IPL 2023 : 1000ನೇ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್​​ ತಂಡಕ್ಕೆ ಜಯ, ಜೈಸ್ವಾಲ್​ ಶತಕ ವ್ಯರ್ಥ - Vistara News

ಕ್ರಿಕೆಟ್

IPL 2023 : 1000ನೇ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್​​ ತಂಡಕ್ಕೆ ಜಯ, ಜೈಸ್ವಾಲ್​ ಶತಕ ವ್ಯರ್ಥ

ಈ ಗೆಲುವಿನೊಂದಿಗೆ ಮುಂಬಯಿ ಇಂಡಿಯನ್ಸ್​ ತಂಡ ಹಾಲಿ ಆವೃತ್ತಿಯಲ್ಲಿ ನಾಲ್ಕನೇ ವಿಜಯ ಸಾಧಿಸಿತು. ಆರ್​ಆರ್​ ದೊಡ್ಡ ಮೊತ್ತ ಪೇರಿಸಿದ ಹೊರತಾಗಿಯೂ ಸೋಲಿಗೆ ಒಳಗಾಯಿತು.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಸೂರ್ಯಕುಮಾರ್ ಯಾದವ್​ (55) ಅರ್ಧ ಶತಕ ಹಾಗೂ ಟಿಮ್​ ಡೇವಿಡ್​ (45) ಸ್ಫೋಟಕ ಬ್ಯಾಟಿಂಗ್ ನೆರವು ಪಡೆದ ಮುಂಬಯಿ ಇಂಡಿಯನ್ಸ್​ ತಂಡ ಐಪಿಎಲ್​ನ 1000ನೇ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್​ ವಿರುದ್ಧ 6 ವಿಕೆಟ್​ಗಳ ವಿಜಯ ಸಾಧಿಸಿತು. ಇದರೊಂದಿಗೆ ಆರ್​ಆರ್​ ತಂಡದ ಯುವ ಬ್ಯಾಟರ್​ ಯಶಸ್ವಿ ಜೈಸ್ವಾಲ್ (124 ರನ್​) ಅವರ ಚೊಚ್ಚಲ ಶತಕದ ಸಾಧನೆ ಮಂಕಾಯಿತು. ಈ ಗೆಲುವಿನೊಂದಿಗೆ ಮುಂಬಯಿ ಇಂಡಿಯನ್ಸ್ ತಂಡ ಹಾಲಿ ಆವೃತ್ತಿಯಲ್ಲಿ ನಾಲ್ಕನೇ ಜಯ ಸಾಧಿಸಿತು.

ವಾಖೆಂಡೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ರಾಜಸ್ಥಾನ್​ ತಂಡದ ನಾಯಕ ಸಂಜು ಸ್ಯಾಮ್ಸನ್​ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದಕ್ಕೆ ಪೂರಕವಾಗಿ ಆಡಿದ ಆರ್​ಆರ್​ ಬ್ಯಾಟರ್​ಗಳು ಎದುರಾಳಿ ತಂಡಕ್ಕೆ 213 ರನ್​ಗಳ ಗೆಲುವಿನ ಗುರಿಯನ್ನು ಒಡ್ಡಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಮುಂಬಯಿ ಇಂಡಿಯನ್ಸ್​ ತಂಡ 19.3 ಓವರ್​ಗಳಲ್ಲಿ 214 ರನ್ ಬಾರಿಸಿ ಜಯ ಸಾಧಿಸಿತು. ಮುಂಬೈ ಗೆಲುವಿಗೆ ಕೊನೇ ಓವರ್​ನಲ್ಲಿ 16 ರನ್​ ಬೇಕಾಗಿತ್ತು. ಜೇಸನ್​ ಹೋಲ್ಡರ್ ಬೌಲಿಂಗ್​ನಲ್ಲಿ ಟಿಮ್​ ಡೇವಿಡ್ ಹ್ಯಾಟ್ರಿಕ್​ ಸಿಕ್ಸರ್ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಗುರಿ ಬೆನ್ನಟ್ಟಲು ಹೊರಟ ಮುಂಬೈ ತಂಡ 14 ರನ್​ಗಳಿಗೆ ಮೊದಲ ವಿಕೆಟ್​ ಕಳೆದುಕೊಂಡು ಸಮಸ್ಯೆಗೆ ಸಿಲುಕಿತು. ಬಳಿಕ ಇಶಾನ್​ ಕಿಶನ್​ (28) ಹಾಗೂ ಕ್ಯಾಮೆರಾನ್​ ಗ್ರೀನ್​ (44) ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್​ ಮಾಡಿದರು. ಬಳಿಕ ಸೂರ್ಯಕುಮಾರ್ ಅಬ್ಬರದ ಬ್ಯಾಟಿಂಗ್ ನಡೆಸಿ ಅರ್ಧ ಶತಕ ಪೂರೈಸಿದರು. ಕೊನೆಯಲ್ಲಿ ಟಿಮ್​ ಡೇವಿಡ್​ ತಂಡಕ್ಕೆ ಜಯ ತಂದುಕೊಟ್ಟರೆ ತಿಲಕ್​ ವರ್ಮಾ 29 ರನ್​ ಬಾರಿಸಿ ತಂಡಕ್ಕೆ ನೆರವಾದರು.

