಗೇಮ್​ ಪ್ಲ್ಯಾನ್​ ತಿಳಿದುಕೊಂಡ ಘಟನೆಯೊಂದಿದೆ. ಅದನ್ನು ಅವರು ಈ ವಿವರಿಸಿದ್ದಾರೆ.

ಬೆಂಗಾಲಿ ಚೆನ್ನಾಗಿ ತಿಳಿದುಕೊಳ್ಳುವ ಮೂಲಕ ಬಾಂಗ್ಲಾದೇಶ ತಂಡವನ್ನು ಹೇಗೆ ಮೀರಿಸಿದರು ಎಂಬ ಕಥೆಯನ್ನು 42 ವರ್ಷದ ಆಟಗಾರ ವಿವರಿಸುವ ವೀಡಿಯೊ ವೈರಲ್ ಆಗಿದೆ. ಪರಸ್ಪರ ಬೆಂಗಾಲಿ ಮಾತನಾಡುವ ಮೂಲಕ ತಮ್ಮ ವಿಕೆಕೆಟ್​ ಉರುಳಿಸಲು ಮುಂದಾಗಿದ್ದ ಬಾಂಗ್ಲಾ ತಂಡದ ಯೋಜನೆಯನ್ನು ಬುಡಮೇಲು ಮಾಡಿದ್ದು ಹೇಗೆ ಎಂಬುದನ್ನು ವಿವರಿಸಿದ್ದಾರೆ.

ಲೆಜೆಂಡರಿ ವಿಕೆಟ್ ಕೀಪರ್ ಬ್ಯಾಟರ್​ ಧೋನಿಗೆ ಬೆಂಗಾಲಿ ತಿಳಿದಿದೆ ಎಂದು ಬಾಂಗ್ಲಾದೇಶ ತಂಡಕ್ಕೆ ಗೊತ್ತಿರಲಿಲ್ಲ . ಹೀಗಾಗಿ ಧೋನಿ ವಿಕೆಟ್​ ಪಡೆಯಲು ಅವರ ಬೆಂಗಾಲಿ ಭಾಷೆಯಲ್ಲಿ ಪರಸ್ಪರ ಮಾತನಾಡಿದ್ದರು. ಬಾಂಗ್ಲಾದೇಶಿಗಳು ಏನು ಮಾಡಲು ಪ್ರಯತ್ನಿಸುತ್ತಿದ್ದಾರೆಂದು ಧೋನಿಗೆ ಅರ್ಥವಾಗಿದ್ದು ಮಾತ್ರವಲ್ಲ, ಮುಂದಿನ ಎಸೆತದಲ್ಲಿ ಬೌಲರ್ ಏನು ಬೌಲಿಂಗ್ ಮಾಡುತ್ತಾರೆಂದು ಅವರಿಗೆ ಗೊತ್ತಾಗುತ್ತಿತ್ತು. ಆದರೆ, ಅವರು ಸುಮ್ಮನಿದ್ದರು. ಈ ಕುರಿತು ಅವರು ವಿಡಿಯೊದಲ್ಲಿ ವಿವರಣೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: KCC Cup 2023: ಡಿಸೆಂಬರ್‌ನಲ್ಲಿ KCC ಕಪ್‌; ಟೂರ್ನಿಗೆ ಬರ್ತಾರಾ ಸಚಿನ್, ಧೋನಿ?

ನಾನು ಖರಗ್​ಪುರದಲ್ಲಿ ಕೆಲಸ ಮಾಡುತ್ತಿದ್ದಾಗ ಬೆಂಗಾಲಿ ಚೆನ್ನಾಗಿ ಮಾತನಾಡುತ್ತಿದ್ದೆ. ಈಗ ಕೂಡ ನಾನು ಮಾತನಾಡುತ್ತೇನೆ. ಆದರೆ ನಿರರ್ಗಳವಾಗಿ ಅಲ್ಲ. ಆದರೆ ನಾನು ಬೆಂಗಾಲಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲದೆ. ನೀವು ನನ್ನ ಮುಂದೆ ಆ ಭಾಷೆಯನ್ನು ಮಾತನಾಡಿದರೆ, ನಾನು ಅದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. ಎಂದು ಧೋನಿ ವಿಡಿಯೊದಲ್ಲಿ ಹೇಳಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ, ನಾವು ಬಾಂಗ್ಲಾದೇಶದ ವಿರುದ್ಧ ಆಡುತ್ತಿದ್ದೆವು, ಮತ್ತು ನಾನು ಬ್ಯಾಟಿಂಗ್ ಮಾಡಲು ಬಂದಿದ್ದೆ. ನಾನು ಬಂಗಾಳಿಯನ್ನು ಅರ್ಥಮಾಡಿಕೊಳ್ಳಬಲ್ಲೆ ಎಂದು ಎದುರಾಳಿ ತಂಡಕ್ಕೆ ತಿಳಿದಿರಲಿಲ್ಲ. ಕೀಪರ್ ಬೌಲರ್​ಗೆ ಕೆಲವು ಆಟದ ಯೋಜನೆಯನ್ನು ಬೆಂಗಾಲಿ ಭಾಷೆಯಲ್ಲಿ ಸೂಚಿಸುತ್ತಿದ್ದನು. ಬೌಲರ್ ಏನು ಬೌಲಿಂಗ್ ಮಾಡುತ್ತಾನೆ ಎಂದು ನನಗೆ ಮೊದಲೇ ಗೊತ್ತಾಗುತ್ತಿತ್ತು. ಪಂದ್ಯ ಮುಗಿದ ಬಳಿಕ ಆಟಗಾರರು ಏನನ್ನೋ ಚರ್ಚಿಸುತ್ತಿದ್ದರು. ನಾನು ಆಗ ನಗಾಡಿದೆ. ಆ ವೇಲೆ ಆಟಗಾರರೊಬ್ಬರು ಹೇಯ್ ಅವರು ಬಂಗಾಳಿಯನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಹೇಳಿದರು ಎಂದು ಧೋನಿ ವಿವರಿಸಿದ್ದಾರೆ.

