ಮೊಹಾಲಿ: ಇಶಾನ್ ಕಿಶನ್ (75) ಹಾಗೂ ಸೂರ್ಯಕುಮಾರ್ ಯಾದವ್ (66) ಜೋಡಿಯ ಅಬ್ಬರದ ಬ್ಯಾಟಿಂಗ್ ಪ್ರದರ್ಶನದ ನೆರವು ಪಡೆದ ಮುಂಬಯಿ ಇಂಡಿಯನ್ಸ್ ತಂಡ ಐಪಿಎಲ್ 16ನೇ ಆವೃತ್ತಿಯ ಬುಧವಾರದ ಡಬಲ್ ಹೆಡರ್ನ ಎರಡನೇ ಪಂದ್ಯದಲ್ಲಿ 6 ವಿಕೆಟ್ ಸುಲಭ ಜಯ ದಾಖಲಿಸಿದೆ. ಇದರೊಂದಿಗೆ ಹಾಲಿ ಆವೃತ್ತಿಯ ಐಪಿಎಲ್ನಲ್ಲಿ ಸತತ ಎರಡನೇ ವಿಜಯ ತನ್ನದಾಗಿಸಿಕೊಂಡಿತಲ್ಲದೆ, ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿತು. ಇದೇ ವೇಳೆ ಪಂಜಾಬ್ ಕಿಂಗ್ಸ್ ತಂಡ ತವರಿನ ಅಭಿಮಾನಿಗಳ ಮುಂದೆ ಸೋಲಿನ ನಿರಾಸೆಗೆ ಒಳಗಾಯಿತು.
ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಗ್ರೌಂಡ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬಯಿ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 214 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಬಳಗ 18.5 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 216 ರನ್ ಬಾರಿಸಿ ಗೆಲುವು ಕಂಡಿತು. ಸೋಲಿನೊಂದಿಗೆ ಪಂಜಾಬ್ ತಂಡd ಲಿಯಾಮ್ ಲಿವಿಂಗ್ ಸ್ಟನ್ (82) ಹಾಗೂ ಜಿತೇಶ್ ಶರ್ಮಾ (49) ಜೋಡಿಯ ಶ್ರಮ ವ್ಯರ್ಥಗೊಂಡಿತು.
ಗುರಿ ಬೆನ್ನಟ್ಟಲು ಆರಂಭಿಸಿದ ಮುಂಬಯಿ ತಂಡ ನಾಯಕ ರೋಹಿತ್ ಶರ್ಮಾ ಅವರು ಶೂನ್ಯಕ್ಕೆ ಔಟಾಗುವ ಮೂಲಕ ಹಿನ್ನಡೆ ಅನುಭವಿಸಿತು. ಬಳಿಕ ಬಂದ ಕ್ಯಾಮೆರಾನ್ ಗ್ರೀನ್ ಸ್ವಲ್ಪ ಹೊತ್ತು ಬ್ಯಾಟಿಂಗ್ ಮಾಡಿ 23 ರನ್ಗಳನ್ನು ಗಳಿಸಿದರು. ಈ ವೇಳೆ ರನ್ ಗಳಿಕೆ ವೇಗ ಪಡೆದುಕೊಂಡಿರಲಿಲ್ಲ. ಎರಡನೇ ವಿಕೆಟ್ ಉರುಳಿದ ಬಳಿಕ ಆಡಲು ಬಂದ ಸೂರ್ಯಕುಮಾರ್ ಆರಂಭದಲ್ಲೇ ಅಬ್ಬರಿಸಿದರು. ಪಂಜಾಬ್ ತಂಡದ ದುರ್ಬಲ ಬೌಲಿಂಗ್ ಅನ್ನು ಸದ್ಬಳಕೆ ಮಾಡಿಕೊಂಡರು. 23 ಎಸೆತಗಳಿಗೆ ಅರ್ಧ ಶತಕ ಪೂರೈಸಿದ ಅವರು 31 ಎಸೆತಗಳಲ್ಲಿ 8 ಫೋರ್, 2 ಸಿಕ್ಸರ್ ಸಮೇತ 66 ರನ್ ಬಾರಿಸಿತು. ಅದಕ್ಕಿಂತ ಮೊದಲು 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಆರಂಭಿಕ ಬ್ಯಾಟರ್ ಇಶಾನ್ ಕಿಶನ್, ಸೂರ್ಯಕುಮಾರ್ ಬೆನ್ನಲ್ಲೇ ವಿಕೆಟ್ ಒಪ್ಪಿಸಿದರು. 75 ರನ್ ಬಾರಿಸಲು 41 ಎಸೆತ ಬಳಸಿಕೊಂಡ ಅವರು 4 ಫೋರ್ ಹಾಗೂ 4 ಸಿಕ್ಸರ್ ಹೊಡೆದರು.