ಮೊದಲು ಬ್ಯಾಟ್​ ಮಾಡಿದ ರಾಜಸ್ಥಾನ್​ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಆದರೆ, ಜೋಸ್​ ಬಟ್ಲರ್​ (18ರನ್​) ಮತ್ತೊಂದು ಬಾರಿ ದೊಡ್ಡ ಮೊತ್ತ ಪೇರಿಸಲು ವಿಫಲಗೊಂಡರು. ಬಳಿಕ ಆಡಲು ಬಂದ ನಾಯಕ ಸಂಜು ಸ್ಯಾಮ್ಸನ್ ಕೂಡ (14 ರನ್​) ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ದೇವದತ್​ ಪಡಿಕ್ಕಲ್​ 2 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ವೆಸ್ಟ್​ ಇಂಡೀಸ್ ಆಲ್​ರೌಂಡರ್​ ಜೇಸನ್​ ಹೋಲ್ಡರ್​ 11 ರನ್​ಗಳಿಗೆ ಔಟಾದರು. ಈ ಮೂಲಕ ರಾಜಸ್ಥಾನ್ ತಂಡದ ವಿಕೆಟ್​​ಗಳು ಸತತವಾಗಿ ಉರುಳಿದವು.

ಇದನ್ನೂ ಓದಿ : IPL 2023 : ಲಾಸ್ಟ್​ ಬಾಲ್​ ಥ್ರಿಲ್​, ಚೆನ್ನೈ ವಿರುದ್ಧ ಪಂಜಾಬ್​ ತಂಡಕ್ಕೆ 4 ವಿಕೆಟ್​ ವಿಜಯ

ಅಬ್ಬರಿಸಿದ ಜೈಸ್ವಾಲ್​

ಒಂದು ಕಡೆ ತನ್ನ ತಂಡದ ಬ್ಯಾಟರ್​ಗಳು ಪೆವಿಲಿಯನ್​ ಪರೇಡ್​ ನಡೆಯುತ್ತಿದ್ದ ಹೊರತಾಗಿಯೂ ಯುವ ಬ್ಯಾಟರ್​ ಯಶಸ್ವಿ ಜೈಸ್ವಾಲ್​ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ಐಪಿಎಲ್​ನಲ್ಲಿ ಚೊಚ್ಚಲ ಶತಕ ದಾಖಲಿಸಿದರು. ಇದು ಹಾಲಿ ಆವೃತ್ತಿಯ ಐಪಿಎಲ್​ನಲ್ಲಿಎ ಎರಡನೇ ಶತಕವಾಗಿದೆ. ಒಟ್ಟು 62 ಎಸೆಗಳನ್ನು ಬಳಸಿಕೊಂಡ ಎಡಗೈ ಬ್ಯಾಟರ್​ 16 ಫೋರ್​ ಹಾಗೂ 8 ಸಿಕ್ಸರ್​​ ಮೂಲಕ ವೈಯುಕ್ತಿಕ ದಾಖಲೆಯೊಂದನ್ನು ಸೃಷ್ಟಿಸಿದರು. ಅದಕ್ಕೆ ಮೊದಲು 32 ಎಸೆತಗಳಲ್ಲಿ ಅರ್ಧ ಶತಕದ ಗಡಿ ದಾಟಿದ ಅವರು, 53 ಎಸೆತಗಳಲ್ಲಿ ಶತಕದ ಸಾಧನೆ ಮಾಡಿದರು. ಯಶಸ್ವಿ ಜೈಸ್ವಾಲ್​ ಐಪಿಎಲ್​ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ. ಅವರಿಗೆ 19 ವರ್ಷ 253 ದಿನಗಳು.

ಕೊನೆಯಲ್ಲಿ ಶಿಮ್ರೋನ್ ಹೆಟ್ಮಾಯರ್​ 8 ರನ್​ ಬಾರಿಸಿದರೆ, ಆರ್​ ಅಶ್ವಿನ್ ಕೂಡ ಅಷ್ಟೇ ರನ್​ ಕೊಡುಗೆ ಕೊಟ್ಟರು. ಮುಂಬಯಿ ಪರ ಬೌಲಿಂಗ್​ನಲ್ಲಿ ಅರ್ಶದ್ ಖಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Unmukt Chand: ಭಾರತ ತಂಡ ತೊರೆದು ಯುಎಸ್​ಎ ಸೇರಿದ ಉನ್ಮುಕ್ತ್‌ಗೆ ಟಿ20 ವಿಶ್ವಕಪ್​ನಲ್ಲಿ ಸ್ಥಾನ ಅನುಮಾನ

Unmukt Chand: ಉನ್ಮುಕ್ತ್ ಚಂದ್‌(Unmukt Chand) ಅವರ ಟಿ20 ವಿಶ್ವಕಪ್(T20 World Cup 2024)​ ಆಡುವ ಕನಸು ನನಸಾಗುವ ಸಾಧ್ಯತೆ ಕ್ಷೀಣವಾದಂತೆ ತೋರುತ್ತಿದೆ.

VISTARANEWS.COM


on

Unmukt Chand
Koo

ನ್ಯೂಯಾರ್ಕ್​: 2021ರಲ್ಲಿ ಭಾರತೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಅಮೆರಿಕ(USA) ತಂಡ ಸೇರಿದ್ದ, 2012ರ ಅಂಡರ್‌-19 ವಿಶ್ವಕಪ್‌ ಹೀರೊ ಉನ್ಮುಕ್ತ್ ಚಂದ್‌(Unmukt Chand) ಅವರ ಟಿ20 ವಿಶ್ವಕಪ್(T20 World Cup 2024)​ ಆಡುವ ಕನಸು ನನಸಾಗುವ ಸಾಧ್ಯತೆ ಕ್ಷೀಣವಾದಂತೆ ತೋರುತ್ತಿದೆ. ಇದೇ ಏಪ್ರಿಲ್ 7 ರಿಂದ ಹೂಸ್ಟನ್‌ನಲ್ಲಿ ನಡೆಯಲಿರುವ ಕೆನಡಾ(Canada T20Is) ವಿರುದ್ಧದ ಟಿ20 ಸರಣಿಗಾಗಿ ಅಮೆರಿಕ ಪ್ರಕಟಿಸಿದ 15 ಸದಸ್ಯರ ತಂಡದಿಂದ ಉನ್ಮುಕ್ತ್ ಚಂದ್ ಅವರನ್ನು ಕೈಬಿಡಲಾಗಿದೆ. ಇದು 2024 ರ T20 ವಿಶ್ವಕಪ್‌ನಲ್ಲಿ ಅಮೆರಿಕ ತಂಡವನ್ನು ಪ್ರತಿನಿಧಿಸುವ ಚಂದ್ ಅವರ ಕನಸಿಗೆ ಭಾರಿ ಹೊಡೆತ ಬಿದ್ದಂತಿದೆ.