ಐಪಿಎಲ್ 2024 ಆಡುವ ಬಗ್ಗೆ ಎಂಎಸ್ ಧೋನಿ

ಐಪಿಎಲ್ 2024 ಯೋಜನೆಗಳು ಆರಂಭವಾಗಿದ್ದು. ಎಲ್ಲರ ಕಣ್ಣುಗಳು ಮತ್ತೊಮ್ಮೆ ಧೋನಿಯ ಮೇಲೆ ನೆಟ್ಟಿವೆ. ಪ್ರಸ್ತುತ, ಸಿಎಸ್​ಕೆ ನಾಯಕ ರಾಂಚಿಯಲ್ಲಿದ್ದು, ತಮ್ಮ ವಿಂಟೇಜ್ ಕಾರುಗಳು ಮತ್ತು ಬೈಕುಗಳನ್ನು ಓಡಿಸುವಲ್ಲಿ ನಿರತರಾಗಿದ್ದಾರೆ. ಅವರು ಜೂನ್ ನಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸಿಎಸ್ಕೆ ಪರ ಮತ್ತೊಂದು ಐಪಿಎಲ್ ಋತುವಿನಲ್ಲಿ ಆಡುವ ಬಗ್ಗೆ ಧೋನಿ ಆಶಾವಾದಿಯಾಗಿದ್ದಾರೆ. ಆದಾಗ್ಯೂ, ಅದು ಸಂಭವಿಸಬೇಕಾದರೆ ಅವರ ಮೊಣಕಾಲು ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಬೇಕು.

ಫ್ರಾಂಚೈಸಿಗಳು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಾಗಿರುವುದರಿಂದ ನವೆಂಬರ್ 15 ರೊಳಗೆ ಧೋನಿ ಐಪಿಎಲ್ 2024 ಋತುವಿನಲ್ಲಿ ಸಿಎಸ್​ಕೆ ಪರ ಆಡುವ ಬಗ್ಗೆ ನಮಗೆ ಸ್ಪಷ್ಟ ಚಿತ್ರಣ ಸಿಗಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Hardik Pandya & Natasa Stankovic: ಹಾರ್ದಿಕ್​ ಪಾಂಡ್ಯಗೆ ಕೈ ಕೊಟ್ಟರೇ ಪತ್ನಿ ನತಾಶಾ!

Hardik Pandya & Natasa Stankovic: ಹಾರ್ದಿಕ್‌ ಮತ್ತು ನತಾಶಾ ಕಳೆದ 2020ರಲ್ಲೇ ರಿಜಿಸ್ಟರ್‌ ರೀತಿಯಲ್ಲಿ ವಿವಾಹವಾಗಿದ್ದರು. ಈ ಜೋಡಿಗೆ ಒಬ್ಬ ಪುತ್ರನಿದ್ದಾನೆ. ಈತನ ಹೆಸರು ಅಗಸ್ತ್ಯ. ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್‌ ಸಂಪ್ರದಾಯದಂತೆ ಹಾರ್ದಿಕ್‌ ಮತ್ತು ನತಾಶಾ ಮತ್ತೊಮ್ಮೆ ಅದ್ದೂರಿಯಾಗಿ ಪುನರ್‌ ವಿವಾಹವಾಗಿದ್ದರು.

VISTARANEWS.COM


on

Hardik Pandya & Natasa Stankovic
Koo

ಮುಂಬಯಿ: ಟಿ20 ವಿಶ್ವಕಪ್​ ಟೂರ್ನಿಗೆ ಸಜ್ಜಾಗುತ್ತಿರುವಾಗಲೇ ಟೀಮ್​ ಇಂಡಿಯಾದ ಉಪನಾಯಕ, ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ(Hardik Pandya) ಅವರ ಖಾಸಗಿ ಬದುಕಿನಲ್ಲಿ ಬಿರುಕೊಂದು ಮೂಡಿದಂತಿದೆ. ಹೌದು, ಅವರ ಪತ್ನಿ ಸರ್ಬಿಯಾದ ನಟಿ ನತಾಶಾ ಸ್ಟಾನ್‌ಕೋವಿಕ್‌(Natasa Stankovic) ಅವರು ಪಾಂಡ್ಯ(Hardik Pandya & Natasa Stankovic) ಅವರಿಂದ ದೂರವಾಗಲು ಬಯಸಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಹಾರ್ದಿಕ್‌ ಮತ್ತು ನತಾಶಾ ಕಳೆದ 2020ರಲ್ಲೇ ರಿಜಿಸ್ಟರ್‌ ರೀತಿಯಲ್ಲಿ ವಿವಾಹವಾಗಿದ್ದರು. ಈ ಜೋಡಿಗೆ ಒಬ್ಬ ಪುತ್ರನಿದ್ದಾನೆ. ಈತನ ಹೆಸರು ಅಗಸ್ತ್ಯ. ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್‌ ಸಂಪ್ರದಾಯದಂತೆ ಹಾರ್ದಿಕ್‌ ಮತ್ತು ನತಾಶಾ ಮತ್ತೊಮ್ಮೆ ಅದ್ದೂರಿಯಾಗಿ ಪುನರ್‌ ವಿವಾಹವಾಗಿದ್ದರು. ಕುಟುಂಬಸ್ಥರು ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಇವರ ವಿವಾಹ ಸಮಾರಂಭದಲ್ಲಿ ಕೊಹ್ಲಿ-ಅನುಷ್ಕಾ, ರಾಹುಲ್‌-ಅಥಿಯಾ, ರಾಕಿಣಗ್​ ಸ್ಟಾರ್ ಯಶ್​ ಸೇರಿ ಹಲವು ಗಣ್ಯರೂ ಭಾಗಿಯಾಗಿದ್ದರು.


ಅಂದು ಗೌನ್‌ ರೀತಿಯ ಬಿಳಿ ಉಡುಗೆಯನ್ನುಟ್ಟ ನತಾಶಾ ಮತ್ತು ಕಪ್ಪು ಸೂಟ್‌ನಲ್ಲಿ ಕಾಣಿಸಿಕೊಂಡ ಹಾರ್ದಿಕ್‌ ಪಾಂಡ್ಯಾ ವಿವಾಹ ವೇದಿಕೆಯ ಕಡೆ ಡ್ಯಾನ್ಸ್‌ ಮಾಡಿಕೊಂಡು ಬರುವ ವಿಡಿಯೋವೊಂದು ಭರ್ಜರಿ ಸದ್ದು ಮಾಡಿತ್ತು. ಇದೀಗ ಜೋಡಿ ಬೇರೆಯಾಗುತ್ತಿದ್ದಾರೆ ಎನ್ನಲಾಗಿದೆ. ಈ ಅನುಮಾನ ಹುಟ್ಟಿಕೊಳ್ಳಲು ಕಾರಣವೂ ಇದೆ.


