ಜ್ಯೂರಿಚ್: ಸಾರ್ವಕಾಲಿಕ ಶ್ರೇಷ್ಠ ಟೆನ್ನಿಸ್ ಆಟಗಾರರಲ್ಲಿ ಒಬ್ಬರಾದ ರೋಜರ್ ಫೆಡರರ್(Roger Federer) ಅವರನ್ನು ಒಲಿಂಪಿಯನ್ ಮತ್ತು ವಿಶ್ವ ಚಾಂಪಿಯನ್ ಆಗಿರುವ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ(Neeraj Chopra) ಭೇಟಿಯಾಗಿದ್ದಾರೆ. ಉಭಯ ಕ್ರೀಡಾಪಟುಗಳು ಸ್ವಿಟ್ಜರ್ಲೆಂಡ್ ಪ್ರವಾಸೋದ್ಯಮ ರಾಯಭಾರಿಗಳಾಗಿದ್ದಾರೆ.
“ನೀರಜ್ ಅವರ ಏಕಾಗ್ರತೆ, ಶ್ರದ್ಧೆ ಹಾಗೂ ದೃಢಸಂಕಲ್ಪಕ್ಕೆ ಮೆಚ್ಚುಗೆ ಸೂಚಿಸುತ್ತೇನೆ. ಜಾವೆಲಿನ್ ಕ್ಷೇತ್ರದಲ್ಲಿ ಅವರು ಇನ್ನೂ ದೊಡ್ಡ ಮಟ್ಟದ ಸಾಧನೆ ಮಾಡುವಂತಾಗಲಿ. ವೈಯಕ್ತಿಕವಾಗಿ ಮತ್ತು ಅವರ ದೇಶಕ್ಕಾಗಿ ಅಪಾರ ಕೊಡುಗೆ ಸಲ್ಲಿಸುವಂತಾಗಿ. ಅವರನ್ನು ಜ್ಯೂರಿಚ್‌ನಲ್ಲಿ ಭೇಟಿಯಾಗಿದ್ದು ಸಂತಸ ತಂದಿದೆ” ಎಂದು ಫೆಡರರ್ ಹೇಳಿದ್ದಾರೆ.
ಕನಸು ನನಸಾದ ಕ್ಷಣ
ರೋಜರ್ ಫೆಡರರ್ ಅವರನ್ನು ಭೇಟಿಯಾದ ಬಗ್ಗೆ ಮುಕ್ತವಾಗಿ ಮಾತನಾಡಿರುವ ನೀರಜ್, “ಟೆನ್ನಿಸ್ ಲೋಕದ ದಂತಕಥೆ ರೋಜರ್ ಫೆಡರರ್ ಅವರನ್ನು ಭೇಟಿಯಾಗುವ ಮೂಲಕ ದೀರ್ಘ ಕಾಲದ ನನ್ನ ಕನಸು ನನಸಾಗಿದೆ. ಅವರ ಕೌಶಲ್ಯ, ನಿಜವಾದ ಕ್ರೀಡಾ ಮನೋಭಾವ ಮತ್ತು ಅವರ ಸಾಮರ್ಥ್ಯವನ್ನು ನಾನು ಯಾವಾಗಲೂ ಮೆಚ್ಚಿದ್ದೇನೆ” ಎಂದರು.
An absolute honour to meet a sporting icon, whose career has been and continues to be an inspiration to people.
— Neeraj Chopra (@Neeraj_chopra1) January 25, 2024
I had a great time talking to you, and hopefully we’ll meet again. @rogerfederer 🙏 pic.twitter.com/kQUjiiBdB9
ಟೆನಿಸ್ ರಾಕೆಟ್ ನೀಡಿದ ಫೆಡರರ್
ರೋಜರ್ ಫೆಡರರ್ ಅವರು ನೀರಜ್‌ಗೆ ತಮ್ಮ ಹಸ್ತಾಕ್ಷರವಿರುವ ಟೆನಿಸ್ ರಾಕೆಟ್ ನೀಡಿದರು. ಇದೇ ವೇಳೆ ನೀರಜ್ ಅವರು ಏಷ್ಯನ್ ಗೇಮ್ಸ್‌ನಲ್ಲಿ ಧರಿಸಿದ್ದ ಭಾರತದ ಜೆರ್ಸಿಯನ್ನು ಫೆಡರರ್ಗೆ ನೀಡಿ ಗೌರವಿಸಿದರು. ಈ ಫೋಟೊವನ್ನು ನೀರಜ್ ತಮ್ಮ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ Neeraj Chopra: ಬುಮ್ರಾಗೆ ಬೌಲಿಂಗ್ ಟಿಪ್ಸ್ ಕೊಟ್ಟ ಚಿನ್ನದ ಹುಡುಗ ನೀರಜ್ ಚೋಪ್ರಾ
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಕಳೆದ ವರ್ಷ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಅಲ್ಲದೆ ಡೈಮಂಡ್ ಲೀಗ್ನಲ್ಲಿ ಬೆಳ್ಳಿ ಗೆದ್ದಿದ್ದರು. 26 ವರ್ಷದ ನೀರಜ್ ಒಲಿಂಪಿಕ್ಸ್‌ನ ಟ್ರ್ಯಾಕ್ ಇವೆಂಟ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಇದೇ ವರ್ಷ ಪ್ಯಾರಿಸ್ನಲ್ಲಿ ನಡೆಯುವ ಒಲಿಂಪಿಕ್ಸ್ಗೆ ಸಿದ್ಧತೆ ಆರಂಭಿಸಿರುವ ನೀರಜ್ ಇಲ್ಲಿಯೂ ಚಿನ್ನ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ. ಗೆದ್ದರೆ ಸತತ 2ನೇ ಒಲಿಂಪಿಕ್ಸ್ ಚಿನ್ನ ಗೆದ್ದ ಸಾಧಕರಾಗಲಿದ್ದಾರೆ. ಸದ್ಯ ಅವರ ಪ್ರದರ್ಶನ ನೋಡುವಾಗ ಚಿನ್ನ ಗೆಲ್ಲುವುದು ಖಚಿತ ಎನ್ನಬಹುದು.
ಸ್ವಿಜರ್‌ಲ್ಯಾಂಡ್‌ನಲ್ಲಿ ಜನಿಸಿದ ಫೆಡರರ್, ವಿಶ್ವ ಟೆನಿಸ್ ರ್ಯಾಂಕಿಂಗ್‌ನಲ್ಲಿ ಸತತ 310 ವಾರಗಳ ಕಾಲ ಮೊದಲ ರ್ಯಾಂಕ್‌ನಲ್ಲಿದ್ದರು. 103 ಸಿಂಗಲ್ ಟೈಟಲ್‌ಗಳು ಗೆದ್ದುಕೊಂಡಿದ್ದು, ಈ ಸಾಧನೆ ಮಾಡಿದ ಎರಡನೇ ಆಟಗಾರ. 20 ಗ್ರ್ಯಾನ್ ಸ್ಲಾಮ್‌ಗಳು ಅವರ ಖಾತೆಯಲ್ಲಿವೆ.