ಇದೇ ವರ್ಷದ ಆರಂಭದಲ್ಲಿ ಉನ್ಮುಕ್ತ್ ಚಂದ್‌ ಅವರು ಭಾರತ ವಿರುದ್ಧ ಟಿ20 ವಿಶ್ವಕಪ್​ ಆಡುವುದು ನನ್ನ ಪ್ರಮುಖ ಗುರಿ ಎಂದು ಹೇಳಿದ್ದರು. ಆದರೆ, ಇದೀಗ ಅವರಿಗೆ ಸ್ಥಾನ ಸಿಗುವುದೇ ಅನುಮಾನ ಎನ್ನುವಂತಿದೆ. ಅಮೆರಿಕ ಕ್ರಿಕೆಟ್​ ಮಂಡಳಿಗೆ ಚಂದ್​ಗೆ ಸ್ಥಾನ ನೀಡುವ ಕುರಿತು ಆಸಕ್ತಿ ಇಲ್ಲವಾದಂತೆ ತೋರುತ್ತಿದೆ. ಇಲ್ಲವಾದಲ್ಲಿ ಅವರನ್ನು ಕೆನಡಾ ವಿರುದ್ಧದ ಸರಣಿಯಂದ ಕೈಬಿಡುವ ಸಾಧ್ಯತೆ ಇರುತ್ತಿರಲಿಲ್ಲ.

2012ರ ಅಂಡರ್‌-19 ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಅಜೇಯ 111 ರನ್‌ ಬಾರಿಸಿ ಭಾರತವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು. ಆದರೆ ಸೀನಿಯರ್‌ ಮಟ್ಟದಲ್ಲಿ ಆಡಲು ಅವರಿಗೆ ಅವಕಾಶ ಲಭಿಸಲೇ ಇಲ್ಲ. 67 ಪ್ರಥಮ ದರ್ಜೆ ಪಂದ್ಯಗಳಿಂದ 3,379 ರನ್‌, 120 ಲಿಸ್ಟ್‌ ಎ ಪಂದ್ಯಗಳಿಂದ 4,505 ರನ್‌, ಟಿ20 ಕ್ರಿಕೆಟ್‌ನಲ್ಲಿ 1,565 ರನ್‌ ಬಾರಿಸಿದ ಸಾಧನೆ ಉನ್ಮುಕ್ತ್ ಚಂದ್‌ ಅವರದು.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ನಂದಿನಿ ಪ್ರಾಯೋಜಕತ್ವ?

2021 ಅವರು ಭಾರತೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಅಮೆರಿಕಕ್ಕೆ ತೆರಳಿದ್ದರು. ತಮ್ಮ ನಾಯಕತ್ವದಲ್ಲಿ ಸಿಲಿಕಾನ್‌ ಸ್ಟ್ರೈಕರ್ಸ್‌ ತಂಡಕ್ಕೆ ಮೈನರ್‌ ಲೀಗ್ ಕ್ರಿಕೆಟ್‌ ಗೆದ್ದುಕೊಟ್ಟಿದ್ದರು ಹಾಗೂ ಆಡಿದ್ದ ಮೂರೂ ಆವೃತ್ತಿಗಳಿಂದ 1500ಕ್ಕೂ ಹೆಚ್ಚಿನ ರನ್‌ಗಳನ್ನು ಸಿಡಿಸಿದ್ದರು. ಆದರೂ ಕೂಡ ಅವರಿಗೆ ಕೆನಡಾ ವಿರುದ್ಧದ ಸರಣಿಯಲ್ಲಿ ಅವಕಾಶ ಸಿಕ್ಕಿಲ್ಲ.

ಐಪಿಎಲ್ 2013ರಲ್ಲಿ ರಾಜಸ್ಥಾನಕ್ಕಾಗಿ 1 ಪಂದ್ಯವನ್ನು ಆಡಿದ ಮತ್ತು ಭಾರತ ಅಂಡರ್​-19 ತಂಡವನ್ನು ಪ್ರತಿನಿಧಿಸಿರುವ ಹರ್ಮೀತ್ ಸಿಂಗ್​ ಅವರು ಕೆನಡಾ ವಿರುದ್ಧದ ಸರಣಿಗೆ ಆಯ್ಕೆಯಾಗುವ ಮೂಲಕ ಅಮೆರಿಕ ತಂಡದ ಪರ ಚೊಚ್ಚಲ ಕರೆ ಪಡೆದಿದ್ದಾರೆ.