ಇದನ್ನೂ ಓದಿ Hardik Pandya : ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್​​ನಲ್ಲಿ ಮತ್ತೆ ವಿಫಲ; ಬೆಂಡೆತ್ತಿದ ಅಭಿಮಾನಿಗಳು

ಹಾರ್ದಿಕ್​ ಪಾಂಡ್ಯ ಕಳೆದ 2 ಆವೃತ್ತಿಯಲ್ಲಿ ಗುಜರಾತ್​ ಟೈಟಾನ್ಸ್​ ತಂಡವನ್ನು ಮುನ್ನಡೆಸಿದ್ದರು. ಈ ವೇಳೆ ಪ್ರತಿ ಪಂದ್ಯದಲ್ಲಿಯೂ ನತಾಶಾ ಸ್ಟೇಡಿಯಂಗೆ ಬಂದು ಗಂಡನಿಗೆ ಬೆಂಬಲ ಸೂಚಿಸಿದ್ದರು. ಆದರೆ ಈ ಬಾರಿ ಮುಂಬೈ ತಂಡವನ್ನು ಮುನ್ನಡೆಸಿ ವೇಳೆ ಒಮ್ಮೆಯೂ ಕೂಡ ನತಾಶಾ ಪಂದ್ಯ ನೋಡಲು ಸ್ಟೇಡಿಯಂಗೆ ಬಂದಿರಲಿಲ್ಲ. ಇದೀಗ ನತಾಶಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ತಮ್ಮ ಹೆಸರನ್ನು ಕೂಡ ಬದಲಿಸಿದ್ದಾರೆ ಹೀಗಾಗಿ ಈ ಜೋಡಿ ಬೇರ್ಪಡಲಿದ್ದಾರೆ ಎನ್ನಲಾಗಿದೆ.


ಹೌದು, ನತಾಶಾ ಸ್ಟಾಂಕೋವಿಕ್ ಪಾಂಡ್ಯ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಹೆಸರನ್ನು ಹೊಂದಿದ್ದರು. ಆದರೆ, ಇದೀಗ ಪಾಂಡ್ಯ ಅವರ ಹೆಸರನ್ನು ತೆಗೆದುಹಾಕಿದ್ದಾರೆ. ಮಾರ್ಚ್ 4 ರಂದು ನತಾಶಾ ಅವರ ಹುಟ್ಟುಹಬ್ಬವಿತ್ತು ಮತ್ತು ಆ ದಿನ ಹಾರ್ದಿಕ್ ಕೂಡ ಯಾವುದೇ ಪೋಸ್ಟ್ ಹಾಕಿಲ್ಲ. ನತಾಶಾ ಅವರು ಅಗಸ್ತ್ಯನೊಂದಿಗೆ ಇರುವ ಪೋಸ್ಟ್ ಹೊರತುಪಡಿಸಿ ತನ್ನ ಮತ್ತು ಹಾರ್ದಿಕ್ ಜತೆಗಿರುವ ಇತ್ತೀಚಿನ ಎಲ್ಲ ಪೋಸ್ಟ್‌ಗಳನ್ನು ತೆಗೆದುಹಾಕಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಹಾರ್ದಿಕ್ ಮತ್ತು ನತಾಶಾ ನಡುವೆ ಬಿರುಕು ಮೂಡಿರುವುದು ನಿಜ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.


ರೋಹಿತ್ ಶರ್ಮಾರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿ ತಾವೇ ತಂಡ ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ ಈ ಬಾರಿ ಅಭಿಮಾನಿಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಜತೆಗೆ ಪಾಂಡ್ಯ ಕೆಟ್ಟ ನಾಯಕತ್ವದಿಂದ ಮುಂಬೈ ಹಿಂದೆದು ಕಾಣದ ಘೋರ ವೈಫಲ್ಯ ಕಂಡಿತ್ತು ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಈ ಬಾರಿ ಆಡಿದ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಿಯಾಯಿತು.

Continue Reading

ಕ್ರೀಡೆ

RR vs SRH: ಹೈದರಾಬಾದ್-ರಾಜಸ್ಥಾನ್ ನಡುವಣ ಇಂದಿನ ಕ್ವಾಲಿಫೈಯರ್​ ಪಂದ್ಯಕ್ಕೆ ಮಳೆ ಕಾಟ ಇದೆಯೇ?

RR vs SRH: ಈ ಬಾರಿಯ ಲೀಗ್​ನಲ್ಲಿ ಇತ್ತಂಡಗಳು ಒಂದು ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಅತ್ಯಂತ ರೋಚವಾಗಿ ಸಾಗಿದ ಈ ಪಂದ್ಯವನ್ನು ಸನ್​ರೈಸರ್ಸ್​ ಹೈದರಾಬಾದ್​ 1 ರನ್​ ಅಂತರದಿಂದ ಗೆದ್ದು ಬೀಗಿತ್ತು. ಭುವನೇಶ್ವರ್​ ಕುಮಾರ್​ ಅಂತಿಮ ಎಸೆತದಲ್ಲಿ ರೋಮ್ಮನ್​ ಪೋವೆಲ್​ ಅವರನ್ನು ಎಲ್​ಬಿಡ್ಲ್ಯು ಮಾಡುವ ಮೂಲಕ ಈ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು

VISTARANEWS.COM


on

RR vs SRH
Koo

ಚೆನ್ನೈ: ಕೆಕೆಆರ್​ ವಿರುದ್ಧದ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಸೋಲು ಕಂಡ ಸನ್​ರೈಸರ್ಸ್​ ಹೈದರಾಬಾದ್(RR vs SRH)​ ಮತ್ತು ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಗೆಲುವು ಕಂಡ ರಾಜಸ್ಥಾನ್​ ರಾಯಲ್ಸ್​ ತಂಡಗಳು ಇಂದು ನಡೆಯುವ ದ್ವಿತೀಯ ಕ್ವಾಲಿಫೈಯರ್(SRH Vs RR Qualifier 2)​ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಯಾರೇ ಗೆದ್ದರೂ ಕೂಡ ಇದೇ ಮೈದಾನದಲ್ಲಿ ಭಾನುವಾರ ನಡೆಯುವ ಫೈನಲ್​ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ. ಈ ತಂಡ ಯಾವುದು ಎನ್ನುವುದು ಇಂದಿನ ಪಂದ್ಯದ ಕುತೂಹಲ.

