Site icon Vistara News

MS Dhoni : ಐಪಿಎಲ್​ಗೆ ಮೊದಲು ಇಷ್ಟ ದೇವತೆಯ ದರ್ಶನ ಪಡೆದ ಎಂ ಎಸ್ ಧೋನಿ

MS Dhoni

ರಾಂಚಿ: ಚೆನ್ನೈ ಸೂಪರ್​ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೊಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿನಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ. ಅವರೀಗ ಟೂರ್ನಿಗೆ ಸಜ್ಜಾಗಬೇಕಾಗಿದ್ದು ಅದಕ್ಕೆ ಮೊದಲು ತಂಡ ಕಟ್ಟುವ ಕೆಲಸ ಮಾಡಬೇಕಾಗಿದೆ. ಫ್ರಾಂಚೈಸಿ ಈಗ ಕೆಲವು ಆಟಗಾರರನ್ನು ಬಿಡುಗಡೆ ಮಾಡಿದೆ. ಹೀಗಾಗಿ ಹೊಸಬರನ್ನು ಕರೆದುಕೊಂಡು ತಂಡ ಕಟ್ಟುವ ಕೆಲಸ ಮಾಡಬೇಕಾಗಿದೆ. ಹೀಗಾಗಿ ಧೋನಿ ಇನ್ನು ಕ್ರಿಕೆಟ್​ ಕಾರ್ಯದಲ್ಲಿ ಬ್ಯುಸಿಯಅಗಲಿದ್ದಾರೆ. ಏತನ್ಮಧ್ಯೆ ಅವರು ತಮ್ಮ ಇಷ್ಟದೇವತೆಯ ದರ್ಶನ ಮಾಡಿ ಒಳಿತಿಗಾಗಿ ಪ್ರಾರ್ಥನೆ ಮಾಡಿದ್ದಾರೆ.

ಎಂಎಸ್ ಧೋನಿ ಮಾ ಅಂಬೆ ದೇವಸ್ಥಾನಕ್ಕೆ ಭೇಟಿ ನೀಡಿ ತಮ್ಮ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಒಳಿತಾಗಿ ಬೇಡಿಕೊಂಡಿದ್ದಾರೆ. ಭಾರತದ ಮಾಜಿ ನಾಯಕ ತುಂಬಾ ಧಾರ್ಮಿಕ ವ್ಯಕ್ತಿ. ಆದರೆ, ಅವೆಲ್ಲವನ್ನೂ ಅವರು ವೈಯಕ್ತಿಕವಾಗಿಟ್ಟುಕೊಳ್ಳುತ್ತಾರೆ. ಆದಾಗ್ಯೂ, ಸಿಎಸ್ಕೆ ನಾಯಕ ರಾಂಚಿಯ ಮಾ ಅಂಬೆ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುವುದು ಪ್ರತಿವರ್ಷ ಆಚರಣೆಯಾಗಿದೆ. ಐಪಿಎಲ್ 2024 ಋತುವಿಗೆ ಮುಂಚಿತವಾಗಿ ಧೋನಿ ದೇವಾಲಯಕ್ಕೆ ಭೇಟಿ ನೀಡಿದ ವೈರಲ್ ಫೋಟೋವನ್ನು ಅವರ ಸೂಪರ್ ಫ್ಯಾನ್ ಹಂಚಿಕೊಂಡಿದ್ದಾರೆ.

ಪ್ರಸ್ತುತ, ಸಿಎಸ್​​ಕೆ ನಾಯಕ ಜೂನ್​ನಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆ ಒಳಪಟ್ಟಿದ್ದು ಇದೀಗ ಪುನಶ್ಚೇತನಗೊಳ್ಳುತ್ತಿದ್ದಾರೆ. ಧೋನಿ ಐಪಿಎಲ್​ನ ಪೂರ್ಣ ಋತುವಿನಲ್ಲಿ ಆಡುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಸಿಎಸ್ಕೆಯ ಐದನೇ ಟ್ರೋಫಿಯ ನಂತರ ವಿಕೆಟ್ ಕೀಪರ್ ಬ್ಯಾಟರ್​ ತನ್ನ ನಿಷ್ಠಾವಂತ ಅಭಿಮಾನಿಗಳಿಗೆ ಉಡುಗೊರೆಯಾಗಿ ಇನ್ನೂ ಒಂದು ಐಪಿಎಲ್ ಋತುವನ್ನು ಆಡಲು ಬಯಸಿದ್ದಾರೆ. ಅಭಿಮಾನಿಗಳು ಅವರಿಗೆ ಬೇಷರತ್​​ ಪ್ರೀತಿ ಮತ್ತು ಬೆಂಬಲವನ್ನು ತೋರಿಸುತ್ತಿದ್ದಾರೆ.

ಇದನ್ನೂ ಓದಿ : Ajay Jadeja: ಇಶಾನ್​ ಕಿಶನ್​ ವಿಚಾರದಲ್ಲಿ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿದ ಜಡೇಜಾ

ದೇವಾಲಯದ ಭೇಟಿಯ ನಂತರ, ವಿಕೆಟ್ ಕೀಪರ್ ಬ್ಯಾಟರ್​​ ಐಪಿಎಲ್ 2024 ಋತುವಿಗೆ ತಯಾರಿಯನ್ನು ಪ್ರಾರಂಭಿಸಲಿದ್ದಾರೆ. ಕಳೆದ ವರ್ಷದಂತೆ ಧೋನಿ ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ ಅಕಾಡೆಮಿಯಲ್ಲಿ ತರಬೇತಿ ಪಡೆಯಲಿದ್ದಾರೆ. ಈಗಾಗಲೇ, ಸಿಎಸ್​ಕೆ ಸೂಪರ್​ಸ್ಟಾರ್​ ಬ್ಯಾಟಿಂಗ್ ಮಾಡಲು ಪ್ರಾರಂಭಿಸಿದ್ದಾರೆ. ಎಂದಿನಂತೆ ಫಿಟ್ ಆಗಿ ಕಾಣುತ್ತಿದ್ದಾರೆ.