ವೆಸ್ಟ್​ ಇಂಡೀಸ್​ ಮತ್ತು ಅಮೆರಿಕ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್​ ಜೂನ್ 1 ರಿಂದ ಆರಂಭವಾಗಲಿದೆ. ವಿಶ್ವಕಪ್​ ಟೂರ್ನಿಯ(T20 World Cup 2024) ವೇಳಾಪಟ್ಟಿಯನ್ನು ಐಸಿಸಿ ಈಗಾಗಲೇ ಪ್ರಕಟಿಸಿದೆ. ಜತೆಗೆ ತಂಡಗಳ ಪಟ್ಟಿಯನ್ನು ಅಂತಿಮಗೊಳಿಸಲು ಗಡುವು ಕೂಡ ನೀಡಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. 

Continue Reading

ಕ್ರೀಡೆ

Riyan Parag: 3 ದಿನ ನೋವು ನಿವಾರಕ ಮಾತ್ರೆ ಸೇವಿಸಿ ಹಾಸಿಗೆಯಲ್ಲಿದ್ದೆ; ಪಂದ್ಯಶ್ರೇಷ್ಠ ಪ್ರಶಸ್ತಿ ವೇಳೆ ಭಾವುಕರಾದ ​ಪರಾಗ್

Riyan Parag: ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಪರಾಗ್​, ಕಳೆದ 3 ದಿನಗಳಿಂದ ನಾನು ನಿರಂತರವಾಗಿ ನೋವು ನಿವಾರಕ ಮಾತ್ರೆ ಸೇವಿಸುತ್ತಾ ಹಾಸಿಗೆಯಲ್ಲಿದ್ದೆ. ಆದರೆ ಇಂದು ನಾನು ನನ್ನ ತಂಡಕ್ಕೆ ನೀಡಿದ ಕೊಡುಗೆ ಖುಷಿ ಹೆಚ್ಚಿಸಿದೆ ಎಂದರು.

VISTARANEWS.COM


on

Riyan Parag
Koo

ಜೈಪುರ: ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ವಿರುದ್ಧದ ಪಂದ್ಯದಲ್ಲಿ ಅಸಾಮಾನ್ಯ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ರಾಜಸ್ಥಾನ್(Rajasthan Royals)​ ತಂಡದ ರಿಯಾನ್​ ಪರಾಗ್(Riyan Parag)​ ಅವರು ಈ ಬ್ಯಾಟಿಂಗ್​ ಪ್ರದರ್ಶನಕ್ಕೂ ಮುನ್ನ ತಾವು ಅನುಭವಿಸಿದ ನರಕಯಾತನೆಯನ್ನು ಬಹಿರಂಗಪಡಿಸಿದ್ದಾರೆ.

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಪರಾಗ್​, ಕಳೆದ 3 ದಿನಗಳಿಂದ ನಾನು ನಿರಂತರವಾಗಿ ನೋವು ನಿವಾರಕ ಮಾತ್ರೆ ಸೇವಿಸುತ್ತಾ ಹಾಸಿಗೆಯಲ್ಲಿದ್ದೆ. ಆದರೆ ಇಂದು ನಾನು ನನ್ನ ತಂಡಕ್ಕೆ ನೀಡಿದ ಕೊಡುಗೆ ಖುಷಿ ಹೆಚ್ಚಿಸಿದೆ ಎಂದರು. ಆದರೆ ಮಾತ್ರೆ ಸೇವಿದ ಕಾರಣ ಏನೆಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ. ಅಸ್ಸಾಂ ಮೂಲದ 22 ವರ್ಷದ ಕ್ರಿಕೆಟಿಗನಾಗಿರುವ ಪರಾಗ್​ ಸೈಯ್ಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದರು. ಆಡಿದ 10 ಇನ್ನಿಂಗ್ಸ್‌ಗಳಲ್ಲಿ 510 ರನ್‌ ಸಿಡಿಸಿದ್ದರು. 56 ಐಪಿಎಲ್​ ಪಂದ್ಯವಾಡಿ 727 ರನ್​ ಬಾರಿಸಿದ್ದಾರೆ. 4 ವಿಕೆಟ್​ ಕೂಡ ಪಡೆದಿದ್ದಾರೆ. 2018ರ ಅಂಡರ್​-19 ವಿಶ್ವಕಪ್ ವಿಜೇತ ತಂಡದಲ್ಲಿ ಸ್ಥಾನ ಪಡೆದಿದ್ದ ಪರಾಗ್ ಅವರು 2022-23ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಐದನೇ ಅತಿ ಹೆಚ್ಚು ರನ್​ಗಳಿಸಿದ್ದ ಆಟಗಾರರಾಗಿದ್ದರು. 69 ಸರಾಸರಿಯೊಂದಿಗೆ 552 ರನ್​ಗಳನ್ನು ಗಳಿಸಿದ್ದ ಪರಾಗ್​ ಮೂರು ಶತಕ ಮತ್ತು ಒಂದು ಅರ್ಧಶತಕ ಸಿಡಿಸಿದ್ದರು.

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿದ ಪರಾಗ್​ ಕೇವಲ 45 ಎಸೆತಗಳಿಂದ 84 ರನ್​ ಬಾರಿಸಿದ್ದರು. ಅವರ ಈ ಸೊಗಸಾದ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 6 ಆಕರ್ಷಕ ಸಿಕ್ಸರ್​ ಮತ್ತು 7 ಬೌಂಡರಿ ದಾಖಲಾಯಿತು. ಅದರಲ್ಲೂ ಅನ್ರಿಚ್​ ನೋರ್ಜೆ ಅವರಿಗೆ ಸರಿಯಾಗಿ ದಂಡಿಸಿದರು.

ಇದನ್ನೂ ಓದಿ IPL 2024: ಐಪಿಎಲ್‌ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಆರ್‌.ಅಶ್ವಿ‌ನ್‌!