ಹವಾಮಾನ ವರದಿ


ಚೆನ್ನೈನಲ್ಲಿ(MA Chidambaram Stadium Weather Report) ಇಂದು ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್​​ ಮತ್ತು ರಾತ್ರಿಯಲ್ಲಿ ಕನಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಆಗಿದೆ. ಸಮುದ್ರ ಭಾಗದಲ್ಲಿ ಈ ಸ್ಟೇಡಿಯಂ ಇರುವ ಕಾರಣ ರಾತ್ರಿ ಇಲ್ಲಿ ಮಂಜು ಕೂಡ ಬೀಳಲಿದೆ. ಪಂದ್ಯಕ್ಕೆ ಯಾವುದೇ ಮಳೆಯ ಭೀತಿ ಇಲ್ಲ. ಸಂಪೂರ್ಣವಾಗಿ ಪಂದ್ಯ ಸಾಗಲಿದೆ.


ಒಂದೊಮ್ಮೆ ಪಂದ್ಯಕ್ಕೆ ಮಳೆಯಿಂದ ಅಡಚಣೆಯಾದರೆ 120 ನಿಮಿಷಗಳ (2 ಗಂಟೆ) ಅವಧಿಗೆ ಪಂದ್ಯವನ್ನು ವಿಸ್ತರಿಸಬಹುದಾಗಿದೆ. ಆಗ 9.40ಕ್ಕೆ ಪಂದ್ಯ ಆರಂಭವಾಗುವುದಿದ್ದರೂ ಓವರ್‌ಗಳಲ್ಲಿ ಯಾವುದೇ ಕಡಿತ ಇರುವುದಿಲ್ಲ. ಸ್ಪಷ್ಟ ಫ‌ಲಿತಾಂಶಕ್ಕೆ ತಲಾ 5 ಓವರ್‌ಗಳ ಆಟ ನಡೆಯಬೇಕಿದೆ. ಹೆಚ್ಚುವರಿ ಅವಧಿಯಲ್ಲೂ ಇದು ಸಾಧ್ಯವಾಗದೇ ಹೋದರೆ ಲೀಗ್‌ ಹಂತದ ಅಂಕಪಟ್ಟಿಯಲ್ಲಿ ಮೇಲಿದ್ದ ತಂಡವನ್ನು ಜಯಶಾಲಿ ಎಂದು ಘೋಷಿಸಲಾಗುತ್ತದೆ. ಇದರ ಲಾಭ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ ಸಿಗಲಿದೆ. ಹೈದರಾಬಾದ್​ ತಂಡ ಲೀಗ್​ ಹಂತದಲ್ಲಿ ದ್ವಿತೀಯ ಸ್ಥಾನಿಯಾಗಿತ್ತು.

ಇದನ್ನೂ ಓದಿ IPL 2024 : ಅಭಿಮಾನಿಗಳ ದುರಂಹಕಾರವೇ ಆರ್​​ಸಿಬಿ ಸೋಲಿಗೆ ಕಾರಣ ಎಂದ ಮಾಜಿ ಕ್ರಿಕೆಟಿಗ

ಬಲಾಬಲ


ಉಭಯ ತಂಡಗಳು ಇದುವರೆಗಿನ ಐಪಿಎಲ್ ಪಂದ್ಯದಲ್ಲಿ ಒಟ್ಟು 19 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಹೈದರಾಬಾದ್​ 10, ರಾಜಸ್ಥಾನ್​ 9 ಪಂದ್ಯಗಳನ್ನು ಗೆದ್ದಿದೆ. ಈ ಲೆಕ್ಕಾಚಾರದಲ್ಲಿ ಹೈದರಾಬಾದ್​ ಬಲಿಷ್ಠವಾಗಿದೆ. ಜತೆಗೆ ಈ ಬಾರಿ ತಂಡ ಬಲಿಷ್ಠವಾಗಿಯೂ ಗೋಚರಿಸಿದೆ.

ಲೀಗ್​ನಲ್ಲಿ 1 ರನ್​ ಗೆಲುವು


ಈ ಬಾರಿಯ ಲೀಗ್​ನಲ್ಲಿ ಇತ್ತಂಡಗಳು ಒಂದು ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಅತ್ಯಂತ ರೋಚವಾಗಿ ಸಾಗಿದ ಈ ಪಂದ್ಯವನ್ನು ಸನ್​ರೈಸರ್ಸ್​ ಹೈದರಾಬಾದ್​ 1 ರನ್​ ಅಂತರದಿಂದ ಗೆದ್ದು ಬೀಗಿತ್ತು. ಭುವನೇಶ್ವರ್​ ಕುಮಾರ್​ ಅಂತಿಮ ಎಸೆತದಲ್ಲಿ ರೋಮ್ಮನ್​ ಪೋವೆಲ್​ ಅವರನ್ನು ಎಲ್​ಬಿಡ್ಲ್ಯು ಮಾಡುವ ಮೂಲಕ ಈ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಈ ಸೋಲಿಗೆ ರಾಜಸ್ಥಾನ್​ ಕ್ವಾಲಿಫೈಯರ್​ ಪಂದ್ಯದಲ್ಲಿ ಸೇಡು ತೀರಿಸಲು ಪಣ ತೊಟ್ಟಿದೆ.