ಪ್ರಮುಖ ಆಟಗಾರರ ಉಳಿಕೆ

ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ 19 ಆಟಗಾರರನ್ನು ಬಿಡುಗಡೆ ಮಾಡದ ಹಾಗೆಯೇ ಉಳಿಸಿಕೊಂಡಿದೆ. ಹಿಂದಿನ ಋತುವಿನಲ್ಲಿ ಐದನೇ ಐಪಿಎಲ್ ಟ್ರೋಫಿಯನ್ನು ಗೆದ್ದ ತಂಡದಲ್ಲಿದ್ದ ಎಂಟು ಆಟಗಾರರನ್ನು ಕೈಬಿಟ್ಟಿದೆ. ಐಪಿಎಲ್ 2024 ರ ಹರಾಜಿಗೆ ಸಜ್ಜಾಗುತ್ತಿರುವಾಗ, ಚೆನ್ನೈ ಮೂಲದ ಫ್ರಾಂಚೈಸಿ ತಮ್ಮ ತಂಡವನ್ನು ಪೂರ್ಣಗೊಳಿಸಲು 31.4 ಕೋಟಿ ರೂಪಾಯಿ ಉಳಿಸಿಕೊಂಡಿದೆ. ಪ್ರಮುಖವಾಗಿ ತಂಡವು ತನ್ನ ಬೌಲಿಂಗ್ ಘಟಕವನ್ನು ಬಲಪಡಿಸಬೇಕಾಗಿದೆ.

ಹೆಡ್​,ರಚಿನ್​ಗೆ 20 ಕೋಟಿ ರೂ. ನೀಡಿ ಖರೀದಿಸಲು ಮುಂದಾದ ಫ್ರಾಂಚೈಸಿ!

ಭಾರತದ ವಿಶ್ವಕಪ್​ ಟ್ರೋಫಿ ಕನಸನ್ನು ಭಗ್ನ ಗೊಳಿಸಿದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರನ್ನು ಐಪಿಎಲ್ 2024 ಆಕ್ಷನ್​ನಲ್ಲಿ 20 ಕೋಟಿ ರೂ. ನೀಡಿ ಖರೀದಿಸಲು ಕೆಲವು ಫ್ರಾಂಚೈಸಿ ಮುಂದೆ ಬರಲಿದೆ ಎಂದು ವರದಿಯಾಗಿದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಆಡಿರುವ ಹೆಡ್​ ಅವರು ಈ ಬಾರಿ ಅತ್ಯಧಿಕ ಮೊತ್ತಕ್ಕೆ ಸೇಲ್​ ಆಗುವುದರಲ್ಲಿ ಯಾವುದೇ ಅನುಮಾನ ಬೇಡ. ಮೂಲಗಳ ಪ್ರಕಾರ ಆರ್​ಸಿಬಿ ತಂಡವೇ ಅವರನ್ನು ಮತ್ತೆ ತಂಡಕ್ಕೆ ಖರೀದಇ ಮಾಡುವ ಎಲ್ಲ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರ ಎಂಬ ಹೆಗ್ಗಳಿಕೆ ಇಂಗ್ಲೆಂಡ್​ ತಂಡದ ಆಲ್​ರೌಂಡರ್​ ಸ್ಯಾಮ್​ ಕರನ್​ ಹಸರಿನಲ್ಲಿದೆ. 16ನೇ ಆವೃತ್ತಿಯಲ್ಲಿ ಅವರನ್ನು ಪಂಜಾಬ್​ ಕಿಂಗ್ಸ್​ ತಂಡ 18.50 ಕೋಟಿ ರೂ.ಗೆ ಖರೀದಿಸಿತ್ತು. ಒಂದೊಮ್ಮೆ ಟ್ರಾವಿಸ್​ ಹೆಡ್​ ಅವರು ಈ ಬಾರಿಯ ಹರಾಜಿನಲ್ಲಿ 20 ಕೋಟಿ.ರೂಗೆ ಸೇಲ್​ ಆದರೆ ಕರನ್ ದಾಖಲೆ ಮುರಿಯಲಿದ್ದಾರೆ.

ಹಾಲಿ ಚಾಂಪಿಯನ್​ ಸಿಎಸ್‌ಕೆ ತಂಡದಿಂದ ಬೆನ್ ಸ್ಟೋಕ್ಸ್​ ಅವರನ್ನು ಬಿಡುಗಡೆ ಮಾಡಿದ ಹಿನ್ನಲೆ ಅವರ ಬದಲು ರವೀನ್ ರವಿಂದ್ರ​ ಅವರನ್ನು ತಂಡಕ್ಕ ಸೆರಿಸಿಕೊಳ್ಳಲು ಫ್ರಾಂಚೈಸಿ ಒಲವು ತೋರಿದೆ ಎನ್ನಲಾಗಿದೆ. ಇವರು ಮಾತ್ರವಲ್ಲದೆ ಅಫಘಾನಿಸ್ತಾನದ ಅಜ್ಮತುಲ್ಲ ಒಮರ್‌ಜಾಯ್‌ ಅವರನ್ನು ಕೂಡ ಖರೀದಿಸುವ ಸಾಧ್ಯತೆಗಳಿವೆ.

Exit mobile version