ಕಿರಿಕ್​ ಮಾಡಿದ್ದ ಹರ್ಷಲ್​ ಪಟೇಲ್​


2022ರಲ್ಲಿ ಆರ್‌ಸಿಬಿ ಮತ್ತು ರಾಜಸ್ಥಾನ್‌ ನಡುವಿನ ಪಂದ್ಯದಲ್ಲಿ ಆರ್​ಸಿಬಿ ತಂಡದ ಆಟಗಾರನಾಗಿದ್ದ ಹರ್ಷಲ್​ ಪಡೇಲ್​ ಅವರು ಪರಾಗ್​ ಜತೆ ಕಿರಿಕ್​ ಮಾಡಿಕೊಂಡು ಸರಿಯಾಗಿಯೇ ದಂಡಿಸಿಕೊಂಡಿದ್ದರು. ರಾಜಸ್ಥಾನ್‌ ಇನ್ನಿಂಗ್ಸ್‌ ವೇಳೆ ಹರ್ಷಲ್‌ ಪಟೇಲ್‌ ಎಸೆದ ಕೊನೆಯ ಓವರ್‌ನಲ್ಲಿ ರಿಯಾನ್‌ ಪರಾಗ್‌ ಒಂದು ಬೌಂಡರಿ, 2 ಸಿಕ್ಸರ್‌ ಸೇರಿದಂತೆ 18 ರನ್‌ ಚಚ್ಚಿದ್ದರು. ಅಂತಿಮ ಎಸೆತ ಸಿಕ್ಸರ್‌ ಸಿಡಿದಾಗ ಹರ್ಷಲ್​ ಆಕ್ರೋಶಗೊಂಡು ಇನ್ನಿಂಗ್ಸ್‌ ಮುಗಿಸಿ ಡಗೌಟ್‌ನತ್ತ ಸಾಗುತ್ತಿದ್ದಾಗ ಪರಾಗ್‌ ಜತೆ ಜಗಳಕ್ಕಿಳಿದಿದ್ದರು. ಪರಾಗ್‌ ಕೂಡ ತಕ್ಕ ಜವಾಬು ನೀಡಿದ್ದರು. ಇನ್ನೇನು ಕೈ ಮಿಲಾಯಿಸುವ ಹಂತಕ್ಕೆ ಬಂದಾಗ ಸಹ ಆಟಗಾರರು ಇವರಿಬ್ಬರನ್ನು ಸಮಾಧಾನಗೊಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.

ಇತ್ತಂಡಗಳ ಆಟಗಾರರು ಪಂದ್ಯದ ಬಳಿಕ ಪರಸ್ಪರ ಕೈ ಕುಲುಕುವ ವೇಳೆಯೂ ಸಿಟ್ಟಿನಲ್ಲಿದ್ದ ಹರ್ಷಲ್​ ಪಟೇಲ್‌, ಪರಾಗ್‌ ಅವರ ಕೈ ಕುಲುಕದೆ ತಮ್ಮ ಕೋಪವನ್ನು ಹೊರಹಾಕಿದ್ದರು. ಪರಾಗ್‌ ಶೇಕ್‌ಹ್ಯಾಂಡ್‌ ಮಾಡಲು ಬಂದರೂ ಪಟೇಲ್‌ ಇದಕ್ಕೆ ಸ್ಪಂದಿಸದೇ ಸಾಗಿದ್ದರು.

Continue Reading

ಕ್ರೀಡೆ

LSG vs PBKS: ಗೆಲುವಿನ ಖಾತೆ ತೆರೆದೀತೇ ಕೆ.ಎಲ್​ ರಾಹುಲ್​ ಸಾರಥ್ಯದ ಲಕ್ನೋ ತಂಡ?

LSG vs PBKS: ಉಭಯ ತಂಡಗಳು ಇದುವರೆಗೆ ಐಪಿಎಲ್​ನಲ್ಲಿ ಮೂರು ಬಾರಿ ಮುಖಾಮುಖಿಯಾಗಿದ್ದು ಲಕ್ನೋ ತಂಡ 2 ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಪಂಜಾಬ್​ ಒಂದು ಪಂದ್ಯ ಮಾತ್ರ ಗೆದ್ದಿದೆ. ಬಲಾಬಲದ ಲೆಕ್ಕಾಚಾರದಲ್ಲಿ ಲಕ್ನೋ ಬಲಿಷ್ಠವಾಗಿ ಗೋಚರಿಸಿದೆ.

VISTARANEWS.COM


on

Kaptaan KL is keeping
Koo

ಲಕ್ನೋ: ರಾಜಸ್ಥಾನ್​ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಕೆ.ಎಲ್​ ರಾಹುಲ್(KL Rahul)​ ಸಾರಥ್ಯದ ಲಕ್ನೋ ಸೂಪರ್​ ಜೈಂಟ್ಸ್​ ಶನಿವಾರದ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​​(LSG vs PBKS) ವಿರುದ್ಧ ಕಣಕ್ಕಿಳಿಯಲಿದೆ. ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಬೇಕಿದ್ದರೆ ತಂಡಕ್ಕೆ ಗೆಲುವು ಅತ್ಯಗತ್ಯ.