ಪಿಚ್​ ರಿಪೋರ್ಟ್​


ಚೆನ್ನೈಯ ಎಂ.ಎ.ಚಿದಂಬರಂ ಮೈದಾನ ಪಿಚ್​ ನಿಧಾನಗತಿಯಿಂದ ಕೂಡಿದೆ. ಸ್ಪಿನ್‌ ಸ್ನೇಹಿಯಾಗಿದ್ದರೂ ಕೂಡ ಈ ಮೈದಾನ ಹೈ ಸ್ಕೋರಿಂಗ್‌ ಪಂದ್ಯ ಕೂಡ ಕಂಡುಬಂದಿದೆ. ಚೆನ್ನೈ ಮತ್ತು ಲಕ್ನೋ ನಡುವಣ ಪಂದ್ಯದಲ್ಲಿ ಚೆನ್ನೈ 210 ರನ್‌ ಬಾರಿಸಿತ್ತು. ಈ ಬೃಹತ್​ ಮೊತ್ತವನ್ನು ಲಕ್ನೋ ತಂಡ 19.3 ಓವನ್‌ನಲ್ಲೇ ಗುರಿ ತಲುಪಿತ್ತು. ಹೀಗಾಗಿ ಪಿಚ್​ ವರ್ತನೆಯನ್ನು ಸ್ಪಷ್ಟವಾಗಿ ಹೇಳುವುದು ಕೊಂಚ ಕಷ್ಟವಾಗಿದೆ. ಮಂಜಿನ ಕಾಟ ಇರುವ ಕಾರಣ ಟಾಸ್‌ ಗೆಲ್ಲುವ ತಂಡ ಬೌಲಿಂಗ್‌ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚು.

Continue Reading

ಪ್ರಮುಖ ಸುದ್ದಿ

T20 Cricket : ಬಾಂಗ್ಲಾದೇಶ ತಂಡವನ್ನು ಸೋಲಿಸಿ ಇತಿಹಾಸ ನಿರ್ಮಿಸಿದ ಕ್ರಿಕೆಟ್​ ಶಿಶು ಅಮೆರಿಕ

T20 Cricket: ಹ್ಯೂಸ್ಟನ್​ನಲ್ಲಿ ನಡೆದ 3 ಪಂದ್ಯಗಳ ಟಿ 20 ಐ ಸರಣಿಯಲ್ಲಿ ಯುಎಸ್ಎ ಸತತ ಎರಡನೇ ಬಾರಿಗೆ ಬಾಂಗ್ಲಾದೇಶ ತಂಡಕ್ಕೆ ಆಘಾತ ಕೊಟ್ಟಿತು. ಟಿ 20 ವಿಶ್ವಕಪ್​​ಗೆ ಮುಂಚಿತವಾಗಿ ಏಷ್ಯಾದ ತಂಡಕ್ಕೆ ಎಚ್ಚರಿಕೆ ಕೊಟ್ಟಿತು. ಆ ತಂಡ ತನ್ನ ತೂಕವನ್ನು ಮೀರಿ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು. ಪ್ರೈರಿ ವ್ಯೂ ಕ್ರಿಕೆಟ್ ಕಾಂಪ್ಲೆಕ್ಸ್ ನಲ್ಲಿ ನಡೆದ ಪಂದ್ಯದಲ್ಲಿ 145 ರನ್ ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ 19.3 ಓವರ್ ಗಳಲ್ಲಿ 138 ರನ್ ಗಳಿಗೆ ಆಲೌಟ್ ಆಗಿ ಮುಖಭಂಗ ಎದುರಿಸಿತು.

VISTARANEWS.COM


on

t20 cricket
Koo

ಬೆಂಗಳೂರು: 2024 ರ ಟಿ 20 ವಿಶ್ವಕಪ್​ಗೆ ಕೆಲವೇ ದಿನಗಳ ಮೊದಲು ನಡೆದ ಐತಿಹಾಸಿಕ ಟಿ20 ಕ್ರಿಕೆಟ್​ ಸರಣಿಯ (T20 Cricket) ಎರಡನೇ ಪಂದ್ಯದಲ್ಲಿ ಯುಎಸ್ಎ ತಂಡವು ಪೂರ್ಣ ಸಾಮರ್ಥ್ಯದ ಬಾಂಗ್ಲಾದೇಶ ತಂಡವನ್ನು ಆರು ರನ್​ಗಳಿಂದ ಸೋಲಿಸಿದೆ. ಈ ಮೂಲಕ ಕ್ರಿಕೆಟ್​ ಶಿಶು ಅಮೆರಿಕ ಐತಿಹಾಸಿಕ ಸಾಧನೆ ಮಾಡಿದೆ. 3 ಪಂದ್ಯಗಳ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಿಂದ ಗೆದ್ದುಕೊಂಡಿದೆ. ಮೊದಲ ಪಂದ್ಯದಲ್ಲಿ ಸೋತಿದ್ದ ಬಾಂಗ್ಲಾದೇಶ ಈ ಪಂದ್ಯದಲ್ಲಿ ಭರ್ಜರಿ ಪೈಪೋಟಿ ನೀಡಿದ ಹೊರತಾಗಿಯೂ ಗೆಲುವು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ.

ಹ್ಯೂಸ್ಟನ್​ನಲ್ಲಿ ನಡೆದ 3 ಪಂದ್ಯಗಳ ಟಿ 20 ಐ ಸರಣಿಯಲ್ಲಿ ಯುಎಸ್ಎ ಸತತ ಎರಡನೇ ಬಾರಿಗೆ ಬಾಂಗ್ಲಾದೇಶ ತಂಡಕ್ಕೆ ಆಘಾತ ಕೊಟ್ಟಿತು. ಟಿ 20 ವಿಶ್ವಕಪ್​​ಗೆ ಮುಂಚಿತವಾಗಿ ಏಷ್ಯಾದ ತಂಡಕ್ಕೆ ಎಚ್ಚರಿಕೆ ಕೊಟ್ಟಿತು. ಆ ತಂಡ ತನ್ನ ತೂಕವನ್ನು ಮೀರಿ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು. ಪ್ರೈರಿ ವ್ಯೂ ಕ್ರಿಕೆಟ್ ಕಾಂಪ್ಲೆಕ್ಸ್ ನಲ್ಲಿ ನಡೆದ ಪಂದ್ಯದಲ್ಲಿ 145 ರನ್ ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ 19.3 ಓವರ್ ಗಳಲ್ಲಿ 138 ರನ್ ಗಳಿಗೆ ಆಲೌಟ್ ಆಗಿ ಮುಖಭಂಗ ಎದುರಿಸಿತು.

