ಮುಂಬಯಿ: ಸೂರ್ಯಕುಮಾರ್ ಯಾದವ್ (55) ಅರ್ಧ ಶತಕ ಹಾಗೂ ಟಿಮ್ ಡೇವಿಡ್ (45) ಸ್ಫೋಟಕ ಬ್ಯಾಟಿಂಗ್ ನೆರವು ಪಡೆದ ಮುಂಬಯಿ ಇಂಡಿಯನ್ಸ್ ತಂಡ ಐಪಿಎಲ್ನ 1000ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 6 ವಿಕೆಟ್ಗಳ ವಿಜಯ ಸಾಧಿಸಿತು. ಇದರೊಂದಿಗೆ ಆರ್ಆರ್ ತಂಡದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ (124 ರನ್) ಅವರ ಚೊಚ್ಚಲ ಶತಕದ ಸಾಧನೆ ಮಂಕಾಯಿತು. ಈ ಗೆಲುವಿನೊಂದಿಗೆ ಮುಂಬಯಿ ಇಂಡಿಯನ್ಸ್ ತಂಡ ಹಾಲಿ ಆವೃತ್ತಿಯಲ್ಲಿ ನಾಲ್ಕನೇ ಜಯ ಸಾಧಿಸಿತು.
ವಾಖೆಂಡೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ರಾಜಸ್ಥಾನ್ ತಂಡದ ನಾಯಕ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದಕ್ಕೆ ಪೂರಕವಾಗಿ ಆಡಿದ ಆರ್ಆರ್ ಬ್ಯಾಟರ್ಗಳು ಎದುರಾಳಿ ತಂಡಕ್ಕೆ 213 ರನ್ಗಳ ಗೆಲುವಿನ ಗುರಿಯನ್ನು ಒಡ್ಡಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮುಂಬಯಿ ಇಂಡಿಯನ್ಸ್ ತಂಡ 19.3 ಓವರ್ಗಳಲ್ಲಿ 214 ರನ್ ಬಾರಿಸಿ ಜಯ ಸಾಧಿಸಿತು. ಮುಂಬೈ ಗೆಲುವಿಗೆ ಕೊನೇ ಓವರ್ನಲ್ಲಿ 16 ರನ್ ಬೇಕಾಗಿತ್ತು. ಜೇಸನ್ ಹೋಲ್ಡರ್ ಬೌಲಿಂಗ್ನಲ್ಲಿ ಟಿಮ್ ಡೇವಿಡ್ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.
ಗುರಿ ಬೆನ್ನಟ್ಟಲು ಹೊರಟ ಮುಂಬೈ ತಂಡ 14 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡು ಸಮಸ್ಯೆಗೆ ಸಿಲುಕಿತು. ಬಳಿಕ ಇಶಾನ್ ಕಿಶನ್ (28) ಹಾಗೂ ಕ್ಯಾಮೆರಾನ್ ಗ್ರೀನ್ (44) ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದರು. ಬಳಿಕ ಸೂರ್ಯಕುಮಾರ್ ಅಬ್ಬರದ ಬ್ಯಾಟಿಂಗ್ ನಡೆಸಿ ಅರ್ಧ ಶತಕ ಪೂರೈಸಿದರು. ಕೊನೆಯಲ್ಲಿ ಟಿಮ್ ಡೇವಿಡ್ ತಂಡಕ್ಕೆ ಜಯ ತಂದುಕೊಟ್ಟರೆ ತಿಲಕ್ ವರ್ಮಾ 29 ರನ್ ಬಾರಿಸಿ ತಂಡಕ್ಕೆ ನೆರವಾದರು.
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಆದರೆ, ಜೋಸ್ ಬಟ್ಲರ್ (18ರನ್) ಮತ್ತೊಂದು ಬಾರಿ ದೊಡ್ಡ ಮೊತ್ತ ಪೇರಿಸಲು ವಿಫಲಗೊಂಡರು. ಬಳಿಕ ಆಡಲು ಬಂದ ನಾಯಕ ಸಂಜು ಸ್ಯಾಮ್ಸನ್ ಕೂಡ (14 ರನ್) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ದೇವದತ್ ಪಡಿಕ್ಕಲ್ 2 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ವೆಸ್ಟ್ ಇಂಡೀಸ್ ಆಲ್ರೌಂಡರ್ ಜೇಸನ್ ಹೋಲ್ಡರ್ 11 ರನ್ಗಳಿಗೆ ಔಟಾದರು. ಈ ಮೂಲಕ ರಾಜಸ್ಥಾನ್ ತಂಡದ ವಿಕೆಟ್ಗಳು ಸತತವಾಗಿ ಉರುಳಿದವು.
ಇದನ್ನೂ ಓದಿ : IPL 2023 : ಲಾಸ್ಟ್ ಬಾಲ್ ಥ್ರಿಲ್, ಚೆನ್ನೈ ವಿರುದ್ಧ ಪಂಜಾಬ್ ತಂಡಕ್ಕೆ 4 ವಿಕೆಟ್ ವಿಜಯ
ಅಬ್ಬರಿಸಿದ ಜೈಸ್ವಾಲ್
ಒಂದು ಕಡೆ ತನ್ನ ತಂಡದ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಯುತ್ತಿದ್ದ ಹೊರತಾಗಿಯೂ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ಐಪಿಎಲ್ನಲ್ಲಿ ಚೊಚ್ಚಲ ಶತಕ ದಾಖಲಿಸಿದರು. ಇದು ಹಾಲಿ ಆವೃತ್ತಿಯ ಐಪಿಎಲ್ನಲ್ಲಿಎ ಎರಡನೇ ಶತಕವಾಗಿದೆ. ಒಟ್ಟು 62 ಎಸೆಗಳನ್ನು ಬಳಸಿಕೊಂಡ ಎಡಗೈ ಬ್ಯಾಟರ್ 16 ಫೋರ್ ಹಾಗೂ 8 ಸಿಕ್ಸರ್ ಮೂಲಕ ವೈಯುಕ್ತಿಕ ದಾಖಲೆಯೊಂದನ್ನು ಸೃಷ್ಟಿಸಿದರು. ಅದಕ್ಕೆ ಮೊದಲು 32 ಎಸೆತಗಳಲ್ಲಿ ಅರ್ಧ ಶತಕದ ಗಡಿ ದಾಟಿದ ಅವರು, 53 ಎಸೆತಗಳಲ್ಲಿ ಶತಕದ ಸಾಧನೆ ಮಾಡಿದರು. ಯಶಸ್ವಿ ಜೈಸ್ವಾಲ್ ಐಪಿಎಲ್ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ. ಅವರಿಗೆ 19 ವರ್ಷ 253 ದಿನಗಳು.
ಕೊನೆಯಲ್ಲಿ ಶಿಮ್ರೋನ್ ಹೆಟ್ಮಾಯರ್ 8 ರನ್ ಬಾರಿಸಿದರೆ, ಆರ್ ಅಶ್ವಿನ್ ಕೂಡ ಅಷ್ಟೇ ರನ್ ಕೊಡುಗೆ ಕೊಟ್ಟರು. ಮುಂಬಯಿ ಪರ ಬೌಲಿಂಗ್ನಲ್ಲಿ ಅರ್ಶದ್ ಖಾ