ಲಕ್ನೋ ತಂಡಕ್ಕೆ ಇದು ತವರಿನ ಮೊದಲ ಪಂದ್ಯವಾಗಿದೆ. ತಂಡ ಬಲಿಷ್ಠವಾಗಿದ್ದರೂ ಕೂಡ ಆಟಗಾರರ ಸಂಘಟಿತ ಪ್ರದರ್ಶನ ಮಾತ್ರ ಸಾಲದು. ಬೌಲಿಂಗ್​ ವಿಭಾಗದಲ್ಲಿ ನವೀನ್​ ಉಲ್​ ಹಕ್​ ಬದಲು ಗಬಾದಲ್ಲಿ ಆಸ್ಟ್ರೇಲಿಯಾದ ಹುಟ್ಟಡಗಿಸಿದ ವಿಂಡೀಸ್​ನ ಯುವ ಆಟಗಾರ ಶಮರ್​ ಜೋಸೆಪ್​ ಅವರನ್ನು ಆಡಿಸಿದರೆ ಉತ್ತಮ. ಬ್ಯಾಟಿಂಗ್​ನಲ್ಲಿಯೂ ಮಾರ್ಕಸ್​ ಸ್ಟೋಯಿಸ್​, ಕೃಣಾಲ್​ ಪಾಂಡ್ಯ, ಬದೋನಿ, ಪಡಿಕ್ಕಲ್​ ಮತ್ತು ಕ್ವಿಂಟನ್​ ಡಿ ಕಾಕ್​ ಸಿಡಿಯುವ ಅನಿವಾರ್ಯತೆ ಇದೆ.

ಕಳೆದ ಪಂದ್ಯದಲ್ಲಿ ರಾಹುಲ್​ ಮತ್ತು ಪೂರನ್​ ಮಾತ್ರ ತಂಡಕ್ಕೆ ಆಸರೆಯಾಗಿದ್ದರು. ಲಕ್ನೋ ಪರ ಚೊಚ್ಚಲ ಪಂದ್ಯವನ್ನಾಡಿದ ಪಡಿಕ್ಕಲ್​ ಶೂನ್ಯಕ್ಕೆ ಔಟಾಗಿದ್ದರು. ಹೀಗಾಗಿ ಈ ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್​ ನಡೆಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳಬೇಕಿದೆ. ರವಿ ಬಿಷ್ಟೋಯಿ ಕೂಡ ತುರ್ತು ವೇಗದಲ್ಲಿ ಬೌಲಿಂಗ್​ ಲಯ ಕಂಡುಕೊಳ್ಳುವ ಅಗತ್ಯವಿದೆ. ರಾಜಸ್ಥಾನ್​ ವಿರುದ್ಧ ದುಬಾರಿಯಾಗಿ ಗೋಚರಿಸಿದ್ದರು.

ಪಂಜಾಬ್​ ಆಡಿದ 2 ಪಂದ್ಯಗಳಲ್ಲಿ ಒಂದು ಗೆಲುವು ಮತ್ತು ಸೋಲು ಕಂಡಿದೆ. ಇದು ತಂಡಕ್ಕೆ ಮೂರನೇ ಪಂದ್ಯವಾಗಿದೆ. ಶಿಖರ್​ ಧವನ್​, ಸ್ಯಾಮ್ ಕರನ್​, ಲಿಯಾಮ್​ ಲಿವಿಂಗ್ಸ್​ ಸ್ಟೋನ್​ ಬ್ಯಾಟಿಂಗ್​ ಬಲವಾದರೆ, ಬೌಲಿಂಗ್​ನಲ್ಲಿ ಅರ್ಶ್​ದೀಪ್​ ಸಿಂಗ್​, ಕಗಿಸೊ ರಬಾಡ, ರಾಹುಲ್​ ಚಹರ್​ ಮತ್ತು ಹರ್‌ಪ್ರೀತ್ ಬ್ರಾರ್ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ. ಒಟ್ಟಾರೆಯಾಗಿ ತಂಡ ಎಲ್ಲ ವಿಭಾಗದಲ್ಲಿ ಸಮರ್ಥವಾಗಿದೆ.

ಇದನ್ನೂ ಓದಿ IPL 2024: ಐಪಿಎಲ್‌ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಆರ್‌.ಅಶ್ವಿ‌ನ್‌!

ಮುಖಾಮುಖಿ


ಉಭಯ ತಂಡಗಳು ಇದುವರೆಗೆ ಐಪಿಎಲ್​ನಲ್ಲಿ ಮೂರು ಬಾರಿ ಮುಖಾಮುಖಿಯಾಗಿದ್ದು, ಲಕ್ನೋ ತಂಡ 2 ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಪಂಜಾಬ್​ ಒಂದು ಪಂದ್ಯ ಮಾತ್ರ ಗೆದ್ದಿದೆ. ಬಲಾಬಲದ ಲೆಕ್ಕಾಚಾರದಲ್ಲಿ ಲಕ್ನೋ ಬಲಿಷ್ಠವಾಗಿ ಗೋಚರಿಸಿದೆ.

ಸಂಭಾವ್ಯ ತಂಡಗಳು


ಲಕ್ನೋ:
ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ದೇವದತ್ ಪಡಿಕ್ಕಲ್, ಆಯುಷ್ ಬದೋನಿ, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಶಮರ್​ ಜೋಸೆಫ್​, ಯಶ್ ಠಾಕೂರ್.

ಪಂಜಾಬ್​ ಕಿಂಗ್ಸ್​: ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋವ್, ಪ್ರಭಾಸಿಮ್ರಾನ್ ಸಿಂಗ್, ಸ್ಯಾಮ್ ಕರಾನ್​, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್, ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ರಾಹುಲ್ ಚಾಹರ್.

Continue Reading

ಕ್ರೀಡೆ

RCB vs KKR: ಕೆಕೆಆರ್​ ಸವಾಲು ಸುಲಭದ್ದಲ್ಲ; ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ದಾಖಲೆ ಹೇಗಿದೆ?

RCB vs KKR: ಆರ್​ಸಿಬಿ ಮತ್ತು ಕೆಕೆಆರ್​ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಒಟ್ಟು 11 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್​ಸಿಬಿ ಗೆದ್ದದ್ದು ಕೇವಲ 4 ಪಂದ್ಯಗಳು ಮಾತ್ರ. ಕೆಕೆಆರ್​ 7 ಪಂದ್ಯಗಳನ್ನು ಗೆದ್ದಿದೆ.