ಕೆಕೆಆರ್​​ನ ಮಾಜಿ ವೇಗದ ಬೌಲರ್ ಅಲಿ ಖಾನ್ ಅವರು ಶಕೀಬ್ ಅಲ್ ಹಸನ್ ಸೇರಿದಂತೆ 3 ವಿಕೆಟ್​ಗಳನ್ನು ಕಬಳಿಸುವ ಮೂಲಕ ಅಮೆರಿಕದ ತಂಡಕ್ಕೆ ಐತಿಹಾಸಿಕ ಸರಣಿ ಗೆಲುವು ಸಾಧಿಸಲು ಸಹಾಯ ಮಾಡಿದರು. ಜೂನ್ 1 ರಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯ ವಹಿಸಲಿರುವ ಟಿ 20 ವಿಶ್ವಕಪ್​​ಗೆ ಮುಂಚಿತವಾಗಿ ಯುಎಸ್ಎ ರಾಷ್ಟ್ರೀಯ ತಂಡಕ್ಕೆ ಈ ಗೆಲುವು ದೊಡ್ಡ ಉತ್ತೇಜನವಾಗಿದೆ.

ಇದನ್ನೂ ಓದಿ: IPL 2024 : ಅಭಿಮಾನಿಗಳ ದುರಂಹಕಾರವೇ ಆರ್​​ಸಿಬಿ ಸೋಲಿಗೆ ಕಾರಣ ಎಂದ ಮಾಜಿ ಕ್ರಿಕೆಟಿಗ

ಮೇ 21 ರ ಮಂಗಳವಾರ ನಡೆದ ಮೊದಲ ಟಿ 20 ಪಂದ್ಯದಲ್ಲಿ 154 ರನ್​ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ನಂತರ ಯುಎಸ್ಎ ತಂಡವು ಎರಡನೇ ಟಿ 20 ಪಂದ್ಯವನ್ನು ಸಾಕಷ್ಟು ಆತ್ಮವಿಶ್ವಾಸದಿಂದ ಆಡಿತು. ಹ್ಯೂಸ್ಟನ್ ನಲ್ಲಿ ನಿಧಾನಗತಿಯ ಪಿಚ್ ನಲ್ಲಿ ಮೊತ್ತವನ್ನು ರಕ್ಷಿಸಿಕೊಂಡಿತು..

ಈ ಫಲಿತಾಂಶ ತುಂಬಾ ನಿರಾಶಾದಾಯಕವಾಗಿದೆ. ಆದರೆ ಮೂರನೇ ಪಂದ್ಯದಲ್ಲಿ ತಿರುಗೇಟು ಕೊಡುತ್ತೇವೆ. ಇದು ಕೌಶಲದ ಬಗ್ಗೆ ಅಲ್ಲ, ನಾವು ನಮ್ಮ ಮನಸ್ಥಿತಿಯನ್ನು ಬದಲಾಯಿಸಬೇಕಾಗಿದೆ” ಎಂದು ಬಾಂಗ್ಲಾದೇಶದ ನಾಯಕ ನಜ್ಮುಲ್ ಹುಸೇನ್ ಶಾಂಟೊ ಹೇಳಿದರು.

Continue Reading

ಪ್ರಮುಖ ಸುದ್ದಿ

IPL 2024 : ಅಭಿಮಾನಿಗಳ ದುರಂಹಕಾರವೇ ಆರ್​​ಸಿಬಿ ಸೋಲಿಗೆ ಕಾರಣ ಎಂದ ಮಾಜಿ ಕ್ರಿಕೆಟಿಗ

IPL 2024: ಆರ್​ಸಿಬಿ ಅಭಿಮಾನಿಗಳ ತಮ್ಮ ವಿರುದ್ದ ಗೂಂಡಾಗಿರಿ ಮಾಡಿರುವ ಬಗ್ಗೆ ಸಿಎಸ್​​ಕೆ ಅಭಿಮಾನಿಗಳು ದೂರು ನೀಡಿದ್ದು. ಇದು ಒಂದು ಹಂತದಲ್ಲಿ ಎಕ್ಸ್ ನಲ್ಲಿ ಟ್ರೆಂಡಿಂಗ್ ಆಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು, ಭಾರತದ ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ಆರ್​ಸಿಬಿಯ ಅಭಿಮಾನಿಗಳ ದುರಂಹಕಾರವೇ ಪ್ಲೇಆಫ್​ನ ಸೋಲಿಗೆ ಕಾರಣ ಎಂದು ಹೇಳಿದ್ದಾರೆ. ಆರ್​ಸಿಬಿ ಅಭಿಮಾನಿಗಳು ಆದಷ್ಟು ಮೌನವಾಗಿರಬೇಕು. ಸಿಎಸ್​ಕೆ ತಂಡವನ್ನು ಸೋಲಿಸಿದ ನಂತರ ಅನಗತ್ಯ ವೀಡಿಯೊ ಪೋಸ್ಟ್ ಮಾಡಬಾರದಾಗಿತ್ತು ಎಂದು ಹೇಳಿದ್ದಾರೆ.