ಕೊನೆಯಲ್ಲಿ ಟಿಮ್ ಡೇವಿಡ್ 10 ಎಸೆತಕ್ಕೆ 19 ರನ್ ಹೊಡೆದರೆ, ತಿಲಕ್ ವರ್ಮಾ 10 ಎಸೆತಗಳಲ್ಲಿ 26 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಇದನ್ನೂ ಓದಿ : IPL 2023 : ಕೆಕೆಆರ್ ವಿರುದ್ಧ ಸೋಲಿನ ಸಿಟ್ಟಿಗೆ ವಿರಾಟ್ ಕೊಹ್ಲಿ ಬೈದಿದ್ದು ಯಾರಿಗೆ?
ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಪ್ರಭ್ ಸಿಮ್ರಾನ್ ಸಿಂಗ್ 9 ರನ್ಗಳಿಗೆ ಔಟಾಗುವ ಮೂಲಕ ಹಿನ್ನಡೆ ಉಂಟಾಯಿತು. ಆದರೆ, ಮತ್ತೊಂದು ಬದಿಯಲ್ಲಿ ಶಿಖರ್ ಧವನ್ 20 ಎಸೆತಗಳಲ್ಲಿ 30 ರನ್ ಬಾರಿಸಿ ಆಧಾರವಾದರು. ಮ್ಯಾಥ್ಯೂ ಶಾರ್ಟ್ಸ್ ಸ್ವಲ್ಪ ಮಟ್ಟಿಗೆ ಅವರಿಗೆ ನೆರವಾದರು. 62 ರನ್ಗಳಿಗೆ ಪಂಜಾಬ್ ತಂಡದ ಎರಡನೇ ವಿಕೆಟ್ ಉರುಳಿದರೆ 95 ರನ್ಗಳಿಗೆ ಮೂರನೇ ವಿಕೆಟ್ ಪತನಗೊಂಡಿತು. ಅಷ್ಡರಲ್ಲಿ 1.2 ಓವರ್ಗಳು ಮುಕ್ತಾಯಗೊಂಡಿದ್ದವು.
ಅಬ್ಬರಿಸಿ ಲಿಯಾಮ್
ನಾಲ್ಕನೇ ವಿಕೆಟ್ಗೆ ಜತೆಯಾದ ಲಿಯಾಮ್ ಲಿವಿಂಗ್ಸ್ಟನ್ ಹಾಗೂ ಜಿತೇಶ್ ಶರ್ಮಾ ಅಬ್ಬರದ ಬ್ಯಾಟಿಂಗ್ ನಡೆಸಿದರು. ಅದರಲ್ಲಿ ಲಿಯಾಮ್ 7 ಫೋರ್ ಹಾಗೂ 4 ಸಿಕ್ಸರ್ಗಳ ಸಮೇತ 42 ಎಸೆತಗಳಲ್ಲಿ 82 ರನ್ ಬಾರಿಸಿದರು. 32 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ್ ಅವರು ನಂತರದ 10 ಎಸೆತಗಳಲ್ಲಿ 32 ರನ್ ಬಾರಿಸಿದರು. ಮತ್ತೊಂದು ತುದಿಯಲ್ಲಿ ಅಷ್ಟೇ ಆಕ್ರಮಣಶೀಲತೆಯಿಂದ ಆಡಿದ ಜಿತೇಶ್ ಶರ್ಮಾ 5 ಫೋರ್, 2 ಸಿಕ್ಸರ್ಗಳ ಸಮೇತ 49 ರನ್ ಬಾರಿಸಿದರು. ಆದರೆ, ಅವರು ಒಂದು ರನ್ಗಳ ಕೊರತೆಯಿಂದ ಅರ್ಧ ಶತಕದಿಂದ ವಂಚಿತರಾದರು.
ಮುಂಬಯಿ ಪರ ಪಿಯೂಷ್ ಚಾವ್ಲಾ 29 ರನ್ ನೀಡಿ ಎರಡು ವಿಕೆಟ್ ಪಡೆದರು. ಅರ್ಶದ್ ಖಾನ್ 1 ವಿ