VISTARANEWS.COM


on

RCB
Koo

ಬೆಂಗಳೂರು: ಶುಕ್ರವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ಕೆಕೆಆರ್​ ಮತ್ತು ಆರ್​ಸಿಬಿ(RCB vs KKR) ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯವನ್ನು ವಿರಾಟ್​ ಕೊಹ್ಲಿ vs ಗೌತಮ್​ ಗಂಭೀರ್​ ಎಂದೇ ನಿರ್ಧರಿಸಲಾಗಿದೆ. ಇದಕ್ಕೆ ಕಾರಣ ಉಭಯ ಆಟಗಾರರ ನಡುವಣ ಹಾವು ಮುಂಗುಸಿಯಂತಹ ಕಚ್ಚಾಟ. ಹೀಗಾಗಿ ಈ ಪಂದ್ಯವನ್ನು ಹೈವೋಲ್ಟೇಜ್​ ಪಂದ್ಯ ಎಂದು ನಿರೀಕ್ಷಿಸಲಾಗಿದೆ. ಆದರೆ, ತವರಿನಲ್ಲಿ ಕೆಕೆಆರ್(RCB vs kkr chinnaswamy stadium records)​ ವಿರುದ್ಧ ಆರ್​ಸಿಬಿ ದಾಖಲೆ ಅಷ್ಟು ಉತ್ತಮವಾಗಿಲ್ಲ.

ಚಿನ್ನಸ್ವಾಮಿ ಮುಖಾಮುಖಿ ದಾಖಲೆ


ಆರ್​ಸಿಬಿ ಮತ್ತು ಕೆಕೆಆರ್​ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಒಟ್ಟು 11 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್​ಸಿಬಿ ಗೆದ್ದದ್ದು ಕೇವಲ 4 ಪಂದ್ಯಗಳು ಮಾತ್ರ. ಕೆಕೆಆರ್​ 7 ಪಂದ್ಯಗಳನ್ನು ಗೆದ್ದಿದೆ. ಕಳೆದ 2016 ರಿಂದ ಚಿನ್ನಸ್ವಾಮಿಯಲ್ಲಿ ನಡೆದ 5 ಪಂದ್ಯಗಳಲ್ಲಿಯೂ ಕೆಕೆಆರ್​ ತಂಡವೇ ಗೆದ್ದು ಬೀಗಿದೆ. ಒಟ್ಟಾರೆಯಾಗಿ ಆರ್​ಸಿಬಿ ಈ ಸ್ಟೇಡಿಯಂನಲ್ಲಿ 94 ಪಂದ್ಯಗಳನ್ನು ಆಡಿ 45 ಗೆಲುವು ಮತ್ತು 44 ಸೋಲು ಕಂಡಿದೆ. ಕೆಕೆಆರ್​ ತಂಡ ಇಲ್ಲಿ 17 ಪಂದ್ಯಗಳನ್ನಾಡಿ 11ರಲ್ಲಿ ಜಯ ಸಾಧಿಸಿದೆ. ಆರ್​ಸಿಬಿಗೆ ಹೋಲಿಸಿದರೆ ಕೆಕೆಆರ್​ ತಂಡವೇ ಈ ಮೈದಾನದಲ್ಲಿ ಉತ್ತಮ ದಾಖಲೆ ಹೊಂದಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿಯೂ ಕೆಕೆಆರ್​ ತಂಡವೇ ಗೆಲ್ಲುವ ಫೇವರಿಟ್ ಆಗಿ ಗೋಚರಿಸಿದೆ.


ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಮೈದಾನದಲ್ಲಿ ಎರಡು ಬಾರಿ ಜಗಳವಾಡಿದ್ದಾರೆ. ಎರಡೂ ಸಂದರ್ಭಗಳು ಐಪಿಎಲ್​ನಲ್ಲಾಗಿದ್ದವು. 2013 ರಲ್ಲಿ ಆಟಗಾರರಾಗಿ ಮತ್ತು ನಂತರ ಒಂದು ದಶಕದ ನಂತರ 2023 ರಲ್ಲಿ, ಆಯಾ ತಂಡಗಳ ಆಟಗಾರ ಮತ್ತು ತರಬೇತುದಾರರಾಗಿ ಅವರಿಬ್ಬರ ನಡುವೆ ವಾಗ್ವಾದ ನಡೆದಿತ್ತು. ಇದರ ಮುಂದುವರಿದ ಭಾಗ ಇಂದು ನಡೆಯುವ ಪಂದ್ಯದಲ್ಲಿ ಕಾಣಿಸಿಕೊಂಡರೂ ಅಚ್ಚರಿಯಿಲ್ಲ. ಕೊಹ್ಲಿ ಶಾಂತ ರೀತಿಯಿಂದ ವರ್ತಿಸಿದರೂ ಕೂಡ ಅವರ ಅಭಿಮಾನಿಗಳು ಗಂಭೀರ್​ ಅವರನ್ನು ಕೆಣಕುವುದಲ್ಲಿ ಅನುಮಾನವೇ ಬೇಡ. ಪಂದ್ಯಕ್ಕಾಗಿ ಕ್ರಿಕೆಟ್​ ಅಭಿಮಾನಿಗಳು ಕಾದು ಕುಳಿತಿದ್ದಾರೆ.

ಇದನ್ನೂ ಓದಿ IPL 2024: ಐಪಿಎಲ್‌ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಆರ್‌.ಅಶ್ವಿ‌ನ್‌!