VISTARANEWS.COM


on

IPL 2024
Koo

ಬೆಂಗಳೂರು: ಐಪಿಎಲ್​ 17ನೇ (IPL 2024 ) ಆವೃತ್ತಿಯ ಲೀಗ್ ಹಂತದ ಕೊನೆಯಲ್ಲಿ ಸತತ ಆರು ಪಂದ್ಯಗಳನ್ನು ಗೆದ್ದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಹಂತಕ್ಕೆ ಏರಿತ್ತು. ಎಲಿಮಿನೇಟರ್ ನಲ್ಲಿ ರಾಜಸ್ಥಾನ್​ ರಾಯಲ್ಸ್ ತಂಡವನ್ನು ಸೋಲಿಸಿ ಕ್ವಾಲಿಫೈಯರ್ 2 ಗೆ ಪ್ರವೇಶಿಸುವ ಭರವಸೆ ಹೊಂದಿತ್ತು. ಆದಾಗ್ಯೂ, ಸಂಜು ಸ್ಯಾಮ್ಸನ್ ನೇತೃತ್ವದ ತಂಡವು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಫಾಫ್​ ಡು ಪ್ಲೆಸಿಸ್ ಬಳಗವನ್ನು ಮಣಿಸಿತು. ನಾಲ್ಕು ವಿಕೆಟ್​ಗಳಿಂದ ಸೋತ ಆರ್​ಸಿಬಿ ನಿರಾಸೆಗೆ ಒಳಗಾಯಿತು. ಇದರೊಂದಿಗೆ ತಮ್ಮ ಮೊದಲ ಐಪಿಎಲ್ ಟ್ರೋಫಿಗಾಗಿ ಆರ್​ಸಿಬಿಯ ಕಾಯುವಿಕೆ ಮುಂದುವರಿಯಿತು. ಆದರೆ, ಆರ್​​ಸಿಬಿ ಈ ಸೋಲಿಗೆ ದುರಂಹಕಾರವೇ ಕಾರಣ ಎಂಬುದಾಗಿ ತಮಿಳುನಾಡು ಮೂಲದ ಮಾಜಿ ಆಟಗಾರ ಹೇಳಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲ್ಲಲೇಬೇಕಾದ ಲೀಗ್​​ ಪಂದ್ಯದಲ್ಲಿ ಆರ್​ಸಿಬಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿತು. ಹೀಗಾಗಿ ಪ್ಲೇಆಫ್ಗೆ ಅರ್ಹತೆ ಪಡೆಯಿತು. ಇದರೊಂದಿಗೆ ಋತುರಾಜ್ ಗಾಯಕ್ವಾಡ್ ನೇತೃತ್ವದ ತಂಡವು ನಿರಾಶಾದಾಯಕವಾಗಿ ಋತುವನ್ನು ಕೊನೆಗೊಳಿಸಿತು. ಏತನ್ಮಧ್ಯೆ, ಪಂದ್ಯದ ನಂತರ, ಸಿಎಸ್​ಕೆ ಅಭಿಮಾನಿಗಳು ದೂರೊಂದನ್ನು ನೀಡಿದ್ದರು. ಆರ್​ಸಿಬಿ ಅಭಿಮಾನಿಗಳ ತಮ್ಮ ವಿರುದ್ದ ಗೂಂಡಾಗಿರಿ ಮಾಡಿರುವ ಬಗ್ಗೆ ದೂರು ನೀಡಿದ್ದು. ಇದು ಒಂದು ಹಂತದಲ್ಲಿ ಎಕ್ಸ್ ನಲ್ಲಿ ಟ್ರೆಂಡಿಂಗ್ ಆಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು, ಭಾರತದ ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ಆರ್​ಸಿಬಿಯ ಅಭಿಮಾನಿಗಳ ದುರಂಹಕಾರವೇ ಪ್ಲೇಆಫ್​ನ ಸೋಲಿಗೆ ಕಾರಣ ಎಂದು ಹೇಳಿದ್ದಾರೆ. ಆರ್​ಸಿಬಿ ಅಭಿಮಾನಿಗಳು ಆದಷ್ಟು ಮೌನವಾಗಿರಬೇಕು. ಸಿಎಸ್​ಕೆ ತಂಡವನ್ನು ಸೋಲಿಸಿದ ನಂತರ ಅನಗತ್ಯ ವೀಡಿಯೊ ಪೋಸ್ಟ್ ಮಾಡಬಾರದಾಗಿತ್ತು ಎಂದು ಹೇಳಿದ್ದಾರೆ.

ಸಿಎಸ್​ಕೆ ತಂಡವನ್ನು ಸೋಲಿಸಿದ ನಂತರ ಫ್ರ್ಯಾಂಚೈಸಿಯ ಆಟಗಾರರು ಮತ್ತು ಅಭಿಮಾನಿಗಳ ಜಂಭ ಹೆಚ್ಚಾಗಿತ್ತು. ಅದುವೇ ಎಲಿಮಿನೇಟರ್ ನಲ್ಲಿ ಆರ್​ಆರ್​​ ವಿರುದ್ಧ ಸೋಲಿಗೆ ಕಾರಣ ಎಂದು 64 ವರ್ಷದ ಆಟಗಾರ ಹೇಳಿದ್ದಾರೆ.

ಇದನ್ನೂ ಓದಿ: IPL 2024 : ಐಪಿಎಲ್​ನಲ್ಲಿ ಕಳಪೆ ದಾಖಲೆಯೊಂದನ್ನು ಸೃಷ್ಟಿಸಿ ನಿರ್ಗಮಿಸಿದ ಆರ್​ಸಿಬಿ

“ಜೀವನದಲ್ಲಿ ನೀವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವಾಗ ನಿಮ್ಮ ಬಾಯಿ ಮುಚ್ಚಿಕೊಂಡು ಮುಂದುವರಿಯಿರಿ. ನೀವು ಮಾಡುತ್ತಿರುವ ಯಾವುದೇ ಕೆಲಸದ ವೇಳೆ ಗದ್ದಲ ಮಾಡಿದಾಗ ಆ ಕೆಲಸವನ್ನು ಉತ್ತಮವಾಗಿ ಮಾಡಲು ಸಾಧ್ಯವಿಲ್ಲ. ಆರ್​​ಸಿಬಿ ಅಭಿಮಾನಿಗಳು ಅನಗತ್ಯ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದರು. ಅತಿಯಾಗಿ ತೋರಿಸುತ್ತಿದ್ದರು. ಅದಕ್ಕಾಗಿಯೇ ಅಶ್ವಿನ್ ಮುಂದಿನ ಪಂದ್ಯದಲ್ಲಿ ಆರ್​ಸಿಬಿಯ ಜಂಭ ಇಳಿಸಿದರು. ಅದಕ್ಕಾಗಿಯೇ ಕ್ರಿಕೆಟ್​​ನಲ್ಲಿ ನಿಮ್ಮ ಬಾಯಿ ಮುಚ್ಚಿ ಆಡಬೇಕು ಎಂದು ಹೇಳುವುದು ಎಂದು ಶ್ರೀಕಾಂತ್ ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಹೇಳಿದ್ದಾರೆ.

ಟೀಕೆಗಳನ್ನು ಸ್ವೀಕರಿಸಿ: ಕ್ರಿಸ್ ಶ್ರೀಕಾಂತ್

ಆರ್​ಸಿಬಿ ಆಟಗಾರರು ಚಪ್ಪಾಳೆಗಳನ್ನು ಪಡೆದಂತೆ ಟೀಕೆಗಳನ್ನು ಸ್ವೀಕರಿಸುವಂತೆ ಶ್ರೀಕಾಂತ್ ಕೋರಿಕೊಂಡರು. ತಂಡವು ಸತತವಾಗಿ ಆರು ಗೆಲುವುಗಳನ್ನು ಅತಿಯಾಗಿ ಸಂಭ್ರಮಿಸಲು ಪ್ರಾರಂಭಿಸಿತು. ಅಗತ್ಯವಿಲ್ಲದ ಆಕ್ರಮಣಶೀಲತೆಯನ್ನು ತೋರಿಸಿತು ಎಂದು ಅವರು ಶ್ರೀಕಾಂತ್​ ಹೇಳಿದರು.

ನೀವು ಉತ್ತಮವಾಗಿ ಆಡಿದ್ದರೆ, ಅಭಿನಂದನೆಗಳು, ನೀವು ಕಳಪೆಯಾಗಿ ಆಡಿದ್ದರೆ ಟೀಕೆಗಳನ್ನು ಸ್ವೀಕರಿಸಿ. ನೀವು ಎಂದಿಗೂ ಬಾಯಿ ತೆರೆದು ಆಕ್ರಮಣಶೀಲತೆಯನ್ನು ತೋರಿಸಬಾರದು. ಸಿಎಸ್​​ಕೆ ಮತ್ತು ಮುಂಬೈ ಎರಡೂ ಪ್ರಶಸ್ತಿಗಳನ್ನು ಗೆದ್ದಿವೆ. ಆದರೆ ಎಂದಿಗೂ ಸದ್ದು ಮಾಡಿಲ್ಲ. ಆದರೆ ಆರ್​ಸಿಬಿ ಆರು ಪಂದ್ಯಗಳನ್ನು ಗೆದ್ದಿತು. ಅವರು ಅರ್ಹತೆ ಪಡೆದ ತಕ್ಷಣ ಅವರು ಔಟ್ ಆಗಿದ್ದಾರೆ “ಎಂದು ಅವರು ಹೇಳಿದರು.

Continue Reading
Advertisement
lok sabha election 2024 supreme court
ಪ್ರಮುಖ ಸುದ್ದಿ3 mins ago

Lok Sabha Election 2024: ಬೂತ್‌ವಾರು ಮತದಾನ ವಿವರ ನೀಡಬೇಕಿಲ್ಲ: ಸುಪ್ರೀಂ ಕೋರ್ಟ್‌

meghana Goankar
ಸಿನಿಮಾ8 mins ago

Meghana Gaonkar : ಮೇಘನಾ ಗಾಂವ್ಕರ್​ಗೆ ಖುಷಿಗೆ ʼದಿ ಜಡ್ಜ್‌ಮೆಂಟ್‌ʼ ಕಾರಣ, ಯಾಕೆ ಗೊತ್ತಾ?

Hardik Pandya & Natasa Stankovic
ಕ್ರೀಡೆ20 mins ago

Hardik Pandya & Natasa Stankovic: ಹಾರ್ದಿಕ್​ ಪಾಂಡ್ಯಗೆ ಕೈ ಕೊಟ್ಟರೇ ಪತ್ನಿ ನತಾಶಾ!

Sandalwood Movie
ಪ್ರಮುಖ ಸುದ್ದಿ28 mins ago

Sandalwood Movie : ಸಿಂಹಗುಹೆಯಲ್ಲಿ ವಿಡಿಯೋ ಪೆನ್ ಡ್ರೈವ್ ಸದ್ದು!

Bank fraud Scam in Urban Co operative Bank of Karwar
ಕರ್ನಾಟಕ56 mins ago

Bank fraud: ಕಾರವಾರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ‌ ಹಗರಣ! 54 ಸಾವಿರ ಕೋಟಿ ರೂ. ಗುಳುಂ; ಮ್ಯಾನೇಜರ್ ಸಾವಿಂದ ಹೊರಬಂತು ಅವ್ಯವಹಾರ!

RR vs SRH
ಕ್ರೀಡೆ1 hour ago

RR vs SRH: ಹೈದರಾಬಾದ್-ರಾಜಸ್ಥಾನ್ ನಡುವಣ ಇಂದಿನ ಕ್ವಾಲಿಫೈಯರ್​ ಪಂದ್ಯಕ್ಕೆ ಮಳೆ ಕಾಟ ಇದೆಯೇ?

COMEDK UGET Result 2024 Out
ಶಿಕ್ಷಣ1 hour ago

COMEDK UGET Result 2024: ಕಾಮೆಡ್‌ ಕೆ ಫಲಿತಾಂಶ ಪ್ರಕಟ; ಬೆಂಗಳೂರಿನ ಬಾಲಸತ್ಯ ಸರವಣನ್ ಫಸ್ಟ್‌ ರ‍್ಯಾಂಕ್‌

Rotary June Run
ಪ್ರಮುಖ ಸುದ್ದಿ2 hours ago

Rotary June Run: ರೋಟರಿಯಿಂದ ಬೆಂಗಳೂರಿನಲ್ಲಿ ಜೂನ್​ 9ರಂದು ಮ್ಯಾರಥಾನ್​; ವಿಸ್ತಾರ ನ್ಯೂಸ್‌ ಸಹಯೋಗ

Flight Turbulence
ವಿದೇಶ3 hours ago

Flight Turbulence: ನೀವಿದ್ದ ವಿಮಾನ ಪ್ರಕ್ಷುಬ್ಧತೆಗೊಳಗಾದರೆ ಏನು ಮಾಡುತ್ತೀರಿ? ಇಲ್ಲಿದೆ ಪೈಲಟ್‌ಗಳ ಸಲಹೆ

Murder Case in Bengaluru
ಬೆಂಗಳೂರು3 hours ago

Murder Case : ಪ್ರಬುದ್ಧಳ ಕೊಲೆ ಮಾಡಿದ್ದು ತಮ್ಮನ ಸ್ನೇಹಿತನೇ; ಕನ್ನಡಕದ ಹಿಂದಿನ ರಹಸ್ಯ ರಿವೀಲ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ1 day ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು3 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ7 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