ಸಂಭಾವ್ಯ ತಂಡಗಳು


ಆರ್​ಸಿಬಿ: ಫಾಫ್​ ಡು ಪ್ಲೆಸಿಸ್‌ (ನಾಯಕ), ವಿರಾಟ್​ ಕೊಹ್ಲಿ, ರಜತ್​ ಪಾಟಿದಾರ್‌, ಗ್ಲೆನ್​ ಮ್ಯಾಕ್ಸ್‌ವೆಲ್‌, ಕ್ಯಾಮರೂನ್​ ಗ್ರೀನ್‌, ದಿನೇಶ್​ ಕಾರ್ತಿಕ್‌, ಅನೂಜ್​ ರಾವತ್‌, ಮಯಾಂಕ್​ ಡಾಗರ್‌, ಅಲ್ಜಾರಿ ಜೋಸೆಫ್/ ರೀಸ್​ ಟಾಪ್ಲೆ, ಮೊಹಮ್ಮದ್​ ಸಿರಾಜ್‌, ಯಶ್​ ದಯಾಳ್‌.

ಕೆಕೆಆರ್​: ಫಿಲ್​ ಸಾಲ್ಟ್, ಸುನೀಲ್​ ನರೈನ್​, ವೆಂಕಟೇಶ್​ ಅಯ್ಯರ್‌, ಶ್ರೇಯಸ್‌ ಅಯ್ಯರ್​ (ನಾಯಕ), ನಿತೀಶ್‌ ರಾಣಾ , ರಮಣ್‌ದೀಪ್‌ ಸಿಂಗ್​, ರಿಂಕು ಸಿಂಗ್​, ಆ್ಯಂಡ್ರೆ ರಸೆಲ್‌, ಮಿಚೆಲ್​ ಸ್ಟಾರ್ಕ್‌, ಹರ್ಷಿತ್‌ ರಾಣಾ, ಮಿಥುನ್​ ಚಕ್ರವರ್ತಿ.

Continue Reading
Advertisement
LIC
ದೇಶ14 mins ago

LIC Offices: ವೀಕೆಂಡ್‌ನಲ್ಲೂ ಕಾರ್ಯನಿರ್ವಹಿಸಲಿವೆ ಎಲ್‌ಐಸಿ ಕಚೇರಿಗಳು; ಕಾರಣ ಇಲ್ಲಿದೆ

Dead Body Found in water tank
ಬೀದರ್‌14 mins ago

Dead Body Found : ವಾಟರ್‌ ಟ್ಯಾಂಕರ್‌ನಲ್ಲಿತ್ತು ಕೊಳೆತ ಶವ; ಅದೇ ನೀರು ಕುಡಿದವರು ಕಕ್ಕಾಬಿಕ್ಕಿ

Varthur Santhosh tears
ಬಿಗ್ ಬಾಸ್21 mins ago

Varthur Santhosh: ಟೀಕೆಗಳಿಗೆ ಮನನೊಂದು ಕಣ್ಣೀರಿಟ್ಟ ವರ್ತೂರ್‌ ಸಂತೋಷ್‌!

Lok Sabha Election 2024 Brijesh Chowta declares assets
Lok Sabha Election 202432 mins ago

Lok Sabha Election 2024: ಅವಿವಾಹಿತ ಬ್ರಿಜೇಶ್ ಚೌಟ ಬಳಿ ಇಲ್ಲ ಕೋಟಿ ಕೋಟಿ ಆಸ್ತಿ! ಸಾಲ ಮಾಡಿ ಕಾರು ಖರೀದಿ

Drowned in canal
ದಾವಣಗೆರೆ44 mins ago

Bhadra canal : ಭದ್ರಾ ನಾಲೆಗೆ ಬಿದ್ದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು

Unmukt Chand
ಕ್ರೀಡೆ58 mins ago

Unmukt Chand: ಭಾರತ ತಂಡ ತೊರೆದು ಯುಎಸ್​ಎ ಸೇರಿದ ಉನ್ಮುಕ್ತ್‌ಗೆ ಟಿ20 ವಿಶ್ವಕಪ್​ನಲ್ಲಿ ಸ್ಥಾನ ಅನುಮಾನ

Bullet Train
ದೇಶ2 hours ago

Bullet Train: ಬುಲೆಟ್‌ ರೈಲು ಓಡೋದು ಯಾವಾಗ? ರೈಲ್ವೆ ಸಚಿವ ಹೇಳೋದಿಷ್ಟು

Lok Sabha Election 2024 BJP JDS coordination committee meeting successful Fight to win with the workers
Lok Sabha Election 20242 hours ago

Lok Sabha Election 2024: ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ ಯಶಸ್ವಿ; ಎಲೆಕ್ಷನ್‌ ಗೆಲ್ಲಲು ಮಾಸ್ಟರ್‌ ಪ್ಲ್ಯಾನ್!

tcs jobs IT hiring
ಉದ್ಯೋಗ2 hours ago

IT Hiring: ಟಿಸಿಎಸ್‌ನಲ್ಲಿ ಫ್ರೆಶರ್‌ಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವುದು ಹೇಗೆ? ಯಾವಾಗ ಕೊನೆಯ ದಿನ?

Road Accident
ಬೆಂಗಳೂರು ಗ್ರಾಮಾಂತರ2 hours ago

Road Accident : ತಲೆ ಮೇಲೆ ಹರಿದ ಲಾರಿ; ಅರಣ್ಯ ಇಲಾಖೆ ಸಿಬ್ಬಂದಿ ಸಾವು, ಮತ್ತೊಬ್ಬ ಗಂಭೀರ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ11 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20241 day ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20241 day ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